Blog
Uncategorized

ಎಚ್.ಎಸ್.ಜಿ. ಪರೀಕ್ಷೆ ಕುರಿತು ನೀವು ತಿಳಿಯಬೇಕಾದ ಪ್ರತಿಯೊಂದು ಅಂಶ ಎಚ್

Author: Dr. V Ramya, Consultant & Fertility Specialist

ಎಸ್.ಜಿ. ಪರೀಕ್ಷೆ ಎಂದರೇನು?

ಹಿಸ್ಟೆರೊಸಲ್ಪಿಂಗೊಗ್ರಾಮ್ ಎಂದೂ ಕರೆಯಲ್ಪಡುವ ಎಚ್.ಎಸ್.ಜಿ.ಪರೀಕ್ಷೆಯು ರೋಗಪರೀಕ್ಷೆಯ ಸಾಧನವಾಗಿದ್ದು ಅದು ಮಹಿಳಾ ಸಂತಾನೋತ್ಪಾದನೆಯ ಟ್ರಾಕ್ಟ್ ಅನ್ನು ಮೌಲ್ಯಮಾಪನ ಮಾಡುತ್ತದೆ. ಇದು ಗರ್ಭಕೋಶ ಮತ್ತು ಫಾಲೋಪಿಯನ್ ಟ್ಯೂಬ್ ಗಳಲ್ಲಿ ಯಾವುದೇ ಅಸಹಜತೆಗಳನ್ನು ಮೌಲ್ಯಮಾಪನ ಮಾಡಲು ಪರಿಣಾಮಕಾರಿ ವಿಧಾನವಾಗಿದೆ. ಇದು ಗರ್ಭಕೋಶಕ್ಕೆ ಕಾಂಟ್ರಾಸ್ಟ್ ಡೈ ಸೇರಿಸುವ ಮೂಲಕ ಕಡಿಮೆ ಪ್ರಮಾಣದ ಎಕ್ಸ್-ರೇಗಳು ಗರ್ಭಕೋಶದ ಕುಹರ ಮತ್ತು ಫಾಲೋಪಿಯನ್ ಟ್ಯೂಬ್ ಗಳ ಆಕಾರ ಮತ್ತು ರಚನೆ ಬಗ್ಗೆ ಒಳನೋಟಗಳನ್ನು ನೀಡುತ್ತದೆ.

ಎಚ್.ಎಸ್.ಜಿ. ಪರೀಕ್ಷೆಯನ್ನು ಏಕೆ ನಡೆಸಲಾಗುತ್ತದೆ?

ಗರ್ಭಕೋಶದ ಪರಿಸ್ಥಿತಿಗಳನ್ನು ಕಂಡುಕೊಳ್ಳಲು:

ಎಚ್.ಸಿ.ಜಿ. ಪರೀಕ್ಷೆಯನ್ನು ಬಂಜೆತನದ ರೋಗಪರೀಕ್ಷೆಯ ಭಾಗವಾಗಿ ಅನುವಂಶಿಕ ಗರ್ಭಕೋಶದ ಅಸಹಜತೆಗಳು, ಫೈಬ್ರಾಯಿಡ್ ಗಳು, ಗಡ್ಡೆಗಳು, ಪಾಲಿಪ್ ಗಳು, ಅಡ್ಹೆಷನ್ ಗಳು, ಕುಹರದಲ್ಲಿ ಗಾಯಗಳನ್ನು ಪರೀಕ್ಷಿಸಲು ನಡೆಸಲಾಗುತ್ತಿದ್ದು ಈ ರೋಗಲಕ್ಷಣಗಳು ಭ್ರೂಣ ಸೇರ್ಪಡಿಕೆ ಮತ್ತು ಅದರ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.

ಟ್ಯೂಬಲ್ ಲಿಗೇಷನ್ ಪ್ರಕ್ರಿಯೆಯ ಯಶಸ್ಸನ್ನು ಪರೀಕ್ಷಿಸಲು:

ಟ್ಯೂಬಲ್ ಲಿಗೇಷನ್ ಪ್ರಕ್ರಿಯೆಯ ನಂತರ ನಾಳಗಳು ಸಂಪೂರ್ಣವಾಗಿ ಬ್ಲಾಕ್ ಆಗಿವೆಯೇ ಎಂದು ದೃಢೀಕರಿಸಿಕೊಳ್ಳಲೂ ಇದನ್ನು ನಿರ್ವಹಿಸಲಾಗುತ್ತದೆ(ಗರ್ಭಧಾರಣೆಯನ್ನು ತಡೆಯಲು ಫಾಲೋಪಿಯನ್ ಟ್ಯೂಬ್ ಗಳನ್ನು ಕಟ್ಟುವ ಪ್ರಕ್ರಿಯೆ).

ಫಾಲೋಪಿಯನ್ ಟ್ಯೂಬ್ ಗಳಲ್ಲಿ ಅಡೆತಡೆಗಳನ್ನು ಪರೀಕ್ಷಿಸಲು:

ಬ್ಲಾಕ್ ಆಗಿರುವ ಫಾಲೋಪಿಯನ್ ಟ್ಯೂಬ್ ಗಳು ಮಹಿಳೆಯರಲ್ಲಿ ಬಂಜೆತನ ಉಂಟು ಮಾಡಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಫಾಲೋಪಿಯನ್ ಟ್ಯೂಬ್ ಗಳಲ್ಲಿನ ಅಡೆತಡೆಗಳು ಲೋಳೆ, ಜೀವಕೋಶದ ಕಸ, ಪಾಲಿಪ್ ಗಳು ಮತ್ತು ಫೈಬ್ರಾಯಿಡ್ ಗಳಿಂದ ಉಂಟಾಗುತ್ತದೆ. ಈ ಅಡೆತಡೆಗಳು ವೀರ್ಯವನ್ನು ಫಲೀಕರಣಕ್ಕೆ ಅಂಡಾಣುವನ್ನು ತಲುಪುವುದನ್ನು ತಡೆ ಹಿಡಿಯುತ್ತವೆ ಅಥವಾ ಫಲವಂತಿಕೆಯ ಅಂಡಾಣು ಭ್ರೂಣ ಸೇರ್ಪಡೆಗೆ ಗರ್ಭಕೋಶ ತಲುಪಲು ಸಾಧ್ಯವಿಲ್ಲ ಮತ್ತು ಇದರಿಂದ ಅಪಸ್ಥಾನೀಯ ಗರ್ಭಧಾರಣೆಯನ್ನು ಉಂಟು ಮಾಡಬಹುದು. ಡಿಂಬನಾಳಗಳಲ್ಲಿ ಈ ಅಡೆತಡೆಗಳನ್ನು ಎಚ್.ಎಸ್.ಜಿ. ಪರೀಕ್ಷೆಯ ಸಹಾಯದಿಂದ ಕಂಡುಕೊಳ್ಳಬಹುದು.

ಎಚ್.ಎಸ್.ಜಿ. ಪರೀಕ್ಷೆಗೆ ಹೇಗೆ ಸಿದ್ಧವಾಗಬೇಕು?

– ಎಚ್.ಎಸ್.ಜಿ. ಪರೀಕ್ಷೆಯನ್ನು ಮುಟ್ಟಿನ ಕೊನೆಯ ದಿನ ಮತ್ತು ಅಂಡೋತ್ಪತ್ತಿಯ ಮುನ್ನ ನಡೆಸಬೇಕು ಎಂದು ತಿಳಿಯುವುದು ಮುಖ್ಯವಾಗಿದೆ, ಅಂದರೆ ಋತುಚಕ್ರದ 5-10(ಈ ಅವಧಿಯು ಋತುಚಕ್ರದ ಅವಧಿ ಆಧರಿಸಿ ವ್ಯತ್ಯಾಸಗೊಳ್ಳಬಹುದು) ದಿನಗಳು.

– ಪರೀಕ್ಷೆಯ ದಿನ ಮತ್ತು ನಂತರ ಕುಹರದ ಸೋಂಕುಗಳನ್ನು ನಿವಾರಿಸಲು ಚಿಕಿತ್ಸೆಯ ಮುನ್ನ ಆಂಟಿ ಬಯೋಟಿಕ್ಸ್ ಸೂಚಿಸಲಾಗುತ್ತದೆ.

– ಈ ಚಿಕಿತ್ಸೆಯ ಮುನ್ನ ಅಸೌಖ್ಯ ಕಡಿಮೆ ಮಾಡಲು ಈ ಪ್ರಕ್ರಿಯೆಯ ಒಂದು ಗಂಟೆ ಮುನ್ನ ನೋವು ನಿವಾರಕ ತೆಗೆದುಕೊಳ್ಳಲು ಶಿಫಾರಸು ಮಾಡಲಾಗುತ್ತದೆ.

– ನೀವು ಅಯೋಡಿನ್ ಮತ್ತು ಬೆಟಾಡಿನ್ ಅಲರ್ಜಿ ಹೊಂದಿದ್ದರೆ ನಿಮ್ಮ ವೈದ್ಯರಿಗೆ ಮಾಹಿತಿ ನೀಡಿ. ಅಯೋಡಿನ್ ಇಲ್ಲದ ಕಾಂಟ್ರಾಸ್ಟ್ ಡೈಗಳನ್ನು ಈ ಪ್ರಕ್ರಿಯೆಗೆ ಬಳಸಬಹುದು. ಅಲ್ಲದೆ ನಿಮ್ಮ ವೈದ್ಯರು ನೀವು ಎಕ್ಸ್-ರೇಗೆ ಸಂವೇದನಾಶೀಲರಾಗಿದ್ದೀರಾ ಎಂದು ನಿಮ್ಮ ವೈದ್ಯರಿಗೆ ತಿಳಿಸಿ.

– ನೀವು ಗರ್ಭಧಾರಣೆ ಹೊಂದಿಲ್ಲ ಎಂದು ದೃಢೀಕರಿಸಿಕೊಳ್ಳಲು ಈ ಪ್ರಕ್ರಿಯೆಗೆ ಮುನ್ನ ಮೂತ್ರದ ಗರ್ಭಧಾರಣೆ ಪರೀಕ್ಷೆ ನಡೆಸಲಾಗುತ್ತದೆ.

– ಎಚ್.ಎಸ್.ಜಿ. ಪರೀಕ್ಷೆಯು ಡೇ-ಕೇರ್ ‍ಪ್ರಕ್ರಿಯೆಯಾಗಿದೆ ಮತ್ತು ಅದನ್ನು ನಿರ್ವಹಿಸಲು ಒಂದು ಗಂಟೆಗಿಂತ ಕಡಿಮೆ ಅವಧಿ ಸಾಕು.

– ಈ ಪ್ರಕ್ರಿಯೆಯ ನಂತರ ಮನೆಗೆ ಕರೆದೊಯ್ಯಲು ನಿಮ್ಮ ಜೊತೆ ಒಬ್ಬರು ಇರಲಿ.

ಎಚ್.ಎಸ್.ಜಿ ಪರೀಕ್ಷೆಯಿಂದ ಏನನ್ನು ನಿರೀಕ್ಷಿಸಬಹುದು?

ಈ ಅಡ್ಡ ಪರಿಣಾಮಗಳು ಈ ಪ್ರಕ್ರಿಯೆಯ ಕೆಲ ದಿನಗಳ ಒಳಗಡೆ ಸಾಮಾನ್ಯವಾಗಿ ಪರಿಹಾರವಾಗುತ್ತವೆ ಎಂದು ನೆನಪಿನಲ್ಲಿರಿಸಿಕೊಳ್ಳುವುದು ಮುಖ್ಯವಾಗಿದೆ.

– ಶ್ರೋಣಿಯ ಸ್ಥಳದಲ್ಲಿ ಕೊಂಚ ಅಸೌಖ್ಯದ ಭಾವನೆ ಅನುಭವಿಸಬಹುದು(ನೋವು ಇದ್ದರೆ ನಿಮ್ಮ ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಿ)

– ಹೊಟ್ಟೆನೋವು ಅಥವಾ ಹಿಂಡುವಿಕೆ

– ಯೋನಿಯಿಂದ ಅಂಟಿನಂತಹ ವಿಸರ್ಜನೆ(ಡೈ ಬಳಕೆಯಿಂದ)

– ಕೊಂಚ ರಕ್ತಸ್ರಾವ ಅಥವಾ ಗುರುತುಗಳು

– ತಲೆ ತಿರುಗುವಿಕೆ

– ವಾಕರಿಕೆ

ಎಚ್.ಎಸ್.ಜಿ.ಪರೀಕ್ಷೆಯ ತೊಂದರೆಗಳೇನು?

ಎಚ್.ಎಸ್.ಜಿ. ಪರೀಕ್ಷೆಯ ಅತ್ಯಂತ ಸುರಕ್ಷಿತ, ಆದರೆ ಅಪರೂಪದ ಸಂಕೀರ್ಣತೆಗಳಲ್ಲಿ:

– ಕಾಂಟ್ರಾಸ್ಟ್ ಡೈನಿಂದ ಅಲರ್ಜಿಯ ಪರಿಣಾಮ

– ಗರ್ಭಕೋಶ ಮತ್ತು ಡಿಂಬನಾಳಗಳಲ್ಲಿ ಸೋಂಕು

– ಗರ್ಭಕೋಶದಲ್ಲಿ ರಂಧ್ರ

– ಕೊಂಚ ಪ್ರಮಾಣದ ಅಸಹಜ ರಕ್ತಸ್ರಾವ(ಇದು ಕೆಲ ಗಂಟೆಗಳವರೆಗೆ ಉಳಿದಿದ್ದರೆ ಮತ್ತು ಮುಟ್ಟಿಗಿಂತ ಹೆಚ್ಚಾಗಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ)

– ಜ್ವರ ಅಥವಾ ಚಳಿ

ಎಚ್.ಎಸ್.ಜಿ.ಯು ನೋವಿನ ಪ್ರಕ್ರಿಯೆಯೇ?

ಎಚ್.ಎಸ್.ಜಿ ಪರೀಕ್ಷೆಯು ಬಹುತೇಕ ನೋವುರಹಿತವಾಗಿರುತ್ತದೆ ಮತ್ತು ಮಹಿಳೆಯಿಂದ ಮಹಿಳೆಗೆ ಅವರ ನೋವು ತಡೆಯುವ ಶಕ್ತಿ ಆಧರಿಸಿ ಅನುಭವ ವ್ಯತ್ಯಾಸಗೊಳ್ಳಬಹುದು. ಕೆಲ ಮಹಿಳೆಯರಲ್ಲಿ ಇದು ಕೊಂಚ ಅಸೌಖ್ಯ ಉಂಟು ಮಾಡಬಹುದು. ಯೋನಿಯ ಮೂಲಕ ಡೈ ಅನ್ನು ಗರ್ಭಕೋಶ ಮತ್ತು ಡಿಂಬನಾಳಗಳಿಗೆ ಸೇರಿಸಲಾಗುತ್ತದೆ. ಕೆಲ ಮಹಿಳೆಯರಲ್ಲಿ ಡೈ ಇಂಜೆಕ್ಟ್ ಮಾಡುವುದರಿಂದ ಕೊಂಚ ಹಿಂಡುವಿಕೆ ಉಂಟಾಗಬಹುದು. ಈ ಅಸೌಖ್ಯ ನಿವಾರಿಸಲು ನೋವು ನಿವಾರಕ ಔಷಧಗಳು ನೆರವಾಗುತ್ತವೆ.

ಎಚ್.ಎಸ್.ಜಿ. ಪರೀಕ್ಷೆಯನ್ನು ಯಾರು ತಪ್ಪಿಸಬೇಕು?

ಮಹಿಳೆಯರು ಈ ಪರಿಸ್ಥಿತಿಯಲ್ಲಿ ಎಚ್.ಎಸ್.ಜಿ. ಪರೀಕ್ಷೆಗೆ ಒಳಪಡುವುದನ್ನು ತಡೆಯಬೇಕು

– ಗರ್ಭಧಾರಣೆ

– ಶ್ರೋಣಿಯ ಉರಿಯೂತದ ರೋಗ(ಪಿಐಡಿ)

– ವಿವರಿಸಲಾಗದ ಯೋನಿಯ ರಕ್ತಸ್ರಾವ

ಎಚ್.ಎಸ್.ಜಿ. ಪರೀಕ್ಷೆಯ ಫಲಿತಾಂಶಗಳ ವಿವರಣೆ

ನಿಮ್ಮ ಫರ್ಟಿಲಿಟಿ ತಜ್ಞರು ಸ್ಕ್ಯಾನ್ ಚಿತ್ರಗಳ ಮೌಲ್ಯಮಾಪನ ಮಾಡುತ್ತಾರೆ ಮತ್ತು ಚಿಕಿತ್ಸೆಯ ಮುಂದಿನ ಹಂತಗಳು ಫಲಿತಾಂಶಗಳನ್ನು ಆಧರಿಸಿರುತ್ತದೆ. ವರದಿಯು ಡಿಂಬನಾಳಗಳಲ್ಲಿ ತಡೆಯನ್ನು ತೋರಿಸಿದರೆ ಈ ಸಮಸ್ಯೆಯನ್ನು ಮತ್ತಷ್ಟು ಪರೀಕ್ಷಿಸಲು ಲ್ಯಾಪರೊಸ್ಕೊಪಿ ನಡೆಸಲಾಗುತ್ತದೆ ಅಥವಾ ಇನ್ ವಿಟ್ರೊ ಫರ್ಟಿಲೈಸೇಷನ್(ಐವಿಎಫ್) ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.

ಎಚ್.ಎಸ್.ಜಿ. ಪರೀಕ್ಷೆಯು ಗರ್ಭಧಾರಣೆಯ ಸಾಧ್ಯತೆಗಳನ್ನು ಸುಧಾರಿಸಬಹುದೇ?

ಕೆಲ ಪ್ರಕರಣಗಳಲ್ಲಿ ಎಚ್.ಎಸ್.ಜಿ. ಪರೀಕ್ಷೆಯು ದಂಪತಿಗಳಲ್ಲಿ ಗರ್ಭಧಾರಣೆಯ ಸಾಧ್ಯತೆಗಳನ್ನು ಪರೋಕ್ಷವಾಗಿ ಹೆಚ್ಚಿಸಬಹುದು. ಈ ಪ್ರಕ್ರಿಯೆಯ ನಂತರ 3 ತಿಂಗಳವರೆಗೆ ಪ್ರಯತ್ನಿಸುವುದು ಸುರಕ್ಷಿತ. ಅಂತಹ ಪ್ರಕರಣಗಳಲ್ಲಿ ಈ ಪ್ರಕ್ರಿಯೆಗೆ ಬಳಸಿದ ಕಾಂಟ್ರಾಸ್ಟ್ ಡೈ(ಅಯೋಡಿನ್) ಡಿಂಬನಾಳಕ್ಕೆ ಅಡ್ಡಿಯಾಗಿರುವ ಮತ್ತು ಗರ್ಭಧಾರಣೆಯನ್ನು ತಡೆಯುವ ಲೋಳೆಯನ್ನು ಅಥವಾ ಇತರೆ ಜೀವಕೋಶದ ಕಸವನ್ನು ನಿವಾರಿಸಲು ನೆರವಾಗುತ್ತದೆ. ಇದು ಕೊಂಚ ಅಡ್ಡ ಪರಿಣಾಮ ಹೊಂದಿದ್ದರೂ ಇದು ಅಗತ್ಯ ಫಲಿತಾಂಶವಲ್ಲದೇ ಇರಬಹುದು ಎನ್ನುವುದನ್ನು ತಿಳಿಯಬೇಕು.

ಎಚ್.ಎಸ್.ಜಿ. ಪರೀಕ್ಷೆ ಏಕೈಕ ಆಯ್ಕೆಯೇ?

ಲ್ಯಾಪರೊಸ್ಕೊಪಿ ಮತ್ತು ಹಿಸ್ಟೆರೊಸ್ಕೊಪಿಯಂತಹ ಇತರೆ ಚಿಕಿತ್ಸೆಗಳಿವೆ. ಅವುಗಳನ್ನು ಗರ್ಭಾಶಯದ ಕುಹರದದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರೀಕ್ಷಿಸಲು ಬಳಸಲಾಗುತ್ತದೆ ಆದರೆ ಅವುಗಳು ಡಿಂಬನಾಳಗಳಲ್ಲಿ ತಡೆಯಿರುವ ಯಾವುದೇ ಮಾಹಿತಿ ನೀಡುವುದಿಲ್ಲ.

ಎಚ್.ಎಸ್.ಜಿ.ಪರೀಕ್ಷೆಯನ್ನು ಪುನರಾವರ್ತಿತ ಗರ್ಭಪಾತಗಳು ಮತ್ತು ಅಸಹಜ ರಕ್ತಸ್ರಾವದ ಪ್ರಕರಣಗಳಲ್ಲಿಯೂ ಪರಿಗಣಿಸಲಾಗುತ್ತದೆ.

Write a Comment

BOOK A FREE CONSULTATION