Blog

Enquire Now
Uncategorized

ಐ.ವಿ.ಎಫ್ ಚಿಕಿತ್ಸೆ ಕುರಿತಾದ ಮಿಥ್ಯೆಗಳು

ಐ.ವಿ.ಎಫ್ ಚಿಕಿತ್ಸೆ ಕುರಿತಾದ ಮಿಥ್ಯೆಗಳು

ಎಲ್ಲ ದಂಪತಿಗಳಿಗೂ ಪೋಷಕರಾಗುವ ಪ್ರಯಾಣವು ಭಾವನಾತ್ಮಕವಾದುದು. ಪೋಷಕರಾಗುವ ಮಾರ್ಗವು ಪ್ರತಿಯೊಬ್ಬ ದಂಪತಿಗೂ ಭಿನ್ನವಾಗಿರುತ್ತದೆ. ದಂಪತಿಗಳು ಸಹಜವಾಗಿ ಗರ್ಭಧಾರಣೆ ಹೊಂದಲು ಅಶಕ್ತರಾದಲ್ಲಿ ಗರ್ಭಧಾರಣೆಯ ಚಿಕಿತ್ಸೆಗಳು ಅವರಿಗೆ ನೆರವಾಗುತ್ತವೆ. ಐ.ವಿ.ಎಫ್(ಇನ್ವಿಟ್ರೊ ಫರ್ಟಿಲೈಸೇಷನ್) ಅಂತಹ ಒಂದು ಸುಧಾರಿತ ಗರ್ಭಧಾರಣೆ ಚಿಕಿತ್ಸೆಯಾಗಿದ್ದು ಅದು ದಂಪತಿಗಳಿಗೆ ಪೋಷಕರಾಗಲು ನೆರವಾಗುತ್ತದೆ. ಆದರೆ ಹಲವರು ಐ.ವಿ.ಎಫ್. ಚಿಕಿತ್ಸೆಯ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಮತ್ತು ಆತಂಕಗಳು ಹಾಗೂ ತಪ್ಪು ತಿಳಿವಳಿಕೆಗಳನ್ನು ಹೊಂದಿರುತ್ತಾರೆ. ಐ.ವಿ.ಎಫ್ ಪಡೆದುಕೊಳ್ಳುವ ಮುನ್ನ ದಂಪತಿಗಳು ಐ.ವಿ.ಎಫ್. ಪ್ರಕ್ರಿಯೆ ಕುರಿತು ಮತ್ತು ಐ.ವಿ.ಎಫ್. ಚಿಕಿತ್ಸೆಯ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು.

1.ಮಿಥ್ಯ:

ಐ.ವಿ.ಎಫ್. ಯಶಸ್ಸು ಮಹಿಳೆಯರ ವಯಸ್ಸಿಗೆ ಸಂಬಂಧಿಸಿಲ್ಲ

ಸತ್ಯ: 

ಐ.ವಿ.ಎಫ್. ಯಶಸ್ಸು ಎಲ್ಲ ವಯಸ್ಸುಗಳಿಗೂ ಒಂದೇ ಆಗಿರುತ್ತದೆ. ಮಹಿಳೆಯರ ವಯಸ್ಸು ಹೆಚ್ಚಾಗುತ್ತಿದ್ದಂತೆ ಫರ್ಟಿಲಿಟಿ ಕಡಿಮೆಯಾಗುತ್ತದೆ ಮತ್ತು ಆದ್ದರಿಂದ ಐ.ವಿ.ಎಫ್. ಯಶಸ್ಸಿನ ಪ್ರಮಾಣವೂ ಕಡಿಮೆಯಾಗುತ್ತದೆ.

2. ಮಿಥ್ಯ: 

ಐ.ವಿ.ಎಫ್. ಸದಾ ಮೂರು ಮಕ್ಕಳು ಅಥವಾ ನಾಲ್ಕು ಮಕ್ಕಳನ್ನು ನೀಡುತ್ತದೆ.

ಸತ್ಯ:

ಹಿಂದೆ 2 ಅಥವಾ 3 ಭ್ರೂಣಗಳನ್ನು ಸೇರಿಸಲು ಬಳಸಲಾಗುತ್ತಿತ್ತು ಅದರಿಂದ ಅವಳಿ, ಮೂರು ಅಥವಾ ನಾಲ್ಕು ಮಕ್ಕಳು ಜನಿಸುತ್ತಿದ್ದರು. ಈ ದಿನಗಳಲ್ಲಿ ಸುಧಾರಿತ ತಂತ್ರಜ್ಞಾನಗಳಾದ ಪಿ.ಜಿ.ಟಿ., ಇ.ಆರ್.ಎ ಮುಂತಾದ ಇತರೆ ತಂತ್ರಗಳಿರುವುದರಿಂದ ಒಂದೇ ಒಂದು ಆರೋಗ್ಯಕರ ಭ್ರೂಣವನ್ನು ಸೇರಿಸಲಾಗುತ್ತದೆ ಇದರಿಂದ ಹಲವು ಗರ್ಭಧಾರಣೆಗಳನ್ನು ತಡೆಯುತ್ತದೆ.

3.ಮಿಥ್ಯ:

ಫಲವತ್ತತೆ ಸಮಸ್ಯೆಯುಳ್ಳ ಎಲ್ಲ ದಂಪತಿಗಳಿಗೂ ಐ.ವಿ.ಎಫ್. ಚಿಕಿತ್ಸೆ ಅಗತ್ಯ.

ಸತ್ಯ:

ಪರಿಸ್ಥಿತಿ ಮತ್ತು ಗಂಭೀರತೆ ಆಧರಿಸಿ ಸಮಯ ನಿಗದಿಪಡಿಸಿದ ಸಂಭೋಗದೊಂದಿಗೆ ಓವ್ಯುಲೇಷನ್ ಇಂಡಕ್ಷನ್ , ಮತ್ತು ಇತರೆ ಚಿಕಿತ್ಸೆಗಳು ದಂಪತಿಗಳಿಗೆ ಗರ್ಭಧಾರಣೆಗೆ ನೆರವಾಗುತ್ತವೆ. ಇದರಿಂದ ಎಲ್ಲ ದಂಪತಿಗಳೂ ಐ.ವಿ.ಎಫ್. ಚಿಕಿತ್ಸೆ ಪಡೆಯಬೇಕಿಲ್ಲ.

4. ಸತ್ಯ: 

ಪುರುಷರ ಧೂಮಪಾನವು ಐ.ವಿ.ಎಫ್.ನ ಯಶಸ್ಸಿನ ಪ್ರಮಾಣಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ.

ಸತ್ಯ:

ಪುರುಷರ ಧೂಮಪಾನವು ಐ.ವಿ.ಎಫ್. ಯಶಸ್ಸಿನ ಪ್ರಮಾಣ ಕಡಿಮೆ ಮಾಡುತ್ತದೆ ಮತ್ತು ಗರ್ಭಪಾತಗಳಿಗೂ ಕಾರಣವಾಗಬಹುದು.

5.ಮಿಥ್ಯ: 

ಐ.ವಿ.ಎಫ್. ಶೇ.100ರಷ್ಟು ಯಶಸ್ವಿ.

ಸತ್ಯ:

ಐ.ವಿ.ಎಫ್ ಚಿಕಿತ್ಸೆಯ ಯಶಸ್ಸಿಗೆ ಹಲವು ಅಂಶಗಳು ಒಳಗೊಂಡಿವೆ. ಐ.ವಿ.ಎಫ್.ನಲ್ಲಿ ಶೇ.50-70ರಷ್ಟು ಯಶಸ್ಸಿನ ಪ್ರಮಾಣವಿರುತ್ತದೆ.

6.ಮಿಥ್ಯ:

ಐ.ವಿ.ಎಫ್. ಮೂಲಕ ಜನಿಸುವ ಮಕ್ಕಳು ಅಸಹಜತೆಗಳನ್ನು ಹೊಂದಿರುತ್ತವೆ.

ಸತ್ಯ:

ತಪ್ಪು ತಿಳಿವಳಿಕೆಯಿಂದ ಹಲವರು ಐ.ವಿ.ಎಫ್. ಕುರಿತು ಆತಂಕ ಪಡುತ್ತಾರೆ. ಐ.ವಿ.ಎಫ್. ಶಿಶುಗಳು ಸಹಜವಾದ ಗರ್ಭಧಾರಣೆಯಲ್ಲಿ ಜನಿಸಿದ ಮಕ್ಕಳಷ್ಟೇ ಸಹಜವಾಗಿರುತ್ತವೆ.

7.ಸತ್ಯ:

ಐ.ವಿ.ಎಫ್. ಪ್ರಕ್ರಿಯೆ ಪಡೆದುಕೊಳ್ಳಲು ಆಸ್ಪತ್ರೆವಾಸ ಅಗತ್ಯ.

ಸತ್ಯ:

ಐ.ವಿ.ಎಫ್. ಡೇಕೇರ್ ಚಿಕಿತ್ಸೆಯಾಗಿದೆ. ಒಮ್ಮೆ ಚಿಕಿತ್ಸೆ ಪೂರ್ಣಗೊಂಡ ನಂತರ ಮನೆಗೆ ಹೋಗಬಹುದು. ಆಸ್ಪತ್ರೆವಾಸದ ಅಗತ್ಯವಿಲ್ಲ.

ದಂಪತಿಗಳು ಒಂದು ನಿರ್ದಿಷ್ಟ ವಯಸ್ಸಿನ ನಂತರ ಪೋಷರಾಗುವುದಕ್ಕೆ ತಡ ಮಾಡಬಾರದು. ನಿಮ್ಮ ಉದ್ಯೋಗದ ಆಕಾಂಕ್ಷೆಗಳು ಮತ್ತಿತರೆ ಬದ್ಧತೆಗಳು ನಿಮ್ಮ ಗರ್ಭಧಾರಣೆಗೆ ವಿರಾಮ ಕೊಟ್ಟರೆ ಆಗ ಅಂಡಾಣುಗಳು, ವೀರ್ಯಾಣುಗಳು ಅಥವಾ ಭ್ರೂಣದ ಘನೀಕರಿಸುವ ಆಯ್ಕೆ ಪಡೆದುಕೊಳ್ಳಬಹುದು ಅವುಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಗರ್ಭಧಾರಣೆಗೆ ಬಳಸಬಹುದು. ಜೀವನಶೈಲಿ ಬದಲಾವಣೆಗಳು ಮತ್ತು ಪಿ.ಸಿ.ಒ.ಎಸ್. ಪ್ರಕರಣಗಳು, ಎಂಡೊಮೆಟ್ರಿಯೋಸಿಸ್, ಕಡಿಮೆ ವೀರ್ಯಾಣು ಸಂಖ್ಯೆಯ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುಂದೂಡದೆ ಸಕಾಲದಲ್ಲಿ ಗರ್ಭಧಾರಣೆಯ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.

Write a Comment