Blog
BOOK A FREE CONSULTATION
Uncategorized

ಕ್ಯಾನ್ಸರ್ ರೋಗಿಗಳು ಹೇಗೆ ಆರೋಗ್ಯಕರ ಪಾಲಕತ್ವ ಹೊಂದಬಹುದು?

ಕ್ಯಾನ್ಸರ್ ರೋಗಿಗಳು ಹೇಗೆ ಆರೋಗ್ಯಕರ ಪಾಲಕತ್ವ ಹೊಂದಬಹುದು?

ಕ್ಯಾನ್ಸರ್ ರೋಗ ಪತ್ತೆಯಾಗುವುದು ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಹಣಕಾಸು ಪರಿಸ್ಥಿತಿಯನ್ನು ಬಿಕ್ಕಟ್ಟಿಗೆ ದೂಡಿ ಜೀವನವನ್ನು ಅಪಾರ ಸಂಕಷ್ಟಕ್ಕೆ ದೂಡಿ ವಿನಾಶ ತರಬಲ್ಲದು. ಬಹಳಷ್ಟು ಮಂದಿಗೆ ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಗಳಾದ ರೇಡಿಯೇಷನ್, ಮತ್ತು ಕಿಮೋಥೆರಪಿಯಂತಹ ಚಿಕಿತ್ಸೆಗಳು ಕೂಡಾ ಪುರುಷ ಹಾಗೂ ಮಹಿಳೆಯರ ಫಲವಂತಿಕೆಗೆ ಹಾನಿಯುಂಟು ಮಾಡಬಲ್ಲದು ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಸುಧಾರಿತ ಫರ್ಟಿಲಿಟಿ ಚಿಕಿತ್ಸೆಯ ಆಯ್ಕೆಗಳಾದ ಫರ್ಟಿಲಿಟಿ ಸಂರಕ್ಷಣೆಯು ವ್ಯಕ್ತಿಯ ಫಲವಂತಿಕೆಗೆ ಭರವಸೆಯ ಬೆಳಕಾಗಿದ್ದು ಅದು ವ್ಯಕ್ತಿಯ ಫಲವಂತಿಕೆಯನ್ನು ಸಂರಕ್ಷಿಸುತ್ತದೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಭವಿಷ್ಯದಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ಅವರ ಕುಟುಂಬಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡುತ್ತವೆ. ಕ್ಯಾನ್ಸರ್ ನಂತರವೂ ಪಾಲಕತ್ವದ ಸಾಧ್ಯತೆಯ ಅರಿವು ಈಗ ಮತ್ತಷ್ಟು ಮುಖ್ಯವಾಗಿದೆ.

ಕ್ಯಾನ್ಸರ್ ಹೇಗೆ ಫಲವಂತಿಕೆಗೆ ಪರಿಣಾಮ ಬೀರುತ್ತದೆ? 

  1. ಈ ರೋಗವು ದೇಹದಲ್ಲಿ ಅಂಡೋತ್ಪತ್ತಿಗೆ ಅಗತ್ಯವಾಗಿರುವ ಹಾರ್ಮೋನುಗಳನ್ನು ಛಿದ್ರಗೊಳಿಸುವ ಮೂಲಕ ಬದಲಾವಣೆ ಉಂಟು ಮಾಡಬಲ್ಲದು ಮತ್ತು ಸಂತಾನೋತ್ಪಾದನೆಯ ಅಂಗಗಳ ಮೇಲೆ ಒತ್ತಡ ಹೇರಿ ಫಲವಂತಿಕೆಯನ್ನು ಕುಗ್ಗಿಸುತ್ತದೆ.
  2. ಕ್ಯಾನ್ಸರ್ ಶಸ್ತ್ರಚಿಕಿತ್ಸೆ: ಚಿಕಿತ್ಸೆಯ ಭಾಗವಾಗಿ ಅಂಡಾಶಯ, ಗರ್ಭಕೋಶ ಅಥವಾ ವೃಷಣಗಳನ್ನು ತೆಗೆದು ಹಾಕಿದರೆ ಅದು ಗರ್ಭಧಾರಣೆಯ ಸಾಮರ್ಥ್ಯಕ್ಕೆ ಹಾನಿಯುಂಟು ಮಾಡಬಲ್ಲದು.
  3. ರೇಡಿಯೇಷನ್: ಪ್ರಮಾಣ, ಅವಧಿ ಮತ್ತು ರೇಡಿಯೇಷನ್ ತಾಣವನ್ನು ಆಧರಿಸಿ ವ್ಯಕ್ತಿಯು ಅಂಡಾಶಯದಲ್ಲಿ ಅಂಡಾಣುಗಳನ್ನು ಕಳೆದುಕೊಳ್ಳಬಹುದು ಇದು ಅವಧಿಪೂರ್ವ ಅಂಡಾಶಯದ ವೈಫಲ್ಯಕ್ಕೆ ಕಾರಣವಾಗುತ್ತದೆ ಅಥವಾ ವೃಷಣದಿಂದ ವೀರ್ಯ ನಷ್ಟವು ಅಝೂಸ್ಪರ್ಮಿಯಾ ಉಂಟು ಮಾಡುತ್ತದೆ.
  4. ಕಿಮೋಥೆರಪಿ: ಕಿಮೋಥೆರಪಿಯಲ್ಲಿ ಬಳಸುವ ಹಲವಾರು ಔಷಧಗಳು ಜನನಾಂಗಗಳಿಗೆ ಹಾನಿಕಾರಕ ಮತ್ತು ಸೈಕ್ಲೊಫಾಸ್ಫಮೈಡ್ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಈ ಔಷಧಗಳು ಅಂಡಾಣುಗಳನ್ನು ನಾಶ ಮಾಡಬಲ್ಲವು ಮತ್ತು ಮಹಿಳೆಯರಲ್ಲಿ ಫಾಲಿಕಲೀಯ ಸಂಗ್ರಹ ಕುಸಿಯುವಂತೆ ಮಾಡಬಲ್ಲವು. ಇದು ವೀರ್ಯಾಣುಗಳ ಅಥವಾ ಸೂಕ್ಷ್ಮಾಣು ಕೋಶಗಳ ಕುಸಿತಕ್ಕೆ ಕಾರಣವಾಗಿ ಫಲವಂತಿಕೆ ಕುಸಿಯಬಹುದು.
  5. ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಯು ಕೂಡಾ ಮಹಿಳೆಯರಲ್ಲಿ ಋತುಚಕ್ರದ ಅಡೆತಡೆಗಳಿಗೆ ಹಾನಿಯುಂಟು ಮಾಡಬಲ್ಲದು ಮತ್ತು ಪುರುಷರಲ್ಲಿ ಲೈಂಗಿಕ ಕಾರ್ಯದ ನಿಷ್ಕ್ರಿಯತೆಯು ಯಶಸ್ವಿಯಾಗಿ ಗರ್ಭಧಾರಣೆಯ ಅವಕಾಶಗಳನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
  6. ವಯಸ್ಸು: ಕಿಮೋಥೆರಪಿ ಮತ್ತು ರೇಡಿಯೇಷನ್ ನಿಂದ ರೋಗಪರೀಕ್ಷೆ ಮತ್ತು ಚಿಕಿತ್ಸೆಯ ಸಂದರ್ಭದಲ್ಲಿ ಹೆಚ್ಚಾದ ವಯಸ್ಸಿನಿಂದ ಜನನಾಂಗದ ಹಾನಿ ಹೆಚ್ಚಿಸಬಲ್ಲದು.

ಫಲವಂತಿಕೆಯ ಸಂರಕ್ಷಣೆ- ತಂದೆ ತಾಯಿಯರಾಗಲು ಅವಕಾಶ: 

ಫಲವಂತಿಕೆಯ ಸಂರಕ್ಷಣೆ ಎನ್ನುವುದು ಅಂಡಾಣುಗಳು, ವೀರ್ಯಾಣುಗಳು, ಭ್ರೂಣಗಳು, ಅಂಡಾಶಯದ ಅಥವಾ ವೃಷಣದ ಜೀವಕೋಶವನ್ನು ಭವಿಷ್ಯದ ಬಳಕೆಗೆ ಸಂರಕ್ಷಿಸಲಾಗುತ್ತದೆ(ಅತ್ಯಂತ ಕಡಿಮೆ ಉಷ್ಣತೆ -196 ಡಿಗ್ರಿ ಸೆಲ್ಷಿಯಸ್ ನಲ್ಲಿ ದ್ರವ ಸಾರಜನಕದಲ್ಲಿ ಸಂಗ್ರಹಿಸಲಾಗುತ್ತದೆ). ಕ್ಯಾನ್ಸರ್ ಚಿಕಿತ್ಸೆ ಪೂರ್ಣಗೊಂಡ ನಂತರ ಪುರುಷ ಅಥವಾ ಮಹಿಳೆ ಅಥವಾ ದಂಪತಿಯು ಗರ್ಭಧಾರಣೆಗೆ ಸಿದ್ಧವಾಗಿದ್ದರೆ ಶೈತ್ಯೀಕರಿಸಿದ ಅಂಡಾಣುಗಳು/ವೀರ್ಯಗಳು/ಭ್ರೂಣಗಳನ್ನು ಕರಗಿಸಬಹುದು ಮತ್ತು ಗರ್ಭಧಾರಣೆ ಪಡೆಯಲು ಐವಿಎಫ್ ನಡೆಸಬಹುದು.

ಫಲವಂತಿಕೆ ಸಂರಕ್ಷಣೆಯ ವಿಧಗಳು:  

ಎ. ಭ್ರೂಣದ ಕ್ರಯೋಸಂರಕ್ಷಣೆ:  

ಇದರಲ್ಲಿ ಅಂಡಾಶಯದ ಪ್ರಚೋದನೆ ಮಾಡುವ ಅಥವಾ ಇಲ್ಲದೆ ಪಕ್ವವಾದ ಅಂಡಾಣುಗಳನ್ನು ಮಹಿಳೆಯರಿಂದ ಪಡೆಯಲಾಗುತ್ತದೆ ಮತ್ತು ವೀರ್ಯದೊಂದಿಗೆ ಐವಿಎಫ್ ಮೂಲಕ ಫಲವಂತಿಕೆ ನೀಡಲಾಗುತ್ತದೆ. ಫಲವಂತಿಕೆಯ ನಂತರ ದೊರೆತ ಭ್ರೂಣವನ್ನು ಶೈತ್ಯೀಕರಿಸಲಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆ ಪೂರ್ಣಗೊಂಡ ನಂತರ ಮತ್ತು ಮಹಿಳೆ ಗರ್ಭಧಾರಣೆಗೆ ಸಿದ್ಧವಾದಾಗ ಶೈತ್ಯೀಕರಿಸಿದ ಭ್ರೂಣವನ್ನು ಕರಗಿಸಲಾಗುತ್ತದೆ ಮತ್ತು ಮಹಿಳೆಯ ಗರ್ಭಕೋಶಕ್ಕೆ ಸೇರಿಸುವ ಮೂಲಕ ಆಕೆಗೆ ತಾಯ್ತನ ಹೊಂದಲು ಸನ್ನದ್ಧವಾಗಿಸುತ್ತದೆ. ಈ ವಿಧಾನದಲ್ಲಿ ಗರ್ಭಧಾರಣೆ ಸಾಧಿಸಲು ಅತ್ಯುತ್ತಮಅವಕಾಶವಿದೆ.

ಬಿ. ವೀರ್ಯದ ಶೈತ್ಯೀಕರಣ:  

ಕ್ಯಾನ್ಸರ್ ನಿಂದ ಬಾಧಿತ ಪುರುಷರಿಗೆ ವೀರ್ಯವನ್ನು ಚಿಕಿತ್ಸೆ ಪ್ರಾರಂಭವಾಗುವ ವೀರ್ಯವನ್ನು ಪಡೆದುಕೊಳ್ಳಲಾಗುತ್ತದೆ ಮತ್ತು ನಂತರದ ಬಳಕೆಗೆ ಶೈತ್ಯೀಕರಿಸಲಾಗುತ್ತದೆ. ಪ್ರಸವಪೂರ್ವದಲ್ಲಿ ಬಾಲಕರಲ್ಲಿ ಜೀವಕೋಶವನ್ನು ಶೈತ್ಯೀಕರಿಸಬಹುದು ಅದನ್ನು ನಂತರ ಜೋಡಿಸಬಹುದು ಮತ್ತು ಎ.ಆರ್.ಟಿ. ಬಳಸಿ ವೀರ್ಯವನ್ನು ಹೊರತೆಗೆಯಬಹುದು.

ಸಿ. ಅಂಡಾಣು ಕ್ರಯೋಸಂರಕ್ಷಣೆ:  

ರೋಗಪರೀಕ್ಷೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ನಡುವಿನ ಲಭ್ಯವಿರುವ ಸಮಯದ ಯಾವುದೇ ಸಂದರ್ಭದಲ್ಲಿ ಇದನ್ನು ನಡೆಸಬಹುದು. ರೋಗಿಯ ವಯಸ್ಸು, ಋತುಚಕ್ರದ ಆವರ್ತ ಮತ್ತು ಕ್ಯಾನ್ಸರ್ ವಿಧವನ್ನು ಚಿಕಿತ್ಸೆಯ ವಿಧಾನ ಯೋಜಿಸುವಾಗ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸಾಧ್ಯವಿದ್ದಲ್ಲಿ, ಹಾರ್ಮೋನು ಇಂಜೆಕ್ಷನ್ ಗಳ‍ನ್ನು ನೀಡುವ ಮೂಲಕ ಅಂಡಾಶಯದ ಕೋಶಕಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಅದರಲ್ಲಿ ಅಂಡಾಣುಗಳನ್ನು ಕ್ಯಾನ್ಸರ್ ಚಿಕಿತ್ಸೆಗೆ ಮುನ್ನ ಪಡೆಯಲಾಗುತ್ತದೆ ಮತ್ತು ಅವುಗಳನ್ನು ಶೈತ್ಯೀಕರಿಸಲಾಗುತ್ತದೆ. ಈ ಶೈತ್ಯೀಕರಿಸಿದ ಅಂಡಾಣುಗಳನ್ನು ನಂತರ ಕರಗಿಸಿ ವೀರ್ಯದೊಂದಿಗೆ ಫಲವಂತಿಕೆ ಮೂಡಿಸಿ ಆಕೆಗೆ ಗರ್ಭಧಾರಣೆ ಬಯಸುವ ಸಮಯದಲ್ಲಿ ನೀಡಲಾಗುತ್ತದೆ.

ಡಿ. ಅಂಡಾಶಯದ ಜೀವಕೋಶದ ಕ್ರಯೋಸಂರಕ್ಷಣೆ:  

ಇಲ್ಲಿ ಇಡೀ ಅಂಡಾಶಯದ ಭಾಗವನ್ನು ಹೊರ ತೆಗೆಯಲಾಗುತ್ತದೆ ಮತ್ತು ಶೈತ್ಯೀಕರಿಸಲಾಗುತ್ತದೆ. ಇದು ಪ್ರಸವಪೂರ್ವ ಬಾಲಕಿಯರಲ್ಲಿ ಉಪಯುಕ್ತವಾಗಿದೆ ಮತ್ತು ಮಹಿಳೆಯರಲ್ಲಿ ಅಂಡಾಶಯದ ಪ್ರಚೋದನೆಯು ಹಲವಾರು ಕಾರಣಗಳಿಂದ ಸಾಧ್ಯವಿಲ್ಲ. ಚಿಕಿತ್ಸೆ ಪೂರ್ಣಗೊಂಡ ನಂತರ ಮತ್ತು ಮಹಿಳೆ ಗರ್ಭಧಾರಣೆಗೆ ಸಿದ್ಧವಾದ ನಂತರ ಅಂಡಾಶಯದ ಜೀವಕೋಶವನ್ನು ಶ್ರೋಣಿಯ ಕುಹರಕ್ಕೆ ಅಥವಾ ಹೆಟೆರೊಟೊಪಿಕ್ ತಾಣದಲ್ಲಿ ಮರು ಜೋಡಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ರೋಗಿಗಳಿಗೆ ಸಾಮಾನ್ಯ ಸಂತಾನೋತ್ಪಾದನೆಯ ಅಂತಃಸ್ರಾವಕ ಕಾರ್ಯಕ್ಕೆ ಮರಳಲು ನೆರವಾಗುವ ಅನುಕೂಲವೂ ಇರುತ್ತದೆ, ಇದು ಅಧ್ಯಯನದಲ್ಲಿ ಶೇ.90ರಷ್ಟು ಪ್ರಕರಣಗಳಲ್ಲಿ ಕಂಡುಬಂದಿದೆ. ಈ ಜೀವಕೋಶವು ಕಾರ್ಯ ಪ್ರಾರಂಭಿಸುತ್ತದೆ ಮತ್ತು ಹಾಗೆಯೇ ಈ ಜೋಡಿಸಲಾದ ಜೀವಕೋಶದ ಅಂಡಾಣುಗಳನ್ನು ಸಂಗ್ರಹಿಸಬಹುದು ಮತ್ತು ಫಲವಂತಿಕೆಗೆ ಬಳಸಬಹುದು.

ಕ್ಯಾನ್ಸರ್ ತಂದೆ ತಾಯಿಯರಾಗುವ ಕನಸನ್ನು ಕಿತ್ತುಕೊಳ್ಳುವ ಅಗತ್ಯವಿಲ್ಲ! ಕ್ಯಾನ್ಸರ್ ರೋಗ ಪತ್ತೆಯಾದ ನಂತರ ಸರಿಯಾದ ತೀರ್ಮಾನ ಕೈಗೊಳ್ಳುವುದು ಬಹಳ ಮುಖ್ಯವಾಗಿದ್ದು ಅದು ಭವಿಷ್ಯಕ್ಕೆ ವ್ಯಕ್ತಿಯ ಸಂತಾನೋತ್ಪಾದನೆಯ ಸಾಮರ್ಥ್ಯ ಉಳಿಸಬಲ್ಲದು.

Write a Comment

BOOK A FREE CONSULTATION