Blog
Enquire Now
Uncategorized

ಫರ್ಟಿಲಿಟಿ ಕ್ಲಿನಿಕ್ ಗೆ ಭೇಟಿ ನೀಡುವ ದಂಪತಿಗಳು ಫರ್ಟಿಲಿಟಿ ತಜ್ಞರ ಬಳಿ ಕೇಳಬೇಕಾದ 10 ಪ್ರಶ್ನೆಗಳು

ಫರ್ಟಿಲಿಟಿ ಕ್ಲಿನಿಕ್ ಗೆ ಭೇಟಿ ನೀಡುವ ದಂಪತಿಗಳು ಫರ್ಟಿಲಿಟಿ ತಜ್ಞರ ಬಳಿ ಕೇಳಬೇಕಾದ 10 ಪ್ರಶ್ನೆಗಳು

ಗರ್ಭಧಾರಣೆಯಲ್ಲಿ ಸಮಸ್ಯೆ ಎದುರಿಸುವ ಹಲವು ದಂಪತಿಗಳಿಗೆ ಫರ್ಟಿಲಿಟಿ ಕೇಂದ್ರಕ್ಕೆ ಭೇಟಿ ನೀಡುವುದು ದುಃಸ್ವಪ್ನದಂತಾಗಿರುತ್ತದೆ. ಗರ್ಭಧಾರಣೆ ಮಾಡಲು ಸಾಧ್ಯವಾಗದೇ ಹೋಗುವುದು ಅತ್ಯಂತ ಆಘಾತಕಾರಿ ಭಾವನೆ ಮೂಡಿಸುತ್ತದೆ. ಯಾವುದು ಅವರನ್ನು ಬಂಜೆತನಕ್ಕೆ ದೂಡಿದೆ ಎಂದು ತಿಳಿಯದ ದಂಪತಿಗಳು ಭಯಕ್ಕೆ ಒಳಗಾಗುತ್ತಾರೆ ಮತ್ತು ಅವರಿಗೆ ಪೋಷಕರಾಗಲು ಲಭ್ಯವಿರುವ ಫರ್ಟಿಲಿಟಿ ಚಿಕಿತ್ಸೆಗಳ ಬಗ್ಗೆಯೂ ತಿಳಿದಿರುವುದಿಲ್ಲ. ಮುಜುಗರ, ಅಪರಾಧ ಪ್ರಜ್ಞೆ ಹಾಗೂ ಅನಿಶ್ಚಿತತೆಯ ಆಲೋಚನೆಗಳು ಅವರನ್ನು ಕಾಡುತ್ತವೆ. ಫರ್ಟಿಲಿಟಿ ಸಮಸ್ಯೆಗಳಿಂದ ಹೊರಬರಲು ಹಾಗೂ ಪೋಷಕತ್ವವನ್ನು ಸಾಧಿಸಲು ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಆದ್ದರಿಂದ ದಂಪತಿಗಳು ಅವರ ಪ್ರಾರಂಭಿಕ ಕನ್ಸಲ್ಟೇಷ್ ಹಾಗೂ ಕೌನ್ಸೆಲ್ಲಿಂಗ್ ಸಂದರ್ಭದಲ್ಲಿ ಕೇಳಬೇಕಾದ ಸಂಪೂರ್ಣ ಪ್ರಶ್ನೆಗಳ ಗುಚ್ಛ ಇಲ್ಲಿದೆ.

1.ಗರ್ಭ ಧರಿಸದಂತೆ ನಮ್ಮನ್ನು ಏನು ತಡೆಯುತ್ತಿದೆ

ರೋಗಪರೀಕ್ಷೆ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ದಂಪತಿಯು ಫರ್ಟಿಲಿಟಿ ಕೇಂದ್ರಕ್ಕೆ ಭೇಟಿ ನೀಡಿದಾಗ ಪ್ರಾರಂಭಿಕ ಹಂತವು ಹಲವು ರಕ್ತ ಪರೀಕ್ಷೆಗಳು, ಸ್ಕ್ಯಾನ್ ಗಳು, ದಂಪತಿಗಳ ವೈದ್ಯಕೀಯ ಇತಿಹಾಸದ ಕುರಿತು ಟಿಪ್ಪಣಿ ತೆಗೆದುಕೊಳ್ಳುವುದು, ಹಿಂದಿನ ವೈದ್ಯಕೀಯ ಮತ್ತು ಚಿಕಿತ್ಸಾ ದಾಖಲೆಗಳನ್ನು ಪರಿಶೀಲಿಸುವುದು, ಪ್ರಸ್ತುತ ಆರೋಗ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಒಳಗೊಂಡಿರುತ್ತದೆ. ಪುರುಷ ಹಾಗೂ ಮಹಿಳೆ ಇಬ್ಬರೂ ಫರ್ಟಿಲಿಟಿ ಪರೀಕ್ಷೆಗೆ ಒಳಪಡಬೇಕಾಗುತ್ತದೆ ಅದು ಫರ್ಟಿಲಿಟಿ ತಜ್ಞರನ್ನು ಬಂಜೆತನದ ಕಾರಣ ಪತ್ತೆ ಮಾಡಲು ಅವಕಾಶ ನೀಡುತ್ತದೆ.

2.ಜೀವನಶೈಲಿ ಬದಲಾವಣೆಗಳು ಗರ್ಭಧಾರಣೆಗೆ ನೆರವಾಗುತ್ತವೆಯೇ?

ಕೆಲವೊಮ್ಮೆ ತೂಕ ಇಳಿಸುವುದು, ವ್ಯಾಯಾಮ ಮಾಡುವುದು ಮತ್ತು ಸೂಕ್ತ ಆಹಾರ ಸೇವನೆ ಮಾಡುವುದು ದಂಪತಿಗಳಿಗೆ ಸಹಜವಾಗಿ ಗರ್ಭಧಾರಣೆಗೆ ನೆರವಾಗುತ್ತವೆ. ಅದು ಫರ್ಟಿಲಿಟಿ ಚಿಕಿತ್ಸೆಗಳ ಯಶಸ್ಸಿನ ಪ್ರಮಾಣವನ್ನೂ ಸುಧಾರಿಸುತ್ತದೆ.

3.ಯಾವ ಫರ್ಟಿಲಿಟಿ ಚಿಕಿತ್ಸೆಯನ್ನು ಪಡೆಯಬೇಕು

ಫರ್ಟಿಲಿಟಿ ಚಿಕಿತ್ಸೆಯು ಅತ್ಯಂತ ವೈಯಕ್ತಿಕಗೊಳಿಸಿದ ಚಿಕಿತ್ಸಾ ಯೋಜನೆಯಾಗಿದೆ ಮತ್ತು ಅದು ದಂಪತಿಯಿಂದ ದಂಪತಿಗೆ ವ್ಯತ್ಯಾಸಗೊಳ್ಳುತ್ತದೆ. ಫರ್ಟಿಲಿಟಿ ಚಿಕಿತ್ಸೆಗಳಲ್ಲಿ ಒಂದೇ ಮಾದರಿಯನ್ನು ಎಲ್ಲದಕ್ಕೂ ಅನುಸರಿಸಲು ಸಾಧ್ಯವಿಲ್ಲ. ಅಂಡಾಣು ಸೇರಿಸುವಿಕೆ, ಐಯುಐನಂತಹ ಮೂಲಭೂತ ಚಿಕಿತ್ಸೆಗಳಿಂದ ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳಾದ ಐವಿಎಫ್, ಐಸಿಎಸ್ಐ, ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್ ಇತ್ಯಾದಿ ಒಳಗೊಂಡು ದಂಪತಿಯ ಆರೋಗ್ಯದ ಸ್ಥಿತಿ, ವಯಸ್ಸು, ಜೀವನಶೈಲಿ ಮತ್ತಿತರೆ ಕಾರಣಗಳನ್ನು ಆಧರಿಸಿ ಹಲವಾರು ಚಿಕಿತ್ಸೆಗಳು ಲಭ್ಯವಿವೆ. ದಂಪತಿಗಳಿಗೆ ಯಾವ ಬಗೆಯ ಚಿಕಿತ್ಸೆಯು ಅವರಿಗೆ ಗರ್ಭಧಾರಣೆ ಮಾಡಲು ನೆರವಾಗುತ್ತವೆ ಎಂದು ತಿಳಿದಿರುವುದು ಮುಖ್ಯ. ದಂಪತಿಗಳಿಗೆ ಚಿಕಿತ್ಸೆ ಪಡೆಯುವ ಮುನ್ನ ಇಡೀ ಚಿಕಿತ್ಸೆ ಕುರಿತು ಸ್ಪಷ್ಟತೆ ಇರಬೇಕು.

4. ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಎಷ್ಟು

ಚಿಕಿತ್ಸೆ ಪಡೆಯುವ ಮುನ್ನ ದಂಪತಿಯು ನಿರ್ದಿಷ್ಟ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ತಿಳಿದಿರಬೇಕು. ದಂಪತಿಯಿಂದ ದಂಪತಿಗೆ ಅವರ ವಯಸ್ಸು, ಆರೋಗ್ಯದ ಪರಿಸ್ಥಿತಿ, ಅಂಡಾಣು ಮತ್ತು ವೀರ್ಯದ ಗುಣಮಟ್ಟ ಇತ್ಯಾದಿ ಆಧರಿಸಿ ಯಶಸ್ಸಿನ ಪ್ರಮಾಣ ವ್ಯತ್ಯಾಸಗೊಂಡರೂ ದಂಪತಿಗೆ ಗರ್ಭಧಾರಣೆಯ ಸಂಭವನೀಯತೆಯ ಕುರಿತು ತಿಳಿದಿರುವುದು ಅಗತ್ಯ. ವಾಸ್ತವದ ನಿರೀಕ್ಷೆ ಇರುವುದು ಸದಾ ಉತ್ತಮ.

5.ಫರ್ಟಿಲಿಟಿ ಚಿಕಿತ್ಸೆಗಳಿಂದ ಯಾವುದೇ ಅಡ್ಡ ಪರಿಣಾಮಗಳಿವೆಯೇ

ಚಿಕಿತ್ಸೆಯ ಅಡ್ಡ ಪರಿಣಾಮಗಳ ಕುರಿತು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಫರ್ಟಿಲಿಟಿಯ ಕೆಲ ಮಹಿಳೆಯರಲ್ಲಿ ಔಷಧಗಳು ವಾಕರಿಕೆ, ನೋವು, ಮೂಡ್ ಬದಲಾವಣೆ ಇತ್ಯಾದಿ ತರಬಹುದು. ಆದ್ದರಿಂದ ದಂಪತಿಯು ಚಿಕಿತ್ಸೆ ಪ್ರಾರಂಭಿಸುವ ಮುನ್ನ ಸಂಭವನೀಯ ಅಡ್ಡ ಪರಿಣಾಮಗಳು ಮತ್ತು ಸಂಕೀರ್ಣತೆಗಳ ಕುರಿತು ವಿವರವಾಗಿ ತಿಳಿಯಬೇಕು.

6. ಅವಳಿ ಮಕ್ಕಳಾಗುವ ಸಾಧ್ಯತೆ ಎಷ್ಟು

ಐ.ವಿ.ಎಫ್. ಚಿಕಿತ್ಸೆಯು ಕೆಲವೊಮ್ಮೆ 1 ಮಗುವಿಗಿಂತ ಹೆಚ್ಚಿನ ಫಲಿತಾಂಶ ನೀಡಬಹುದು. ಹಲವು ಶಿಶುಗಳ ಜನನದ ಸಾಧ್ಯತೆ ದಂಪತಿಗಳಿಗೆ ಹಲವು ವಿಧಗಳಲ್ಲಿ ನೆರವಾಗುತ್ತದೆ. ಅವರಿಗೆ ಒಮ್ಮೆ ಗರ್ಭಿಣಿಯಾಗುವುದು ಮತ್ತು ಐ.ವಿ.ಎಫ್ ಸದಾ ಅವಳಿ ಮತ್ತು ತ್ರಿವಳಿ ಮಕ್ಕಳನ್ನು ತರುತ್ತದೆ ಎಂದು ಹೇಳಲಾಗದು.

7. ನಮಗೆ ಗರ್ಭಧಾರಣೆ ಸಾಧ್ಯವಿಲ್ಲದಿದ್ದಲ್ಲಿ ದಾನಿಗಳ ಚಿಕಿತ್ಸೆಪಡೆಯುವ ಆಯ್ಕೆ ಇದೆಯೇ

ಕೆಲ ದಂಪತಿಗಳಿಗೆ ದಾನಿಗಳ ವೀರ್ಯ ಅಥವಾ ಅಂಡವು ಗರ್ಭಧಾರಣೆ ಪಡೆಯಲು ಅಗತ್ಯವಾಗಬಹುದು. ಆದ್ದರಿಂದ ಅವರು ಕೇಂದ್ರದಲ್ಲಿ ದಾನಿಯ ಚಿಕಿತ್ಸೆಯ ಸೇವೆಗಳಿರುವುದನ್ನು ಪರೀಕ್ಷಿಸಿಕೊಳ್ಳಬೇಕು.

8. ಫರ್ಟಿಲಿಟಿ ಕ್ಲಿನಿಕ್ ನಲ್ಲಿ ಭ್ರೂಣ ಸಂರಕ್ಷಣೆ ಒದಗಿಸಲಾಗುತ್ತದೆಯೇ

ಐ.ವಿ.ಎಫ್. ಚಿಕಿತ್ಸೆಯ ಅವಧಿಯಲ್ಲಿ ಹಲವಾರು ಭ್ರೂಣಗಳು ರೂಪುಗೊಳ್ಳಬಹುದು ಆದರೆ ಅವೆಲ್ಲವನ್ನೂ ಒಂದೇ ಸಮಯಕ್ಕೆ ಬಳಸಲು ಸಾಧ್ಯವಿಲ್ಲ. ಆದ್ದರಿಂದ ಫರ್ಟಿಲಿಟಿ ಕೇಂದ್ರದಲ್ಲಿ ಭ್ರೂಣ ಸಂರಕ್ಷಣೆಯ(ಎಂಬ್ರಿಯೊ ಕ್ರಯೊ

 ಪ್ರಿಸರ್ವೇಷನ್) ಸೇವೆಗಳನ್ನು ನೀಡಲಾಗುತ್ತಿದೆಯೇ ಎಂದು ತಿಳಿದುಕೊಳ್ಳುವುದು ಅಗತ್ಯ. ಹೆಚ್ಚುವರಿ ಭ್ರೂಣಗಳನ್ನು ಲಿಕ್ವಿಡ್ ನೈಟ್ರೊಜನ್ ನಲ್ಲಿ ಸಂರಕ್ಷಣೆ ಮಾಡಲಾಗುತ್ತದೆ ಮತ್ತು ಮತ್ತೊಂದು ಗರ್ಭಧಾರಣೆ ಅಥವಾ ಆವರ್ತ ವಿಫಲವಾದರೆ ಬಳಸಬಹುದು, ಭ್ರೂಣಗಳು ಮತ್ತೊಂದು ಭ್ರೂಣ ವರ್ಗಾವಣೆ ಚಿಕಿತ್ಸೆಗೆ ಲಭ್ಯವಿದ್ದು ಮಹಿಳೆಯರು ಮತ್ತು ಅಂಡಾಣು ಉತ್ತೇಜನದ ಚಿಕಿತ್ಸೆಗೆ ಒಳಗಾಗಬೇಕಿಲ್ಲ.

9. ಚಿಕಿತ್ಸೆಗೆ ನಮ್ಮನ್ನು ನಾವು ಹೇಗೆ ಸಜ್ಜುಗೊಳಿಸಿಕೊಳ್ಳಬೇಕು

ಫರ್ಟಿಲಿಟಿ ಚಿಕಿತ್ಸೆಗೆ ಒಳಪಡುವ ಮುನ್ನ ತಿಳಿಯಬೇಕಾದ ಹಲವು ಬೇಕು ಹಾಗೂ ಬೇಡಗಳಿವೆ.

10. ಚಿಕಿತ್ಸೆಯ ವೆಚ್ಚ ಎಷ್ಟಾಗಬಹುದು

ವೆಚ್ಚದ ಕುರಿತು ಸ್ಪಷ್ಟತೆ ಪಡೆದುಕೊಳ್ಳುವುದು ಅತ್ಯಂತ ಮುಖ್ಯ. ಕೆಲವೊಮ್ಮೆ ಒಂದೇ ಐಯುಐ ಅಥವಾ ಐ.ವಿ.ಎಫ್. ಆವರ್ತದಲ್ಲಿ ಯಶಸ್ಸು ಸಾಧ್ಯವಾಗದೇ ಇರಬಹುದು. ದಂಪತಿಯ ಪರಿಸ್ಥಿತಿ ಆಧರಿಸಿ ಗರ್ಭಧಾರಣೆಗೆ ಅದು 1ಕ್ಕಿಂತ ಹೆಚ್ಚಿನ ಆವರ್ತನದ ಅಗತ್ಯವಾಗಬಹುದು. ವೆಚ್ಚದ ಕುರಿತು ಒಂದು ಸ್ಪಷ್ಟ ತಿಳಿವಳಿಕೆಯು ದಂಪತಿಗಳಿಗೆ ಫರ್ಟಿಲಿಟಿ ಚಿಕಿತ್ಸೆಗಳಿಗೆ ಮಾನಸಿಕ ಹಾಗೂ ಆರ್ಥಿಕವಾಗಿ ಸಜ್ಜಾಗಲು ನೆರವಾಗುತ್ತದೆ.

ಫರ್ಟಿಲಿಟಿ ಚಿಕಿತ್ಸೆಗಳ ಕುರಿತು ನಿಮ್ಮ ಭಯಗಳು, ಹಿಂಜರಿಕೆಗಳು ಮತ್ತು ಆತಂಕಗಳನ್ನು ಮರೆಯಿರಿ. ಫರ್ಟಿಲಿಟಿ ತಜ್ಞರಲ್ಲಿ ಭೇಟಿ ನೀಡಿ ಮತ್ತು ನಿಮ್ಮ ಪೋಷಕರಾಗುವ ಪ್ರಯಾಣವನ್ನು ವಿಶ್ವಾಸ ಮತ್ತು ಸಕಾರಾತ್ಮಕ ಮನಸ್ಥಿತಿಯಿಂದ ಪ್ರಾರಂಭಿಸಿ. ಹ್ಯಾಪಿ ಪೇರೆಂಟ್ ಹುಡ್!

Write a Comment