
ಮಹಿಳೆಯರಲ್ಲಿ ಫಲವಂತಿಕೆ ಹೆಚ್ಚಿಸಲು ಫರ್ಟಿಲಿಟಿ ಡಯೆಟ್

Author: S. Flora Amritha, Dietician
ಮಹಿಳೆಯರಲ್ಲಿ ಬಂಜೆತನ ಸವಾಲಿನ ಅನುಭವವಾಗಿದೆ. ಫರ್ಟಿಲಿಟಿ ಚಿಕಿತ್ಸೆಗಳಲ್ಲಿ ಸಾಕಷ್ಟು ಸುಧಾರಣೆಗಳು ಬಂದಿದ್ದರೂ ಅಸಿಸ್ಟೆಡ್ ರೀಪ್ರೊಡಕ್ಟಿವ್ ತಂತ್ರಜ್ಞಾನದ ಚಿಕಿತ್ಸೆಯ ಕಠಿಣ ಪ್ರಕ್ರಿಯೆ ಸರಳೀಕರಿಸಲು ಬಹಳ ಕಡಿಮೆ ನೆರವಾಗುವ ಸಮಗ್ರ ವಿಧಾನಗಳು ಸ್ವಲ್ಪಮಟ್ಟಿಗೆ ನೆರವಾಗುತ್ತವೆ. ಅಂತಹ ಒಂದು ವಿಧಾನವೆಂದರೆ ಮಹಿಳೆಯರಲ್ಲಿ ಫಲವಂತಿಕೆ ಸುಧಾರಿಸಲು ಪಥ್ಯದ ಬಳಕೆ. ಇತ್ತೀಚೆಗೆ ಬಹಳ ಸದ್ದು ಮಾಡುತ್ತಿರುವ ಹೊಸ ಪ್ರವೃತ್ತಿ ಎಂದರೆ “ಫರ್ಟಿಲಿಟಿ ಡಯೆಟ್” ಪರಿಕಲ್ಪನೆಯಾಗಿದೆ. ಅದನ್ನು ಆವಿಷ್ಕರಿಸುವ ಮುನ್ನ ಪಥ್ಯ ಮತ್ತು ಫಲವಂತಿಕೆ ನಡುವಿನ ಸಂಪರ್ಕವನ್ನು ತಿಳಿಯುವುದು ಮತ್ತು ಫಲವಂತಿಕೆ ಸುಧಾರಿಸಲು ಅದು ಯಾವ ಪಾತ್ರ ವಹಿಸುತ್ತದೆ ಎಂದು ಅರಿಯುವುದು ಮುಖ್ಯ.
ಪಥ್ಯ ಮತ್ತು ಫಲವಂತಿಕೆಯ ನಡುವಿನ ಸಂಪರ್ಕ:
ಹಲವು ಅಧ್ಯಯನಗಳು ಪಥ್ಯ ಮತ್ತು ಫಲವಂತಿಕೆಯ ನಡುವಿನ ಸಂಪರ್ಕಗಳನ್ನು ಮೌಲ್ಯಮಾಪನ ಮಾಡಿವೆ.
ಪಥ್ಯದಲ್ಲಿ ಬದಲಾವಣೆಗಳನ್ನು ಅಳವಡಿಸುವುದು ಮಹಿಳೆಯರ ಫಲವಂತಿಕೆಯನ್ನು ಸುಧಾರಿಸುತ್ತದೆ ಎಂದು ಹಲವು ವರ್ಷಗಳಿಂದ ತಿಳಿಯಲಾಗಿದೆ. ಪಥ್ಯ ಮತ್ತು ಫಲವಂತಿಕೆಗಳು ಜೊತೆ ಜೊತೆಯಾಗಿ ನಡೆದರೂ ಅದರ ಸಕಾರಾತ್ಮಕ ಪರಿಣಾಮವು ಬಂಜೆತನಕ್ಕೆ ತಕ್ಷಣ “ಚಿಕಿತ್ಸೆ” ನೀಡುವುದಲ್ಲ ಮತ್ತು ರಾತ್ರಿ ಕಳೆದು ಬೆಳಗಾಗುವುದರಲ್ಲಿ ಫಲಿತಾಂಶಗಳನ್ನು ನೀಡುವುದಿಲ್ಲ.
ಈ ಕೆಳಕಂಡ ವಿಟಮಿನ್ ಗಳು ಮತ್ತು ಪೋಷಕಾಂಶಗಳ ಸಮತೋಲನದ ಮೀಲ್ ಪ್ಲಾನ್ ಗರ್ಭ ಧರಿಸಲು ಯೋಜಿಸುತ್ತಿರುವ ಮಹಿಳೆಯರಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
– ಫೊಲಿಕ್ ಆಮ್ಲ
– ವಿಟಮಿನ್ ಬಿ12
– ಒಮೇಗಾ- 3 ಫ್ಯಾಟಿ ಆಮ್ಲಗಳು
ಅತ್ಯುತ್ತಮ ಫಲಿತಾಂಶಗಳಿಗೆ ನಿಮ್ಮ ಸಂಗಾತಿಯನ್ನೂ ಈ ಯೋಜನೆಯಲ್ಲಿ ತೊಡಗಿಸಿ ಮತ್ತು ಆರೋಗ್ಯಕರ ಜೀವನಶೈಲಿ ಫಲಿತಾಂಶ ನೀಡುವುದನ್ನು ಕಾಣಿರಿ.
ಫರ್ಟಿಲಿಟಿ ಡಯೆಟ್ ಎಂದರೇನು? ಫರ್ಟಿಲಿಟಿ ಡಯೆಟ್ ಎಂದರೆ ಸುಧಾರಿತ ಭೋಜನ ಯೋಜನೆ. ಇದು ಮಹಿಳೆಯರಲ್ಲಿ ಫಲವಂತಿಕೆ ಸುಧಾರಿಸುವ ಪಥ್ಯವಾಗಿದ್ದು ಅದನ್ನು ಅಗತ್ಯ ವಿಟಮಿನ್ ಗಳು, ಮಿನರಲ್ ಗಳು, ಕಾರ್ಬ್ ಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮತೋಲನಗೊಳಿಸಲಾಗುತ್ತದೆ. ಇದು ಗರ್ಭಧಾರಣೆ ಮತ್ತು ಆರೋಗ್ಯಕರ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ನೀವು ಹೇಗೆ ಫರ್ಟಿಲಿಟಿ ಡಯೆಟ್ ಯೋಜನೆ ಸುಧಾರಿಸುವುದು ಎನ್ನುವುದು ಇಲ್ಲಿದೆ.
– ಹೆಚ್ಚು ಆರೋಗ್ಯಕರ ಕೊಬ್ಬುಗಳನ್ನು(ತುಪ್ಪ, ಅವಕಾಡೊ ಇತ್ಯಾದಿ) ಸೇರಿಸಿ, ಸಂಸ್ಕರಿಸಿದ ಕೊಬ್ಬುಗಳು(ಉದಾ: ಚೀಸ್) ತಪ್ಪಿಸಿ.
– ನಿಮ್ಮ ಪ್ಲೇಟ್ ನಲ್ಲಿ ಹೆಚ್ಚು ತರಕಾರಿಗಳು, ಹಣ್ಣುಗಳು ಮತ್ತು ಸಸ್ಯಜನ್ಯ ಪ್ರೊಟೀನ್(ಕಡಲೆ, ಶೇಂಗಾ ಇತ್ಯಾದಿ) ಇರಲಿ. ಕೆಂಪು ಮಾಂಸಗಳ ಸೇವನೆ ಮಿತಗೊಳಿಸಿ.
– ಕಾರ್ಬ್ ಗಳು ಅಷ್ಟೊಂದು ಕೆಟ್ಟವಲ್ಲ. ಹೆಚ್ಚಿನ ನಾರಿನಂಶ ಮತ್ತು ಲೋ-ಗ್ಲೈಸೆಮಿಕ್ ಇಂಡೆಕ್ಸ್(ದ್ವಿದಳ ಧಾನ್ಯಗಳು) ಇರುವ ಆಹಾರ ಸೇವಿಸಿ. ಸಂಸ್ಕರಿಸಿದ ಅಥವಾ ಸರಳ ಕಾರ್ಬ್ ಗಳಿಂದ ನೀವು ದೂರವಿರಬೇಕು.
– ಕಬ್ಬಿಣದ ಸಸ್ಯಾಹಾರಿ ಮೂಲಗಳಾದ ಬೀನ್ಸ್, ಬೇಳೆ, ಟೋಫು, ದಟ್ಟ ಹಸಿರು ಸೊಪ್ಪುಗಳು, ದ್ವಿದಳ ಧಾನ್ಯಗಳು, ಬೀಜಗಳು ಮತ್ತು ನಟ್ ಗಳು ಹಾಗೂ ಕಡಿಮೆ ಕೊಬ್ಬಿನ ಡೈರಿ(ಸ್ಕಿಮ್ ಅಥವಾ ಟೋನ್ಡ್ ಹಾಲು ಮತ್ತು ದಧಿ) ಇರಲಿ.
– ನಿಮ್ಮ ದಿನಚರಿಯಲ್ಲಿ ಫೊಲಿಕ್ ಆಮ್ಲದ ಪೂರಕಗಳಿರಲಿ.
“ಫರ್ಟಿಲಿಟಿ ಡಯೆಟ್” ಕೆಲಸ ಮಾಡುತ್ತದೆಯೇ?
ಫರ್ಟಿಲಿಟಿ ಉತ್ತೇಜಿಸುವ ಆಹಾರಗಳು ಸಂತಾನೋತ್ಪಾದನೆಯ ವ್ಯವಸ್ಥೆಯ ಆರೋಗ್ಯಕರ ಕಾರ್ಯ ನಿರ್ವಹಣೆಗೆ ಅಗತ್ಯವಾಗಿದ್ದು ಅದು ಫಲವಂತಿಕೆ ಮತ್ತು ಗರ್ಭಧಾರಣೆಯ ಮೇಲೆ ಋಣಾತ್ಮಕ ಪರಿಣಾಮ ಬೀರುವ ತೂಕದ ಸಮಸ್ಯೆಗಳನ್ನು ಮತ್ತು ಯಾವುದೇ ಪೌಷ್ಠಿಕತೆಯ ಕೊರತೆಗಳನ್ನು ನಿರ್ವಹಿಸಲು ನೆರವಾಗುತ್ತವೆ.
ಫರ್ಟಿಲಿಟಿ ಡಯೆಟ್ ಪ್ರಸವಪೂರ್ವ ಪೌಷ್ಠಿಕತೆಗೆ ಅಗತ್ಯವಾದ ಗರಿಷ್ಠ ಮಟ್ಟದ ಪೌಷ್ಠಿಕತೆಯ ಮಟ್ಟಗಳನ್ನು ಕಾಪಾಡಲು ಕೂಡಾ ನೆರವಾಗುತ್ತದೆ.



fill up the form to get a
Free Consultation
Avail 0% interest on EMI
All Procedures | No Upper Limit
How we reviewed this article:
- Current Version
- November 19, 2024 by Oasis Fertility
- January 29, 2024 by Oasis Fertility
- January 11, 2024 by Oasis Fertility
- January 8, 2024 by Oasis Fertility