Site icon Oasis Fertility

ಐವಿಎಫ್ ಶಾಟ್ಸ್ ಕುರಿತು ನೀವು ತಿಳಿದುಕೊಳ್ಳಬೇಕಾದ ಪ್ರತಿಯೊಂದು ಅಂಶ

IVF Shots Process

Author : Dr. D. Maheswari Consultant & Fertility Specialist

ತಂದೆ ತಾಯಿಯರಾಗುವುದು ಅಸಾಧಾರಣ ಅನುಭವವಾಗಿದೆ ಆದರೆ ಕೆಲವು ದಂಪತಿಗಳಿಗೆ ಇದು ಕಷ್ಟಕರವಾದ ಪ್ರಯಾಣವಾಗಿರುತ್ತದೆ ಮತ್ತು ಅವರ ತಂದೆ ತಾಯಿಯರಾಗುವ ಕನಸನ್ನು ಪೂರೈಸಲು ಐವಿಎಫ್ ಅಗತ್ಯವಿರುತ್ತದೆ. ಐವಿಎಫ್ ಫಲವಂತಿಕೆಯ ಸವಾಲು ಎದುರಿಸುತ್ತಿರುವ ದಂಪತಿಗಳು ಬಂಜೆತನವನ್ನು ಜಯಿಸಲು ಮತ್ತು ತಂದೆ ತಾಯಿಯರಾಗಲು ಸಹಾಯ ಮಾಡುವ ಸುಧಾರಿತ ಫಲವಂತಿಕೆಯ ಚಿಕಿತ್ಸೆಗಳಲ್ಲಿ ಒಂದಾಗಿದೆ. ಆದಾಗ್ಯೂ, ಐವಿಎಫ್ ಪ್ರಕ್ರಿಯೆ ಅಥವಾ ಐವಿಎಫ್ ಚಿಕಿತ್ಸೆಯಲ್ಲಿ ಬಳಸುವ ಚುಚ್ಚುಮದ್ದುಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅನೇಕರು ಐವಿಎಫ್ ಚುಚ್ಚುಮದ್ದಿನ ಬಗ್ಗೆ ಭಯಪಡುತ್ತಾರೆ ಮತ್ತು ಭಯ ಮತ್ತು ತಪ್ಪುಗ್ರಹಿಕೆಯಿಂದ ಐವಿಎಫ್ ಅನ್ನು ತಪ್ಪಿಸಿಕೊಳ್ಳುತ್ತಾರೆ. ಆದರೆ ಐವಿಎಫ್ ಆಯ್ಕೆ ಮಾಡಿಕೊಳ್ಳುವ ಮಹಿಳೆಯರು ಐವಿಎಫ್ ತೆಗೆದುಕೊಳ್ಳುವ ಮೊದಲು ಐವಿಎಫ್ ಶಾಟ್ಸ್ ವಿಧಗಳು ಮತ್ತು ಸಂಪೂರ್ಣ ಚಿಕಿತ್ಸೆಯ ಪ್ರಯಾಣದ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಐವಿಎಫ್ ನಲ್ಲಿ, ಅಂಡಾಣು ಮತ್ತು ವೀರ್ಯವನ್ನು ಮಹಿಳೆಯ ದೇಹದ ಹೊರಗೆ ಫಲ ನೀಡಲು ಅವಕಾಶ ನೀಡಲಾಗುತ್ತದೆ. ಫಲೀಕರಣದ ನಂತರ ರೂಪುಗೊಂಡ ಭ್ರೂಣವನ್ನು ಮತ್ತಷ್ಟು ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಮಹಿಳೆಯ ಗರ್ಭಾಶಯದಲ್ಲಿ ಇರಿಸಲಾಗುತ್ತದೆ.

ಐವಿಎಫ್ ಶಾಟ್ಸ್ ಎಂದರೇನು?

ಐವಿಎಫ್ ಶಾಟ್ಸ್ ಎಂದರೆ ಐವಿಎಫ್ ಚಿಕಿತ್ಸೆಯ ಅವಧಿಯಲ್ಲಿ ವಿವಿಧ ಉದ್ದೇಶಗಳಿಗೆ ನೀಡಲಾಗುವ ಹಾರ್ಮೋನುಗಳು. ಎಫ್.ಎಸ್.ಎಚ್.(ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್), ಲ್ಯುಟೀನೈಸಿಂಗ್ ಹಾರ್ಮೋನ್(ಎಲ್.ಎಚ್.), ಹ್ಯೂಮನ್ ಕೊರಿಯೊನಿಕ್ ಗೊನಡೊಟ್ರೊಪಿನ್(ಎಚ್.ಸಿ.ಜಿ.), ಗೊನಡೊಟ್ರೊಪಿನ್ ರಿಲೀಸಿಂಗ್ ಹಾರ್ಮೋನ್(ಜಿ.ಎನ್.ಆರ್.ಎಚ್.) ಇತ್ಯಾದಿ ಹಾರ್ಮೋನುಗಳನ್ನು ನೀಡಲಾಗುತ್ತದೆ.

ಐವಿಎಫ್ ಶಾಟ್ ಲೊಕೇಷನ್ ಎಂದರೇನು?

ಐವಿಎಫ್ ಶಾಟ್ ಲೊಕೇಷನ್ ಚರ್ಮದ ಒಳಗಡೆ ಅಥವಾ ಸ್ನಾಯುಗಳ ಒಳಗಡೆ ಆಗಿರಬಹುದು. ಚರ್ಮದ ಒಳಗೆ ನೀಡುವ ಚುಚ್ಚುಮದ್ದುಗಳನ್ನು ಹೊಟ್ಟೆಗೆ ಅಥವಾ ತೊಡೆಯಲ್ಲಿ ನೀಡಲಾಗುತ್ತದೆ, ಆದರೆ ಇಂಟ್ರಾಮಸ್ಕುಲರ್ ಚುಚ್ಚುಮದ್ದನ್ನು ನೇರವಾಗಿ ಸ್ನಾಯುಗಳಿಗೆ ನೀಡಲಾಗುತ್ತದೆ.

ನೀಡಲಾಗುವ ವಿವಿಧ ಬಗೆಯ ಐವಿಎಫ್ ಇಂಜೆಕ್ಷನ್ ಗಳು:

– ಹಲವಾರು ಅಂಡಾಣುಗಳನ್ನು ಉತ್ಪಾದಿಸಲು ಮಹಿಳೆಯರ ಅಂಡಾಶಯ ಪ್ರಚೋದನೆ

– ಅಂಡಾಣು ಬಿಡುಗಡೆ ತಡೆಯಲು

– ಅಂಡಾಣು ಪ್ರಬುದ್ಧತೆಗೆ ಪ್ರಚೋದನೆ

– ಭ್ರೂಣ ವರ್ಗಾವಣೆಗೆ ಗರ್ಭಕೋಶವನ್ನು ಸಜ್ಜುಗೊಳಿಸಲು

ಐವಿಎಫ್ ನಲ್ಲಿ ಎಷ್ಟು ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ?

ಒಂದೇ ಪ್ರಮಾಣ ಎಲ್ಲರಿಗೂ ಸರಿ ಹೋಗುವುದಿಲ್ಲವಾದ್ದರಿಂದ ಐವಿಎಫ್ ಇಂಜೆಕ್ಷನ್ ಗಳ ಸಂಖ್ಯೆಯು ರೋಗಿಯಿಂದ ರೋಗಿಗೆ ಬದಲಾಗುತ್ತದೆ. ರೋಗಿಯ ಪ್ರತಿಕ್ರಿಯೆ, ಆರೋಗ್ಯ ಸ್ಥಿತಿ ಮತ್ತಿತರೆ ಅಂಶಗಳನ್ನು ಆಧರಿಸಿ ಐವಿಎಫ್ ಶಾಟ್ಸ್ ಸಂಖ್ಯೆ ಮತ್ತು ಪ್ರಮಾಣ ವ್ಯತ್ಯಾಸಗೊಳ್ಳುತ್ತದೆ. ಸಾಮಾನ್ಯವಾಗಿ ಐವಿಎಫ್ ಶಾಟ್ಸ್ ಅನ್ನು 10 ದಿನಗಳ ಅವಧಿಗೆ ನೀಡಲಾಗುತ್ತದೆ.

ಗರ್ಭಧಾರಣೆಗೆ ಯಾವ ಐವಿಎಫ್ ಶಾಟ್ಸ್?

– ಹ್ಯೂಮನ್ ಮೆನೋಪಾಸಲ್ ಗೊನಡೊಟ್ರೊಪಿನ್ಸ್(ಎಚ್.ಎಂ.ಜಿ)

– ಜಿ.ಎನ್.ಆರ್.ಎಚ್.ಅಗೊನಿಸ್ಟ್

– ಜಿ.ಎನ್.ಆರ್.ಎಚ್.ಅಂಟಗೊನಿಸ್ಟ್

– ಅತ್ಯಂತ ಶುದ್ಧೀಕರಿಸಿದ ಎಚ್.ಸಿ.ಜಿ

– ರಿಕಾಂಬಿನೆಂಟ್ ಎಚ್.ಸಿ.ಜಿ.(ಓವಿಟ್ರೆಲ್ಲೆ)

– ಅತ್ಯಂತ ಶುದ್ಧೀಕರಿಸಿದ ಎಫ್.ಎಸ್.ಎಚ್.

– ರಿಕಾಂಬಿನೆಂಟ್ ಎಫ್.ಎಸ್.ಎಚ್.

– ರಿಕಾಂಬಿನೆಂಟ್ ಎಲ್.ಎಚ್.

ಗರ್ಭಧಾರಣೆಗೆ ಐವಿಎಫ್ ಶಾಟ್ಸ್ ನಿಂದ ಏನನ್ನು ನಿರೀಕ್ಷಿಸಬಹುದು?

ಐವಿಎಫ್ ಎನ್ನುವುದು ಆತಂಕ, ಉತ್ಸಾಹ ಮತ್ತು ನಿರಾಶೆ ಬೆರೆತ ಸಂಕಷ್ಟದ ಪ್ರಯಾಣವಾಗಿದೆ. ಅದಕ್ಕೆ ಐವಿಎಫ್‌ ಗೆ ಒಳಗಾಗುವಾಗ ಮಾನಸಿಕವಾಗಿ ಸಿದ್ಧರಾಗಿರಬೇಕು ಮತ್ತು ಶಾಂತ ಮನೋಭಾವವನ್ನು ಹೊಂದಿರಬೇಕು. ಐವಿಎಫ್ ಚುಚ್ಚುಮದ್ದುಗಳು ವ್ಯಕ್ತಿಯ ತೂಕ ಮತ್ತು ಹಸಿವಿನ ಮೇಲೆ ಪರಿಣಾಮ ಬೀರಬಹುದು. ಕೆಲವು ಮಹಿಳೆಯರಲ್ಲಿ ಹಾರ್ಮೋನುಗಳ ಚುಚ್ಚುಮದ್ದಿನಿಂದ ಮಲಬದ್ಧತೆ ಉಂಟಾಗಬಹುದು. ಅಲ್ಲದೆ, ಕೆಲವರಲ್ಲಿ ಒ.ಎಚ್.ಎಸ್.ಎಸ್. (ಓವರಿಯನ್ ಹೈಪರ್‌ ಸ್ಟಿಮ್ಯುಲೇಶನ್ ಸಿಂಡ್ರೋಮ್) ಅಭಿವೃದ್ಧಿಗೊಳ್ಳಬಹುದು, ಅದು ಹಾರ್ಮೋನು ಚುಚ್ಚುಮದ್ದುಗಳಿಗೆ ತೀವ್ರವಾದ ಪ್ರತಿಕ್ರಿಯೆಯಾಗಿದ್ದು ಅದು ಅಂಡಾಶಯ ಊತಕ್ಕೆ ಕಾರಣವಾಗಬಹುದು.

 

IVF Shots

 

ಐವಿಎಫ್ ಅಡ್ಡ ಪರಿಣಾಮಗಳು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸಗೊಳ್ಳಬಹುದು. ಕೆಲ ಸಾಮಾನ್ಯ ಅಡ್ಡ ಪರಿಣಾಮಗಳು ಹೀಗಿವೆ:

– ಮೂಡ್ ನಲ್ಲಿ ಏರು ಪೇರು

– ತಲೆನೋವು

– ವಾಕರಿಕೆ

– ಹೊಟ್ಟೆ ನೋವು

– ಮೈ ಬಿಸಿಯಾಗುವುದು

– ಚರ್ಮ ಕೆಂಪಾಗುವುದು

ಮೇಲ್ಕಂಡ ರೋಗಲಕ್ಷಣಗಳು ದೀರ್ಘಕಾಲ ಉಳಿದಿದ್ದರೆ ವೈದ್ಯರ ನೆರವು ಪಡೆಯುವುದು ಮುಖ್ಯ.

ನೀವು ಚುಚ್ಚುಮದ್ದುಗಳಿಲ್ಲದೆ ಐವಿಎಫ್ ಚಿಕಿತ್ಸೆಗೆ ಒಳಪಡಬಹುದೇ?

ಐವಿಎಫ್ ಎಂದರೆ ಸಾಕು, ಚುಚ್ಚುಮದ್ದಿನ ಭಯ ಮತ್ತು ಅದಕ್ಕೆ ಸಂಬಂಧಿಸಿದ ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ ಆಘಾತದಿಂದಾಗಿ ಮಹಿಳೆಯರಲ್ಲಿ ಭಯವನ್ನು ಉಂಟುಮಾಡುತ್ತದೆ. ಹಲವಾರು ಚುಚ್ಚುಮದ್ದುಗಳ ಬಳಕೆಯು ಪಿ.ಸಿ.ಒ.ಎಸ್, ಕ್ಯಾನ್ಸರ್ ಮತ್ತು ಮತ್ತಿತರೆ ಅನಾರೋಗ್ಯ ಹೊಂದಿರುವ ಮಹಿಳೆಯರಿಗೆ ಹಾನಿಕಾರಕವಾಬಲ್ಲದು. ಸಿಎಪಿಎ ಐವಿಎಂ(ಕೆಪ್ಯಾಸಿಟೇಷನ್ ಇನ್ವಿಟ್ರೊ ಮೆಚುರೇಷನ್) ಸುಧಾರಿತ ಫಲವಂತಿಕೆ ಚಿಕಿತ್ಸೆಯಾಗಿದ್ದು ಅದು ಅಂಡಾಣು ಪ್ರಬುದ್ಧತೆಯ ಸಮಸ್ಯೆಗಳುಳ್ಳ, ಥ್ರೊಂಬೊಫಿಲಿಯಾ, ಪಿ.ಸಿ.ಒ.ಎಸ್, ಕ್ಯಾನ್ಸರ್ ಮತ್ತು ರೆಸಿಸ್ಟೆನ್ಸ್ ಓವರಿ ಸಿಂಡ್ರೋಮ್ ಉಳ್ಳ ಮಹಿಳೆಯರಿಗೆ ಸುರಕ್ಷಿತ ಪರ್ಯಾಯವಾಗಿದೆ. ಸಿಎಪಿಎ ಐವಿಎಂನಲ್ಲಿ ಕೇವಲ 2 ರಿಂದ 3 ಚುಚ್ಚುಮದ್ದುಗಳನ್ನು ಬಳಸಲಾಗುತ್ತದೆ ಏಕೆಂದರೆ ಪ್ರಬುದ್ಧ ಅಂಡಾಣುಗಳ ಬದಲಿಗೆ, ಅಪ್ರಬುದ್ಧ ಅಂಡಾಣುಗಳನ್ನು ಮಹಿಳೆಯರಿಂದ ಸಂಗ್ರಹಿಸಲಾಗುತ್ತದೆ. ಈ ಅಪ್ರಬುದ್ಧ ಅಂಡಾಣುಗಳು ಪ್ರಯೋಗಾಲಯದಲ್ಲಿ 2-ಹಂತದ ಪಕ್ವತೆಯ ಪ್ರಕ್ರಿಯೆಗೆ ಒಳಗಾಗುತ್ತವೆ, ನಂತರ ಪ್ರಯೋಗಾಲಯದಲ್ಲಿ ಫಲವಂತಿಕೆಯ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಈ ಪ್ರಕ್ರಿಯೆಯು ಬಹುತೇಕ ಔಷಧ-ಮುಕ್ತವಾಗಿದೆ ಮತ್ತು ಚುಚ್ಚುಮದ್ದುಗಳಿಗೆ ಹೆದರುವ ಮಹಿಳೆಯರಿಗೆ ಮತ್ತು ವೆಚ್ಚ ಉಳಿಸುವ ಮತ್ತು ಕಡಿಮೆ ಕತ್ತರಿಸುವಿಕೆ ಹೊಂದಿದ್ದು ಹೆಚ್ಚು ಸುರಕ್ಷಿತವಾದ ಚಿಕಿತ್ಸೆಯ ಅನುಭವ ನೀಡುತ್ತದೆ. ಸಿಎಪಿಎ ಐವಿಎಂನಲ್ಲಿ ಯಾವುದೇ ಒ.ಎಚ್.ಎಸ್.ಎಸ್. ಅಪಾಯವಿಲ್ಲ.

ಅಂಡಾಣು ಸಂಗ್ರಹ ನೋವುಂಟು ಮಾಡುತ್ತದೆಯೇ?

ನೋವು ಎನ್ನುವುದು ವೈಯಕ್ತಿಕ ಅನುಭವವಾಗಿದೆ ಮತ್ತು ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಅರಿವಳಿಕೆ ನೀಡಿ ಅಂಡಾಣುಗಳನ್ನು ಸಂಗ್ರಹಿಸಲಾಗುತ್ತದೆ ಇದರಿಂದ ಹೆಚ್ಚೇನೂ ಅಸೌಖ್ಯ ಉಂಟಾಗದು. ಕೆಲವು ಮಹಿಳೆಯರು ಮುಟ್ಟಿನ ಸಮಯದಲ್ಲಿ ಅನುಭವಿಸುವ ರೀತಿಯ ಮಾಂಸಖಂಡಗಳ ಬಿಗಿತ ಅನುಭವಿಸಬಹುದು. ನೀವು ಯಾವುದೇ ತೊಡಕುಗಳನ್ನು ಎದುರಿಸಿದರೆ ತಕ್ಷಣವೇ ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಿ.

ಐವಿಎಫ್ ಚುಚ್ಚುಮದ್ದುಗಳು ಹೇಗೆ ಕೆಲಸ ಮಾಡುತ್ತವೆ?

1ನೇ ಹಂತ: ಫರ್ಟಿಲಿಟಿ ಮೌಲ್ಯಮಾಪನ – ನೀವು ಫರ್ಟಿಲಿಟಿ ತಜ್ಞರ ಸಂಪರ್ಕಿಸಬೇಕು, ಅಲ್ಲಿ ನೀವು ಮತ್ತು ನಿಮ್ಮ ಸಂಗಾತಿಯ ಫಲವಂತಿಕೆಯ ಮೌಲ್ಯಮಾಪನ ನಡೆಸಲಾಗುತ್ತದೆ. ಅದರಲ್ಲಿ ರಕ್ತ ಪರೀಕ್ಷೆಗಳು, ಅಲ್ಟ್ರಾಸೌಂಡ್ ಸ್ಕ್ಯಾನ್ ವೀರ್ಯದ ವಿಶ್ಲೇಷಣೆ, ಇತ್ಯಾದಿ ಒಳಗೊಂಡಿರುತ್ತದೆ.

2ನೇ ಹಂತ-ವೈಯಕ್ತಿಕಗೊಳಿಸಿದ ಚಿಕಿತ್ಸೆ- ಫಾಲೋ-ಅಪ್ ಸಲಹೆಯ ಸಮಯದಲ್ಲಿ, ನಿಮ್ಮ ಆರೋಗ್ಯ ಸ್ಥಿತಿ, ವಯಸ್ಸು, ಜೀವನಶೈಲಿ ಇತ್ಯಾದಿಗಳ ಆಧಾರದ ಮೇಲೆ ಫರ್ಟಿಲಿಟಿ ತಜ್ಞರು ನಿಮಗಾಗಿ ವಿಶೇಷ ಚಿಕಿತ್ಸಾ ವಿಧಾನ ರೂಪಿಸುತ್ತಾರೆ ಮತ್ತು ಸಂಪೂರ್ಣ ಚಿಕಿತ್ಸಾ ಪ್ರಕ್ರಿಯೆಯನ್ನು ವಿವರಿಸುತ್ತಾರೆ.

3ನೇ ಹಂತಅಂಡಾಶಯದ ಪ್ರಚೋದನೆ– ನೀವು ಋತುಚಕ್ರದ 2ನೇ ದಿನ ಅಂಡಾಣು ಉತ್ಪಾದನೆಗೆ ಅಂಡಾಶಯಗಳನ್ನು ಪ್ರಚೋದಿಸುವ ಐವಿಎಫ್ ಚುಚ್ಚುಮದ್ದು ಪಡೆಯುತ್ತೀರಿ.

4ನೇ ಹಂತ- ಮೇಲ್ವಿಚಾರಣೆ- ನೀವು ನಿಮ್ಮ ಐವಿಎಫ್ ಪ್ರಯಾಣದಲ್ಲಿ ಸರಿಯಾದ ಮಾರ್ಗದಲ್ಲಿದ್ದೀರ ಎಂದು ತಿಳಿಯಲು ಅಲ್ಟ್ರಾಸೌಂಡ್ ಸ್ಕ್ಯಾನ್ ಮತ್ತು ರಕ್ತಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದು ಅಂಡಾಣುಗಳನ್ನು ಸಂಗ್ರಹಿಸಲು ಸರಿಯಾದ ಸಮಯವನ್ನು ನಿರ್ಧರಿಸಲು ನೆರವಾಗುತ್ತದೆ.

5ನೇ ಹಂತ- ಟ್ರಿಗರ್ ಶಾಟ್- ನೀವು ಅಂಡಾಣುಗಳ ಪ್ರಬುದ್ಧತೆಯನ್ನು ಉತ್ತೇಜಿಸಲು ಚುಚ್ಚುಮದ್ದು ಪಡೆಯುತ್ತೀರಿ.

6ನೇ ಹಂತ- ಅಂಡಾಣು ಸಂಗ್ರಹ- ನಿಮಗೆ ಅರಿವಳಿಕೆ ನೀಡಲಾಗುತ್ತದೆ ಮತ್ತು ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ಅಂಡಾಣುಗಳನ್ನು ಸಂಗ್ರಹಿಸಲಾಗುತ್ತದೆ.

7ನೇ ಹಂತ- ಇನ್ ವಿಟ್ರೊ ಫರ್ಟಿಲೈಸೇಷನ್– ಅಂಡಾಣುಗಳನ್ನು ಪುರುಷ ಪಾಲುದಾರರ ವೀರ್ಯದೊಂದಿಗೆ ಬೆಸೆಯಲು ಅವಕಾಶ ನೀಡಲಾಗುತ್ತದೆ ಇದರಿಂದ ಭ್ರೂಣ ರೂಪುಗೊಳ್ಳುತ್ತದೆ.

8ನೇ ಹಂತ- ಭ್ರೂಣ ವರ್ಗಾವಣೆ- ಅತ್ಯುತ್ತಮ ಗುಣಮಟ್ಟದ ಭ್ರೂಣವನ್ನು ಮಹಿಳೆಯ ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ.

9ನೇ ಹಂತ- ಗರ್ಭಧಾರಣೆಯ ಪರೀಕ್ಷೆ- ನಿಮಗೆ ಭ್ರೂಣ ವರ್ಗಾವಣೆಯ 2 ವಾರಗಳ ನಂತರ ಗರ್ಭಧಾರಣೆಯ ಪರೀಕ್ಷೆ ಮಾಡಬೇಕು.

ಕೆಲ ಪ್ರಮುಖ ಐವಿಎಫ್ ಪ್ರಶ್ನೆಗಳು

1. ಐವಿಎಫ್ ಚಿಕಿತ್ಸೆ ಎಲ್ಲರಿಗೂ ಒಂದೇ ರೀತಿಯಲ್ಲಿರುತ್ತದೆಯೇ?

ಇಲ್ಲ. ಐವಿಎಫ್ ಚಿಕಿತ್ಸೆ, ಔಷಧಗಳು ಮತ್ತು ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ವಯಸ್ಸು, ಆರೋಗ್ಯ, ಜೀವನಶೈಲಿ ಇತ್ಯಾದಿ ಆಧರಿಸಿ ವ್ಯತ್ಯಾಸಗೊಳ್ಳುತ್ತದೆ.

2. ಐವಿಎಫ್ ನಲ್ಲಿ ಲಿಂಗ ಆಯ್ಕೆ ಮಾಡಿಕೊಳ್ಳಲು ಸಾಧ್ಯವೇ?

ಭಾರತದಲ್ಲಿ ಲಿಂಗ ಆಯ್ಕೆ ಕಾನೂನುಬಾಹಿರ ಮತ್ತು ನಿಷೇಧಿಸಲಾಗಿದೆ.

3. ಘನೀಕರಿಸಿದ ಭ್ರೂಣ ವರ್ಗಾವಣೆ ಎಂದರೇನು?

ಐವಿಎಫ್ ಚಿಕಿತ್ಸೆಯಲ್ಲಿ ಭ್ರೂಣಗಳನ್ನು ಘನೀಕರಿಸಿದರೆ ಮತ್ತು ನಂತರದ ದಿನಗಳಲ್ಲಿ ಮಹಿಳೆಯ ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ, ಅದನ್ನು ಘನೀಕರಿಸಿದ ಭ್ರೂಣ ವರ್ಗಾವಣೆ ಎನ್ನಲಾಗುತ್ತದೆ.

4. ಐವಿಎಫ್ ನಲ್ಲಿ ಒಂದು ಭ್ರೂಣ ವರ್ಗಾವಣೆ ಎಂದರೇನು?

ಐವಿಎಫ್ ನಲ್ಲಿ ಸುಧಾರಿತ ತಂತ್ರಜ್ಞಾನದ ಬಳಕೆಯಿಂದ ಹಲವು ಭ್ರೂಣಗಳನ್ನು ವರ್ಗಾಯಿಸುವ ಬದಲಿಗೆ ಒಂದೇ ಒಂದು ಭ್ರೂಣವನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಮಹಿಳೆಯ ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ. ಒಂದು ಭ್ರೂಣ ವರ್ಗಾವಣೆಯು ಗರ್ಭಪಾತ ಮತ್ತಿತರೆ ಸಂಕೀರ್ಣತೆಗಳ ತೊಂದರೆ ಕಡಿಮೆ ಮಾಡುತ್ತದೆ.

Exit mobile version