Site icon Oasis Fertility

ಪುನರಾವರ್ತಿತ ಗರ್ಭಪಾತಗಳ ನಂತರವೂ ಗರ್ಭಧಾರಣೆ ಸಾಧ್ಯ

ತಂದೆ ತಾಯಿಯರಾಗುವುದು ಅತ್ಯಂತ ವಿಶೇಷವಾದ ಅನುಭವ. ಕೆಲವರಿಗೆ ಗರ್ಭ ಧರಿಸಲು ಸುಲಭವಾಗಿ ಅತ್ಯಲ್ಪ ಕಾಲದಲ್ಲಿಯೇ ಆಗಬಹುದು. ಆದರೆ ಕೆಲವರಿಗೆ, ತಂದೆ ತಾಯಿ ಎನಿಸಿಕೊಳ್ಳುವ ದಾರಿ ಅತ್ಯಂತ ಕಠಿಣ ಮತ್ತು ಪ್ರಯಾಸಕರವಾಗಿರಬಲ್ಲದು. ಗರ್ಭಧಾರಣೆಯ ಸಿಹಿ ಸುದ್ದಿಯ ನಂತರ ಗರ್ಭಪಾತವು ಅಂತಹ ಸಂಕಟದ ಅನುಭವಗಳಲ್ಲಿ ಒಂದು. ಅದು ದೈಹಿಕ, ಭಾವನಾತ್ಮಕ ಹಾಗೂ ಮಾನಸಿಕವಾಗಿಯೂ ದಂಪತಿಗಳಿಗೆ ಅತ್ಯಂತ ನೋವಿನದಾಗಿರುತ್ತದೆ. ಪುನರಾವರ್ತಿತ ಗರ್ಭಪಾತಗಳು(ರಿಕರೆಂಟ್ ಪ್ರೆಗ್ನೆನ್ಸಿ ಲಾಸ್) ಒಬ್ಬರ ನಂಬಿಕೆ ಮತ್ತು ವಿಶ್ವಾಸವನ್ನು ಘಾಸಿಗೊಳಿಸಬಲ್ಲದು. ಆದರೆ ಅದಕ್ಕೆ ಭರವಸೆ ಇದೆ! ಪುನರಾವರ್ತಿತ ಗರ್ಭಪಾತಗಳ ನಂತರವೂ ದಂಪತಿಗಳಿಗೆ ತಂದೆ ತಾಯಿಯರಾಗಲು ನೆರವಾಗುವ ಸುಧಾರಿತ ತಂತ್ರಜ್ಞಾನಗಳಿವೆ. ಈ ದಂಪತಿಗಳು ತಕ್ಷಣವೇ ತಜ್ಞರನ್ನು ಭೇಟಿ ಮಾಡಿ ಸರಿಯಾದ ಚಿಕಿತ್ಸೆಯನ್ನು ಪಡೆಯಬಹುದು.

ಪುನರಾವರ್ತಿತ ಗರ್ಭಪಾತಗಳಿಗೆ ಒಳಗಾದ ದಂಪತಿಗಳಿಗೆ ಸುಧಾರಿತ ಫರ್ಟಿಲಿಟಿ ಪರೀಕ್ಷೆಗಳು ಮತ್ತು ಚಿಕಿತ್ಸೆಗಳು:

ಎ.ಥ್ರಂಬೊಫಿಲಿಯಾ ಪ್ರೊಫೈಲ್:

ಬಿ.ಹಿಸ್ಟೆರೊಲ್ಯಾಪ್ರೊಸ್ಕೊಪಿ

ಸಿ.ಕ್ರೋಮೋಸೋಮ್ ಪರೀಕ್ಷೆ(ವರ್ಣತಂತುಗಳ ಪರೀಕ್ಷೆ)

ಡಿ.ಪಿಜಿಟಿ(ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್)

ಥ್ರೊಂಬೊಫಿಲಿಯ ಪ್ರೊಫೈಲ್:

ಈ ರಕ್ತ ಪರೀಕ್ಷೆಯನ್ನು ಗರ್ಭಪಾತ ಉಂಟು ಮಾಡಬಲ್ಲ ಆಟೊಇಮ್ಯೂನ್  ಸ್ಥಿತಿಯನ್ನು ಪತ್ತೆ ಮಾಡಲು ನಡೆಸಲಾಗುತ್ತದೆ. ಇದರಲ್ಲಿ ಮುಖ್ಯವಾದವು ಆಂಟಿಫಾಸ್ಫೋಲಿಪಿಡ್ ಆಂಟಿಬಾಡೀಸ್(ಎ.ಪಿ.ಎಲ್.ಎ), ಆಂಟಿನ್ಯೂಕ್ಲಿಯರ್ ಆಂಟಿಬಾಡೀಸ್(ಎ.ಎನ್.ಎ), ಆಂಟಿಕಾರ್ಡಿಯೊಲಿಪನ್ ಆಂಟಿಬಾಡೀಸ್(ಎ.ಸಿ.ಎ), ಆಂಟಿ-ಥೈರಾಯ್ಡ್ ಆಂಟಿಬಾಡೀಸ್(ಆಂಟಿ-ಟಿಪಿಒ ಮತ್ತು ಆಂಟಿ-ಟಿಜಿ). ಅಂತಹ ಪರಿಸ್ಥಿತಿಗಳಲ್ಲಿ ಚಿಕಿತ್ಸೆಯು ಸ್ಟಿರಾಯ್ಡ್ ಗಳ ಬಳಕೆ, ಇಂಜೆಕ್ಷನ್ ಹೆಪರಿನ್, ಐವಿ ಇಮ್ಯುನೊಗ್ಲೊಬುಲಿನ್ ಇತ್ಯಾದಿ ಬಳಕೆ ಒಳಗೊಂಡಿರುತ್ತದೆ.

ಹಿಸ್ಟೆರೊಲ್ಯಾಪ್ರೊಸ್ಕೊಪಿ:

ಗರ್ಭಾಶಯದ ಅಸಹಜತೆಗಳಾದ ಉನಿಕೋರ್ನುಯೇಟ್(unicornuate) ಬೈಕಾರ್ನುಯೇಟ್  ಗರ್ಭಕೋಶ ಇತ್ಯಾದಿಗಳು ಮೊದಲ ಹಾಗೂ ಎರಡನೆಯ ತ್ರೈಮಾಸಿಕ ಗರ್ಭಪಾತಗಳನ್ನು ಉಂಟು ಮಾಡಬಹುದು ಮತ್ತು ಅವಧಿಪೂರ್ವ ಜನನವನ್ನೂ(ಪ್ರಿಟರ್ಮ್) ಉಂಟು ಮಾಡಬಹುದು. ಇವುಗಳನ್ನು 3-ಡಿ ಸ್ಕ್ಯಾನ್ ಮೂಲಕ ಕಂಡು ಹಿಡಿಯಬಹುದು. ಹಿಸ್ಟೆರೊಸ್ಕೊಪಿಕ್ ಸೆಪ್ಟಲ್ ರಿಸೆಕ್ಷನ್, ಮೆಟ್ರೊಪ್ಲಾಸ್ಟಿ, ಶಸ್ತ್ರಚಿಕಿತ್ಸೆ ಇತ್ಯಾದಿಗಳು ಗರ್ಭಧಾರಣೆಯ ಯಶಸ್ಸಿನ ಸಾಧ್ಯತೆಗಳನ್ನು ಸುಧಾರಿಸಲು ಮಾಡಬಹುದಾದ ಕೆಲ ಚಿಕಿತ್ಸೆಗಳು.

ಕ್ಯಾರಿಯೊಟೈಪಿಂಗ್:

ಇದು ಗರ್ಭಪಾತಕ್ಕೆ ಕಾರಣವಾಗುವ ಪುರುಷ ಅಥವಾ ಮಹಿಳಾ ಸಂಗಾತಿಯ ಯಾವುದಾದರೂ ವಂಶವಾಹಿ ಸಮಸ್ಯೆ ಇದ್ದಲ್ಲಿ ಕಂಡುಕೊಳ್ಳಲು ನೆರವಾಗುತ್ತದೆ. ಕ್ರೋಮೋಸೋಮುಗಳ ಸಂಖ್ಯೆ ಅಥವಾ ಸ್ವರೂಪದಲ್ಲಿ ಯಾವುದೇ ಬದಲಾವಣೆಯು ಪ್ರಾಥಮಿಕ ಅಥವಾ ಆನಂತರದ ಬಂಜೆತನದ ತೊಂದರೆಯ ಸೂಚಕವಾಗಿದೆ.

ಗರ್ಭಪಾತಕ್ಕೆ ಕಾರಣವಾಗುವ ವಂಶವಾಹಿ ಗುಣಗಳಲ್ಲಿ ಕೆಲವುಗಳು ವೈ ಕ್ರೋಮೋಸೋಮ್ ಮೈಕ್ರೊಡಿಲಿಷನ್, ಕ್ಲೈನ್ ಫೆಲ್ಟರ್ ಸಿಂಡ್ರೋಮ್, ಕ್ಯಾಲ್ ಮೂನ್  ಸಿಂಡ್ರೋಮ್ ಇತ್ಯಾದಿ. ಇಂತಹ ಗರ್ಭಪಾತ ಹೇಗೆ ತಪ್ಪಿಸಬಹುದು? ಪಿಜಿಟಿ ಇದಕ್ಕೆ ಪರಿಹಾರ ನೀಡುತ್ತದೆ.

ಪಿಜಿಟಿ(ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್):

ದಂಪತಿಗಳಲ್ಲಿ ವಂಶವಾಹಿ ಸಮಸ್ಯೆ ಇದ್ದಲ್ಲಿ ಪಿಜಿಟಿಯು ಗರ್ಭಪಾತದ ಸಮಸ್ಯೆ ಕಡಿಮೆ ಮಾಡಲು ನೆರವಾಗಬಲ್ಲದು ಮತ್ತು ಅವರ ಮಕ್ಕಳಿಗೆ ವಂಶವಾಹಿ ಸಮಸ್ಯೆಯನ್ನು ವರ್ಗಾಯಿಸುವುದನ್ನು ತಪ್ಪಿಸಬಲ್ಲದು. ಪಿಜಿಟಿ ಪರೀಕ್ಷೆಗಳ ಮೂಲಕ ಭ್ರೂಣಗಳನ್ನು ವಂಶವಾಹಿ ಅಸಹಜತೆಗಳಿಗೆ ಪರೀಕ್ಷಿಸಬಹುದು ಮತ್ತು ಆರೋಗ್ಯಕರ ಭ್ರೂಣಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಇವುಗಳನ್ನು ಭ್ರೂಣ ವರ್ಗಾವಣೆಗೆ(embryo transfer) ಉಪಯೋಗಿಸಬಹುದು ಇದು ಗರ್ಭಧಾರಣೆಯ ಯಶಸ್ಸಿನ ಸಾಧ್ಯತೆ ಹೆಚ್ಚಿಸುತ್ತದೆ ಅಲ್ಲದೆ ತನ್ನ ಮಗುವಿಗೆ ವಂಶವಾಹಿ ಸಮಸ್ಯೆಯನ್ನು ವರ್ಗಾವಣೆ ಮಾಡುವ ತೊಂದರೆ ಕಡಿಮೆ ಮಾಡುತ್ತದೆ.

ಪಿಜಿಟಿ ವಿಧಗಳು:

ಎ. ಪಿಜಿಟಿ-ಎ(ಅನ್ಯುಪ್ಲಾಯ್ಡಿ)- ಯಾವುದೇ ಮನುಷ್ಯರಲ್ಲಿ ಸಾಮಾನ್ಯ ಕ್ರೋಮೋಸೋಮುಗಳ ಸಂಖ್ಯೆ 46 ಮತ್ತು ಅದನ್ನು ಯೂಪ್ಲಾಯ್ಡಿ ಎಂದು ಕರೆಯಲಾಗುತ್ತದೆ. ಹೆಚ್ಚುವರಿ ಅಥವಾ ಕಡಿಮೆ ಸಂಖ್ಯೆಯ ಕ್ರೋಮೋಸೋಮುಗಳಿದ್ದಲ್ಲಿ ಅದನ್ನು ಅನ್ಯುಪ್ಲಾಯ್ಡಿ ಎಂದು ಕರೆಯಲಾಗುತ್ತದೆ. ಪಿಜಿಟಿ- ಎಯನ್ನು ಯಾವುದೇಹೆಚ್ಚುವರಿ ಅಥವಾ ತಪ್ಪಿಹೋದ ಕ್ರೋಮೋಸೋಮಿಗೆ ಪರೀಕ್ಷಿಸಬಹುದು. ಉದಾಹರಣೆಗೆ, ಡೌನ್ ಸಿಂಡ್ರೋಮ್ ನಲ್ಲಿ ಕ್ರೋಮೋಸೋಮಿನ ಹೆಚ್ಚುವರಿ ಪ್ರತಿ 21 ಅನ್ನು ಪಿಜಿಟಿ-ಎ ಮೂಲಕ ಪತ್ತೆ ಮಾಡಬಹುದು. ಇದು ಡೌನ್ಸ್ ಸಿಂಡ್ರೋಮ್ ಮೂಲಕ ಜನಿಸುವ ಮಗುವನ್ನು ತಡೆಯಬಲ್ಲದು.

ಬಿ. ಪಿಜಿಟಿ-ಎಂ(ಮೋನೊಜೆನಿಕ್)- ಇದನ್ನು ಸಿಸ್ಟಿಕ್ ಫೈಬ್ರೋಸಿಸ್, ಹಂಟಿಂಗ್ಟನ್ಸ್ ಡಿಸೀಸ್ ಇತ್ಯಾದಿ ಒಂದೇ ವಂಶವಾಹಿ ಸಮಸ್ಯೆಯನ್ನು ಪತ್ತೆ ಮಾಡಲು ಬಳಸಬಹುದು.

ಸಿ. ಪಿಜಿಟಿ-ಎಸ್.ಆರ್(ಸ್ಟ್ರಕ್ಚರಲ್ ರೀಅರೇಂಜ್ ಮೆಂಟ್ಸ್)-ಕ್ರೋಮೋಸೋಮ್ ನಲ್ಲಿ ಯಾವುದೇ ರಚನಾತ್ಮಕ ಮರು ಹೊಂದಾಣಿಕೆಯನ್ನು ಪತ್ತೆ ಮಾಡಬಹುದು.

ಪಿಜಿಟಿಯು ಹಲವಾರು ವಂಶವಾಹಿ ಅಸ್ವಸ್ಥತೆಗಳನ್ನು ಪತ್ತೆ ಮಾಡುವಲ್ಲಿ ನೆರವಾಗಬಹುದು ಇದರಿಂದ ದಂಪತಿಗಳಿಗೆ ಆರೋಗ್ಯಕರ ಗರ್ಭಧಾರಣೆ ಹಾಗೂ ಆರೋಗ್ಯಕರ ಮಗು ಪಡೆಯಲು ಸಾಧ್ಯವಾಗುತ್ತದೆ. ದಂಪತಿಗಳು ಪದೇ ಪದೇ ಗರ್ಭಪಾತಕ್ಕೆ ಒಳಗಾಗತ್ತಿದ್ದರೆ ಫರ್ಟಿಲಿಟಿ ಪರೀಕ್ಷೆಗೆ ಒಳಪಡಬೇಕು. ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳು ನಿಮ್ಮ ಜೀವನದ ಅತ್ಯಂತ ಮಹತ್ತರ ಆನಂದ ಸಾಧಿಸಲು ನಿಮಗೆ ನೆರವಾಗಬಲ್ಲವು.

ಬೆಂಗಳೂರಿನ ಓಯಸಿಸ್ ಫರ್ಟಿಲಿಟಿ ಒಂದೇ ಸೂರಿನಡಿ ಎಲ್ಲ ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳನ್ನು ಒಳಗೊಂಡ ಫರ್ಟಿಲಿಟಿ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಜಾಗತಿಕ ಮಟ್ಟದ ಐ.ವಿ.ಎಫ್.ಪ್ರಯೋಗಾಲಯಗಳು, ಅತ್ಯುತ್ತಮ ಮೂಲಸೌಕರ್ಯ, ಪರಿಣಿತ ಫರ್ಟಿಲಿಟಿ ತಜ್ಞರು ಮತ್ತು ಅತ್ಯುತ್ತಮ ಎಂಬ್ರಿಯೋಲಜಿಸ್ಟ್ ಗಳನ್ನು ಒಳಗೊಂಡ ಓಯಸಿಸ್ ಫರ್ಟಿಲಿಟಿಯು ಕೈಗೆಟುಕುವ, ಪುರಾವೆ ಆಧರಿತ ವೈಯಕ್ತಿಕಗೊಳಿಸಿದ ಫರ್ಟಿಲಿಟಿ ಚಿಕಿತ್ಸೆಗಳನ್ನು ಫಲವಂತಿಕೆ ಇಲ್ಲದ ದಂಪತಿಗಳಿಗೆ ಒದಗಿಸುವ ಮೂಲಕ ಅವರು ತಂದೆ ತಾಯಿಯರಾಗುವ ಕನಸು ಸಾಧಿಸಲು ನೆರವಾಗುತ್ತದೆ. ಈ ಫರ್ಟಿಲಿಟಿ ಸರಣಿಯು ಭಾರತದಾದ್ಯಂತ ಆಂಧ್ರ ಪ್ರದೇಶ, ಕರ್ನಾಟಕ, ತಮಿಳು ನಾಡು, ಜಾರ್ಖಂಡ್, ಗುಜರಾತ್, ಮಹಾರಾಷ್ಟ್ರ ಮತ್ತು ಒಡಿಶಾ ಒಳಗೊಂಡು 25 ಕೇಂದ್ರಗಳನ್ನು ಹೊಂದಿದೆ.

ಡಾ.ಮೇಘನಾ ನ್ಯಾಪತಿ ಕರ್ನಾಟಕದ ಪ್ರಖ್ಯಾತ ಐ.ವಿ.ಎಫ್. ತಜ್ಞರಾಗಿದ್ದಾರೆ ಮತ್ತು ಅವರು ಬಂಜೆತನ ಮತ್ತು ಸಂತಾನೋತ್ಪಾದನೆಯ ಚಿಕಿತ್ಸೆಯಲ್ಲಿ ಪರಿಣಿತರಾಗಿದ್ದಾರೆ. ಡಾ.ಮೇಘನಾ ಎಲ್ಲ ಬಗೆಯ ಬಂಜೆತನದ ಪ್ರಕರಣಗಳನ್ನು ಅತ್ಯುತ್ತಮ ಯಶಸ್ಸಿನ ಪ್ರಮಾಣದೊಂದಿಗೆ ನಿರ್ವಹಿಸಲು ಖ್ಯಾತಿ ಪಡೆದಿದ್ದಾರೆ ಮತ್ತು ತಮ್ಮ ಪರಿಣಿತಿ ಹಾಗೂ ಕಾರುಣ್ಯಪೂರ್ಣ ಆರೈಕೆಯೊಂದಿಗೆ ಹಲವಾರು ದಂಪತಿಗಳಿಗೆ ತಂದೆ ತಾಯಿ ಎನ್ನಿಸಿಕೊಳ್ಳುವ ಆನಂದ ಹರಡುತ್ತಿದ್ದಾರೆ.

Exit mobile version