Uncategorized

ಪಿಸಿಒಎಸ್ ಬಂಜೆತನ ಉಂಟು ಮಾಡಬಹುದೇ?

ಪಿಸಿಒಎಸ್ ಬಂಜೆತನ ಉಂಟು ಮಾಡಬಹುದೇ?

[tm_spacer size=”xs:20;sm:20;md:20;lg:45″]

ಹಲವು ಯುವತಿಯರಲ್ಲಿ ಋತುಚಕ್ರ ತಡವಾಗುತ್ತಿರುತ್ತದೆ. ವ್ಯಾಯಾಮದ ಕೊರತೆಯಂತಹ ಅನಾರೋಗ್ಯಕರ ಜೀವನಶೈಲಿ, ಕಡಿಮೆ ನಿದ್ರೆ ಅಥವಾ ಅಸಹಜ ನಿದ್ರೆ, ಜಂಕ್ ಮತ್ತು ಅತ್ಯಂತ ಹೆಚ್ಚು ಸಂಸ್ಕರಿತ ಆಹಾರಗಳ ಸೇವನೆಯು ಋತುಚಕ್ರದ ಅನಿಯಮಿತ ಆವರ್ತಕ್ಕೆ ಕೆಲವು ಕಾರಣಗಳಾಗಿರಬಹುದು. ಹಲವರು ಅನಿಯಮಿತ ಮುಟ್ಟು, ಬೊಜ್ಜಿನ ಅಥವಾ ಬೊಜ್ಜುರಹಿತ ಹಾರ್ಮೋನಿನ ಅಸಮತೋಲನ ಇದರ ವಿಷವರ್ತುಲಕ್ಕೆ ಒಳಗಾಗಿದ್ದಾರೆ. ನಿಮಗೆ ಇವುಗಳಲ್ಲಿ ಯಾವುದೇ ಸಮಸ್ಯೆಗಳು ಇದ್ದಲ್ಲಿ, ಪಿಸಿಒಎಸ್ (ಪಾಲಿ ಸಿಸ್ಟಿಕ್ ಓವರಿಯನ್ ಸಿಂಡ್ರೋಮ್) ಇರಬಹುದು. ಪಿಸಿಒಎಸ್ ಈ ದಿನಗಳಲ್ಲಿ ಸಾಮಾನ್ಯ ಆರೋಗ್ಯದ ಸಮಸ್ಯೆಯಾಗುತ್ತಿದೆ ಮತ್ತು ಇದು ಮಹಿಳೆಯರಲ್ಲಿ ಬಂಜೆತನ ಉಂಟು ಮಾಡಬಹುದು. ಆತಂಕ ಪಡಬೇಡಿ. ಇದನ್ನು ಜೀವನಶೈಲಿಯ ಬದಲಾವಣೆಗಳು, ಔಷಧಗಳು ಮತ್ತು ಸುಧಾರಿತ ಬಂಜೆತನದ ಚಿಕಿತ್ಸೆಗಳಿಂದ ನಿರ್ವಹಿಸಬಹುದು.

ಪಿಸಿಒಎಸ್ ಎಂದರೇನು?

ಹಾರ್ಮೋನುಗಳ ಅಸಮತೋಲನದಿಂದ ಅನಿಯಮಿತ ಋತುಚಕ್ರಗಳಿದ್ದಾಗ ಮತ್ತು ನಿಮ್ಮ ಅಂಡಾಶಯಗಳು ಕೆಲವು ಹಾರ್ಮೋನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಪ್ರಾರಂಭಿಸುತ್ತವೆ ಮತ್ತು ಅಸಂಖ್ಯ ದ್ರವ ತುಂಬಿದ ಚೀಲಗಳು ಅಂಡಾಶಯಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ನಿಮಗೆ ಪಿಸಿಒಎಸ್ ಇದೆ ಎಂದು ಹೇಳಲಾಗುತ್ತದೆ.

ಲಕ್ಷಣಗಳು:

  1. ವಿಪರೀತ ಅಥವಾ ಅತ್ಯಲ್ಪ ಹರಿವಿನ ಅನಿಯಮಿತ ಋತುಚಕ್ರ
  2. ಬೊಜ್ಜು ಅಥವಾ ಒಬೆಸಿಟಿ
  3. ಅನಗತ್ಯ ಕೂದಲ ಬೆಳವಣಿಗೆ
  4. ಅಂಡಾಶಯಗಳಲ್ಲಿ ಸಿಸ್ಟ್
  5. ಬಕ್ಕತಲೆ
  6. ಬಂಜೆತನ

ಪಿಸಿಒಎಸ್ ರೋಗಪರೀಕ್ಷೆ:

ನೀವು ತಾಯಿಯಾಗುವ ಹಾದಿಯಲ್ಲಿದ್ದರೆ, ಪಿಸಿಒಎಸ್  ಇರುವುದು ನಿಜಕ್ಕೂ ಆತಂಕಕಾರಿ. ಆದರೆ ಪಿಸಿಒಎಸ್ ಲಕ್ಷಣಗಳನ್ನು ಕಡಿಮೆ ಮಾಡುವ ಮತ್ತು ತಾಯ್ತನವನ್ನು ಸ್ವಾಗತಿಸುವ ಹಲವಾರು ಮಾರ್ಗಗಳಿವೆ.

ಎ.ಶ್ರೋಣೀಯ ಪರೀಕ್ಷೆ

ವೈದ್ಯರು ಯೋನಿ ಮತ್ತು ಗರ್ಭಗೊರಳನ್ನು ಯಾವುದೇ ಅಸಹಜತೆಗಳು ಅಥವಾ ಸೋಂಕಿನ ಪುರಾವೆಗೆ ನೇರವಾಗಿ ವೀಕ್ಷಿಸಿ ಪರೀಕ್ಷಿಸುತ್ತಾರೆ ಮತ್ತು ಎರಡೂ ಕೈಗಳ್ನು ಬಳಸಿ ಮುಟ್ಟಿ ಪರೀಕ್ಷಿಸುವ ಮೂಲಕ ಗರ್ಭಕೋಶದ ಗಾತ್ರದ ಮತ್ತು ಹೊಂದಿಕೊಂಡ ಅಂಗಗಳ ಅಸಹಜತೆಗಾಗಿ ನೋಡುತ್ತಾರೆ.

ಬಿ.ಶ್ರೋಣೀಯ ಅಲ್ಟ್ರಾಸೌಂಡ್:

ಗರ್ಭಕೋಶದಲ್ಲಿ ಯಾವುದೇ ಬಗೆಯ ಸಿಸ್ಟ್ ಗಳಿಗಾಗಿ ಟ್ರಾನ್ಸ್ ವಜೈನಲ್ ಅಲ್ಟ್ರಾಸೌಂಡ್ ಅನ್ನು ನಡೆಸಲಾಗುತ್ತದೆ ಮತ್ತು ಗರ್ಭಕೋಶದ ಸ್ಥಾನ ಮತ್ತು ಗಾತ್ರ ಹಾಗೂ ಎಂಡೋಮೆಟ್ರಿಯಲ್ ಲೈನಿಂಗ್ ಪದರವನ್ನು ಪರೀಕ್ಷಿಸಲಾಗುತ್ತದೆ ಅದರೊಂದಿಗೆ ಎಂಡೋಮೆಟ್ರಿಯೋಸಿಸ್, ಫೈಬ್ರಾಯಿಡ್ಸ್ ಇತ್ಯಾದಿ ಅಸಹಜತೆಗಳ ಇರುವಿಕೆಯನ್ನೂ ಪರೀಕ್ಷಿಸಲಾಗುತ್ತದೆ.

ಸಿ. ರಕ್ತ ಪರೀಕ್ಷೆಗಳು:

ಎಫ್.ಎಸ್.ಎಚ್., ಎಲ್.ಎಚ್., ಎ.ಎಂ.ಎಚ್., ಟೆಸ್ಟೊಸ್ಟಿರೊನ್ ಇತ್ಯಾದಿ ಹಾರ್ಮೋನುಗಳ ಮಟ್ಟವನ್ನು ತಿಳಿಯಲು ರಕ್ತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರೊಂದಿಗೆ ಇನ್ಸುಲಿನ್ ಪ್ರತಿರೋಧ ಶಕ್ತಿ, ಕೊಲೆಸ್ಟರಾಲ್, ಥೈರಾಯ್ಡ್ ಮತ್ತೊ ಪ್ರೊಲಾಕ್ಟಿನ್ ಮಟ್ಟಗಳನ್ನು ಪರೀಕ್ಷಿಸಲು ಕೂಡಾ ಪರೀಕ್ಷೆ ನಡೆಸಲಾಗುತ್ತದೆ.

ಪಿಸಿಒಎಸ್ ಗೆ ಚಿಕಿತ್ಸೆ:

i.ಜೀವನಶೈಲಿ ಬದಲಾವಣೆಗಳು:

ಬೊಜ್ಜು ಹೊಂದಿರುವುದು ಪಿಸಿಒಎಸ್ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಸಮತೋಲನದ ಆಹಾರ ಸೇವನೆ, ಜಂಕ್ ಫುಡ್ ಸೇವಿಸದೇ ಇರುವುದು ಮತ್ತು ನಿಯಮಿತ ವ್ಯಾಯಾಮ ಮಾಡುವುದು ತೂಕ ಇಳಿಸಿಕೊಳ್ಳಲು ಮತ್ತು ಪಿಸಿಒಎಸ್ ಲಕ್ಷಣಗಳಿಂದ ಸುಧಾರಿಸಲು ನೆರವಾಗುತ್ತದೆ. ತೂಕದಲ್ಲಿ ಶೇ.5ರಿಂದ ಶೇ.10ರಷ್ಟು ಕಡಿಮೆ ಮಾಡುವುದು ಋತುಚಕ್ರ ನಿಯಮಿತವಾಗಲು, ಫರ್ಟಿಲಿಟಿ ಸುಧಾರಿಸಲು ಮತ್ತು ಮಧುಮೇಹ ಹಾಗೂ ಇತರೆ ಹೃದಯರೋಗಗಳ ತೊಂದರೆ ಕಡಿಮೆ ಮಾಡಲು ನೆರವಾಗುತ್ತದೆ.

ii. ವೈದ್ಯಕೀಯ ಪರೀಕ್ಷೆ

ಅಂಡೋತ್ಪತ್ತಿ ಮಾಡುವ ಔಷಧಗಳು ಮತ್ತು ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳಾದ ಐ.ಯು.ಐ ಮತ್ತು ಐ.ವಿ.ಎಫ್ ಗಳು ಪಿಸಿಒಎಸ್ ಮಹಿಳೆಯರಿಗೆ ಬಂಜೆತನದಿಂದ ಹೊರಬರಲು ಮತ್ತು ಮಕ್ಕಳನ್ನು ಹೊಂದಲು ನೆರವಾಗುತ್ತವೆ.

ಪಿಸಿಒಎಸ್ ಸಂಬಂಧಿತ ಸಂಕೀರ್ಣತೆಗಳು:

i.ಮಧುಮೇಹ:

ಪಿಸಿಒಎಸ್ ಹೊಂದಿರುವ ಮಹಿಳೆಯರಲ್ಲಿ ಅವರ ಗರ್ಭಧಾರಣೆ ಸಂದರ್ಭದಲ್ಲಿ ಮಧುಮೇಹ ಕಾಣಿಸಿಕೊಳ್ಳಬಹುದು. ರಕ್ತದ ಸಕ್ಕರೆ ಪ್ರಮಾಣವನ್ನು ನಿಯಮಿತವಾಗಿ ಗಮನಿಸುತ್ತಿರಬೇಕು ಮತ್ತು ಚಿಕಿತ್ಸೆ ನೀಡದೇ ಇದ್ದಲ್ಲಿ ಇದು ಸಾಮಾನ್ಯ ಮಗುವಿಗಿಂತ ದೊಡ್ಡದಾಗಿರುವುದು, ಮುಂಚೆಯೇ ಜನಿಸುವುದು ಮತ್ತು ಸಿಸೇರಿಯನ್ ಸೆಕ್ಷನ್ ನ ಹೆಚ್ಚಿನ ರಿಸ್ಕ್ ಹೊಂದಿರುತ್ತದೆ.

ii. ಗರ್ಭಪಾತ:

ಪಿಸಿಒಎಸ್ ಗರ್ಭಪಾತದ ಸಾಧ್ಯತೆ ಹೆಚ್ಚಿಸುತ್ತದೆ. ಗರ್ಭಪಾತಕ್ಕೆ ಸೂಕ್ತ ಕಾರಣ ಗೊತ್ತಿಲ್ಲದೇ ಇದ್ದರೂ ಅದು ಹಾರ್ಮೋನುಗಳ ಅಸಮತೋಲನ ಅಥವಾ ಬೊಜ್ಜಿನಿಂದ ಇರಬಹುದು.

iii.ಪ್ರಿ-ಎಕ್ಲಾಂಪ್ಸಿಯಾ

ಪ್ರಿ-ಎಕ್ಲಾಂಪ್ಸಿಯಾ ಅಧಿಕ ರಕ್ತದೊತ್ತಡದಿಂದ ಉಂಟಾಗುತ್ತದೆ ಮತ್ತು ಇದು ಭ್ರೂಣದ ಪೋಷಣೆಗೆ ಹಾನಿಯುಂಟು ಮಾಡುತ್ತದೆ ಮತ್ತು ನವಜಾತ ಶಿಶುವಿನ ತೂಕ ಕಡಿಮೆ ಮಾಡುತ್ತದೆ.

ಪಿಸಿಒಎಸ್ ಹೊಂದಿರುವ ಮಹಿಳೆಯರು ಗರ್ಭಧಾರಣೆ ಹೊಂದಲು ಆಹಾರ, ಔಷಧ ಮತ್ತು ಜೀವನಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಎಲ್ಲ ಪಿಸಿಒಎಸ್ ಮಹಿಳೆಯರಿಗೂ ಐ.ವಿ.ಎಫ್ ಅಥವಾ ಸುಧಾರಿತ ಚಿಕಿತ್ಸೆ ಅಗತ್ಯವಿಲ್ಲ. ಎಲ್ಲ ಮಹಿಳೆಯರಿಗೂ ತಾಯ್ತನದ ಪ್ರಯಾಣ ಪ್ರಾರಂಭಿಸುವ ಮುನ್ನ ಅವರ ಋತುಚಕ್ರದ ಕುರಿತು ಸೂಕ್ತ ತಿಳಿವಳಿಕೆ ಇರಬೇಕು.

Was this article helpful?
YesNo

fill up the form to get a

Free Consultation

Your data is 100% safe with us.

Avail 0% interest on EMI
All Procedures | No Upper Limit

How we reviewed this article:

HISTORY SOURCES
  • Current Version
  • August 23, 2022, 1:27 pm by Oasis Fertility
  • August 23, 2022, 1:26 pm by Oasis Fertility
  • February 10, 2022, 2:40 pm by Oasis Fertility
  • February 10, 2022, 2:38 pm by Oasis Fertility
  • February 10, 2022, 2:34 pm by Oasis Fertility

LatestTrending

Ad

BOOK A FREE CONSULTATION

Book

Appointment

Call Us

1800-3001-1000