Blog
Enquire Now
Fertility Evaluation

ಫರ್ಟಿಲಿಟಿ ಮೌಲ್ಯಮಾಪನ ಎಂದರೇನು ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ?

ಫರ್ಟಿಲಿಟಿ ಮೌಲ್ಯಮಾಪನ ಎಂದರೇನು ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ?

ಪ್ರತಿ ದಂಪತಿಗೂ ಪೋಷಕರಾಗುವ  ಪ್ರಯಾಣವು ವಿಶಿಷ್ಟವಾಗಿರುತ್ತದೆ. ಆದರೆ ಕೆಲವು ದಂಪತಿಗಳ ವಿಷಯದಲ್ಲಿ ತಂದೆ ತಾಯಿಯರಾಗಲು ಅವರ ಗರ್ಭಧಾರಣೆಯ ಸಾಮರ್ಥ್ಯಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳಿಂದ ಇತರರಿಗಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಹಲವು ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳು ಲಭ್ಯವಿರುವುದರಿಂದ

 ಮತ್ತು  ಪೋಷಕರಾಗುವ ಆನಂದ ಹೊಂದಲು ಸಮಗ್ರವಾದ ವಿಧಾನ ಅನುಸರಿಸುವುದು ಅಗತ್ಯವಾಗಿದೆ.

ಪೋಷಕರಾಗಲು ತಡವಾಗುವುದು, ಜೀವನಶೈಲಿ ಅಂಶಗಳು, ಅನಾರೋಗ್ಯಕರ ಆಹಾರದ ರೂಢಿಗಳು, ಬೊಜ್ಜು ಇತ್ಯಾದಿಗಳಿಂದ ಭಾರತದಲ್ಲಿ ಬಂಜೆತನ ಕ್ರಮೇಣ ಹೆಚ್ಚಾಗುತ್ತಿದೆ. ಹಲವರಿಗೆ ವಯಸ್ಸು ಹೆಚ್ಚಾದಂತೆ ಫಲವತ್ತತೆ ಕುಸಿಯುತ್ತದೆ ಎಂದು ಗೊತ್ತಿಲ್ಲ ಮತ್ತು ಸಮಯ ಕಳೆದಂತೆ ನೈಸರ್ಗಿಕವಾಗಿ ಗರ್ಭಧಾರಣೆ ಹೊಂದಬ
ಬಹುದು ಎಂಬ ಮನಸ್ಥಿತಿಯಲ್ಲಿ ಇರುತ್ತಾರೆ. ಅದು ಸದಾ ನಿಜವಾಗದೆ  ಇರಬಹುದು. ದಂಪತಿಯು ಒಂದು ವರ್ಷ ಪ್ರಯತ್ನಿಸಿಯೂ ಗರ್ಭಧಾರಣೆ ಸಾಧ್ಯವಾಗದೇ ಇದ್ದಲ್ಲಿ ಅವರು ಸೂಕ್ತವಾದ ಫರ್ಟಿಲಿಟಿ ಮೌಲ್ಯಮಾಪನಕ್ಕೆ ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಬೇಕು. ಮಹಿಳಾ ಸಂಗಾತಿಯ ವಯಸ್ಸು 35 ಮೀರಿದ್ದರೆ ಅವರು ಪ್ರಯತ್ನಿಸಿ 6 ತಿಂಗಳಲ್ಲಿಯೂ ಗರ್ಭಧಾರಣೆ ಸಾಧ್ಯವಾಗದಿದ್ದಲ್ಲಿ ಪರೀಕ್ಷಿಸಿಕೊಳ್ಳಬೇಕು. ಪತಿ ಹಾಗೂ ಪತ್ನಿಯರ ಸೂಕ್ತವಾದ ಇತಿಹಾಸ ಮತ್ತು ಪರೀಕ್ಷೆಗಳಿಂದ ಪುರುಷ ಅಥವಾ ಮಹಿಳಾ ಸಂಗಾತಿಯಲ್ಲಿ ಸಮಸ್ಯೆ ಇದೆಯೇ ಅಥವಾ ಇಬ್ಬರಲ್ಲೂ ಇದೆಯೇ ಎಂದು ಗೊತ್ತಾಗುತ್ತದೆ ಹಾಗೂ ಅದಕ್ಕೆ ತಕ್ಕಂತೆ ವೈಯಕ್ತಿಕಗೊಳಿಸಿದ ಚಿಕಿತ್ಸೆಯನ್ನು ರೂಪಿಸಬಹುದಾಗಿದೆ. ಆದ್ದರಿಂದ ಫರ್ಟಿಲಿಟಿ ಚೆಕಪ್ ಸಂದರ್ಭದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ನಡೆಸುವ ನಿರ್ದಿಷ್ಟ ಪರೀಕ್ಷೆಗಳ ಕುರಿತು ತಿಳಿಯೋಣ.

ಮಹಿಳೆಯರಿಗೆ ಫಲವತ್ತತೆ ಪರೀಕ್ಷೆಗಳು

ಸಮಗ್ರವಾದ ಇತಿಹಾಸ ಮತ್ತು ದೈಹಿಕ ಪರೀಕ್ಷೆ ನಡೆಸಿದ ನಂತರ ರಕ್ತ ಹಾಗೂ ಮೂತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಎಫ್.ಎಸ್.ಎಚ್., ಎಸ್ಟ್ರಡಿಯೊಲ್, ಎಎಂಎಚ್ ಇತ್ಯಾದಿ ಫರ್ಟಿಲಿಟಿ ಹಾರ್ಮೋನುಗಳನ್ನು ಪರೀಕ್ಷಿಸಲು ನಡೆಸಲಾಗುತ್ತದೆ. ನಿರ್ದಿಷ್ಟ ಕಾರಣಗಳನ್ನು ಕಂಡುಕೊಳ್ಳಲು ಈ ಕೆಳಕಂಡ ಇಮೇಜಿಂಗ್ ಪ್ರಕ್ರಿಯೆಗಳನ್ನು ನಡೆಸಬಹುದು:

 

  • ಅಲ್ಟ್ರಾಸೌಂಡ್: ಓವರಿಯನ್ ಸಿಸ್ಟ್ ಗಳು, ಫೈಬ್ರಾಯಿಡ್ ಗಳನ್ನು ಪರೀಕ್ಷಿಸಲು ಬಳಸಲಾಗುತ್ತದೆ. ಗರ್ಭಕೋಶದ ಸ್ಥಾನ ಮತ್ತು ಗಾತ್ರ, ಎಂಡೋಮೆಟ್ರಿಯಲ್ ಪ್ಯಾಟ್ರನ್, ದಪ್ಪ, ಗರ್ಭಕೋಶದಲ್ಲಿ ಫಾಲಿಕಲ್ ಗಳ ಸಂಖ್ಯೆ, ಅಂಡಾಣು ಬಿಡುಗಡೆ ಇತ್ಯಾದಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.
  • ಹಿಸ್ಟೆರೊಸಲ್ಪಿಂಗೊಗ್ರಾಮ್: ಫಾಲೋಪಿಯನ್ ‍ಟ್ಯೂಬ್ ಗಳಲ್ಲಿ ಯಾವುದೇ ಅಡೆತಡೆ ಇದೆಯೇ ಎಂದು ಪತ್ತೆ ಮಾಡಲು ಬಳಸಲಾಗುತ್ತದೆ.

ಡಯಾಗ್ನೊಸ್ಟಿಕ್ ಹಿಸ್ಟೆರೊಲ್ಯಾಪರೊಸ್ಕೊಪಿ: ಮಹಿಳೆಯರ ಶ್ರೋಣಿಯ ಪ್ರದೇಶ ಪರೀಕ್ಷಿಸಲು ಮತ್ತು ಓವರಿಯನ್ ಸಿಸ್ಟ್ ಗಳು, ಎಂಡೋಮೆಟ್ರಿಯಾಸಿಸ್, ಫೈಬ್ರಾಯಿಡ್ ಗಳು, ಗರ್ಭಕೋಶದ ಅಸಹಜತೆಗಳು ಅಥವಾ  ಫಲವತ್ತತೆಗೆ  ಹಾನಿ ಉಂಟು ಮಾಡುವ ಯಾವುದೇ ಸಮಸ್ಯೆಯ ಚಿಕಿತ್ಸೆಗೆ ಬಳಸಲಾಗುತ್ತದೆ .

ಪುರುಷರಿಗೆ ಬಂಜೆತನ ಪರೀಕ್ಷೆಗಳು

ಶಿಶ್ನ, ರೇತ್ರನಾಳ, ವೃಷಣ ಮತ್ತಿತರೆ ಪುರುಷ ಸಂತಾನೋತ್ಪಾದನೆಯ ವ್ಯವಸ್ಥೆಯನ್ನು ಪರೀಕ್ಷಿಸಲು ದೈಹಿಕ ಪರೀಕ್ಷೆ ನಡೆಸಲಾಗುತ್ತದೆ.

ಫರ್ಟಿಲಿಟಿ ತಜ್ಞರು ವ್ಯಕ್ತಿಯ ವೈದ್ಯಕೀಯ ಇತಿಹಾಸ, ಶೈಶವದ ಅನಾರೋಗ್ಯ, ಜೀವನಶೈಲಿ, ಭಾರಲೋಹಗಳು/ ಕೀಟನಾಶಕಗಳು/ ರೇಡಿಯೇಷನ್ ಇತ್ಯಾದಿಗಳ ಸೇರಿಕೆ ಕುರಿತು ವಿಚಾರಿಸುತ್ತಾರೆ. ಈ ಕೆಳಕಂಡ ಪರೀಕ್ಷೆಗಳನ್ನು ನಡೆಸಲಾಗುತ್ತದೆ:

 

  • ವೀರ್ಯದ ವಿಶ್ಲೇಷಣೆ: ಇದನ್ನು ವೀರ್ಯದ ಪ್ರಮಾಣ, ಚಲನೆ, ಆಕಾರ ಇತ್ಯಾದಿ ವಿಶ್ಲೇಷಿಸಲು ಬಳಸಲಾಗುತ್ತದೆ. ಡಿಎನ್ಎ ಫ್ರಾಗ್ಮೆಂಟೇಷನ್ ಇಂಡೆಕ್ಸ್, ರಿಯಾಕ್ಟಿವ್ ಆಕ್ಸಿಜನ್ ಸ್ಪೀಸೀಸ್ ಅಸ್ಸೇ ಇತ್ಯಾದಿ ಪರೀಕ್ಷೆಗಳನ್ನುನಡೆಸುವುದರಿಂದ  ಸೆಕೆಂಡರಿ ಮತ್ತು ವಿವರಿಸಲಾಗದ ಬಂಜೆತನವನ್ನು ಮೌಲ್ಯಮಾಪನ ಮಾಡಲು ನೆರವಾಗುತ್ತದೆ.
  • ಟ್ರಾನ್ಸ್ರೆಕ್ಟಲ್ ಅಲ್ಟ್ರಾಸೌಂಡ್: ಉನ್ನತ ರೆಸೊಲ್ಯೂಷನ್ ಇಮೇಜಿಂಗ್ ಮೂಲಕ ವೀರ್ಯದ ಕೋಶಕಗಳು, ರೇತ್ರನಾಳ ಇತ್ಯಾದಿ ಪರೀಕ್ಷಿಸಲು ಬಳಸಲಾಗುತ್ತದೆ.
  • ವೃಷಣದ ಅಲ್ಟ್ರಾಸೌಂಡ್: ವೃಷಣದ ಪರೀಕ್ಷೆಗೆ ಬಳಸಲಾಗುತ್ತದೆ; ಇದು ವೃಷಣದಲ್ಲಿನ ಯಾವುದೇ  ಅಸಹಜತೆಗಳನ್ನು ಕಂಡುಕೊಳ್ಳಲೂ ನೆರವಾಗುತ್ತದೆ.

ಫರ್ಟಿಲಿಟಿ ಮೌಲ್ಯಮಾಪನವು ಫರ್ಟಿಲಿಟಿ ತಜ್ಞರಿಗೆ ಬಂಜೆತನಕ್ಕೆ ಕಾರಣ ಅರ್ಥ ಮಾಡಿಕೊಳ್ಳಲು ಸನ್ನದ್ಧರಾಗಿಸುತ್ತದೆ ಮತ್ತು ಸಮಗ್ರ ಹಾಗೂ ವೈಯಕ್ತಿಕ ಫರ್ಟಿಲಿಟಿ ಚಿಕಿತ್ಸಾ ಯೋಜನೆ ಸೃಷ್ಟಿಸಲು ಸಹಾಯ ಮಾಡುತ್ತದೆ . ತಂದೆ  ತಾಯಿಯರಾಗುವ ಕನಸನ್ನು ನನಸಾಗಿಸಿಕೊಳ್ಳಲು ನೆರವಾಗುತ್ತದೆ. ಹ್ಯಾಪಿ ಪೇರೆಂಟ್ ಹುಡ್!

Write a Comment