
ಬಂಜೆತನ: ಕಾರಣಗಳು, ವಿಧಗಳು

ಸ್ತ್ರೀಯರಲ್ಲಿ ಬಂಜೆತನದ ಕಾರಣಗಳು:
- ಅಂಡೋತ್ಪತ್ತಿಯ ಅಸಹಜತೆಗಳು
- ಡಿಂಬನಾಳದಲ್ಲಿ ಸಮಸ್ಯೆಗಳು
- ಗರ್ಭಕೋಶದಲ್ಲಿ ಸಮಸ್ಯೆಗಳು
- ಥೈರಾಯ್ಡ್ ಮತ್ತು ಪ್ರೊಲ್ಯಾಕ್ಟಿನ್ ರೀತಿಯ ಅಂತಃಸ್ರಾವಕದ ಸಮಸ್ಯೆಗಳು
- ಎಂಡೋಮೆಟ್ರಿಯಾಸಿಸ್ ಮತ್ತು ಅಡನೊಮಯೋಸಿಸ್
- ಬೊಜ್ಜು
ಎ. ಅಂಡೋತ್ಪತ್ತಿಯ ಅಸಹಜತೆಗಳು:
ಮಹಿಳೆಯರ ಸಂತಾನೋತ್ಪಾದನೆಯ ಹಾರ್ಮೋನುಗಳಲ್ಲಿ ಯಾವುದೇ ಅಸಮತೋಲನವು ಅಂಡೋತ್ಪತ್ತಿಯಲ್ಲಿ ಅಸಹಜತೆಗಳನ್ನು ಉಂಟು ಮಾಡಬಲ್ಲದು. ಕೆಲ ಅಂಡೋತ್ಪತ್ತಿಯ ಅಸಹಜತೆಗಳು ಹೀಗಿವೆ:
- ಪಿಸಿಒಎಸ್: ಪಿಸಿಒಎಸ್/ಪಾಲಿಸಿಸ್ಟಿಮ್ ಓವರಿಯನ್ ಸಿಂಡ್ರೋಮ್ ಹೆಚ್ಚಿನ ಪ್ರಮಾಣದ ಆಂಡ್ರೋಜೆನ್(ಪುರುಷ ಹಾರ್ಮೋನು) ಗಳಿಂದ ಉಂಟಾಗುವ ಮೂಲಕ ಅಂಡೋತ್ಪತ್ತಿಯಲ್ಲಿ ಅಡಚಣೆಗಳನ್ನು ಉಂಟು ಮಾಡುತ್ತದೆ. ಇದು ಮಹಿಳೆಯರಲ್ಲಿ ಬಂಜೆತನಕ್ಕೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಮಹಿಳೆಯರಲ್ಲಿ ಬಂಜೆತನ ಉಂಟು ಮಾಡುವ ರೋಗಲಕ್ಷಣಗಳಲ್ಲಿ ಅನಿಯಮಿತ ಋತುಚಕ್ರಗಳು, ಮೊಡವೆ, ಅತಿಯಾದ ಕೂದಲು ಬೆಳೆಯುವುದು, ತೂಕ ಹೆಚ್ಚಾಗುವುದು ಇತ್ಯಾದಿ ಒಳಗೊಂಡಿವೆ.
- ಪ್ರಾಥಮಿಕ ಅಂಡಾಶಯದ ನ್ಯೂನತೆ/ಅವಧಿಪೂರ್ವ ಅಂಡಾಶಯದ ವೈಫಲ್ಯ: ಕೆಲವು ಮಹಿಳೆಯರಲ್ಲಿ ಅಂಡಾಶಯಗಳು ಹಲವು ಕಾರಣಗಳಿಗೆ 40 ವರ್ಷಗಳಿಗಿಂತ ಮುನ್ನವೇ ಕಾರ್ಯ ನಿರ್ವಹಣೆ ಸ್ಥಗಿತಗೊಳಿಸುತ್ತವೆ.
- ವಂಶವಾಹಿ ಕಾರಣಗಳು: ಟರ್ನರ್ ಸಿಂಡ್ರೋಮ್, ಫ್ರಜೈಲ್ ಎಕ್ಸ್ ಸಿಂಡ್ರೋಮ್ ಇತ್ಯಾದಿ ಅವಧಿಪೂರ್ವ ಅಂಡಾಶಯ ವೈಫಲ್ಯಕ್ಕೆ ಕಾರಣವಾಗುತ್ತವೆ.
ಬಿ. ಡಿಂಬನಾಳದಲ್ಲಿ ಸಮಸ್ಯೆಗಳು:
ಡಿಂಬನಾಳವು ಮಹಿಳಾ ಸಂತಾನೋತ್ಪಾದನೆಯ ವ್ಯವಸ್ಥೆಯ ಭಾಗವಾಗಿದ್ದು ಅದರಲ್ಲಿ ಅಂಡಾಣು ಮತ್ತು ವೀರ್ಯದ ಫಲವಂತಿಕೆ ಉಂಟಾಗುತ್ತದೆ. ಆದರೆ ಡಿಂಬನಾಳದಲ್ಲಿ ಹಲವಾರು ಸಮಸ್ಯೆಗಳಿದ್ದು ಅವು ಫಲವಂತಿಕೆಗೆ ಹಾನಿಯುಂಟು ಮಾಡಬಹುದು. ಅವುಗಳಲ್ಲಿ ಕೆಲವು ಕಾರಣಗಳು:
- ಡಿಂಬನಾಳ ಇಲ್ಲದಿರುವಿಕೆ(ಟ್ಯೂಬಲ್ ಅಪ್ಲೇಸಿಯಾ)
- ಕ್ಷಯದಂತಹ ಸೋಂಕುಗಳು
- ಲೈಂಗಿಕವಾಗಿ ವರ್ಗಾವಣೆಯಾದ ರೋಗಗಳಿಂದ ಉಂಟಾದ ಶ್ರೋಣೀಯ ಉರಿಯೂತದ ರೋಗ
- ಶ್ರೋಣಿ/ಹೊಟ್ಟೆಯಲ್ಲಿ ಹಿಂದಿನ ಶಸ್ತ್ರಚಿಕಿತ್ಸೆ
- ಅಪೆಂಡಿಸೈಟಿಸ್
- ಹೈಡ್ರೊಸಾಲ್ ಪಿಂಕ್ಸ್(ಡಿಂಬನಾಳದಲ್ಲಿ ದ್ರವ ಶೇಖರಣೆ)
ಸಿ. ಗರ್ಭಕೋಶದಲ್ಲಿನ ಸಮಸ್ಯೆಗಳು:
- ಫೈಬ್ರಾಯಿಡ್ ಗಳು
- ಅಸಹಜ ಆಕಾರದ ಗರ್ಭಕೋಶ
- ತೆಳು ಎಂಡೋಮೆಟ್ರಿಯಂ, ಪಾಲಿಪ್ಸ್ ನಂತಹ ಎಂಡೋಮೆಟ್ರಿಯಲ್ ಪೆಥಾಲಜಿ
ಡಿ. ಎಂಡೋಮೆಟ್ರಿಯಾಸಿಸ್ ಮತ್ತು ಅಡೆನೊಮಯೋಸಿಸ್:
ಎಂಡೋಮೆಟ್ರಿಯಾಸಿಸ್ ಎನ್ನುವುದು ಎಂಡೋಮೆಟ್ರಿಯಂ(ಗರ್ಭಕೋಶದ ಲೈನಿಂಗ್) ಗರ್ಭಕೋಶದ ಭಿನ್ನವಾದ ಸ್ಥಳಗಳಲ್ಲಿ ಅಂದರೆ ಅಸ್ಥಿ ಕುಹರ/ಹೊಟ್ಟೆಯಲ್ಲಿ ಬೆಳೆಯುವ ಒಂದು ಸ್ಥಿತಿ. ಇದು ಹೆಚ್ಚು ನೋವಿನ ಋತುಚಕ್ರಗಳನ್ನು ಉಂಟು ಮಾಡಬಹುದು ಮತ್ತು ಅಂಡಾಣುಗಳ ಸಂಗ್ರಹ ಕಡಿಮೆಯಾಗುವುದರಿಂದ, ಅಂಟಿಕೊಳ್ಳುವಿಕೆ ಇತ್ಯಾದಿ ಕಾರಣಗಳಿಂದ ಫಲವಂತಿಕೆಯ ಮೇಲೆ ಪರಿಣಾಮ ಬೀರಬಲ್ಲದು.
ಅಡೆನೊಮಯೋಸಿಸ್ ಎಂಡೋಮೆಟ್ರಿಯಲ್ ಕಾರ್ಯಕ್ಕೆ ಮತ್ತು ಗ್ರಹಿಕೆಗೆ ಹಾನಿಯುಂಟು ಮಾಡುತ್ತದೆ ಇದರಿಂದ ಅಳವಡಿಕೆಯ ಸಾಮರ್ಥ್ಯ ಮತ್ತು ಗರ್ಭಧಾರಣೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಈ ಮೇಲ್ಕಂಡ ಕಾರಣಗಳು ಫಲವಂತಿಕೆಗೆ ಹಾನಿಯುಂಟು ಮಾಡಬಲ್ಲವು.
ಸ್ತ್ರೀಯರ ಬಂಜೆತನ ರೋಗಪರೀಕ್ಷೆ:
- ದೈಹಿಕ ಪರೀಕ್ಷೆ
- ಅಲ್ಟ್ರಾಸೌಂಡ್
- ಅಂಡಾಶಯದ ರಿಸರ್ವ್ ಟೆಸ್ಟ್ ಒಳಗೊಂಡು ಹಾರ್ಮೋನ್ ಪರೀಕ್ಷೆಗಳು
- ಹಿಸ್ಟೆರೊಸಲ್ಪಿಂಗೊಗ್ರಫಿ
- ಹಿಸ್ಟೆರೆಸ್ಕೊಪಿ
- ಲ್ಯಾಪರೊಸ್ಕೊಪಿ
- ಅನುವಂಶಿಕ ಪರೀಕ್ಷೆ
ಮಹಿಳಾ ಬಂಜೆತನದ ಚಿಕಿತ್ಸೆ:
- ಅಂಡಾಣು ಬಿಡುಗಡೆಯಾಗದ ಪ್ರಕರಣಗಳಲ್ಲಿ ಅಂಡಾಣುಗಳ ಸೇರಿಸುವಿಕೆ
- ಗರ್ಭಕೋಶದ ಅಸಹಜತೆಯನ್ನು ಸರಿಪಡಿಸಲು, ಗರ್ಭಕೋಶದ ಟ್ಯೂಬ್ ನಲ್ಲಿನ ತಡೆ, ಫೈಬ್ರಾಯಿಡ್ ಗಳು ಅಥವಾ ಎಂಡೋಮೆಟ್ರಿಯಲ್ ಪಾಲಿಪ್ ಸರಿಪಡಿಸಲು ಲ್ಯಾಪರೊಸ್ಕೊಪಿಕ್/ಹಿಸ್ಟೆರೊಸ್ಕೊಪಿಕ್ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ
- ಮಹಿಳೆಯರಿಗೆ ಅಗತ್ಯವಿದ್ದಾಗ ಐಯುಐ, ಐವಿಎಫ್ ನಂತಹ ಚಿಕಿತ್ಸೆಗಳು ಮಹಿಳೆಯರಿಗೆ ಗರ್ಭಧಾರಣೆಗೆ ನೆರವಾಗುತ್ತವೆ.
ಪುರುಷರಲ್ಲಿ ಬಂಜೆತನದ ಕಾರಣಗಳು:
ಪುರುಷರ ಬಂಜೆತನ ಹಲವಾರು ಕಾರಣಗಳಿಂದ ಉಂಟಾಗಬಹುದು:
- ವೀರ್ಯೋತ್ಪಾದನೆಯಲ್ಲಿ ಸಮಸ್ಯೆ: ಸಾಮಾನ್ಯ ವೀರ್ಯ ಉತ್ಪಾದನೆಗೆ ಪುರುಷ ಸಂತಾನೋತ್ಪಾದನಾ ವ್ಯವಸ್ಥೆಯ ಸರಿಯಾದ ಬೆಳವಣಿಗೆ ಮತ್ತು ರೂಪುಗೊಳ್ಳುವಿಕೆ ಅತ್ಯಂತ ಅಗತ್ಯವಾಗಿದೆ. ವೀರ್ಯ ಉತ್ಪಾದನೆಯಲ್ಲಿ ಯಾವುದೇ ಸಮಸ್ಯೆಯು ಬಂಜೆತನ ಉಂಟು ಮಾಡಬಲ್ಲದು.
- ವೀರ್ಯ ಸಾಗಣೆಯಲ್ಲಿ ಸಮಸ್ಯೆ: ವೀರ್ಯವನ್ನು ಹೊತ್ತೊಯ್ಯುವ ನಾಳಗಳು ಶಸ್ತ್ರಚಿಕಿತ್ಸೆ, ಜನ್ಮಜಾತ ಸಮಸ್ಯೆಗಳು ಅಥವಾ ಸೋಂಕುಗಳಿಂದ ತಡೆ ಹೊಂದಿರಬಹುದು.
- ವೀರ್ಯದ ಚಲನಶೀಲತೆಯಲ್ಲಿ ಸಮಸ್ಯೆ: ವೀರ್ಯದ ಚಲನಶೀಲತೆಯಲ್ಲಿ ಸಮಸ್ಯೆ:
- ಸೋಂಕು: ಲೈಂಗಿಕವಾಗಿ ಹರಡಿರುವ ಸೋಂಕುಗಳು ವೀರ್ಯ ಉತ್ಪಾದನೆಯನ್ನು ಹಾಗೂ ವೀರ್ಯದ ಚಲನಶೀಲತೆಯನ್ನು ತಡೆಯಬಹುದು.
- ನಿಮಿರುವಿಕೆ ಸಮಸ್ಯೆಗಳು: ಮಧುಮೇಹ, ಮೂತ್ರಕೋಶ ಶಸ್ತ್ರಚಿಕಿತ್ಸೆ, ಔಷಧಗಳು ಇತ್ಯಾದಿ ನಿಮಿರುವಿಕೆಯ ಸಮಸ್ಯೆಗಳನ್ನು ಉಂಟು ಮಾಡಬಹುದು.
- ಕ್ಯಾನ್ಸರ್: ಕ್ಯಾನ್ಸರ್ ಮತ್ತು ಕಿಮೋಥೆರಪಿ ಹಾಗೂ ರೇಡಿಯೇಷನ್ ನಂತಹ ಚಿಕಿತ್ಸೆಗಳು ಕಾಮಾಸಕ್ತಿ ಮತ್ತು ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರಿ ಬಂಜೆತನ ಉಂಟು ಮಾಡಬಲ್ಲವು.
- ಅನುವಂಶಿಕ ದೋಷಗಳು: ಸಿಸ್ಟಿಕ್ ಫೈಬ್ರೋಸಿಸ್, ಕ್ಲೈನ್ ಫೆಲ್ಟರ್ಸ್ ಸಿಂಡ್ರೋಮ್ ಮತ್ತಿತರೆ ಅನುವಂಶಿಕ ಸಮಸ್ಯೆಗಳು ವೀರ್ಯ ಉತ್ಪಾದನೆ ಮತ್ತು ಸಾಗಣೆಗೆ ಬಾಧಿಸಬಹುದು.
- ವೀರ್ಯ ವಿರೋಧಿ ಪ್ರತಿಕಾಯಗಳು: ಕೆಲವು ಪ್ರತಿಕಾಯಗಳು ವೀರ್ಯಗಳನ್ನು ಹಾನಿಕಾರಕ ದಾಳಿಕೋರರು ಎಂದು ಭಾವಿಸಿ ಅವುಗಳ ಮೇಲೆ ದಾಳಿ ಮಾಡುತ್ತವೆ.
- ಇಳಿಯದ ವೃಷಣಗಳು: ಕೆಲವು ಪುರುಷರಿಗೆ ಜನಿಸುವ ಮುನ್ನ ವೃಷಣಗಳು ಇಳಿಯದೇ ಇರುವುದರಿಂದ ಬಂಜೆತನ ಉಂಟಾಗುತ್ತದೆ.
- ವೆರಿಕೋಸೀಲ್: ವೃಷಣ ಕೋಶದಲ್ಲಿನ ನಾಳಗಳು ಅಸಹಜವಾಗಿ ದೊಡ್ಡವಾದರೆ ಅದನ್ನು ವೆರಿಕೋಸೀಲ್ ಎನ್ನಲಾಗುತ್ತದೆ ಮತ್ತು ಅದು ಕಡಿಮೆ ವೀರ್ಯ ಉತ್ಪಾದನೆ ಮತ್ತು ವೀರ್ಯದ ಚಲನೆ ಕಡಿಮೆ ಮಾಡುತ್ತದೆ.
- ರಾಸಾಯನಿಕಗಳು/ಎಕ್ಸ್-ರೇಗಳು: ಕೀಟನಾಶಕಗಳು, ವಿಷಕಾರಕಗಳು ಮತ್ತು ಬಿಸಿಯ ಸಂಪರ್ಕಕ್ಕೆ ಒಳಗಾಗುವುದು ವೀರ್ಯ ಕಡಿಮೆಯಾಗುವಂತೆ ಮಾಡುತ್ತದೆ.
- ಧೂಮಪಾನ: ಧೂಮಪಾನ ಮಾಡುವವರಿಗೆ ವೀರ್ಯದ ಸಂಖ್ಯೆ ಹಾಗೂ ಚಲನಶೀಲತೆ ಕಡಿಮೆ ಇರುತ್ತದೆ ಮತ್ತು ವೀರ್ಯದ ಗುಣಮಟ್ಟ ಕುಸಿಯುತ್ತದೆ.
- ಬೊಜ್ಜು: ಅತಿಯಾದ ತೂಕವು ಹಾರ್ಮೋನು ಅಸಮತೋಲನ ಉಂಟು ಮಾಡಬಹುದು ಮತ್ತು ಫಲವಂತಿಕೆಗೆ ಹಾನಿಯುಂಟು ಮಾಡಬಹುದು.
ಪುರುಷರಲ್ಲಿ ಬಂಜೆತನದ ರೋಗಲಕ್ಷಣಗಳು:
- ಬಹುತೇಕ ರೋಗಲಕ್ಷಣಗಳಿರುವುದಿಲ್ಲ
- ಲೈಂಗಿಕ ಬಯಕೆಯಲ್ಲಿ ಬದಲಾವಣೆ
- ಸಣ್ಣ ವೃಷಣಗಳು
- ವೃಷಣಗಳಲ್ಲಿ ನೋವು/ಊತ
ಪುರುಷರ ಬಂಜೆತನದ ರೋಗಪರೀಕ್ಷೆ:
ಪುರುಷರ ಬಂಜೆತನ ಪರೀಕ್ಷಿಸಲು ಈ ಕೆಳಕಂಡ ಪರೀಕ್ಷೆಗಳನ್ನು ನಡೆಸಲಾಗುತ್ತದೆ:
- ದೈಹಿಕ ಪರೀಕ್ಷೆ
- ವೀರ್ಯದ ವಿಶ್ಲೇಷಣೆ
- ಅಲ್ಟ್ರಾಸೌಂಡ್-ವೃಷಣಕೋಶ, ಟ್ರಾನ್ಸ್ ರೆಕ್ಟಲ್
- ಹಾರ್ಮೋನು ಪರೀಕ್ಷೆಗಳು
- ಅನುವಂಶಿಕ ಪರೀಕ್ಷೆಗಳು
ಪುರುಷ ಬಂಜೆತನದ ಚಿಕಿತ್ಸೆ:
- ಹೈಪೊಗೊನಾಡೊಟ್ರೊಪಿಕ್ ಹೈಪೊಗೊನಾಡಿಸಂ, ಕಡಿಮೆ ವೀರ್ಯದ ಪ್ರಮಾಣ ಮತ್ತು ಚಲನಶೀಲತೆಯ ಕೊರತೆ ಇತ್ಯಾದಿ ಪ್ರಕರಣಗಳಲ್ಲಿ ಹಾರ್ಮೋನುಗಳು, ಉತ್ಕರ್ಷಣ ನಿರೋಧಕಗಳ ಮೂಲಕ ವೈದ್ಯಕೀಯ ನಿರ್ವಹಣೆ.
- ಐಯುಐ, ಐವಿಎಫ್/ಐಸಿಎಸ್ಐ ನಂತಹ ಚಿಕಿತ್ಸೆಗಳನ್ನು ಬಳಸುವ ಮೂಲಕ ಪುರುಷರಿಗೆ ಬಂಜೆತನ ನಿವಾರಿಸಿಕೊಂಡು ತಂದೆತನ ಹೊಂದಲು ನೆರವಾಗಬಹುದು.
- ವೀರ್ಯ ಪಡೆಯುವ ತಂತ್ರಗಳಾದ ಟಿ.ಇ.ಎಸ್.ಎ, ಮೈಕ್ರೊ-ಟಿ.ಇ.ಎಸ್.ಇ ಮತ್ತು ವೀರ್ಯ ಪ್ರತ್ಯೇಕಗೊಳಿಸುವ ಚಿಕಿತ್ಸೆಗಳಾದ ಎಂ.ಎ.ಸಿ.ಎಸ್, ಮೈಕ್ರೊಫ್ಲೂಯಿಡಿಕ್ಸ್ ಲಭ್ಯವಿದ್ದು ಅವು ಫಲವಂತಿಕೆ ಸುಧಾರಿಸಬಲ್ಲವು.
ಬಂಜೆತನದ ವಿಧಗಳು:
- ಪ್ರಾಥಮಿಕ ಬಂಜೆತನ – ದಂಪತಿ 1 ವರ್ಷ ಪ್ರಯತ್ನಿಸಿದ ನಂತರವು ಗರ್ಭಧಾರಣೆ ಹೊಂದದೇ ಇದ್ದಲ್ಲಿ ಅದನ್ನು ಪ್ರಾಥಮಿಕ ಬಂಜೆತನ ಎನ್ನಲಾಗುತ್ತದೆ.
- ದ್ವಿತೀಯ ಬಂಜೆತನ – ದಂಪತಿ 2ನೇ ಸಲ ಗರ್ಭಧಾರಣೆ ಹೊಂದಲು ಅಶಕ್ತರಾದರೆ(ಒಮ್ಮೆ ಗರ್ಭಧಾರಣೆ ಯಶಸ್ಸಿನ ನಂತರ) ಅದನ್ನು ದ್ವಿತೀಯ ಬಂಜೆತನ ಎನ್ನಲಾಗುತ್ತದೆ.
ಫಲವಂತಿಕೆ ವಯಸ್ಸಿನೊಂದಿಗೆ ಕಡಿಮೆಯಾಗುತ್ತದೆ ಮತ್ತು ಆದ್ದರಿಂದ ಫಲವಂತಿಕೆ ಮೌಲ್ಯಮಾಪನವು ಪುರುಷ ಹಾಗೂ ಮಹಿಳಾ ಸಂಗಾತಿ ಇಬ್ಬರಿಗೂ ಬಹಳ ಮುಖ್ಯ ಏಕೆಂದರೆ ಪ್ರಾರಂಭಿಕ ರೋಗಪರೀಕ್ಷೆ ಮತ್ತು ಮಧ್ಯಪ್ರವೇಶ ದಂಪತಿಗಳಿಗೆ ಬಂಜೆತನದಿಂದ ಹೊರಬರಲು ಮತ್ತು ಅವರ ತಂದೆ ತಾಯಿಯರಾಗುವ ಕನಸು ನನಸಾಗಿಸಿಕೊಳ್ಳಲು ನೆರವಾಗುತ್ತದೆ. ಗರ್ಭಧಾರಣೆ ಯೋಜಿಸುತ್ತಿರುವ ಯಾರೇ ಆದರೂ ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಧೂಮಪಾನ ಹಾಗೂ ಮದ್ಯಪಾನ ತ್ಯಜಿಸುವುದು ಮತ್ತು ಸರಿಯಾದ ನಿದ್ರೆ ಮಾಡುವುದು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ.


fill up the form to get a
Free Consultation
Avail 0% interest on EMI
All Procedures | No Upper Limit
How we reviewed this article:
- Current Version
- May 19, 2023 by Oasis Fertility
- October 31, 2022 by Oasis Fertility
- October 28, 2022 by Oasis Fertility
- October 21, 2022 by Oasis Fertility