Author: Dr. V Ramya, Consultant & Fertility Specialist
ಆರೋಗ್ಯಕರ ಸಂತಾನೋತ್ಪಾದನೆಯ ವ್ಯವಸ್ಥೆಯು ನಿಮ್ಮ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ. ನಿಮ್ಮ ದೇಹವನ್ನು “ಮಗುವಿಗೆ ಸಿದ್ಧ”ವಾಗಿಸಲು ನೀವೇ ಪ್ರಯತ್ನಿಸಬಹುದಾದ ಕೆಲ ಸಲಹೆಗಳು ಇಲ್ಲಿವೆ.
ನಿಮ್ಮ ದೇಹ ತೂಕವನ್ನು ಗಮನಿಸಿ
ತೂಕದಲ್ಲಿ ಬದಲಾವಣೆ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ತೂಕ ಮತ್ತು ಕಡಿಮೆ ತೂಕ ಹೊಂದಿರುವುದು ಫಲವಂತಿಕೆಯ ಮತ್ತು ಗರ್ಭಧಾರಣೆ ಹೊಂದಲು ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ಬೊಜ್ಜು ಪಿಸಿಒಎಸ್ ನಂತಹ ಸಮಸ್ಯೆಗಳನ್ನು ಉಂಟು ಮಾಡಬಲ್ಲದು ಅದು ಹಾರ್ಮೋನುಗಳ ಅಸಮತೋಲನ ಉಂಟು ಮಾಡಿ ಅನಿಯಮಿತ ಋತುಚಕ್ರಕ್ಕೆ ಕಾರಣವಾಗಬಹುದು. ಕಡಿಮೆ ತೂಕ ಹೊಂದಿರುವುದು ಕೂಡಾ ಹಾರ್ಮೋನುಗಳ ಅಸಮತೋಲನಗಳನ್ನು ಉಂಟು ಮಾಡಿ ಎಸ್ಟ್ರೋಜನ್ ಉತ್ಪಾದನೆ ಕುಂಠಿತಗೊಳಿಸುತ್ತದೆ. ಕಡಿಮೆ ಎಸ್ಟ್ರೋಜನ್ ಮಟ್ಟಗಳು ಒಟ್ಟಾರೆ ಅಂಡೋತ್ಪತ್ತಿಯ ಪ್ರಕ್ರಿಯೆಗೆ ಹಾನಿಯುಂಟು ಮಾಡುತ್ತದೆ. ಇದು ಗರ್ಭಧಾರಣೆಯ ಸಂದರ್ಭದಲ್ಲೂ ಸಂಕೀರ್ಣತೆಗಳನ್ನು ಉಂಟು ಮಾಡುತ್ತದೆ.
ಆರೋಗ್ಯಕರ ಗರ್ಭಧಾರಣೆಯ ಸಂಭವನೀಯತೆಯು ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದರಿಂದ ಹೆಚ್ಚಾಗುತ್ತದೆ.
ಆರೋಗ್ಯಕರ ಆಹಾರಕ್ಕೆ ಬದ್ಧವಾಗಿರಿ
ಕಾಲ ಕಾಲದಿಂದಲೂ ನಾವು ಸೇವಿಸುವ ಆಹಾರ ನಮ್ಮ ಸಾಮಾನ್ಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಕೇಳುತ್ತಲೇ ಇದ್ದೇವೆ. ಗರ್ಭಧಾರಣೆ ಹೆಚ್ಚಿಸಲು ಖ್ಯಾತಿ ಪಡೆದ ಕೆಲ ಆಹಾರಗಳನ್ನು ಸೇವಿಸಿದರೆ ಅದು ಗರ್ಭಧಾರಣೆ ಹೆಚ್ಚಿಸುತ್ತವೆ ಎನ್ನಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಸಂತಾನೋತ್ಪಾದನೆಯ ವ್ಯವಸ್ಥೆಯನ್ನು ಆರೋಗ್ಯಕರ ಆಹಾರದ ಅಭ್ಯಾಸಗಳಿಂದ ಸಾಧಿಸಬಹುದು, ಅವು:
– ಹೆಚ್ಚಿನ ಉಪಾಹಾರ ಸೇವಿಸುವುದು ಮತ್ತು ಉತ್ಕರ್ಷಣ ನಿರೋಧಕಗಳಿರುವ ಹಣ್ಣುಗಳನ್ನು ಒಳಗೊಳ್ಳುವುದು
– ಸಾಕಷ್ಟು ನೀರು ಕುಡಿಯುವುದು ಮತ್ತು ಕಾರ್ಬೊನೇಟೆಡ್ ಮತ್ತು ಸಕ್ಕರೆಯ ಪಾನೀಯಗಳನ್ನು ತಪ್ಪಿಸುವುದು
– ಟ್ರಾನ್ಸ್ ಫ್ಯಾಟ್ ಗಳನ್ನು ತಪ್ಪಿಸುವುದು
– ನಿಮಗೆ ಪಿಸಿಒಎಸ್ ಇದ್ದಲ್ಲಿ ರಿಫೈನ್ಡ್ ಕಾರ್ಬ್ ಗಳನ್ನು ಕಡಿಮೆ ಮಾಡಿರಿ
– ನಾರಿನಂಶ ಹೆಚ್ಚಿರುವ ಆಹಾರ ಸೇವಿಸಿ
– ನಿಮ್ಮ ಆಹಾರದಲ್ಲಿ ಪ್ರೊಟೀನ್ ಮೂಲಗಳನ್ನು ಸೇರಿಸಿಕೊಳ್ಳಿ
– ಆರೋಗ್ಯಕರ ಕೊಬ್ಬುಗಳನ್ನು ಆಯ್ಕೆ ಮಾಡಿಕೊಳ್ಳಿ
ಮದ್ಯಪಾನ ಮತ್ತು ತಂಬಾಕು ತ್ಯಜಿಸಿ
ಮದ್ಯಪಾನ ಮತ್ತು ತಂಬಾಕು ವ್ಯಕ್ತಿಯ ಸಂಪೂರ್ಣ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಮದ್ಯಪಾನ ಎಸ್ಟ್ರೋಜೆನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಅದು ಅಂಡೋತ್ಪತ್ತಿಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಗರ್ಭಧಾರಣೆ ಹೊಂದುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಸಿಗರೇಟುಗಳಲ್ಲಿರುವ ತಂಬಾಕು ಮತ್ತಿತರೆ ರಾಸಾಯನಿಕ ವಸ್ತುಗಳು ಮಹಿಳೆಯರಲ್ಲಿ ಅಂಡಾಣುಗಳ ಗುಣಮಟ್ಟ ಮತ್ತು ಸಂಖ್ಯೆಗಳನ್ನು ಕಡಿಮೆ ಮಾಡಿ ಗರ್ಭಧಾರಣೆಯ ಸಾಧ್ಯತೆಗಳ ಮೇಲೆ ಋಣಾತ್ಕಕವಾಗಿ ಪರಿಣಾಮ ಬೀರುತ್ತದೆ. ಅದು ಅನಿಯಮಿತ ಋತುಚಕ್ರವನ್ನೂ ಉಂಟು ಮಾಡಬಲ್ಲದು.
ಮಲ್ಟಿ ವಿಟಮಿನ್ ಗಳು ಅಥವಾ ಪೇರೆಂಟಲ್ ವಿಟಮಿನ್ ಗಳ ಸೇವನೆ ನೀವು ಗರ್ಭಧಾರಣೆ ಯೋಜಿಸುತ್ತಿದ್ದರೆ ಸಮತೋಲನದ ಆಹಾರದೊಂದಿಗೆ ಮಲ್ಟಿ ವಿಟಮಿನ್ ಗಳು ಅಥವಾ ಪೇರೆಂಟಲ್ ವಿಟಮಿನ್ ಗಳನ್ನು ಪರಿಗಣಿಸಿ. ಯಾವುದೇ ವಿಟಮಿನ್ ಕೊರತೆಯಿದ್ದಲ್ಲಿ ವಿಟಮಿನ್ ಬಿ, ನಿಯಾಸಿನ್ ಮತ್ತು ಫೊಲಿಕ್ ಆಮ್ಲವನ್ನು ನಿಮ್ಮ ದಿನಚರಿಗೆ ಸೇರ್ಪಡೆ ಮಾಡಿ ಅವು ಸಂತಾನೋತ್ಪಾದನೆಯ ವ್ಯವಸ್ಥೆಗೆ ಹೆಚ್ಚುವರಿ ಪೋಷಣೆ ನೀಡುವ ಮೂಲಕ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ.
ಪೇರೆಂಟಲ್ ವಿಟಮಿನ್ ಗಳು ಭ್ರೂಣದ ಆರೋಗ್ಯಕರ ಅಭಿವೃದ್ಧಿಗೆ ನೆರವಾಗುತ್ತವೆ ಮತ್ತು ಜನಿಸದ ಮಗುವಿನಲ್ಲಿ ಜನನ ದೋಷಗಳನ್ನು ತಡೆಯುತ್ತವೆ.
ಒತ್ತಡ ಕಡಿಮೆ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ
ಮಾನಸಿಕ ಮತ್ತು ಮನಃಶ್ಯಾಸ್ತ್ರೀಯ ಸ್ವಾಸ್ಥ್ಯವು ಪುರುಷ ಹಾಗೂ ಮಹಿಳೆಯ ಸಂತಾನೋತ್ಪಾದನೆಯ ಆರೋಗ್ಯಕ್ಕೆ ಹತ್ತಿರದ ಸಂಬಂಧ ಹೊಂದಿದೆ. ಒತ್ತಡ, ಖಿನ್ನತೆ, ಆತಂಕ ಮತ್ತಿತರೆ ಯಾವುದೇ ಮಾನಸಿಕ ಸ್ಥಿತಿಗಳು ಅಂಡೋತ್ಪತ್ತಿಯ ಪ್ರಕ್ರಿಯೆ ಮತ್ತು ಋತುಚಕ್ರದ ಮೇಲೆ ನೇರ ಪರಿಣಾಮ ಬೀರುತ್ತವೆ.
ಧ್ಯಾನ, ಯೋಗ ಮತ್ತು ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ ಇತ್ಯಾದಿಗಳು ನಿಮಗೆ ಮಾನಸಿಕ ಸಮಸ್ಯೆಗಳಿಂದ ದೂರ ಬರಲು ನೆರವಾಗುತ್ತವೆ.
ತಕ್ಕಷ್ಟು ವಿಶ್ರಾಂತಿ ಮತ್ತು ನಿದ್ರೆಯ ಆವರ್ತ ಕೂಡಾ ಒತ್ತಡ ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿವೆ.
ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ ಅದು ಮಹಿಳೆಯರಲ್ಲಿ ಹಾರ್ಮೋನು ಉತ್ಪಾದನೆಯ ಮೇಲೆ ಪರಿಣಾಮ ಬೀರಿ ಗರ್ಭಧಾರಣೆಯ ಸಾಧ್ಯತೆಗಳ ಮೇಲೆ ಪರಿಣಾಮ ಬೀರುತ್ತದೆ.
ಕೆಫೀನ್ ಸೇವನೆ ಮಿತಿಗೊಳಿಸಿ
ಎಫ್.ಡಿ.ಎ. ಪ್ರಕಾರ ದಿನಕ್ಕೆ 400ಎಂಜಿಗಿಂತ ಕಡಿಮೆ ಸೇವನೆಯು ಆರೋಗ್ಯಕರ ವ್ಯಕ್ತಿಯ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಆದಾಗ್ಯೂ, ಕೆಫೀನ್ ಸೇವನೆ ಮತ್ತು ಮಹಿಳೆಯರ ಬಂಜೆತನದ ಮೇಲಿನ ಪರಿಣಾಮದ ನಡುವಿನ ಸಂಪರ್ಕ ಖಚಿತವಾಗಿಲ್ಲ.
ಸುರಕ್ಷಿತವಾಗಿರಲು ಕಾಫಿಯ 1-2 ಕಪ್ ಗಳ ಕೆಫೀನ್ ಸೇವನೆಗೆ ನಿಮ್ಮನ್ನು ನೀವು ಸೀಮಿತಗೊಳಿಸಿ.
ಪಾರಿಸರಿಕ ವಿಷಕಾರಿಗಳಿಗೆ ತೆರೆದುಕೊಳ್ಳುವುದನ್ನು ತಪ್ಪಿಸಿ
ಮಾನವರ ಅಗತ್ಯ ವಸ್ತುಗಳಾದ ನೀರು, ಗಾಳಿ ಮತ್ತು ಆಹಾರ ಪಾರಿಸರಿಕ ಮಾಲಿನ್ಯಕಾರಕಗಳು ಮತ್ತು ರಾಸಾಯನಿಕಗಳು ಅಸಂಖ್ಯ ವಿಧಗಳಲ್ಲಿ ಫಲವಂತಿಕೆಯ ಮೇಲೆ ಪರಿಣಾಮ ಬೀರಬಲ್ಲವು. ಈ ವಿಷಕಾರಕಗಳಿಗೆ ತೆರೆದುಕೊಂಡ ಮಹಿಳೆಯರಲ್ಲಿ ಅಂಡೋತ್ಪತ್ತಿಯ ಸಮಸ್ಯೆಗಳು, ಎಂಡೋಕ್ರೈನ್ ಕಾರ್ಯದಲ್ಲಿ ದೋಷ ಇತ್ಯಾದಿ ಉಂಟಾಗುತ್ತದೆ.
ಇವುಗಳಲ್ಲಿ ಕೆಲ ವಿಷಕಾರಿಗಳು ನಮ್ಮ ಪ್ರತಿನಿತ್ಯದ ಬಳಕೆಯ ಉತ್ಪನ್ನಗಳು ಅಂದರೆ ಮನೆಯ ಸ್ವಚ್ಛತೆಯ ಉತ್ಪನ್ನಗಳು, ಸೌಂದರ್ಯದ ಉತ್ಪನ್ನಗಳಲ್ಲಿರುತ್ತವೆ. ಸಾವಯವ ಮತ್ತು ಕಡಿಮೆ ಹಾನಿಕಾರಕ ಪರ್ಯಾಯಗಳನ್ನು ಬಳಸಲು ಪ್ರಯತ್ನಿಸಿ. ಫಲವಂತಿಕೆಯ ಮೇಲೆ ಪರಿಣಾಮ ಬೀರುವ ಸಂಭವನೀಯ ಹಾನಿಕಾರಕ ರಾಸಾಯನಿಕಗಳಿಂದ ದೂರವಿರಿ
ಮೇಲೆ ಹೇಳಲಾದ ಸಲಹೆಗಳು ಫಲವಂತಿಕೆಯನ್ನು ಉತ್ತೇಜಿಸಲು ನೆರವಾಗಬಲ್ಲವು. ಆದರೆ ನೀವು ಗರ್ಭದಾರಣೆ ಪಡೆಯಲು ಅಶಕ್ತರಾದರೆ ಆಗ ಅದಕ್ಕೆ ಕೆಲ ಅಂತರ್ಗತ ಫಲವಂತಿಕೆ ಸಮಸ್ಯೆಗಳಿರಬಹುದು. ನಿಮ್ಮ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಲು ನಿಮ್ಮ ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಿ.