Author : Dr Jigna Tamagond, Consultant-Fertility Specialist, Oasis Fertility, Karimnagar
ಹೆಚ್ಚಿನ ರಿಸ್ಕ್ ನ ಗರ್ಭಧಾರಣೆ- ಬೇಕು ಮತ್ತು ಬೇಡಗಳು
ಗರ್ಭಧಾರಣೆಯೇ ಸ್ವತಃ ಮಹಿಳೆಯರಲ್ಲಿ ಒಂದು ಬಗೆಯ ಭಯ ಮತ್ತು ಆತಂಕ ತರುತ್ತದೆ. ಕೆಲವು ವೈದ್ಯಕೀಯ ಸನ್ನಿವೇಶಗಳು ಮತ್ತು ಜೀವನಶೈಲಿ ಆಯ್ಕೆಗಳು ಹೆಚ್ಚಿನ ರಿಸ್ಕ್ ಒಳಗೊಂಡ ಗರ್ಭಧಾರಣೆ ಉಂಟು ಮಾಡಬಹುದು ಮತ್ತು ತಾಯಿ ಹಾಗೂ ಮಗು ಇಬ್ಬರಿಗೂ ಸಂಕೀರ್ಣತೆಗಳನ್ನು ಉಂಟು ಮಾಡಬಹುದು. ಸುರಕ್ಷಿತ ಗರ್ಭಧಾರಣೆ ಮತ್ತು ಆರೋಗ್ಯಕರ ಮಗುವನ್ನು ಪಡೆಯಲು ಸಂಕೀರ್ಣತೆಗಳನ್ನು ಉಂಟು ಮಾಡುವ ಪರಿಸ್ಥಿತಿಗಳನ್ನು ತಿಳಿದುಕೊಳ್ಳುವುದು ಮತ್ತು ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
ಹೈ-ರಿಸ್ಕ್ ಗರ್ಭಧಾರಣೆಯ ಕಾರಣಗಳು:
1. ಆರೋಗ್ಯ ಪರಿಸ್ಥಿತಿಗಳು:
ಎ.ಮಧುಮೇಹ
ಗರ್ಭಧಾರಣೆ ಪಡೆಯುವ ಮುನ್ನ ನಿಮಗೆ ಮಧುಮೇಹವಿದ್ದಲ್ಲಿ ಅಥವಾ ಗರ್ಭಧಾರಣೆಯ ಸಂದರ್ಭದಲ್ಲಿ ನೀವು ಮಧುಮೇಹಕ್ಕೆ ಒಳಗಾದರೆ(ಗರ್ಭಧಾರಣೆಯಲ್ಲಿ ಮಧುಮೇಹ), ಅದು ಸಕ್ಕರೆ ಮಟ್ಟವನ್ನು ನಿಯಂತ್ರಿಸದೇ ಇದ್ದಲ್ಲಿ ತಾಯಿ ಹಾಗೂ ಮಗುವಿಗೆ ಇಬ್ಬರಿಗೂ ಸಂಕೀರ್ಣತೆಗಳನ್ನು ಉಂಟು ಮಾಡಬಲ್ಲದು.
ಬಿ. ಪಿ.ಸಿ.ಒ.ಎಸ್.
ಪಿ.ಸಿ.ಒ.ಎಸ್. ಒಳಗೊಂಡ ಮಹಿಳೆಯರು ಇನ್ಸುಲಿನ್ ಪ್ರತಿರೋಧತೆ, ಹೃದಯ ರೋಗ, ಪಾರ್ಶ್ವವಾಯು ಇತ್ಯಾದಿ ಹಲವಾರು ಬಗೆಯ ಸಂಕೀರ್ಣತೆಗಳನ್ನು ಬೆಳೆಸಿಕೊಳ್ಳುವ ಅವಕಾಶಗಳಿದೆ.
ಸಿ.ಥೈರಾಯ್ಡ್ ಸಮಸ್ಯೆ
ಥೈರಾಯ್ಡ್ ಸಮಸ್ಯೆಗಳುಳ್ಳ ಮಹಿಳೆಯರು ಪ್ರೀಕ್ಲಾಂಪ್ಸಿಯಾ(ಅಧಿಕ ರಕ್ತದೊತ್ತಡ) ಪ್ಲೇಸೆಂಟಲ್ ಅಬ್ರಪ್ಷನ್(ಪ್ರಾರಂಭಿಕ ಹಂತದಲ್ಲಿಯೇ ಗರ್ಭಕೋಶದಿಂದ ಪ್ಲೇಸೆಂಟ್ ಪ್ರತ್ಯೇಕಗೊಳ್ಳುವುದು), ಪಲ್ಮನರಿ ಹೈಪರ್ ಟೆನ್ಷನ್ ಇತ್ಯಾದಿ ಸಂಕೀರ್ಣತೆಗಳನ್ನು ಬೆಳೆಸಿಕೊಳ್ಳಬಹುದು. ಇದು ಗರ್ಭಪಾತ, ಕಡಿಮೆ ತೂಕದ ಮಗು ಮತ್ತು ಮರಣಿಸಿದ ಶಿಶು ಜನನಕ್ಕೆ ಕಾರಣವಾಗಬಹುದು.
ಡಿ.ಆಟೊಇಮ್ಯೂನ್ ರೋಗಗಳು
ಆಟೊಇಮ್ಯೂನ್ ರೋಗಗಳಾದ ಸಿಸ್ಟೆಮಿಕ್ ಎರಿಥೆಮಟೊಸಸ್ ಗಂಭೀರ ಸಂಕೀರ್ಣತೆಗಳನ್ನು ಉಂಟು ಮಾಡಬಲ್ಲದು. ಮಹಿಳೆಯರಿಗೆ ಸುರಕ್ಷಿತ ಗರ್ಭಧಾರಣೆ ಮತ್ತು ಹೆರಿಗೆಗೆ ನೆರವಾಗಲು ಬಹುಶಿಸ್ತೀಯ ವಿಧಾನ ಅಗತ್ಯವಾಗುತ್ತದೆ.
ಇ. ಅಧಿಕ ರಕ್ತದೊತ್ತಡ
ನಿಯಂತ್ರಣವಿಲ್ಲದ ರಕ್ತದೊತ್ತಡವು ಪಾರ್ಶ್ವವಾಯು, ಹೊಕ್ಕುಳಬಳ್ಳಿ ಬೇರ್ಪಡಿಕೆ ಇತ್ಯಾದಿ ಉಂಟು ಮಾಡಬಹುದು.
ಎಫ್.ಬೊಜ್ಜು
ಮಹಿಳೆಯರಲ್ಲಿ ಬೊಜ್ಜು ಜನ್ಮಜಾತ ಅಸಹಜತೆಗಳು, ಅವಧಿಪೂರ್ವ ಜನನ, ನವಜಾತ ಶಿಶು ಮರಣ ಇತ್ಯಾದಿ ಉಂಟು ಮಾಡಬಹುದು.
2. ಜೀವನಶೈಲಿ ಆಯ್ಕೆಗಳು
ಎ.ಧೂಮಪಾನ
ಧೂಮಪಾನ ಮಾಡುವ ಮಹಿಳೆಯರಿಗೆ ಜನ್ಮಜಾತ ದೋಷಗಳುಳ್ಳ ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಬಿ. ಮದ್ಯಪಾನ
ಅತಿಯಾದ ಮದ್ಯಪಾನ ಮಾಡುವ ಮಹಿಳೆಯರಲ್ಲಿ ಶಿಶುವಿಗೆ ಫೀಟಲ್ ಆಲ್ಕೊಹಾಲ್ ಸ್ಪೆಕ್ಟ್ರಂ ಡಿಸಾರ್ಡರ್(ಎಫ್.ಎ.ಎಸ್.ಡಿ) ಉಂಟಾಗಬಹುದು ಅದು ದೈಹಿಕ ಅಂಗವಿಕಲತೆಗಳು, ನರವ್ಯವಸ್ಥೆಗೆ ಹಾನಿ ಇತ್ಯಾದಿ ಉಂಟು ಮಾಡಬಹುದು.
ಸಿ. ಮಾದಕ ವಸ್ತು ಬಳಕೆ
ಮಾದಕ ವಸ್ತುಗಳ ಬಳಕೆಯಿಂದ ಸಡನ್ ಇನ್ಫೆಂಟ್ ಡೆತ್ ಸಿಂಡ್ರೋಮ್(ಎಸ್.ಐ.ಡಿ.ಎಸ್), ಮತ್ತು ಜನ್ಮಜಾತ ಅಸಹಜತೆಗಳು ಉಂಟಾಗಬಹುದು.
3. ವಯಸ್ಸು- 35 ವರ್ಷ ವಯಸ್ಸಿನ ನಂತರ ಮೊದಲ ಬಾರಿಗೆ ಗರ್ಭಧಾರಣೆ
ತಾಯಿಯ ವಯಸ್ಸು ಹೆಚ್ಚಾದಂತೆ ಸಿಸೇರಿಯನ್ ಹೆಚ್ಚಿನ ರಿಸ್ಕ್, ಫೀಟಲ್ ಡೆತ್ ಇನ್ ಯುಟೆರೊ(ಎಫ್.ಡಿ.ಐ.ಯು-ಗರ್ಭಕೋಶದಲ್ಲಿ ಭ್ರೂಣ ಮರಣ) ಮತ್ತಿತರೆ ಸಂಕೀರ್ಣತೆಗಳು ಉಂಟಾಗಬಹುದು.
4. ಹಲವು ಗರ್ಭಧಾರಣೆಗಳು
ಹಲವು ಗರ್ಭಧಾರಣೆಗಳನ್ನು ಪಡೆದಿರುವ ಮಹಿಳೆಯರಿಗೆ ಗರ್ಭಧಾರಣೆ ಸಂದರ್ಭದಲ್ಲಿ ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ಗರ್ಭಪಾತ, ಅವಧಿಪೂರ್ವ ಹೆರಿಗೆ, ಜನನ ದೋಷಗಳು ಇತ್ಯಾದಿ ಉಂಟು ಮಾಡಬಹುದು.
ಗರ್ಭಧಾರಣೆಯ ಮುನ್ನೆಚ್ಚರಿಕೆಗಳು
1. ಧೂಮಪಾನ ತ್ಯಜಿಸಿ ಏಕೆಂದರೆ ಅದು ಭ್ರೂಣ ಬೆಳವಣಿಗೆಗೆ ಹಾನಿಯುಂಟು ಮಾಡಬಲ್ಲದು.
2. ಕಚ್ಚಾ ಮಾಂಸ ಸೇವನೆ ತ್ಯಜಿಸಿ ಏಕೆಂದರೆ ಅದು ಸೋಂಕುಗಳನ್ನು ಉಂಟು ಮಾಡಬಹುದು ಮತ್ತು ಮರಣಿಸಿದ ಶಿಶು ಜನಿಸಬಹುದು ಅಥವಾ ಭ್ರೂಣಕ್ಕೆ ಇತರೆ ಸಂಕೀರ್ಣತೆಗಳನ್ನು ಉಂಟು ಮಾಡಬಹುದು.
3. ಕಾಫಿ ಸೇವನೆ ತ್ಯಜಿಸಿ ಏಕೆಂದರೆ ಅತಿಯಾದ ಕಾಫಿಯು ಗರ್ಭಪಾತ ಉಂಟು ಮಾಡಬಲ್ಲದು.
4. ಒತ್ತಡ ಕಡಿಮೆ ಮಾಡಿಕೊಳ್ಳಿ ಹಾಗೂ ಯೋಗಾಭ್ಯಾಸ ಮಾಡಿರಿ ಮತ್ತು ಸಂಗೀತ ಆಲಿಸಿರಿ.
5. ಮದ್ಯಸೇವನೆ ತಪ್ಪಿಸಿ ಏಕೆಂದರೆ ಅದರಿಂದ ಮಗುವಿಗೆ ಸಂಕೀರ್ಣತೆಗಳು ಉಂಟಾಗಬಹುದು.
ಗರ್ಭಧಾರಣೆಯಲ್ಲಿ ನೀವು ಏನು ಮಾಡಬಹುದು?
1. ಉತ್ತಮ ಪ್ರಮಾಣದ ನಿದ್ರೆ ಮಾಡಿರಿ ಏಕೆಂದರೆ ನೀವು ಗರ್ಭ ಧರಿಸಿರುವಾಗ ನಿದ್ರೆಯು ನಿಮ್ಮ ರೋಗ ಪ್ರತಿರೋಧ ವ್ಯವಸ್ಥೆಗೆ ಹಾಗೂ ಮೆದುಳಿಗೆ ಉತ್ತಮ ಹಾಗೂ ಅದು ಹಾರ್ಮೋನುಗಳ ನಿಯಂತ್ರಣಕ್ಕೂ ನೆರವಾಗಬಲ್ಲದು.
2. ಸಾಕಷ್ಟು ತರಕಾರಿಗಳು, ಹಣ್ಣುಗಳು ಒಳಗೊಂಡ ಆರೋಗ್ಯಕರ ಆಹಾರ ಸೇವಿಸಿ ಮತ್ತು ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಿ.
3. ಆರೋಗ್ಯಕರ ತೂಕ ಕಾಪಾಡಿಕೊಳ್ಳಿ ಗರ್ಭಧಾರಣೆಯ ಸಂದರ್ಭದಲ್ಲಿ ಅತಿಯಾದ ತೂಕ ಹೊಂದುವುದು ಸಂಕೀರ್ಣತೆಗಳನ್ನು ಉಂಟು ಮಾಡಬಹುದು.
4. ಹೆರಿಗೆಪೂರ್ವ ವಿಟಮಿನ್ ಗಳಾದ ಫೋಲಿಕ್ ಆಮ್ಲವನ್ನು ಸೇರ್ಪಡೆ ಮಾಡಿಕೊಳ್ಳಿ ಅದು ಶಿಶುವಿನಲ್ಲಿ ಜನನ ದೋಷಗಳನ್ನು ತಪ್ಪಿಸಬಲ್ಲದು.
5. ನಿಯಮಿತ ಆರೋಗ್ಯ ಪರೀಕ್ಷೆಗಳನ್ನು ತಪ್ಪಿಸಿಕೊಳ್ಳಬಾರದು.
6. ಯೋಗ ಅಥವಾ ವ್ಯಾಯಾಮ ಮಾಡಿ ಅದು ತಾಯಿ ಹಾಗೂ ಮಗು ಇಬ್ಬರಿಗೂ ಅನುಕೂಲಕರ.
ಹೈ-ರಿಸ್ಕ್ ಗರ್ಭಧಾರಣೆಯ ಪರಿಸ್ಥಿತಿಗಳನ್ನು ವೈದ್ಯರ ಬೆಂಬಲವಿಲ್ಲದೆ ನಿರ್ವಹಿಸಬಹುದು. ಗರ್ಭಧಾರಣೆಯ 24ರಿಂದ 28 ವಾರಗಳ ನಡುವೆ ಮಧುಮೇಹ ಪರೀಕ್ಷೆ ಮಾಡಿಸಬೇಕು, ನಿಮಗೆ ಮಧುಮೇಹದ ಹೆಚ್ಚಿನ ರಿಸ್ಕ್ ಇದ್ದರೆ ನೀವು ಇನ್ನೂ ಮುಂಚೆಯೇ ಪರೀಕ್ಷಿಸಿಕೊಳ್ಳಬೇಕು. ಪ್ರತಿ ಸಾರಿ ಗೈನಕಾಲಜಿಸ್ಟ್ ಬಳಿ ಭೇಟಿ ನೀಡಿದಾಗಲೂ ರಕ್ತದೊತ್ತಡ ಪರೀಕ್ಷಿಸಿಕೊಳ್ಳಬೇಕು.
ಎಲ್ಲ ಸೂಚನೆಗಳು ಮತ್ತು ಔಷಧಗಳನ್ನೂ ತಪ್ಪಿಸದೇ ಅನುಸರಿಸುವುದು ಅತ್ಯಂತ ಮುಖ್ಯ. ಯಾವುದೇ ಗರ್ಭಿಣಿ ಸ್ತ್ರೀಗೆ ಸುರಕ್ಷಿತ ಮತ್ತು ಆರೋಗ್ಯಕರ ಗರ್ಭಧಾರಣೆ ಮತ್ತು ಹೆರಿಗೆಗೆ ಸಕಾರಾತ್ಮಕ ಮತ್ತು ಸಂತೋಷದ ಮನಸ್ಥಿತಿ ಇರುವುದು ಮುಖ್ಯವಾಗಿದೆ.