ನೀವು ಏನು ತಿನ್ನುತ್ತೀರಿ…? ಅದರ ಕುರಿತು ಎಚ್ಚರದಿಂದಿರಿ! ಮತ್ತು ನಿಯಮಿತ ವ್ಯಾಯಾಮದಿಂದ ದೃಢಕಾಯರಾಗಿರಲು ಮರೆಯಬೇಡಿ. ಒಬೆಸಿಟಿ ಗರ್ಭಧಾರಣೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಹೌದು, ಗರ್ಭಧಾರಣೆ ವಿಷಯಕ್ಕೆ ಬಂದರೆ ದೇಹಾಕಾಯದ ಗಾತ್ರವು ಮುಖ್ಯವಾಗುತ್ತದೆ. ಜೀವನಶೈಲಿ ಆಯ್ಕೆಗಳು ಸಂತಾನೋತ್ಪಾದನೆಯ ವಯಸ್ಸಿನ ಪುರುಷರು ಹಾಗೂ ಮಹಿಳೆಯರಲ್ಲಿ ಹೆಚ್ಚು ಬೊಜ್ಜಿಗೆ ಕಾರಣವಾಗಿವೆ. ಬಿಎಂಐ(ಬಾಡಿ ಮಾಸ್ ಇಂಡೆಕ್ಸ್) 30 kg/m2 ಅದಕ್ಕಿಂತ ಹೆಚ್ಚಾಗಿದ್ದರೆ ನಿಮಗೆ ಬೊಜ್ಜು ಅಥವಾ ಒಬೆಸಿಟಿ ಇದೆ ಎಂದರ್ಥ. ಬಿಎಂಐ ಅನ್ನು ಎತ್ತರ ಹಾಗೂ ತೂಕದಿಂದ ಲೆಕ್ಕ ಹಾಕಲಾಗುತ್ತದೆ ಮತ್ತು ವ್ಯಕ್ತಿಯ ತೂಕ ಆರೋಗ್ಯಕರವೇ ಎಂದು ಕಂಡುಕೊಳ್ಳಲು ಬಳಸಲಾಗುತ್ತದೆ. ಬೊಜ್ಜು ದಂಪತಿಗಳ ಸಂತಾನೋತ್ಪಾದನೆಯ ಸಾಮರ್ಥ್ಯಗಳಿಗೆ ಹಾನಿಯುಂಟು ಮಾಡಬಲ್ಲದು ಮತ್ತು ಬಂಜೆತನಕ್ಕೆ ಕಾರಣವಾಗಬಹುದು ಅಲ್ಲದೆ ಮಧುಮೇಹ, ರಕ್ತದೊತ್ತಡ, ಹೃದಯ ರೋಗ, ಪಾರ್ಶ್ವವಾಯು, ಕ್ಯಾನ್ಸರ್, ಆರ್ಥ್ರೈಟಿಸ್ ಇತ್ಯಾದಿ ರೋಗಗಳಿಗೆ ಕಾರಣವಾಗಬಹುದು. ಆದರೆ ಆತಂಕ ಪಡಬೇಡಿ! ತೂಕ ಇಳಿಸುವುದರಿಂದ ನಿಮಗೆ ಗರ್ಭಧಾರಣೆ ಮಾಡಲು ನೆರವಾಗುತ್ತದೆ. ಪುರುಷರು ಹಾಗೂ ಮಹಿಳೆಯರಲ್ಲಿ ಎಷ್ಟು ಹೆಚ್ಚಿನ ದೇಹದ ಕೊಬ್ಬು ಬಂಜೆತನ ಉಂಟು ಮಾಡಬಲ್ಲದು ಎಂದು ವಿವರವಾಗಿ ತಿಳಿಯೋಣ.
ಬೊಜ್ಜು ಮತ್ತು ಮಹಿಳೆಯರಲ್ಲಿ ಬಂಜೆತನ:
ಬೊಜ್ಜು ಮಹಿಳೆಯರಲ್ಲಿ ಅಂಡಾಣು ಬಿಡುಗಡೆಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಮತ್ತು ಹಲವು ಅಧ್ಯಯನಗಳ ಪ್ರಕಾರ ಈ ಬೊಜ್ಜಿನ ಮಹಿಳೆಯರು ಗರ್ಭಧಾರಣೆ ಹೊಂದಲು ದೀರ್ಘ ಸಮಯ ಪಡೆಯುತ್ತಾರೆ. ಹೆಚ್ಚುವರಿ ಕೊಬ್ಬು ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ ಅದು ಅನಿಯಮಿತ ಋತುಚಕ್ರ ಮತ್ತು ಅಂಡಾಣು ಬಿಡುಗಡೆಯಾಗದೇ ಇರುವುದು ಬಂಜೆತನಕ್ಕೆ ಕಾರಣವಾಗಬಹುದು. ಬೊಜ್ಜು ಗರ್ಭಪಾತ ಉಂಟು ಮಾಡಬಹುದು ಮತ್ತು ಅಸಿಸ್ಟೆಡ್ ರೀಪ್ರೊಡಕ್ಷನ್ ತಂತ್ರಜ್ಞಾನದ ಫಲಿತಾಂಶಕ್ಕೂ ಬಾಧಿಸಬಹುದು.
ಗರ್ಭಧಾರಣೆಯ ಸಮಯದಲ್ಲಿ ಬೊಜ್ಜಿನ ಪರಿಣಾಮ:
ಬೊಜ್ಜು ಗರ್ಭಧಾರಣೆಯ ಸಮಯದಲ್ಲಿ ಸಂಕೀರ್ಣತೆಗಳನ್ನು ಸೃಷ್ಟಿ ಮಾಡಬಹುದು ಅವುಗಳಲ್ಲಿ:
- ಅವಧಿಪೂರ್ವ ಜನನ
- ಸಿಸೇರಿಯನ್ ಹೆರಿಗೆಯ ಸಾಧ್ಯತೆ ಹೆಚ್ಚಳ
- ಮ್ಯಾಕ್ರೊಸೊಮಿಯಾ(ದೊಡ್ಡ ಭ್ರೂಣ)
- ಜನ್ಮಜಾತ ದೋಷಗಳು
- ಸತ್ತು ಜನಿಸುವ ಮಗು
ಬೊಜ್ಜು ಮತ್ತು ಪುರುಷ ಬಂಜೆತನ:
ಪುರುಷರಲ್ಲಿ ಸಾಮಾನ್ಯ ತೂಕದವರಿಗೆ ಹೋಲಿಸಿದರೆ ತೂಕ ಹೆಚ್ಚಳವು ಕಡಿಮೆ ಟೆಸ್ಟೊಸ್ಟೆರಾನ್ ಮಟ್ಟ, ದುರ್ಬಲ ವೀರ್ಯಾಣು ಗುಣಮಟ್ಟ ಮತ್ತು ಫಲವತ್ತತೆಯ ಕುಸಿತಕ್ಕೆ ಕಾರಣವಾಗಬಹುದು. ಬಂಜೆತನದ ಸಮಸ್ಯೆಗಳು ವ್ಯಕ್ತಿ ಅತಿಯಾದ ತೂಕ ಹೊಂದಿದ್ದರೆ(ಎನ್.ಸಿ.ಬಿ.ಐ) ಪ್ರತಿ 9 ಕೆಜಿಗೆ(20ಪೌಂಡ್ ಗಳು) ಶೇ.10ರಷ್ಟು ಹೆಚ್ಚಾಗುತ್ತವೆ.
ಬೊಜ್ಜು ಲೈಂಗಿಕ ನಿಷ್ಕ್ರಿಯತೆ ಉಂಟು ಮಾಡಬಹುದು ಮತ್ತು ವೀರ್ಯಾಣು ಸಂಖ್ಯೆ, ಚಲನಶೀಲತೆ ಮತ್ತು ದಟ್ಟಣೆ ಕಡಿಮೆ ಮಾಡಬಹುದು.
ಬೊಜ್ಜಿಗೆ ಚಿಕಿತ್ಸೆ:
ವ್ಯಕ್ತಿಯ ತೂಕದಲ್ಲಿ ಶೇ.5ರಿಂದ – 10ರಷ್ಟು ಕಡಿತವು ಫಲವತ್ತತೆಯ ಪ್ರಮಾಣ ಸುಧಾರಿಸುತ್ತದೆ. ಸಮತೋಲನದ ಆಹಾರ, ಜಂಕ್ ಫುಡ್ ಗಳನ್ನು ತಪ್ಪಿಸುವುದು ಮತ್ತು ನಿಯಮಿತ ದೈಹಿಕ ಚಟುವಟಿಕೆಯು ಸಾಕಷ್ಟು ತೂಕ ಇಳಿಸಲು ನೆರವಾಗುತ್ತದೆ. ತೂಕ ನಿಯಂತ್ರಿಸಿದ ಕೂಡಲೇ ಅಂಡಾಣು ಬಿಡುಗಡೆ ಸಮಸ್ಯೆಗಳು ಪರಿಹಾರವಾಗುತ್ತವೆ ಮತ್ತು ವೀರ್ಯದ ಗುಣಮಟ್ಟ ಕೂಡಾ ನಿಯಂತ್ರಣಕ್ಕೆ ಬರುತ್ತದೆ ಇದರಿಂದ ಗರ್ಭಧಾರಣೆಯ ಸಾಧ್ಯತೆಗಳನ್ನು ಸುಧಾರಿಸುತ್ತದೆ. ಐವಿಎಫ್/ಐಸಿಎಸ್ಐ ರೀತಿಯ ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳು ಕೂಡಾ ಅಂಡಾಣು ಬಿಡುಗಡೆ ಅಥವಾ ವೀರ್ಯಾಣು ಸಮಸ್ಯೆಗಳನ್ನು ಹೊಂದಿರುವವರ ನೆರವಿಗೆ ಬರುತ್ತವೆ. ಆದರೆ ಫರ್ಟಿಲಿಟಿ ಚಿಕಿತ್ಸೆ ಪಡೆದುಕೊಂಡರೂ ತೂಕ ನಿರ್ವಹಣೆಯು ಯಶಸ್ಸಿಗೆ ಅತ್ಯಂತ ಮುಖ್ಯವಾಗಿದೆ.
ಸರಿಯಾದ ಆಹಾರದ ಅಭ್ಯಾಸಗಳು ಮತ್ತು ದೈಹಿಕ ಚಟುವಟಿಕೆ ನಿಮ್ಮ ಪಾಲಕರಾಗುವ ಕನಸು ನನಸಾಗಿಸಿಕೊಳ್ಳಲು ನೆರವಾಗುತ್ತವೆ. ಇದನ್ನು ಮರೆಯದಿರಿ! ತಂದೆ ತಾಯಿಯಾಗುವ ಸಂತೋಷ ನಿಮ್ಮದಾಗಲಿ!