Site icon Oasis Fertility

35ರ ನಂತರ ಗರ್ಭಧಾರಣೆ- ಏನನ್ನು ತಿಳಿಯಬೇಕು ಮತ್ತು ನಿರೀಕ್ಷಿಸಬೇಕು

Author: Dr. Meera Jindal, Consultant – Fertility specialist

ತಂದೆ ತಾಯಿಯರಾಗುವ ಪ್ರಯಾಣವು ಸಂತೋಷದಿಂದ ತುಂಬಿರುತ್ತದೆ ಮತ್ತು ಆದರೂ ಅದು ತನ್ನದೇ ಆದ ಅಡೆತಡೆಗಳನ್ನು ಹೊಂದಿದೆ. ಬಹಳಷ್ಟು ದಂಪತಿಗಳು ಹಲವಾರು ಕಾರಣಗಳಿಂದ ಜೀವನದ ನಂತರದ ವಯಸ್ಸಿನಲ್ಲಿ ಮಕ್ಕಳನ್ನು ಹೊಂದಲು ಬಯಸುತ್ತಾರೆ. ಅಸಿಸ್ಟೆಡ್ ರೀಪ್ರೊಡಕ್ಟಿವ್ ತಂತ್ರಜ್ಞಾನಗಳು ಈ ನಿರ್ಧಾರವನ್ನು ಸುಲಭಗೊಳಿಸಿವೆ ಮತ್ತು ಹೆಚ್ಚು ಆಲೋಚಿಸದೆ ಅವರ ಗುರಿಗಳು ಮತ್ತು ಆದ್ಯತೆಗಳ ಅನ್ವೇಷಣೆ ನಡೆಸಬಹುದು.

ಆದಾಗ್ಯೂ, “ಸಾಮಾನ್ಯ ಫಲವಂತಿಕೆಯ ವಯಸ್ಸು” ಅಲ್ಲದೇ ಇರುವ ವಯಸ್ಸಿನಲ್ಲಿ ಗರ್ಭಿಣಿಯಾಗುವುದು ಅದರದೇ ಸವಾಲುಗಳನ್ನು ಹೊಂದಿದೆ.

ವಯಸ್ಸು ಫಲವಂತಿಕೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಯಾವುದೆ ಸಂದೇಹವಿಲ್ಲ. ಮತ್ತು ಮಹಿಳೆಯ ಫಲವಂತಿಕೆ ವಯಸ್ಸಿನೊಂದಿಗೆ ಕಡಿಮೆಯಾಗುತ್ತದೆ. ಇದು 30ರ ನಂತರ ಮಹಿಳೆಗೆ ಗರ್ಭಧಾರಣೆ ಪಡೆಯುವುದು ಕೊಂಚ ದೀರ್ಘವಾಗಬಹುದು ಆದರೆ ಅಸಾಧ್ಯವಲ್ಲ.

ಆದ್ದರಿಂದ ಕುತೂಹಲಿಗಳಿಗೆ ಈ ಮಾಹಿತಿ ಇಲ್ಲಿದೆ, ಹೌದು 35 ವರ್ಷಗಳನ್ನು ಮೀರಿದ ಮಹಿಳೆಯರಿಗೆ ಸಂಬಂಧಿತ ತೊಂದರೆಗಳಿಂದ ಗರ್ಭಧಾರಣೆ ಹೊಂದುವ ಸಾಧ್ಯತೆಗಳು ಕಡಿಮೆ.

35ರ ನಂತರ ಗರ್ಭಧಾರಣೆ ಕಷ್ಟವಾಗಲು ಕಾರಣಗಳು

ಏನು ಮಾಡಬೇಕು?

ಬಹಳಷ್ಟು ಪ್ರಕರಣಗಳಲ್ಲಿ 35 ವರ್ಷಗಳ ಆರೋಗ್ಯಕರ ಮಹಿಳೆ ಮತ್ತು ಯಾವುದೇ ಅಂತರ್ಗತ ಫಲವಂತಿಕೆ ಸಮಸ್ಯೆಗಳಿದ್ದಲ್ಲಿ ನೈಸರ್ಗಿಕವಾಗಿ ಗರ್ಭಧಾರಣೆ ಹೊಂದುತ್ತಾರೆ ಮತ್ತು ಆರೋಗ್ಯಕರ ಶಿಶು ಪಡೆಯುತ್ತಾರೆ.

ಆದರೆ ದಂಪತಿಗೆ ನೈಸರ್ಗಿಕವಾಗಿ ಗರ್ಭಧಾರಣೆ ಹೊಂದಲು ಅಸಾಧ್ಯವಾಗಿದ್ದಲ್ಲಿ ಅವರು ಈ ಪರ್ಯಾಯ ಚಿಕಿತ್ಸೆಗಳನ್ನು ಪ್ರಯತ್ನಿಸಬಹುದು:

ಐಯುಐ(ಇಂಟ್ರಾ ಯುಟೆರಿನ್ ಇನ್ಸೆಮಿನೇಷನ್): ಉತ್ತಮ ಗುಣಮಟ್ಟದ ವೀರ್ಯವನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಫಲವಂತಿಕೆಗೆ ನೆರವಾಗಲು ಗರ್ಭಕೋಶಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ.

ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಷನ್): ಅಂಡಾಣುವನ್ನು ವೀರ್ಯದೊಂದಿಗೆ ಪ್ರಯೋಗಾಲಯದಲ್ಲಿ ಸಂಯೋಜಿಸಿ ಭ್ರೂಣವನ್ನು ಉತ್ಪಾದಿಸಲಾಗುತ್ತದೆ ಅದನ್ನು ಮಹಿಳೆಯರ ಗರ್ಭಕೋಶಕ್ಕೆ ಸೇರಿಸಲಾಗುತ್ತದೆ ಅಥವಾ ಅದನ್ನು ಶೈತ್ಯೀಕರಿಸಲಾಗುತ್ತದೆ ಮತ್ತು ನಂತರದ ಉದ್ದೇಶಕ್ಕೆ ಬಳಸಲಾಗುತ್ತದೆ.

ಅಲ್ಲದೆ, ನಿಮ್ಮ ಅಂಡಾಣುವನ್ನು ಘನೀಕರಿಸುವ ಆಯ್ಕೆ ಸದಾ ಇರುತ್ತದೆ.

ತೊಂದರೆಗಳು

ಪ್ರತಿ ಗರ್ಭಧಾರಣೆಯೂ ವಿಶಿಷ್ಟ. 20 ಮತ್ತು 30ಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೋಲಿಸಿದರೆ 30ರ ನಂತರದ ವಯಸ್ಸಿನ ಮಹಿಳೆಯರಿಗೆ ಅವರ ಗರ್ಭಧಾರಣೆಯ ಸಂಕೀರ್ಣತೆಗಳ ಸಾಧ್ಯತೆಗಳು ಕಡಿಮೆ. ಕೆಲ ತೊಂದರೆಗಳು ಹೀಗಿವೆ:

ಈ ತೊಂದರೆಗಳನ್ನು ಉತ್ತಮ ಪ್ರಸವಪೂರ್ವ ಆರೈಕೆಯಿಂದ ನಿರ್ವಹಿಸಬಹುದು ಮತ್ತು ತಪ್ಪಿಸಬಹುದು. ಪ್ರಸವಪೂರ್ವ ಪರೀಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಸಂಬಂಧಿಸಿದ ಯಾವುದೇ ರಿಸ್ಕ್ ಗಳ ಕುರಿತು ಮಾಹಿತಿ ಹೊಂದಿರಬೇಕು (ಏನಾದರೂ ಇದ್ದಲ್ಲಿ).

ಫಲವಂತಿಕೆ ಸುಧಾರಿಸುವ ಮಾರ್ಗಗಳು:

ನಿಮ್ಮ ಜೀವನಶೈಲಿಯಲ್ಲಿ ಕೆಲ ಬದಲಾವಣೆಗಳು ಮತ್ತು ನಿಮ್ಮ ದೇಹವನ್ನು ಗರ್ಭಧಾರಣೆಗೆ ಸಿದ್ಧಗೊಳಿಸಿಕೊಳ್ಳುವುದು ಈ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ.

ಈ ಕೆಲ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ:

 ಕೊನೆಯದಾಗಿ:

ಗರ್ಭಧಾರಣೆಯು ಉತ್ಸಾಹಕರ ಪ್ರಯಾಣವಾಗಿದೆ ಮತ್ತು 35 ವರ್ಷಗಳ ವಯಸ್ಸಿನಲ್ಲಿ ಗರ್ಭಧಾರಣೆ ಯೋಜಿಸುವುದು ಅತ್ಯಂತ ಕಠಿಣ ಮತ್ತು ವಿಶೇಷ ಗಮನ ಕೋರುವಂಥದ್ದಾಗಿದೆ. ಸಾಮಾಜಿಕ ಕಳಂಕ ಮತ್ತು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಈ ಒತ್ತಡಕ್ಕೆ ಸೇರ್ಪಡೆಯಾಗುತ್ತವೆ. ತೊಂದರೆಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಹೇಗೆ ಇಡೀ ಪ್ರಯಾಣವನ್ನು ಹೇಗೆ ಮುನ್ನಡೆಸಬಹುದು ಎನ್ನುವುದನ್ನು ಅರಿಯುವುದು ಉಪಯುಕ್ತವಾಗುತ್ತದೆ.

ಫಲವಂತಿಕೆಯ ಸಮಸ್ಯೆಯುಳ್ಳ ದಂಪತಿಗಳಿಗೂ ಭರವಸೆ ಇದೆ, ಹಲವಾರು ಪುರಾವೆ ಆಧರಿತ ಫಲವಂತಿಕೆ ಚಿಕಿತ್ಸೆಯ ಆಯ್ಕೆಗಳು ಮತ್ತು ಸಂಶೋಧನೆಯ ಬೆಂಬಲಿತ ಸಂತಾನೋತ್ಪಾದನೆಯ ತಂತ್ರಜ್ಞಾನಗಳು ನಿಮ್ಮ ತಂದೆ ತಾಯಿಯರಾಗುವ ಕನಸನ್ನು ನನಸಾಗಿಸಿಕೊಳ್ಳಲು ನೆರವಾಗುತ್ತವೆ.

Was this article helpful?
YesNo
Exit mobile version