Site icon Oasis Fertility

ಪಿಸಿಒಎಸ್ ಬಂಜೆತನ ಉಂಟು ಮಾಡಬಹುದೇ?

PCOS

ಹಲವು ಯುವತಿಯರಲ್ಲಿ ಋತುಚಕ್ರ ತಡವಾಗುತ್ತಿರುತ್ತದೆ. ವ್ಯಾಯಾಮದ ಕೊರತೆಯಂತಹ ಅನಾರೋಗ್ಯಕರ ಜೀವನಶೈಲಿ, ಕಡಿಮೆ ನಿದ್ರೆ ಅಥವಾ ಅಸಹಜ ನಿದ್ರೆ, ಜಂಕ್ ಮತ್ತು ಅತ್ಯಂತ ಹೆಚ್ಚು ಸಂಸ್ಕರಿತ ಆಹಾರಗಳ ಸೇವನೆಯು ಋತುಚಕ್ರದ ಅನಿಯಮಿತ ಆವರ್ತಕ್ಕೆ ಕೆಲವು ಕಾರಣಗಳಾಗಿರಬಹುದು. ಹಲವರು ಅನಿಯಮಿತ ಮುಟ್ಟು, ಬೊಜ್ಜಿನ ಅಥವಾ ಬೊಜ್ಜುರಹಿತ ಹಾರ್ಮೋನಿನ ಅಸಮತೋಲನ ಇದರ ವಿಷವರ್ತುಲಕ್ಕೆ ಒಳಗಾಗಿದ್ದಾರೆ. ನಿಮಗೆ ಇವುಗಳಲ್ಲಿ ಯಾವುದೇ ಸಮಸ್ಯೆಗಳು ಇದ್ದಲ್ಲಿ, ಪಿಸಿಒಎಸ್ (ಪಾಲಿ ಸಿಸ್ಟಿಕ್ ಓವರಿಯನ್ ಸಿಂಡ್ರೋಮ್) ಇರಬಹುದು. ಪಿಸಿಒಎಸ್ ಈ ದಿನಗಳಲ್ಲಿ ಸಾಮಾನ್ಯ ಆರೋಗ್ಯದ ಸಮಸ್ಯೆಯಾಗುತ್ತಿದೆ ಮತ್ತು ಇದು ಮಹಿಳೆಯರಲ್ಲಿ ಬಂಜೆತನ ಉಂಟು ಮಾಡಬಹುದು. ಆತಂಕ ಪಡಬೇಡಿ. ಇದನ್ನು ಜೀವನಶೈಲಿಯ ಬದಲಾವಣೆಗಳು, ಔಷಧಗಳು ಮತ್ತು ಸುಧಾರಿತ ಬಂಜೆತನದ ಚಿಕಿತ್ಸೆಗಳಿಂದ ನಿರ್ವಹಿಸಬಹುದು.

ಪಿಸಿಒಎಸ್ ಎಂದರೇನು?

ಹಾರ್ಮೋನುಗಳ ಅಸಮತೋಲನದಿಂದ ಅನಿಯಮಿತ ಋತುಚಕ್ರಗಳಿದ್ದಾಗ ಮತ್ತು ನಿಮ್ಮ ಅಂಡಾಶಯಗಳು ಕೆಲವು ಹಾರ್ಮೋನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಪ್ರಾರಂಭಿಸುತ್ತವೆ ಮತ್ತು ಅಸಂಖ್ಯ ದ್ರವ ತುಂಬಿದ ಚೀಲಗಳು ಅಂಡಾಶಯಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ನಿಮಗೆ ಪಿಸಿಒಎಸ್ ಇದೆ ಎಂದು ಹೇಳಲಾಗುತ್ತದೆ.

ಲಕ್ಷಣಗಳು:

  1. ವಿಪರೀತ ಅಥವಾ ಅತ್ಯಲ್ಪ ಹರಿವಿನ ಅನಿಯಮಿತ ಋತುಚಕ್ರ
  2. ಬೊಜ್ಜು ಅಥವಾ ಒಬೆಸಿಟಿ
  3. ಅನಗತ್ಯ ಕೂದಲ ಬೆಳವಣಿಗೆ
  4. ಅಂಡಾಶಯಗಳಲ್ಲಿ ಸಿಸ್ಟ್
  5. ಬಕ್ಕತಲೆ
  6. ಬಂಜೆತನ

 

ಪಿಸಿಒಎಸ್ ರೋಗಪರೀಕ್ಷೆ:

ನೀವು ತಾಯಿಯಾಗುವ ಹಾದಿಯಲ್ಲಿದ್ದರೆ, ಪಿಸಿಒಎಸ್  ಇರುವುದು ನಿಜಕ್ಕೂ ಆತಂಕಕಾರಿ. ಆದರೆ ಪಿಸಿಒಎಸ್ ಲಕ್ಷಣಗಳನ್ನು ಕಡಿಮೆ ಮಾಡುವ ಮತ್ತು ತಾಯ್ತನವನ್ನು ಸ್ವಾಗತಿಸುವ ಹಲವಾರು ಮಾರ್ಗಗಳಿವೆ.

ಎ.ಶ್ರೋಣೀಯ ಪರೀಕ್ಷೆ

ವೈದ್ಯರು ಯೋನಿ ಮತ್ತು ಗರ್ಭಗೊರಳನ್ನು ಯಾವುದೇ ಅಸಹಜತೆಗಳು ಅಥವಾ ಸೋಂಕಿನ ಪುರಾವೆಗೆ ನೇರವಾಗಿ ವೀಕ್ಷಿಸಿ ಪರೀಕ್ಷಿಸುತ್ತಾರೆ ಮತ್ತು ಎರಡೂ ಕೈಗಳ್ನು ಬಳಸಿ ಮುಟ್ಟಿ ಪರೀಕ್ಷಿಸುವ ಮೂಲಕ ಗರ್ಭಕೋಶದ ಗಾತ್ರದ ಮತ್ತು ಹೊಂದಿಕೊಂಡ ಅಂಗಗಳ ಅಸಹಜತೆಗಾಗಿ ನೋಡುತ್ತಾರೆ.

ಬಿ.ಶ್ರೋಣೀಯ ಅಲ್ಟ್ರಾಸೌಂಡ್:

ಗರ್ಭಕೋಶದಲ್ಲಿ ಯಾವುದೇ ಬಗೆಯ ಸಿಸ್ಟ್ ಗಳಿಗಾಗಿ ಟ್ರಾನ್ಸ್ ವಜೈನಲ್ ಅಲ್ಟ್ರಾಸೌಂಡ್ ಅನ್ನು ನಡೆಸಲಾಗುತ್ತದೆ ಮತ್ತು ಗರ್ಭಕೋಶದ ಸ್ಥಾನ ಮತ್ತು ಗಾತ್ರ ಹಾಗೂ ಎಂಡೋಮೆಟ್ರಿಯಲ್ ಲೈನಿಂಗ್ ಪದರವನ್ನು ಪರೀಕ್ಷಿಸಲಾಗುತ್ತದೆ ಅದರೊಂದಿಗೆ ಎಂಡೋಮೆಟ್ರಿಯೋಸಿಸ್, ಫೈಬ್ರಾಯಿಡ್ಸ್ ಇತ್ಯಾದಿ ಅಸಹಜತೆಗಳ ಇರುವಿಕೆಯನ್ನೂ ಪರೀಕ್ಷಿಸಲಾಗುತ್ತದೆ.

ಸಿ. ರಕ್ತ ಪರೀಕ್ಷೆಗಳು:

ಎಫ್.ಎಸ್.ಎಚ್., ಎಲ್.ಎಚ್., ಎ.ಎಂ.ಎಚ್., ಟೆಸ್ಟೊಸ್ಟಿರೊನ್ ಇತ್ಯಾದಿ ಹಾರ್ಮೋನುಗಳ ಮಟ್ಟವನ್ನು ತಿಳಿಯಲು ರಕ್ತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರೊಂದಿಗೆ ಇನ್ಸುಲಿನ್ ಪ್ರತಿರೋಧ ಶಕ್ತಿ, ಕೊಲೆಸ್ಟರಾಲ್, ಥೈರಾಯ್ಡ್ ಮತ್ತೊ ಪ್ರೊಲಾಕ್ಟಿನ್ ಮಟ್ಟಗಳನ್ನು ಪರೀಕ್ಷಿಸಲು ಕೂಡಾ ಪರೀಕ್ಷೆ ನಡೆಸಲಾಗುತ್ತದೆ.

ಪಿಸಿಒಎಸ್ ಗೆ ಚಿಕಿತ್ಸೆ:

ಪಿಸಿಒಎಸ್ ಸಂಬಂಧಿತ ಸಂಕೀರ್ಣತೆಗಳು:

ಪಿಸಿಒಎಸ್ ಹೊಂದಿರುವ ಮಹಿಳೆಯರು ಗರ್ಭಧಾರಣೆ ಹೊಂದಲು ಆಹಾರ, ಔಷಧ ಮತ್ತು ಜೀವನಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಎಲ್ಲ ಪಿಸಿಒಎಸ್ ಮಹಿಳೆಯರಿಗೂ ಐ.ವಿ.ಎಫ್ ಅಥವಾ ಸುಧಾರಿತ ಚಿಕಿತ್ಸೆ ಅಗತ್ಯವಿಲ್ಲ. ಎಲ್ಲ ಮಹಿಳೆಯರಿಗೂ ತಾಯ್ತನದ ಪ್ರಯಾಣ ಪ್ರಾರಂಭಿಸುವ ಮುನ್ನ ಅವರ ಋತುಚಕ್ರದ ಕುರಿತು ಸೂಕ್ತ ತಿಳಿವಳಿಕೆ ಇರಬೇಕು.

Was this article helpful?
YesNo
Exit mobile version