ಎಚ್ಚರ! ನಿಮ್ಮ ನಿದ್ರೆಯ ವಿಧಾನವು ನೀವು ತಂದೆಯಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು

ಎಚ್ಚರ! ನಿಮ್ಮ ನಿದ್ರೆಯ ವಿಧಾನವು ನೀವು ತಂದೆಯಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು
ಆಘಾತಕಾರಿ ಅಲ್ಲವೇ? ಆದರೆ ಅದೇ ನಿಜ. ಬಂಜೆತನದ ಸಮಸ್ಯೆಗಳು ಪುರುಷರು ಹಾಗೂ ಮಹಿಳೆಯರು ಇಬ್ಬರಲ್ಲೂ ಹೆಚ್ಚಾಗುತ್ತಿವೆ. ಭಾರತದಲ್ಲಿ ಪುರುಷರ ಬಂಜೆತನದಲ್ಲಿ ಗಮನಾರ್ಹ ಹೆಚ್ಚಳಕಂಡುಬಂದಿದೆ. ಜೀವನಶೈಲಿ ಅಂಶಗಳುಫಲವಂತಿಕೆಯನ್ನು ಕಡಿಮೆಮಾಡುವಲ್ಲಿ ಪ್ರಮುಖ ಕಾರಣವಾಗಿವೆ. ಹಲವು ಪುರುಷರು ರಾತ್ರಿಪಾಳಿ ಉದ್ಯೋಗಗಳನ್ನುತೆಗೆದುಕೊಳ್ಳುತ್ತಿದ್ದಾರೆ, ಅವರ ನಿದ್ರೆಯ ಆವರ್ತ ಮತ್ತು ದೈನಂದಿನ ಲಯ ಹಾನಿಗೀಡಾಗುತ್ತದೆ. ಫಲವಂತಿಕೆಯ ವಿಷಯಕ್ಕೆ ಬಂದರೆ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ನಿದ್ರೆ-ಎಚ್ಚರದ ಆವರ್ತದಲ್ಲಿ ಆತಂಕಕಾರಿ ಬದಲಾವಣೆ ಬಂದಿದ್ದು ಇದುಬೊಜ್ಜು, ದೈಹಿಕಚಟುವಟಿಕೆಯಲ್ಲಿ ಕುಸಿತಮತ್ತಿತರೆಸಮಸ್ಯೆಗಳನ್ನು ತರುತ್ತದೆ.
ನಿದ್ರೆಫಲವಂತಿಕೆಗೆಹೇಗೆಪರಿಣಾಮ ಬೀರುತ್ತದೆ?
ಸರಿಯಾದ ನಿದ್ರೆಯ ವಿಧಾನವು ವ್ಯಕ್ತಿಯ ಉತ್ತಮ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿದೆ. ಆದರೆ ಜಾಗತೀಕರಣ ಮತ್ತುತಾಂತ್ರಿಕ ಸುಧಾರಣೆಗಳಿಂದ ರಾತ್ರಿ ಪಾಳಿ ಉದ್ಯೋಗ ಮಾಡುವ ಪುರುಷರ ಶೇಕಡಾವಾರು ಹೆಚ್ಚಾಗಿದೆ. ಹೊತ್ತುಗೊತ್ತಿಲ್ಲದೆ ಕೆಲಸ ಮಾಡುವುದುರಾತ್ರಿ ವೇಳೆ ತಡವಾಗಿ ಆಹಾರ ಸೇವನೆ, ಜಂಕ್ಫುಡ್ಸೇವನೆಮತ್ತು ಜಡಜೀವನಶೈಲಿಗೆಕಾರಣವಾಗುತ್ತದೆ. ಆದರೆ ನಿದ್ರೆಯ ಕೊರತೆ ಅಥವಾ ಅನಿಯಮಿತ ನಿದ್ರೆಯವಿಧಾನಪುರು ಷರಫಲವಂತಿಕೆಯ ಸಾಮರ್ಥ್ಯಕ್ಕೆ ಪರಿಣಾಮ ಬೀರಬಲ್ಲದು.
ಟೆಸ್ಟೊಸ್ಟಿರಾನ್ಹಾ ರ್ಮೋನು ನಿದ್ರೆಯಲ್ಲಿ ಉತ್ಪಾದನೆಯಾಗುತ್ತದೆಮತ್ತು ತಕ್ಕಷ್ಟುನಿದ್ರೆಇಲ್ಲದಿರುವಾಗ ಟೆಸ್ಟೊಸ್ಟಿರಾನ್ ಉತ್ಪಾದನೆಕುಸಿಯುತ್ತದೆ. ಹಾರ್ಮೋನಿನ ಕಡಿಮೆ ಪ್ರಮಾಣ ಲೈಂಗಿಕತೆಯ ಉತ್ತೇಜನ ಕಡಿಮೆ ಮಾಡುತ್ತದೆ. ಇದು ವೀರ್ಯದ ಗುಣಮಟ್ಟದಮೇಲೂ ಪರಿಣಾಮ ಬೀರುತ್ತದೆ. ತಡವಾಗಿ ನಿದ್ರಿಸುವುದು ಧೂಮಪಾನ ಹಾಗೂಮದ್ಯ ಪಾನದಅಭ್ಯಾಸಗಳು ವೀರ್ಯಾಣುಗಳ ಸಂಖ್ಯೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಅತಿಯಾದನಿದ್ರೆ ಅಥವಾಕಡಿಮೆನಿದ್ರೆಯೂ ಫಲವಂತಿಕೆ ಯಮೇಲೆಪರಿಣಾಮಬೀರಬಲ್ಲದು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅಲ್ಲದೆ ಉತ್ತಮ ಫಲವಂತಿಕೆಗೆ 7-8 ಗಂಟೆಗಳ ನಿದ್ರೆ ಅತ್ಯಗತ್ಯ.
ಫಲವಂತಿಕೆಯನ್ನುಯಾವುದುಸುಧಾರಿಸುತ್ತದೆ?
- ನೀವು ನಿಮ್ಮ ತಂದೆತನದ ಪ್ರಯಾಣ ಯೋಜಿಸುತ್ತಿದ್ದರೆ ರಾತ್ರಿ ಪಾಳಿಗಳನ್ನು ತಪ್ಪಿಸಿ
- ನಿಯಮಿತ ನಿದ್ರೆಗೆ ಪ್ರಯತ್ನಿಸಿ(ಪ್ರತಿನಿತ್ಯ ಒಂದೇ ಸಮಯಕ್ಕೆ ನಿದ್ರಿಸಿ ಮತ್ತು ಎಚ್ಚರಗೊಳ್ಳಿ)
- ನಿಮ್ಮಕೆಫೀನ್ಸೇವನೆಕಡಿಮೆಮಾಡಿ
- ವ್ಯಾಯಾಮವನ್ನು ನಿಮ್ಮ ದಿನಚರಿಯ ಭಾಗವಾಗಿಸಿ
- ಮಾನಸಿಕ ಆರೋಗ್ಯದ ಸರಿಯಾದ ಕಾಳಜಿ ವಹಿಸಿ
- ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುವ ಆಹಾರಸೇವಿಸಿ(ಬೆರಿಗಳು, ಕುಂಬಳಕಾಯಿ, ಹೂಕೋಸು, ಬೀಜಗಳು)
- ನಿಮ್ಮತೂಕವನ್ನುನಿಯಂತ್ರಿಸಿ
- ಮದ್ಯಸೇವನೆಕಡಿಮೆಮಾಡಿ
- ತಕ್ಕಷ್ಟುವಿಟಮಿನ್ಡಿಸೇವಿಸಿ
- ಧೂಮಪಾನ ವರ್ಜಿಸಿ
ನಿಮ್ಮಪೋಷಕತ್ವದ ಪ್ರಯಾಣದಲ್ಲಿ ಸಮಸ್ಯೆಗಳಿದ್ದರೆ ಪುರುಷರಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಿ. ಜೀವನಶೈಲಿ ಬದಲಾವಣೆಗಳು ಫಲವಂತಿಕೆ ಸುಧಾರಿಸುವಲ್ಲಿ ಮಹತ್ತರ ನೆರವಾಗಬಲ್ಲವು. ಮೈಕ್ರೊ-ಟೆಸಾ, ಮೈಕ್ರೊವೇರಿಕೊಸೆಲೆಕ್ಟೊಮಿ, ಟೆಸಾ, ಪೆಸಾಇತ್ಯಾದಿಗಳು ಕೂಡಾ ಲಭ್ಯವಿದ್ದು ಅವು ನಿಮಗೆ ಬಂಜೆತನದಿಂದ ಹೊರಬರಲು ಮತ್ತು ನಿಮ್ಮ ತಂದೆತನದ ಕನಸನ್ನುಈಡೇರಿಸಿಕೊಳ್ಳಲು ನೆರವಾಗುತ್ತವೆ.