Author: Dr Jigna Tamagond, Consultant – Fertility Specialist
ಐವಿಎಫ್ ಬಹಳಷ್ಟು ಫಲವಂತಿಕೆಯ ಸವಾಲನ್ನು ಎದುರಿಸುತ್ತಿರುವ ದಂಪತಿಗಳಿಗೆ ಭರವಸೆಯ ಬೆಳ್ಳಿ ಬೆಳಕಾಗಿರುವ ಸಂಭವನೀಯ ಯಶಸ್ವಿ ಫರ್ಟಿಲಿಟಿ ಚಿಕಿತ್ಸೆಯಾಗಿದೆ.
ಆದಾಗ್ಯೂ ಪೂರಕವಲ್ಲದ ಫಲಿತಾಂಶ ಸಾಧ್ಯತೆ ಸದಾ ಇರುತ್ತದೆ. ಕೆಲ ದಂಪತಿಗಳಿಗೆ ಗರ್ಭಧಾರಣೆ ಹೊಂದಲು ಒಂದಕ್ಕಿಂತ ಹೆಚ್ಚಿನ ಐವಿಎಫ್ ಆವರ್ತ ಅಗತ್ಯವಾಗಬಹುದು.
ಫರ್ಟಿಲಿಟಿ ಚಿಕಿತ್ಸೆಗಳು ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚು ಪರಿಶ್ರಮ ಬೇಡುವಂಥವು. ವಿಫಲ ಐವಿಎಫ್ ಆವರ್ತದ ನಂತರ ದಂಪತಿಗಳು ಭರವಸೆ ಕಳೆದುಕೊಂಡ, ದುಃಖಿತ ಅಥವಾ ಕೋಪಗೊಳ್ಳುವುದೂ ಇದೆ. ಅಂತಹ ಪ್ರಕರಣಗಳಲ್ಲಿ ದುಃಖಿಸಲು, ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳಿ ಮತ್ತು ನೀವು ಸಿದ್ಧರಾಗಿದ್ದೀರಿ ಎಂದಾಗ ಎರಡನೆಯ ಅಭಿಪ್ರಾಯವನ್ನು ಪಡೆಯಿರಿ.
ಎರಡನೆಯ ಅಭಿಪ್ರಾಯ ಎಂದರೇನು?
ಯಶಸ್ವಿಯಾಗದ ಐವಿಎಫ್ ಚಿಕಿತ್ಸೆ ಪಡೆದ ನಂತರ ಮುಂದಿನ ಹೆಜ್ಜೆಯನ್ನು ನಿರ್ಧರಿಸುವುದು ಅತ್ಯಂತ ಸಂಕಷ್ಟಕರ ಮತ್ತು ಸವಾಲಿನದಾಗಿದೆ. ಮತ್ತು ಎರಡನೆಯ ಅಭಿಪ್ರಾಯವನ್ನು ಅದರಲ್ಲಿಯೂ ನೀವು ಯಾವುದು ಕೊರತೆಯಾಗಿದೆ ಎಂದು ತಿಳಿಯದೇ ಇದ್ದಲ್ಲಿ ತೆಗೆದುಕೊಳ್ಳುವುದು ಕಷ್ಟವಾಗಬಹುದು, ಆದರೆ ಕೆಲವೊಮ್ಮೆ, ಎರಡನೆಯ ಅಭಿಪ್ರಾಯವು ಎಲ್ಲ ವ್ಯತ್ಯಾಸವನ್ನೂ ತರುತ್ತದೆ.
1. ಏಕೆ ಐವಿಎಫ್ ವಿಫಲವಾಗಿದೆ ಎಂಬ ಕಾರಣಗಳ ಪರಾಮರ್ಶೆ
ಇದು ನಿಮ್ಮ ಕೈಯಲ್ಲಿರುವ ಸಮಸ್ಯೆಗಳ ಕುರಿತು ಹೊಸ ದೃಷ್ಟಿಕೋನ ನೀಡುತ್ತದೆ. ಎರಡನೆಯ ಅಭಿಪ್ರಾಯವು ಹಿಂದೆ ವಿಫಲವಾದ ಆವರ್ತಗಳ ಕಾರಣಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಐವಿಎಫ್ ವೈಫಲ್ಯಕ್ಕೆ ಸಾಕಷ್ಟು ಕಾರಣಗಳಿರುತ್ತವೆ, ಅವುಗಳಲ್ಲಿ ಕೆಲವು ಹೀಗಿವೆ:
– ಭ್ರೂಣ ಅಳವಡಿಕೆ ವೈಫಲ್ಯ · ಅಂಡಾಣುಗಳ ಗುಣಮಟ್ಟ
– ಕಡಿಮೆ ವೀರ್ಯದ ಗುಣಮಟ್ಟ
– ಅನುವಂಶಿಕ ಅಸಹಜತೆಗಳು
2. ನಿಮಗೆ ಪರ್ಯಾಯ ಆಯ್ಕೆಗಳಿರುತ್ತವೆ
ಕಸ್ಟಮೈಸ್ಡ್ ಮತ್ತು ಸುಧಾರಿತ ಡಯಾಗ್ನೊಸ್ಟಿಕ್ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಮುಂದಿನ ಐವಿಎಫ್ ಆವರ್ತದಲ್ಲಿ ಗರ್ಭಧಾರಣೆಯ ನಿಮ್ಮ ಸಾಧ್ಯತೆಗಳನ್ನು ಹೆಚ್ಚಿಸಬಹುದು.
– ನೈಸರ್ಗಿಕ ಗರ್ಭದಾರಣೆ
ಐವಿಎಫ್ ಆಯ್ಕೆ ಮಾಡಿಕೊಂಡ ನಂತರ ನೈಸರ್ಗಿಕವಾಗಿ ಗರ್ಭಧಾರಣೆ ಸಾಧ್ಯವಿಲ್ಲ ಎಂದು ಬಹಳಷ್ಟು ಮಂದಿ ತಿಳಿಯುತ್ತಾರೆ.
– ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್ (ಪಿಜಿಟಿ)
ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್(ಪಿಜಿಎಸ್) ಒಳಕ್ಕೆ ಸೇರಿಸುವ ಭ್ರೂಣಗಳ ಪರೀಕ್ಷೆಯನ್ನು ಒಳಗೊಂಡ ಹೆಚ್ಚುವರಿ ಪರೀಕ್ಷಾ ವಿಧಾನವಾಗಿದ್ದು ಅದು ಯಾವುದೇ ಅನುವಂಶಿಕ ಅಥವಾ ಕ್ರೋಮೋಸೋಮುಗಳ ಅಸಹಜತೆಗಳನ್ನು ಪತ್ತೆ ಮಾಡಲು ಬಳಸಲಾಗುತ್ತದೆ. ಐವಿಎಫ್ ಸಂದರ್ಭದಲ್ಲಿ ಉಂಟಾಗುವ ಪ್ರಸ್ತುತ ಅಸಹಜ ವಂಶವಾಹಿ ಅಥವಾ ಅನುವಂಶಿಕ ಅಸಹಜತೆಗಳು ಗರ್ಭಪಾತಕ್ಕೆ ಕಾರಣವಾಗಬಹುದು.
– ಎಂಡೋಮೆಟ್ರಿಯಲ್ ರಿಸೆಪ್ಟಿವಿಟಿ ಅನಾಲಿಸಿಸ್(ಇ.ಆರ್.ಎ)
ಕೆಲವೊಮ್ಮೆ ಭ್ರೂಣವು ಎಂಡೋಮೆಟ್ರಿಯಂ ಒಳಗಡೆ ಸೇರಿಸಲು ವಿಫಲವಾಗುವುದು ವಿಫಲ ಐವಿಎಫ್ ಗೆ ಕಾರಣವಾಗುತ್ತದೆ. ಇ.ಆರ್.ಎ ಎಂಡೋಮೆಟ್ರಿಯಂನ ರಿಸೆಪ್ಟಿವಿಟಿ ಅಂಶವನ್ನು ವಿಶ್ಲೇಷಿಸುತ್ತದೆ. ಈ ವಿಶಿಷ್ಟ ತಂತ್ರವು ನಮಗೆ ಭ್ರೂಣ ಸೇರ್ಪಡೆಗೆ ಎಂಡೋಮೆಟ್ರಿಯಲ್ ಲೈನಿಂಗ್ ಸಿದ್ಧವಾಗಿರುವುದನ್ನು ನಿರ್ಧರಿಸಲು ನಮಗೆ ಅವಕಾಶ ನೀಡುತ್ತದೆ.
– ದಾನಿಗಳ ಅಂಡಾಣುಗಳು ಮತ್ತು ವೀರ್ಯಗಳು
ವೀರ್ಯ ಅಥವಾ ಅಂಡಾಣುಗಳಲ್ಲಿ ಏನಾದರೂ ಸಮಸ್ಯೆಯಿದ್ದಲ್ಲಿ ಐವಿಎಫ್ ವಿಧಾನವು ಯಶಸ್ವಿಯಾಗುವುದಿಲ್ಲ. ಅಂತಹ ಪ್ರಕರಣದಲ್ಲಿ ಸುಧಾರಿತ ಯಶಸ್ಸಿನ ಸಾಧ್ಯತೆಗಳಿಗೆ ದಾನಿಗಳ ಅಂಡಾಣುಗಳು ಮತ್ತು ವೀರ್ಯ ಪಡೆಯುವ ಆಯ್ಕೆ ಪರಿಗಣಿಸಬಹುದು.
ಅಂತಿಮವಾಗಿ:
ವಿಫಲ ಐವಿಎಫ್ ನಿಮ್ಮ ತಂದೆ ತಾಯಿಯರಾಗುವ ಕನಸಿನ ಕೊನೆಯಲ್ಲ. ಭರವಸೆ ಕಳೆದುಕೊಳ್ಳಬೇಡಿ. ಪರ್ಯಾಯಗಳು ಲಭಭ್ಯವಿವೆ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆ ಇರಿಸುವುದು ಮುಖ್ಯವಾಗಿದೆ. ನಿಮ್ಮೊಂದಿಗೆ ಪ್ರತಿ ಹೆಜ್ಜೆಯಲ್ಲೂ ಇರುವ ಸರಿಯಾದ ಫರ್ಟಿಲಿಟಿ ಸ್ಪೆಷಲಿಸ್ಟ್ ಅವರನ್ನು ಸಂಪರ್ಕಿಸುವುದು ಈ ಪ್ರಯಾಣದ ಮೂಲಕ ಮುನ್ನಡೆಯಲು ನಿಮಗೆ ನೆರವಾಗುತ್ತದೆ.
ಓಯಸಿಸ್ ಫರ್ಟಿಲಿಟಿಯಲ್ಲಿ ನಾವು ನಮ್ಮ ಪೋಷಕರಿಗೆ ಅತ್ಯುತ್ತಮ ಫರ್ಟಿಲಿಟಿ ಚಿಕಿತ್ಸೆಯನ್ನು ನೀಡುತ್ತೇವೆ. ವಿಶ್ವಾಸಾರ್ಹ ತಜ್ಞರು ಮತ್ತು ಅನುಭವಿ ಎಂಬ್ರಿಯಾಲಜಿಸ್ಟರು ಅತ್ಯಾಧುನಿಕ ಎ.ಆರ್.ಟಿ. ತಂತ್ರಜ್ಞಾನಗಳನ್ನು ಬಳಸುತ್ತಾರೆ. ನಾವು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇವೆ ಮತ್ತು ನಿಮಗೆ ನಿಮ್ಮ ತಂದೆ ತಾಯಿಯರಾಗುವ ಕನಸನ್ನು ಸಾಧಿಸಲು ನೆರವಾಗುವ ಯಾವುದೇ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ.