Site icon Oasis Fertility

ಮಹಿಳೆಯರಲ್ಲಿ ಫಲವಂತಿಕೆ ಹೆಚ್ಚಿಸಲು ಫರ್ಟಿಲಿಟಿ ಡಯೆಟ್

Fertility diet to improve fertility in women

Author: S. Flora Amritha, Dietician

ಮಹಿಳೆಯರಲ್ಲಿ ಬಂಜೆತನ ಸವಾಲಿನ ಅನುಭವವಾಗಿದೆ. ಫರ್ಟಿಲಿಟಿ ಚಿಕಿತ್ಸೆಗಳಲ್ಲಿ ಸಾಕಷ್ಟು ಸುಧಾರಣೆಗಳು ಬಂದಿದ್ದರೂ ಅಸಿಸ್ಟೆಡ್ ರೀಪ್ರೊಡಕ್ಟಿವ್ ತಂತ್ರಜ್ಞಾನದ ಚಿಕಿತ್ಸೆಯ ಕಠಿಣ ಪ್ರಕ್ರಿಯೆ ಸರಳೀಕರಿಸಲು ಬಹಳ ಕಡಿಮೆ ನೆರವಾಗುವ ಸಮಗ್ರ ವಿಧಾನಗಳು ಸ್ವಲ್ಪಮಟ್ಟಿಗೆ ನೆರವಾಗುತ್ತವೆ. ಅಂತಹ ಒಂದು ವಿಧಾನವೆಂದರೆ ಮಹಿಳೆಯರಲ್ಲಿ ಫಲವಂತಿಕೆ ಸುಧಾರಿಸಲು ಪಥ್ಯದ ಬಳಕೆ. ಇತ್ತೀಚೆಗೆ ಬಹಳ ಸದ್ದು ಮಾಡುತ್ತಿರುವ ಹೊಸ ಪ್ರವೃತ್ತಿ ಎಂದರೆ “ಫರ್ಟಿಲಿಟಿ ಡಯೆಟ್” ಪರಿಕಲ್ಪನೆಯಾಗಿದೆ. ಅದನ್ನು ಆವಿಷ್ಕರಿಸುವ ಮುನ್ನ ಪಥ್ಯ ಮತ್ತು ಫಲವಂತಿಕೆ ನಡುವಿನ ಸಂಪರ್ಕವನ್ನು ತಿಳಿಯುವುದು ಮತ್ತು ಫಲವಂತಿಕೆ ಸುಧಾರಿಸಲು ಅದು ಯಾವ ಪಾತ್ರ ವಹಿಸುತ್ತದೆ ಎಂದು ಅರಿಯುವುದು ಮುಖ್ಯ.

ಪಥ್ಯ ಮತ್ತು ಫಲವಂತಿಕೆಯ ನಡುವಿನ ಸಂಪರ್ಕ:

ಹಲವು ಅಧ್ಯಯನಗಳು ಪಥ್ಯ ಮತ್ತು ಫಲವಂತಿಕೆಯ ನಡುವಿನ ಸಂಪರ್ಕಗಳನ್ನು ಮೌಲ್ಯಮಾಪನ ಮಾಡಿವೆ.

ಪಥ್ಯದಲ್ಲಿ ಬದಲಾವಣೆಗಳನ್ನು ಅಳವಡಿಸುವುದು ಮಹಿಳೆಯರ ಫಲವಂತಿಕೆಯನ್ನು ಸುಧಾರಿಸುತ್ತದೆ ಎಂದು ಹಲವು ವರ್ಷಗಳಿಂದ ತಿಳಿಯಲಾಗಿದೆ. ಪಥ್ಯ ಮತ್ತು ಫಲವಂತಿಕೆಗಳು ಜೊತೆ ಜೊತೆಯಾಗಿ ನಡೆದರೂ ಅದರ ಸಕಾರಾತ್ಮಕ ಪರಿಣಾಮವು ಬಂಜೆತನಕ್ಕೆ ತಕ್ಷಣ “ಚಿಕಿತ್ಸೆ” ನೀಡುವುದಲ್ಲ ಮತ್ತು ರಾತ್ರಿ ಕಳೆದು ಬೆಳಗಾಗುವುದರಲ್ಲಿ ಫಲಿತಾಂಶಗಳನ್ನು ನೀಡುವುದಿಲ್ಲ.

ಈ ಕೆಳಕಂಡ ವಿಟಮಿನ್ ಗಳು ಮತ್ತು ಪೋಷಕಾಂಶಗಳ ಸಮತೋಲನದ ಮೀಲ್ ಪ್ಲಾನ್ ಗರ್ಭ ಧರಿಸಲು ಯೋಜಿಸುತ್ತಿರುವ ಮಹಿಳೆಯರಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

– ಫೊಲಿಕ್ ಆಮ್ಲ

– ವಿಟಮಿನ್ ಬಿ12

– ಒಮೇಗಾ- 3 ಫ್ಯಾಟಿ ಆಮ್ಲಗಳು

ಅತ್ಯುತ್ತಮ ಫಲಿತಾಂಶಗಳಿಗೆ ನಿಮ್ಮ ಸಂಗಾತಿಯನ್ನೂ ಈ ಯೋಜನೆಯಲ್ಲಿ ತೊಡಗಿಸಿ ಮತ್ತು ಆರೋಗ್ಯಕರ ಜೀವನಶೈಲಿ ಫಲಿತಾಂಶ ನೀಡುವುದನ್ನು ಕಾಣಿರಿ.

ಫರ್ಟಿಲಿಟಿ ಡಯೆಟ್ ಎಂದರೇನು? ಫರ್ಟಿಲಿಟಿ ಡಯೆಟ್ ಎಂದರೆ ಸುಧಾರಿತ ಭೋಜನ ಯೋಜನೆ. ಇದು ಮಹಿಳೆಯರಲ್ಲಿ ಫಲವಂತಿಕೆ ಸುಧಾರಿಸುವ ಪಥ್ಯವಾಗಿದ್ದು ಅದನ್ನು ಅಗತ್ಯ ವಿಟಮಿನ್ ಗಳು, ಮಿನರಲ್ ಗಳು, ಕಾರ್ಬ್ ಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮತೋಲನಗೊಳಿಸಲಾಗುತ್ತದೆ. ಇದು ಗರ್ಭಧಾರಣೆ ಮತ್ತು ಆರೋಗ್ಯಕರ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ನೀವು ಹೇಗೆ ಫರ್ಟಿಲಿಟಿ ಡಯೆಟ್ ಯೋಜನೆ ಸುಧಾರಿಸುವುದು ಎನ್ನುವುದು ಇಲ್ಲಿದೆ.

– ಹೆಚ್ಚು ಆರೋಗ್ಯಕರ ಕೊಬ್ಬುಗಳನ್ನು(ತುಪ್ಪ, ಅವಕಾಡೊ ಇತ್ಯಾದಿ) ಸೇರಿಸಿ, ಸಂಸ್ಕರಿಸಿದ ಕೊಬ್ಬುಗಳು(ಉದಾ: ಚೀಸ್) ತಪ್ಪಿಸಿ.

– ನಿಮ್ಮ ಪ್ಲೇಟ್ ನಲ್ಲಿ ಹೆಚ್ಚು ತರಕಾರಿಗಳು, ಹಣ್ಣುಗಳು ಮತ್ತು ಸಸ್ಯಜನ್ಯ ಪ್ರೊಟೀನ್(ಕಡಲೆ, ಶೇಂಗಾ ಇತ್ಯಾದಿ) ಇರಲಿ. ಕೆಂಪು ಮಾಂಸಗಳ ಸೇವನೆ ಮಿತಗೊಳಿಸಿ.

– ಕಾರ್ಬ್ ಗಳು ಅಷ್ಟೊಂದು ಕೆಟ್ಟವಲ್ಲ. ಹೆಚ್ಚಿನ ನಾರಿನಂಶ ಮತ್ತು ಲೋ-ಗ್ಲೈಸೆಮಿಕ್ ಇಂಡೆಕ್ಸ್(ದ್ವಿದಳ ಧಾನ್ಯಗಳು) ಇರುವ ಆಹಾರ ಸೇವಿಸಿ. ಸಂಸ್ಕರಿಸಿದ ಅಥವಾ ಸರಳ ಕಾರ್ಬ್ ಗಳಿಂದ ನೀವು ದೂರವಿರಬೇಕು.

– ಕಬ್ಬಿಣದ ಸಸ್ಯಾಹಾರಿ ಮೂಲಗಳಾದ ಬೀನ್ಸ್, ಬೇಳೆ, ಟೋಫು, ದಟ್ಟ ಹಸಿರು ಸೊಪ್ಪುಗಳು, ದ್ವಿದಳ ಧಾನ್ಯಗಳು, ಬೀಜಗಳು ಮತ್ತು ನಟ್ ಗಳು ಹಾಗೂ ಕಡಿಮೆ ಕೊಬ್ಬಿನ ಡೈರಿ(ಸ್ಕಿಮ್ ಅಥವಾ ಟೋನ್ಡ್ ಹಾಲು ಮತ್ತು ದಧಿ) ಇರಲಿ.

– ನಿಮ್ಮ ದಿನಚರಿಯಲ್ಲಿ ಫೊಲಿಕ್ ಆಮ್ಲದ ಪೂರಕಗಳಿರಲಿ.

“ಫರ್ಟಿಲಿಟಿ ಡಯೆಟ್” ಕೆಲಸ ಮಾಡುತ್ತದೆಯೇ?

ಫರ್ಟಿಲಿಟಿ ಉತ್ತೇಜಿಸುವ ಆಹಾರಗಳು ಸಂತಾನೋತ್ಪಾದನೆಯ ವ್ಯವಸ್ಥೆಯ ಆರೋಗ್ಯಕರ ಕಾರ್ಯ ನಿರ್ವಹಣೆಗೆ ಅಗತ್ಯವಾಗಿದ್ದು ಅದು ಫಲವಂತಿಕೆ ಮತ್ತು ಗರ್ಭಧಾರಣೆಯ ಮೇಲೆ ಋಣಾತ್ಮಕ ಪರಿಣಾಮ ಬೀರುವ ತೂಕದ ಸಮಸ್ಯೆಗಳನ್ನು ಮತ್ತು ಯಾವುದೇ ಪೌಷ್ಠಿಕತೆಯ ಕೊರತೆಗಳನ್ನು ನಿರ್ವಹಿಸಲು ನೆರವಾಗುತ್ತವೆ.

ಫರ್ಟಿಲಿಟಿ ಡಯೆಟ್ ಪ್ರಸವಪೂರ್ವ ಪೌಷ್ಠಿಕತೆಗೆ ಅಗತ್ಯವಾದ ಗರಿಷ್ಠ ಮಟ್ಟದ ಪೌಷ್ಠಿಕತೆಯ ಮಟ್ಟಗಳನ್ನು ಕಾಪಾಡಲು ಕೂಡಾ ನೆರವಾಗುತ್ತದೆ.

 

Fertility Boosting Foods

ಸ್ತ್ರೀಯರ ಫಲವಂತಿಕೆ ಉತ್ತೇಜಿಸುವ ಆಹಾರಗಳು ಯಾವುವು?

ಫಲವಂತಿಕೆ ಉತ್ತೇಜಿಸುವ ಆಹಾರಗಳು ಹಣ್ಣುಗಳು ಮತ್ತು ತರಕಾರಿಗಳಿಂದ ದ್ವಿದಳ ಧಾನ್ಯಗಳವರೆಗೆ ವಿಸ್ತರಿಸಿದ್ದು ಅವುಗಳನ್ನು ಇಲ್ಲಿ ನೀಡಲಾಗಿದೆ.

ಮೊಟ್ಟೆಗಳು

ಮೊಟ್ಟೆಗಳು ಹೆಚ್ಚಿನ ಫರ್ಟಿಲಿಟಿ ಉತ್ತೇಜಿಸುವ ಆಹಾರವಾಗಿವೆ. ಅವು ಪ್ರೊಟೀನ್, ವಿಟಮಿನ್ ಬಿ12(ಫೊಲಿಕ್ ಆಮ್ಲ), ವಿಟಮಿನ್ ಇ, ಸತುವು ಮತ್ತು ಕೊಲಿನ್ ಒಳಗೊಂಡಿವೆ. ಕೊಲಿನ್ ಜನನ ದೋಷಗಳನ್ನು ಕಡಿಮೆ ಮಾಡುತ್ತದೆ ಮತ್ತು ಸರಿಯಾದ ಭ್ರೂಣ ಬೆಳವಣಿಗೆಗೆ ನೆರವಾಗುತ್ತದೆ.

ವಾಲ್ ನಟ್ ಗಳು ವಾಲ್ ನಟ್ ಗಳು ಒಮೇಗಾ-3 ಫ್ಯಾಟಿ ಆಮ್ಲಗಳಿಂದ ಸಮೃದ್ಧವಾಗಿದ್ದು ಅದು ಅಂಡೋತ್ಪತ್ತಿ ಸುಧಾರಿಸಲು ನೆರವಾಗುತ್ತವೆ.

ಬೆರ್ರಿಗಳು

ಬೆರ್ರಿಗಳು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿರೋಧಕ ಗುಣಗಳಿಂದ ಸನ್ನದ್ಧವಾಗಿದ್ದು ಅವು ಉರಿಯೂತ ಕಡಿಮೆ ಮಾಡಲು ನೆರವಾಗುತ್ತವೆ. ಅವು ಫೊಲೇಟ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿವೆ.

ಆವಕಾಡೊಗಳು

ಆವಕಾಡೊಗಳು ವಿಟಮಿನ್ ಕೆ, ಆಹಾರದ ನಾರಿನಂಶ, ಫೊಲಿಕ್ ಆಮ್ಲ ಮತ್ತು ಮಾನೊಸ್ಯಾಚುರೇಟೆಡ್ ಆಮ್ಲಗಳೆಮದು ಕರೆಯುವ ಆರೋಗ್ಯಕರ ಕೊಬ್ಬುಗಳನ್ನು ಹೊಂದಿದ್ದು ಅವು ಗರ್ಭಧಾರಣೆಯ ಪ್ರಾರಂಭಿಕ ಹಂತಕ್ಕೆ ಅತ್ಯಂತ ಅಗತ್ಯವಾಗಿವೆ. ಅವು ಪೊಟ್ಯಾಷಿಯಂ ಕೂಡಾ ಹೆಚ್ಚಾಗಿ ಹೊಂದಿದ್ದು ಅವು ವಿಟಮಿನ್ ಗಳನ್ನು ಚೆನ್ನಾಗಿ ಹೀರಿಕೊಳ್ಳಲು ಮತ್ತು ರಕ್ತದೊತ್ತಡ ಕಾಪಾಡಲು ನೆರವಾಗುತ್ತವೆ.

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು ಪ್ರೊಟೀನ್ ಗಳು, ಕ್ಯಾಲ್ಷಿಯಂ ಮತ್ತು ವಿಟಮಿನ್ ಎ, ಇ ಮತ್ತು ಡಿ ಸಮೃದ್ಧವಾಗಿದ್ದು ಅವು ಅಂಡೋತ್ಪತ್ತಿಯ ಬಂಜೆತನದ ತೊಂದರೆ ಕಡಿಮೆ ಮಾಡುತ್ತವೆ.

ಬೀನ್ಸ್ ಮತ್ತು ಬೇಳೆ

ಬೀನ್ಸ್ ಮತ್ತು ಬೇಳೆ ಫೊಲೇಟ್ ಮತ್ತು ಸ್ಪರ್ಮಿಡೈನ್ ಎಂಬ ಪೋಷಕಾಂಶ ಸಮೃದ್ಧವಾಗಿರುತ್ತವೆ. ಸ್ಪರ್ಮಿಡೈನ್ ಕೋಶಕಗಳ ಅಭಿವೃದ್ಧಿ ಮತ್ತು ಅಂಡಾಣು ಪ್ರಬುದ್ಧತೆಗೆ ಸಹಕಾರಿಯಾಗಿದೆ. ಫೊಲೇಟ್ ಇಂಪ್ಲಾಂಟೇಷನ್ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಮತ್ತು ಅಸಿಸ್ಟೆಡ್ ರೀಪ್ರೊಡಕ್ಷನ್ ಗೆ ಸಂಬಂಧಿಸಿದ ಸಕಾರಾತ್ಮಕ ಗರ್ಭಧಾರಣೆ ನೀಡುತ್ತದೆ.

ಅಂತಿಮವಾಗಿ:

ಫರ್ಟಿಲಿಟಿ ಡಯೆಟ್” ಪರಿಕಲ್ಪನೆಯು ಅತ್ಯುತ್ತಮ ಪಥ್ಯ ವಿಧಾನವೆಂದು ಪರಿಗಣಿಸಲ್ಪಡುವುದಾದರೂ ನ್ಯೂಟ್ರಿಷನಿಸ್ಟ್ ಅವರ ಸಲಹೆಯಂತೆ ಯೋಜಿಸುವ ಬೇಸಿಕ್ ಮೀಲ್ ಪ್ಲಾನ್ ಆಗಿದೆ. ಫರ್ಟಿಲಿಟಿ ಡಯೆಟ್ ನಿಮ್ಮ ಫಲವಂತಿಕೆಯ ಪ್ರಯಾಣದಲ್ಲಿ ಆರೋಗ್ಯಕರ ಆಹಾರದ ಆಯ್ಕೆಗಳನ್ನು ಮಾಡಲು ಮಾರ್ಗದರ್ಶಿಯಾಗಿದೆ. ಫರ್ಟಿಲಿಟಿ ಉತ್ತೇಜಿಸುವ ಆಹಾರಗಳೊಂದಿಗೆ ನೀವು ಸೇವಿಸಬಾರದ ಆಹಾರಗಳೂ ಇವೆ. ನಿಮ್ಮ ಫರ್ಟಿಲಿಟಿ ಪ್ರಯಾಣ ಕುರಿತಂತೆ ನಿಮ್ಮಲ್ಲಿ ಯಾವುದೇ ಅನುಮಾನಗಳಿದ್ದರೆ ಪರಿಣಿತ ಫರ್ಟಿಲಿಟಿ ಸ್ಪೆಷಲಿಸ್ಟ್/ಡಯೆಟಿಷಿಯನ್ ಅವರನ್ನು ಇಂದೇ ಸಂಪರ್ಕಿಸಿ.

Exit mobile version