Blog
Enquire Now
Uncategorized

ದಂಪತಿಗಳಿಗೆ ತಂದೆ ತಾಯ್ತನ ಸಾಧಿಸಲು ನೆರವಾಗುವ ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳು

ದಂಪತಿಗಳಿಗೆ ತಂದೆ ತಾಯ್ತನ ಸಾಧಿಸಲು ನೆರವಾಗುವ ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳು

ಬಂಜೆತನದ ಸಮಸ್ಯೆಗಳನ್ನು ಎದುರಿಸುವ ದಂಪತಿಗಳಿಗೆ ಅವರಿಗೆ ಬಂಜೆತನದಿಂದ ದೂರವಾಗಲು ನೆರವಾಗುವ ವಿಸ್ತಾರ ಶ್ರೇಣಿಯ ಫರ್ಟಿಲಿಟಿ ಚಿಕಿತ್ಸೆಗಳ ಕುರಿತು ಅರಿವನ್ನು ಹೊಂದಿರುವುದಿಲ್ಲ. ನೀವು ನಿಮ್ಮ ಮಿತ್ರರು ಅಥವಾ ನೆರೆಹೊರೆಯವರು ಅಥವಾ ಸಂಬಂಧಿಕರಿಗೆ ಫಲ ನೀಡಿದ ಅದೇ ಚಿಕಿತ್ಸೆ ನಿಮಗೆ ಉಪಯುಕ್ತವಾಗದೇ ಇರಬಹುದು. ನಮಗೆ ಎಸ್, ಎಂ, ಎಲ್, ಎಕ್ಸ್ಎಲ್, ಎಕ್ಸ್ಎಕ್ಸ್ಎಲ್, ಎಕ್ಸ್ಎಕ್ಸ್ಎಕ್ಸ್ಎಲ್ ಇತ್ಯಾದಿ ಬಟ್ಟೆಗಳ ವಿವಿಧ ಗಾತ್ರಗಳಿರುವಂತೆಯೇ ಫಲವಂತಿಕೆಯ ಚಿಕಿತ್ಸೆಗಳನ್ನು ಪ್ರತಿ ದಂಪತಿಗೆ ಅವರ ವಯಸ್ಸು, ವೈದ್ಯಕೀಯ ಪರಿಸ್ಥಿತಿ, ಜೀವನಶಯಲಿ, ಆರೋಗ್ಯ ಮತ್ತಿತರೆ ಅಂಶಗಳನ್ನು ಆಧರಿಸಿ ರೂಪಿಸಬೇಕಾಗುತ್ತದೆ. ಈ ಬಗೆಯ ಔಷಧಗಳು, ಪ್ರಮಾಣ ಮತ್ತು ಬಿಡುವಿನ ಅವಧಿಯನ್ನು ಪ್ರತಿ ದಂಪತಿಗೂ ಕಸ್ಟಮೈಸ್ ಮಾಡಬೇಕು ಏಕೆಂದರೆ ಒಂದೇ ಗಾತ್ರ ಎಲ್ಲರಿಗೂ ಹೊಂದುವುದಿಲ್ಲ.

ಹೇಗೆ ಫರ್ಟಿಲಿಟಿ ಚಿಕಿತ್ಸೆಯನ್ನು ನಿಮಗೆ ಶಿಫಾರಸು ಮಾಡಲಾಗುತ್ತದೆ?

ದಂಪತಿಗಳು ಅವರಿಗೆ ಯಾವ ಫರ್ಟಿಲಿಟಿ ಚಿಕಿತ್ಸೆ ಅಗತ್ಯವಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಫರ್ಟಿಲಿಟಿ ತಜ್ಞರು ಮಾತ್ರ ಎಲ್ಲ ಅಂಶಗಳನ್ನೂ ಪರಿಗಣಿಸಿ ಸೂಕ್ತವಾದ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ದಂಪತಿಗಳು ಒಂದು ವರ್ಷದ ನಂತರವೂ ಗರ್ಭ ಧರಿಸಲು ಅಶಕ್ತರಾದರೆ ತಜ್ಞರ ಸಲಹೆಯನ್ನು ಪಡೆಯುವುದಕ್ಕೆ ತಡ ಮಾಡಬಾರದು. ಮೊದಲಿಗೆ ನಿಮಗೆ ಲಭ್ಯವಿರುವ ವಿವಿಧ ಫರ್ಟಿಲಿಟಿ ಚಿಕಿತ್ಸೆಗಳ ಕುರಿತು ತಿಳಿಯುವುದು ಅಗತ್ಯ. ಒಐಟಿಐ, ಐಯುಐ, ಐವಿಎಫ್, ಔಷಧಮುಕ್ತ ಐವಿಎಫ್, ಫರ್ಟಿಲಿಟಿ ಸಂರಕ್ಷಣೆ, ದಾನಿಗಳ ಚಿಕಿತ್ಸೆ, ಪುರುಷರ ಫರ್ಟಿಲಿಟಿ ಚಿಕಿತ್ಸೆ ಇತ್ಯಾದಿ.

ಒಐಟಿಐ:

ಒಐಟಿಐ ಎಂದರೇನು?

· ಬೇಸ್ಲೈನ್ ಫರ್ಟಿಲಿಟಿ ಚಿಕಿತ್ಸೆ

· ಮಹಿಳೆಗೆ ಫಾಲಿಕಲ್ ಗಳ ಬೆಳವಣಿಗೆಗೆ ಮತ್ತು ಅಂಡೋತ್ಪತ್ತಿ ಔಷಧಗಳನ್ನು ನೀಡಲಾಗುತ್ತದೆ. ಅಂಡಾಣು ಬಿಡುಗಡೆಯಾಗುವ ದಿನವನ್ನು ಗಮನಿಸಲಾಗುತ್ತದೆ ಮತ್ತು ದಂಪತಿಗೆ ಸಂಭೋಗ ನಡೆಸಲು ಸಲಹೆ ನೀಡಲಾಗುತ್ತದೆ ಅದರಿಂದ ನೈಸರ್ಗಿಕವಾಗಿ ಗರ್ಭಧಾರಣೆಗೆ ನೆರವಾಗುತ್ತದೆ.

ಯಾರಿಗೆ ಒಐಟಿಐ?

· ಅಪರೂಪದ ಅಂಡೋತ್ಪತ್ತಿ ಹೊಂದಿರುವ ಮಹಿಳೆಯರು

· ಪಿಸಿಒಎಸ್ ಹೊಂದಿರುವ ಮಹಿಳೆಯರು

ಐಯುಐ:

· ಐಯುಐ ಮುಂದಿನ ಹಂತದ ಫರ್ಟಿಲಿಟಿ ಚಿಕಿತ್ಸೆಯಾಗಿದೆ.

· ಮಹಿಳೆಯರಿಗೆ ಫಾಲಿಕಲ್ ಗಳ ಅಭಿವೃದ್ಧಿಗೆ ಔಷಧಗಳನ್ನು ನೀಡಲಾಗುತ್ತದೆ ನಂತರ ಅಂಡೋತ್ಪತ್ತಿಯನ್ನು ಪ್ರಚೋದಿಸಲಾಗುತ್ತದೆ ಅದು ಅಂಡಾಣುಗಳನ್ನು ಬಿಡುಗಡೆ ಮಾಡುತ್ತದೆ. ಪುರುಷ ಸಂಗಾತಿಯಿಂದ ವೀರ್ಯದ ನಮೂನೆ ಸಂಗ್ರಹಿಸಲಾಗುತ್ತದೆ ಮತ್ತು ಆರೋಗ್ಯಕರ ವೀರ್ಯಾಣುಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ವೀರ್ಯಾಣುಗಳನ್ನು ನಂತರ ಕ್ಯಾಥೆಟರ್ ಮೂಲಕ ಫಲವತ್ತಾಗಿಸುವಿಕೆಗೆ ಮಹಿಳೆಯರ ಗರ್ಭಕೋಶಕ್ಕೆ ಸೇರಿಸಲಾಗುತ್ತದೆ. ಈ ಫಲೀಕರಣದ ನಂತರ ರೂಪುಗೊಂಡ ಝೈಗೋಟ್ ಭ್ರೂಣವಾಗುತ್ತದೆ ಅದು ನಂತರ ಬೆಳೆಯುತ್ತದೆ ಮತ್ತು ಮಗುವಾಗುತ್ತದೆ.

ಯಾರಿಗೆ ಐಯುಐ?

· ವಿವರಿಸಲಾಗದ ಬಂಜೆತನ

· ಕಡಿಮೆ ವೀರ್ಯಾಣುಗಳ ಪುರುಷರು

· ಸೌಮ್ಯವಾದ ಎಂಡೋಮೀಟ್ರಿಯೋಸಿಸ್ ಇರುವ ಮಹಿಳೆಯರು

· ಗರ್ಭಗೊರಳಿನ ಸಮಸ್ಯೆಗಳಿರುವ ಮಹಿಳೆಯರು

ಐವಿಎಫ್:

· ಐವಿಎಫ್ ಸುಧಾರಿತ ಫರ್ಟಿಲಿಟಿ ಚಿಕಿತ್ಸೆಯಾಗಿದೆ

· ಅಂಡಾಣು ಉತ್ಪಾದನೆಗೆ ಅಂಡಾಶಯಗಳನ್ನು ಉತ್ತೇಜಿಸುವ ಔಷಧಗಳನ್ನು ಮಹಿಳೆಗೆ ನೀಡಲಾಗುತ್ತದೆ. ಅಂಡಾಣುಗಳನ್ನು ಪಡೆಯಲಾಗುತ್ತದೆ ಮತ್ತು ಪುರುಷ ಸಂಗಾತಿಯಿಂದ ಸಂಗ್ರಹಿಸಲಾದ ವೀರ್ಯದೊಂದಿಗೆ ಸೇರಿಸಲಾಗುತ್ತದೆ. ಈ ಫಲವತ್ತಾದ ಅಂಡಗಳು ಭ್ರೂಣಗಳಾಗುತ್ತವೆ ಅವುಗಳನ್ನು ನಂತರ ಮಹಿಳೆಯ ಗರ್ಭಕೋಶಕ್ಕೆ ಮತ್ತಷ್ಟು ಅಭಿವೃದ್ಧಿಗೆ ಸೇರಿಸಲಾಗುತ್ತದೆ.

ಯಾರಿಗೆ ಐವಿಎಫ್?

· ಎಂಡೋಮೆಟ್ರಿಯೋಸಿಸ್ ಉಳ್ಳ ಮಹಿಳೆಯರು

· ವಿವರಿಸಲಾಗದ ಬಂಜೆತನ

· ಅನಿಯಮಿತ ಋತುಚಕ್ರ

· ಅಂಡಾಶಯದ ಮೀಸಲು ಕುಸಿತ

· ಪುರುಷರ ಬಂಜೆತನ

· ಎಂಡೋಮೆಟ್ರಿಯೋಸಿಸ್

ಔಷಧ-ಮುಕ್ತ ಐವಿಎಫ್

· ಇದು ಇತ್ತೀಚಿನ ಬೆಳವಣಿಗೆ, ಐವಿಎಫ್ ನ ಸುಧಾರಿತ ಆವೃತ್ತಿ

· ಬಹಳ ಕಡಿಮೆ ಔಷಧಗಳನ್ನು ಬಳಸಲಾಗುತ್ತದೆ

· ಅಡ್ಡ ಪರಿಣಾಮಗಳಿಲ್ಲ

· ಸುರಕ್ಷಿತ ಮತ್ತು ವೆಚ್ಚ ಉಳಿಸುವ ಆಯ್ಕೆ

ಔಷಧ-ಮುಕ್ತ ಐವಿಎಫ್ ಯಾರಿಗೆ?

· ಪಿಸಿಒಎಸ್ ಉಳ್ಳ ಮಹಿಳೆಯರು

· ರೆಸಿಸ್ಟೆಂಟ್ ಓವರಿ ಸಿಂಡ್ರೋಮ್

· ಥ್ರೊಂಬೊಫಿಲಿಯಾದ ರೋಗಿಗಳು

· ವಿಷಮತೆ ಹೊಂದಿರುವ ರೋಗಿಗಳು

· ಅಂಡಾಣು ಪಕ್ವತೆಯ ಸಮಸ್ಯೆಗಳು

ಫಲವಂತಿಕೆ ಸಂರಕ್ಷಣೆ:

ಕ್ಯಾನ್ಸರ್ ಪತ್ತೆಯಾದ ಜನರಲ್ಲಿ ಫಲವಂತಿಕೆಯ ಸಂರಕ್ಷಣೆಯ ತಂತ್ರವು ವರದಾನವಾಗಿದೆ. ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಯು ಪುರುಷ ಹಾಗೂ ಮಹಿಳೆಯರ ಫಲವಂತಿಕೆಗೂ ಪರಿಣಾಮ ಬೀರಬಲ್ಲದು. ಚಿಕಿತ್ಸೆಗೆ ಮುನ್ನ ಆತ ಅಥವಾ ಆಕೆ ಫರ್ಟಿಲಿಟಿ ತಜ್ಞರಲ್ಲಿ ಭೇಟಿ ನೀಡಬೇಕು ಮತ್ತು ಅವರ ವೀರ್ಯ ಮತ್ತು ಅಂಡಾಣುಗಳನ್ನು ಘನೀಕರಿಸಬೇಕು. ಈ ವಿಧಾನದಿಂದ ವ್ಯಕ್ತಿಯು ಅವರ ಸಂತಾನೋತ್ಪಾದನೆಯ ಸಾಮರ್ಥ್ಯ ಸಂರಕ್ಷಿಸಬಹುದು ಮತ್ತು ನಂತರ ಅವರಿಗೆ ಅನುಕೂಲವಾದಾಗ ಗರ್ಭ ಧರಿಸಬಹುದು.

ದಾನಿಯ ಚಿಕಿತ್ಸೆ:

ವೀರ್ಯ ಅಥವಾ ಅಂಡಾಣು ದುರ್ಬಲ ಗುಣಮಟ್ಟ ಹೊಂದಿದ್ದರೆ ಅಂಡಾಣುಗಳು ವಿಭಿನ್ನ ಮಹಿಳೆ ಅಥವಾ ವಿಭಿನ್ನ ಪುರುಷರ ವೀರ್ಯವನ್ನೂ ಗರ್ಭಧಾರಣೆಗೆ ಬಳಸಬಹುದು.

ಬಾಡಿಗೆ ತಾಯ್ತನ:

ಇಲ್ಲಿ ತಮಗೆ ಗರ್ಭಧಾರಣೆ ಮಾಡಲು ದಂಪತಿಯು ಬಾಡಿಗೆ ತಾಯಿಯ ನೆರವನ್ನು ಪಡೆಯಬಹುದು. ಒಬ್ಬರು ಬಾಡಿಗೆ ತಾಯಿಯಾಗಲು ಹಲವಾರು ವೈದ್ಯಕೀಯ ಷರತ್ತುಗಳಿವೆ.

ಪುರುಷ ಫಲವಂತಿಕೆ ಚಿಕಿತ್ಸೆಗಳು:

ಪರಿಸ್ಥಿತಿ ಆಧರಿಸಿ ಹಲವಾರು ಸುಧಾರಿತ ಚಿಕಿತ್ಸೆಗಳಾದ ಮೈಕ್ರೊಫ್ಲೂಯಿಡಿಕ್ಸ್, ಎಂಎಸಿಎಸ್(ಮ್ಯಾಗ್ನೆಟಿಕ್ ಅಸಾರ್ಟೆಡ್ ಸೆಲ್ ಸಾರ್ಟಿಂಗ್), ಟೆಸಾ(ಟೆಸ್ಟಿಕ್ಯುಲರ್ ಸ್ಪರ್ಮ್ ಆಸ್ಪಿರೇಷನ್), ಮೈಕ್ರೊ ಟಿಇಎಸ್ಇ(ಮೈಕ್ರೊಸ್ಕೊಪಿಕ್ ಟೆಸ್ಟಿಕ್ಯುಲರ್ ಸ್ಪರ್ಮ್ ಎಕ್ಸ್ ಟ್ರಾಕ್ಷನ್) ಪುರುಷರಿಗೆ ತಂದೆತನ ಸಾಧಿಸಲು ಲಭ್ಯವಿವೆ.

ಗರ್ಭಧಾರಣೆ ಹೊಂದಲು ನೀವು ಅಶಕ್ತರಾದರೆ ನಿಮ್ಮಲ್ಲಿ ಅಥವಾ ನಿಮ್ಮ ಸಂಗಾತಿಯಲ್ಲಿ ಸಮಸ್ಯೆ ಇರಬಹುದು. ಇದನ್ನು ಫರ್ಟಿಲಿಟಿ ತಜ್ಞರು ಮಾತ್ರ ಪತ್ತೆ ಮಾಡಬಲ್ಲರು. ಪುರುಷರು ಮತ್ತು ಮಹಿಳೆಯರಲ್ಲಿ ವಯಸ್ಸು ಹೆಚ್ಚಾದಂತೆ ಫಲವಂತಿಕೆ ಕುಸಿಯುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಎಂದಿಗೂ ಫರ್ಟಿಲಿಟಿ ಚಿಕಿತ್ಸೆಯನ್ನು ಮುಂದೂಡಬೇಡಿ. ಹ್ಯಾಪಿ ಪೇರೆಂಟ್ ಹುಡ್!

Have question? Contact us now!


Have question? Contact us now!