Blog

Uncategorized

ಎಂಡೋಮೆಟ್ರಿಯೋಸಿಸ್ ಕುರಿತು ನೀವು ತಿಳಿಯಬೇಕಾದುದು

ಎಂಡೋಮೆಟ್ರಿಯೋಸಿಸ್ ಕುರಿತು ನೀವು ತಿಳಿಯಬೇಕಾದುದು

ಎಂಡೋಮೆಟ್ರಿಯೋಸಿಸ್ ಕುರಿತು ನೀವು ತಿಳಿಯಬೇಕಾದುದು:

ಹಲವು ಮಹಿಳೆಯರಿಗೆ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿರುತ್ತವೆ. ಆದರೆ ಅವರಿಗೆ ಅನಿಯಮಿತ ಋತುಚಕ್ರ, ಅತಿಯಾದ ರಕ್ತಸ್ರಾವ ಅಥವಾ ತೀವ್ರ ನೋವು ಬಂಜೆತನಕ್ಕೆ ಕಾರಣವಾಗಬಲ್ಲವು. ಎಂಡೋಮೆಟ್ರಿಯೋಸಿಸ್ ಅಂತಹ ಒಂದು ಸ್ಥಿತಿಯಾಗಿದ್ದು ಅದನ್ನು ಪತ್ತೆ ಮಾಡದೇ ಬಿಟ್ಟಲ್ಲಿ ಮಹಿಳೆಯರ ಫಲವಂತಿಕೆಗೆ ಹೆಚ್ಚಿನ ಪ್ರಮಾಣದ ಹಾನಿಯುಂಟು ಮಾಡಬಲ್ಲದು. ಎಂಡೋಮೆಟ್ರಿಯೋಸಿಸ್ ಕುರಿತಾದ ವಿವರಗಳನ್ನು ಅರಿಯೋಣ.

ಎಂಡೋಮೆಟ್ರಿಯೋಸಿಸ್ ಎಂದರೇನು: 

ಎಂಡೋಮೆಟ್ರಿಯೋಸಿಸ್ ಕುರಿತು ತಿಳಿಯಲು ನಾವು ಋತುಚಕ್ರದ ಕುರಿತು ತಿಳಿಯಬೇಕು. ಮತ್ತು ಮಹಿಳೆಯರಿಗೆ ಋತುಚಕ್ರದ ಸ್ಪಷ್ಟ ತಿಳಿವಳಿಕೆ ಇರಬೇಕು. ಗರ್ಭಕೋಶದ ಒಳಗಿನ ಪದರವನ್ನು ಎಂಡೋಮೆಟ್ರಿಯಂ ಎಂದು ಕರೆಯಲಾಗುತ್ತದೆ ಅದು ಪ್ರತಿ ತಿಂಗಳೂ ಫಲವತ್ತಾದ ಅಂಡಾಣುವನ್ನು ಸ್ವೀಕರಿಸಲು ತನ್ನನ್ನು ತಾನು ಸಿದ್ಧಗೊಳ್ಳುತ್ತದೆ. ಆದರೆ ಗರ್ಭಧಾರಣೆ ಇಲ್ಲದಿದ್ದಲ್ಲಿ ಎಂಡೋಮೆಟ್ರಿಯಲ್ ಕೋಶವು ಋತುಚಕ್ರದ ಸಂದರ್ಭದಲ್ಲಿ ಬೀಳುತ್ತದೆ ಇದರಿಂದ ರಕ್ತಸ್ರಾವ ಸಂಭವಿಸುತ್ತದೆ. ಎಂಡೋಮೆಟ್ರಿಯಂ ಗರ್ಭಕೋಶದ ಹೊರಗಡೆ ಯಾವುದೇ ಭಾಗದಲ್ಲಿ ಬೆಳೆದರೆ ಅಂದರೆ ಡಿಂಬನಾಳ, ಅಂಡಾಶಯ, ಯೋನಿ ಇತ್ಯಾದಿಗಳಲ್ಲಿ ಬೆಳೆದರೆ ಅದನ್ನು ಎಂಡೋಮೆಟ್ರಿಯೋಸಿಸ್ ಎಂದು ಕರೆಯಲಾಗುತ್ತದೆ. ಈ ಜೀವಕೋಶವೂ ಬೀಳುತ್ತದೆ ಆದರೆ ರಕ್ತಕ್ಕೆ ಸ್ಥಳವಿಲ್ಲದೇ ಇರುವುದರಿಂದ ಉರಿಯೂತ ಉಂಟಾಗಿ ಜೀವಕೋಶಕ್ಕೆ ಹಾನಿ ಮತ್ತು ಗಾಯಗಳುಂಟಾಗುತ್ತವೆ.

ಎಂಡೋಮೆಟ್ರಿಯೋಸಿಸ್ ಲಕ್ಷಣಗಳೇನು? 

  • ಗಂಭೀರ ಶ್ರೋಣಿಯ ನೋವು /ಕೆಳ ಬೆನ್ನು ನೋವು
  • ನೋವಿನಿಂದ ಕೂಡಿದ ಮುಟ್ಟು(ಡಿಸ್ಮಿನೊರಿಯಾ)
  • ಗರ್ಭಧಾರಣೆಗೆ ಕಷ್ಟವಾಗುವುದು(ಬಂಜೆತನ)
  • ಲೈಂಗಿಕ ಸಂಪರ್ಕದ ಸಮಯದಲ್ಲಿ ನೋವು(ಡಿಸ್ಪೆರ್ಯೂನಿಯಾ)
  • ಋತುಚಕ್ರದಲ್ಲಿ ಅತಿಯಾದ ರಕ್ತಸ್ರಾವ
  • ನೋವಿನ ಸೈಕ್ಲಿಕಲ್ ಹೆಮಟುರಿಯಾ/ ಮಲ ವಿಸರ್ಜನೆಯಲ್ಲಿ ನೋವು(ಡಿಸ್ಕೆಜಿಯಾ)

ಎಂಡೋಮೆಟ್ರಿಯೋಸಿಸ್ ರೋಗಪತ್ತೆ: 

  1. ಅಲ್ಟ್ರಾಸೌಂಡ್
  2. ಆಳವಾದ ಎಂಡೋಮೆಟ್ರಿಯೋಸಿಸ್ ಗುರುತಿಸಲು ಅಪರೂಪಕ್ಕೆ ಎಂ.ಆರ್.ಐ ಸ್ಕ್ಯಾನ್ ಅಗತ್ಯವಾಗಬಹುದು.
  3. ಲ್ಯಾಪ್ರೊಸ್ಕೊಪಿ ಮತ್ತು ಬಯಾಪ್ಸಿ- ಲ್ಯಾಪ್ರೊಸ್ಕೊಪಿ ಮತ್ತು ಎಂಡೋಮೆಟ್ರಿಯಾಟಿಕ್ ಗಾಯದ ಬಯಾಪ್ಸಿಯು ಎಂಡೋಮೆಟ್ರಿಯಾಸಿಸ್ ರೋಗಪರೀಕ್ಷೆಯಲ್ಲಿ ಅತ್ಯುನ್ನತ ಪರೀಕ್ಷೆಯಾಗಿದೆ. ಎಂಡೋಮೆಟ್ರಿಯಂನ ಜೀವಕೋಶಧ ತುಣುಕನ್ನು ಮೈಕ್ರೊಸ್ಕೋಪ್(ಲ್ಯಾಪ್ರೊಸ್ಕೊಪಿಯಲ್ಲಿ)ನಲ್ಲಿ ವೀಕ್ಷಿಸಲಾಗುತ್ತದೆ ಅದು ತಜ್ಞಞರಿಗೆ ರೋಗಿಯಲ್ಲಿ ಎಂಡೋಮೆಟ್ರಿಯೋಸಿಸ್ ಇದೆಯೇ ಎಂದು ತಿಳಿಯಲು ನೆರವಾಗುತ್ತದೆ.

ಎಂಡೋಮೆಟ್ರಿಯೋಸಿಸ್ ಚಿಕಿತ್ಸೆ: 

  • ಬಂಜೆತನಕ್ಕೆ ಆದ್ಯತೆಯ ಮೇಲೆ ಚಿಕಿತ್ಸೆ ನೀಡಬೇಕು ಅದಕ್ಕೆ ರೋಗಿಯ ಅಂಡಾಣು ಸಂಗ್ರಹ ಆಧರಿಸಿ ಐಯುಐ ಅಥವಾ ಐವಿಎಫ್ ನಡೆಸಬೇಕು.
  • ಕುಟುಂಬವು ಜನನ ನಿಯಂತ್ರಣದ ಮಾತ್ರೆಯನ್ನು ಪೂರೈಸಿದ್ದರೆ, ಹಾರ್ಮೋನ್ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯನ್ನು ನೋವು/ಇತರೆ ಲಕ್ಷಣಗಳಿಂದ ಮುಕ್ತವಾಗಿಸಲು ಆಯ್ಕೆಗಳಾಗಿ ಪರಿಗಣಿಸಬಹುದು.

ಹಾರ್ಮೋನ್ ಥೆರಪಿ: 

ಹಾರ್ಮೋನ್ ಥೆರಪಿಯಿಂದ ಅಂಡಾಣು ಬಿಡುಗಡೆಯನ್ನು ನಿಧಾನಗೊಳಿಸಬಹುದು ಅದು ಎಂಡೋಮೆಟ್ರಿಯಂ ಬೆಳವಣಿಗೆ ತಡೆಯುತ್ತದೆ.

  • ಶಸ್ತ್ರಿಚಿಕಿತ್ಸೆ:

ಹಾನಿಗೊಳಗಾದ ಜೀವಕೋಶಗಳನ್ನು ಲ್ಯಾಪ್ರೊಸ್ಕೊಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸಬಹುದು, ಹಿಸ್ಟೆರೆಕ್ಟೊಮಿಯನ್ನು ನಡೆಸಿ ಗರ್ಭಕೋಶ ಮತ್ತು ಅಂಡಾಶಯ ನಿವಾರಿಸಲಾಗುತ್ತದೆ.

ಜೀವನಶೈಲಿ ಬದಲಾವಣೆಗಳಿಂದ ಎಂಡೋಮೆಟ್ರಿಯೋಸಿಸ್ ನಿರ್ವಹಣೆ: 
ಆರೋಗ್ಯಕರ ಆಹಾರಗಳನ್ನು ತಿನ್ನಿರಿ: 

ಹಣ್ಣುಗಳು, ತರಕಾರಿಗಳು ಮತ್ತು ಒಮೇಗಾ-3 ಫ್ಯಾಟಿ ಆಮ್ಲಗಳನ್ನು ಒಳಗೊಂಡ ಆಹಾರಗಳನ್ನು ಸೇವಿಸುವುದು ಎಂಡೋಮೆಟ್ರಿಯೋಸಿಸ್ ಉಂಟಾಗುವ ರಿಸ್ಕ್ ಕಡಿಮೆ ಮಾಡಬಲ್ಲವು. ಮದ್ಯ, ಕೆಫೀನ್ ಮತ್ತು ಟ್ರಾನ್ಸ್ ಫ್ಯಾಟ್ ಸೇವನೆ ತಡೆಯಬೇಕು.

ವ್ಯಾಯಾಮ: 

ನಿಯಮಿತ ವ್ಯಾಯಾಮವು ಎಂಡೋಮೆಟ್ರಿಯೊಸಿಸ್ ನಿರ್ವಹಣೆಯಲ್ಲಿ ನೆರವಾಗಬಲ್ಲದು. ಮತ್ತು ಅಲ್ಲದೆ ಯೋಗ, ಧ್ಯಾನ ಕೂಡಾ ಒತ್ತಡದಿಂದ ಹೊರಬರಲು ನೆರವಾಗುವ ಮೂಲಕ ನಿಮಗೆ ಎಂಡೋಮೆಟ್ರಿಯೋಸಿಸ್ ನಿಭಾಯಿಸಲು ನೆರವಾಗುತ್ತವೆ.

ನಿಮ್ಮ ಋತುಚಕ್ರದಲ್ಲಿ ಸಮಸ್ಯೆಗಳಿದ್ದರೆ ಫರ್ಟಿಲಿಟಿ ತಜ್ಞರನ್ನು ಕಾಣಲು ಹಿಂಜರಿಯಬೇಡಿ. ಪ್ರಾರಂಭಿಕ ರೋಗಪತ್ತೆ ಮತ್ತು ಚಿಕಿತ್ಸೆಯಿಂದ ನಿಮಗೆ ಬಂಜೆತನದಿಂದ ಹೊರಬರಲು ಮತ್ತು ತಾಯ್ತನದ ಕನಸು ನನಸಾಗಿಸಿಕೊಳ್ಳಲು ನೆರವಾಗುತ್ತದೆ.

Write a Comment

/%E0%B2%8E%E0%B2%82%E0%B2%A1%E0%B3%8B%E0%B2%AE%E0%B3%86%E0%B2%9F%E0%B3%8D%E0%B2%B0%E0%B2%BF%E0%B2%AF%E0%B3%8B%E0%B2%B8%E0%B2%BF%E0%B2%B8%E0%B3%8D-%E0%B2%95%E0%B3%81%E0%B2%B0%E0%B2%BF%E0%B2%A4%E0%B3%81/