ಗರ್ಭಪಾತ? ಮುಂದೇನು?
ಇನ್ನೂ ಜನ್ಮ ತಳೆಯದ ಮಗುವನ್ನು ಎತ್ತಿ ಆಡಿಸುವ ಮತ್ತು ಮಗುವಿಗಾಗಿ ಕೊಂಡ ಬಣ್ಣಬಣ್ಣದ ಫ್ರಾಕ್ ಗಳು, ಆಕರ್ಷಕ ಶರ್ಟ್ ಗಳು, ಕೈಗವಸುಗಳನ್ನು ಮರೆಯುವುದು ಸುಲಭವಲ್ಲ.
ಅದೆಲ್ಲವೂ ನಿಜವಲ್ಲವಾದರೂ, ಈಗ ಅದು ಬರೀ ಕನಸಾಗಿಯೇ ಉಳಿದಿದೆ!
20 ವಾರಗಳಿಗಿಂತ ಮುಂಚೆ ನಷ್ಟವಾಗುವ ಗರ್ಭವನ್ನು ಗರ್ಭಪಾತ ಎನ್ನಲಾಗುತ್ತದೆ. ಗರ್ಭಪಾತವು ತಾಯಿ ತಂದೆಯರಾಗುವ ನಿರೀಕ್ಷೆಯಲ್ಲಿರುವವರಿಗೆ ಅತ್ಯಂತ ನೋವಿನ ಅನುಭವವಾಗಿರುತ್ತದೆ. ಮಗುವನ್ನು ಹೊಂದುವ ಕನಸು ಸಾವಿರ ಚೂರಾಗುತ್ತದೆ. ತಮ್ಮ ಇನ್ನೂ ಜನಿಸದ ಮಗುವಿಗಾಗಿ ತಂದೆ ತಾಯ್ತನದ ನಿರೀಕ್ಷೆಯಲ್ಲಿರುವವರು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಅಪಾರ ಯೋಜನೆ ಮತ್ತು ಕಲ್ಪನೆ ಮಾಡಿಕೊಂಡಿರುತ್ತಾರೆ. ಅವರ ದುಃಖ ಮತ್ತು ಸಂಕಟ ಹೇಳ ತೀರದು. ಆದರೆ ನೆನಪಿಡಿ ಗರ್ಭಪಾತವು ಜೀವನದ ಕೊನೆಯಲ್ಲ! ಭರವಸೆಯ ಬೆಳಕಿದೆ. ಪದೇ ಪದೇ ಗರ್ಭಪಾತವಾದ ಹಲವು ದಂಪತಿಗಳು ತಮ್ಮ ಸುಂದರ ಕುಟುಂಬ ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ.
ಗರ್ಭಪಾತವನ್ನು ನಿಭಾಯಿಸುವ ಬಗೆ:
ದುಃಖ ಎನ್ನುವುದು ಸಂಪೂರ್ಣ ಸಹಜ:
ಗರ್ಭಪಾತವಾಗಿರುವುದನ್ನು ಸಹಜವಾಗಿ ಸ್ವೀಕರಿಸುವುದು ಮತ್ತು ಇನ್ನೂ ಜನಿಸದ ಶಿಶುವನ್ನು ಕಳೆದುಕೊಳ್ಳುವ ಈ ಸಂಕಟದ ಪ್ರಯಾಣದಲ್ಲಿ ನೀವು ಏಕಾಂಗಿಯಲ್ಲ ಎಂದು ತಿಳಿಯುವುದು ಅಗತ್ಯ. ಅಳುವುದು, ಸಂಕಟ ಪಡುವುದು ಮತ್ತು ತಳಮಳಗೊಳ್ಳುವುದು ಅತ್ಯಂತ ಸಹಜ ಪ್ರಕ್ರಿಯೆಯಾಗಿದೆ. ನಿಮ್ಮ ದುಃಖ, ನೋವು, ಸಂಕಟ ಇತ್ಯಾದಿಗಳಿಂದ ಹೊರಬರಲು ನಿಮ್ಮದೇ ಆದ ದಾರಿಗಳನ್ನು ಕಂಡುಕೊಳ್ಳಿ.
ನಿಮ್ಮ ಪತ್ನಿಯೊಂದಿಗೆ ಮಾತನಾಡಿ:
ಗರ್ಭಪಾತದ ನಂತರ ಅಪರಾಧ ಪ್ರಜ್ಞೆ ಅತ್ಯಂತ ಸಾಮಾನ್ಯ. ಒಬ್ಬರನ್ನು ಇನ್ನೊಬ್ಬರು ನಿರ್ಲಕ್ಷ್ಯ ಅಥವಾ ವಿಧಿಗಾಗಿ ದೂಷಿಸುವುದು ಅಗತ್ಯವಿಲ್ಲ. ನಿಮ್ಮ ನೋವು ಮತ್ತು ಸಂಕಟದ ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಸಹಾನುಭೂತಿ ಮತ್ತು ರೋಗಿಯನ್ನು ಮಾತನ್ನು ಆಲಿಸುವುದು ಪತಿಯ ಜವಾಬ್ದಾರಿಯಾಗಿದೆ. ಗರ್ಭಪಾತ ಉಂಟು ಮಾಡುವ ಹಲವಾರು ಕಾರಣಗಳಿರುತ್ತವೆ. ಆದ್ದರಿಂದ ನಿಮ್ಮನ್ನು ನೀವು ಹಳಿಯುವುದನ್ನು ತಪ್ಪಿಸಿ!
ಬೆಂಬಲಿಸುವವರ ಗುಂಪಿಗೆ ಸೇರಿ:
ಹಲವು ಆನ್ಲೈನ್ ವೇದಿಕೆಗಳು ಮತ್ತು ಸಮುದಾಯಗಳು ಗರ್ಭಪಾತಕ್ಕೆ ಒಳಗಾದ ದಂಪತಿಗಳಿಗೆ ಬೆಂಬಲ ನೀಡುತ್ತವೆ. ಈ ಗುಂಪುಗಳು ನಿಮ್ಮ ನೋವು ಮತ್ತು ಸಂಕಟ ಹಂಚಿಕೊಳ್ಳಲು ಅತ್ಯುತ್ತಮ ತಾಣವಾಗಬಹುದು ಮತ್ತು ಗರ್ಭಪಾತದ ಕುರಿತು ಹಾಗೂ ನಂತರ ಯಶಸ್ವಿ ಗರ್ಭಧಾರಣೆಯ ಕಥೆಗಳು ಇತರರ ಅನುಭವಗಳನ್ನೂ ಆಲಿಸಬಹುದು ಇದರಿಂದ ನೀವು ಉತ್ತೇಜಿತರಾಗುತ್ತೀರಿ ಮತ್ತು ನಿಮ್ಮ ವಿಶ್ವಾಸ ವೃದ್ಧಿಸುತ್ತದೆ.
ಕೌನ್ಸೆಲ್ಲಿಂಗ್ ನಿರೀಕ್ಷಿಸಿ:
ಸಂಕಷ್ಟದ ಭಾವನೆಗಳಿಂದ ನೀವು ಹೊರಬರಲಾಗದೇ ಇದ್ದರೆ ಮತ್ತು ಅದು ನಿಮ್ಮ ಪ್ರತಿನಿತ್ಯದ ಜೀವನಕ್ಕೆ ಸಂಕಷ್ಟ ತಂದೊಡ್ಡುತ್ತಿದ್ದರೆ ಮನೋವೈದ್ಯರು/ಥೆರಪಿಸ್ಟ್ ಗಳಲ್ಲಿ ಮಾತನಾಡುವುದು ಸೂಕ್ತ, ಅವರು ನಿಮಗೆ ಧ್ಯಾನ ಅಥವಾ ಇತರೆ ತಂತ್ರಗಳ ಮೂಲಕ ನಿಮ್ಮ ದುಃಖದಿಂದ ಹೊರಬರಲು ನೆರವಾಗುತ್ತಾರೆ.
ಗರ್ಭಧಾರಣೆಗೆ ನೆರವು ಪಡೆಯಿರಿ:
ಗರ್ಭಪಾತಗಳು ಸಾಮಾನ್ಯವಾಗಿ ಕ್ರೋಮೋಸೋಮುಗಳ ಅಹಜತೆಗಳಿಂದ ಉಂಟಾಗುತ್ತವೆ. ಫಲವಂತಿಕೆಯ ಪರೀಕ್ಷೆ ಮಾಡಿಸುವುದು ಉತ್ತಮ ಇದರಿಂದ ಗರ್ಭಪಾತಕ್ಕೆ ಸಂಭವನೀಯ ಕಾರಣಗಳನ್ನು ಕಂಡುಕೊಳ್ಳಲು ನೆರವಾಗುತ್ತದೆ. ನೀವು ಮತ್ತೆ ಗರ್ಭಧಾರಣೆಗೆ ಎಂದು ಪ್ರಯತ್ನಿಸಬಹುದು ಎಂದು ಕೂಡಾ ಸಲಹೆ ಪಡೆಯಬಹುದು.
ಮುಂದೇನು?
ಗರ್ಭಪಾತವು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಭಾರೀ ಸಂಕಷ್ಟಕ್ಕೆ ದೂಡುತ್ತದೆ. ಆದರೆ ಇರಿ. ಕೆಲ ವಿಷಯಗಳು ಸಮಯ ತೆಗೆದುಕೊಳ್ಳುತ್ತವೆ. ಭರವಸೆ ಕಳೆದುಕೊಳ್ಳುವುದು ಪರಿಹಾರವಲ್ಲ ಆದರೆ ಸರಿಯಾದ ದಿಕ್ಕಿನಲ್ಲಿ ಸರಿಯಾದ ಹೆಜ್ಜೆ ಇರಿಸುವುದು ಅತ್ಯಗತ್ಯ.
ಗರ್ಭಪಾತದ ಕಾರಣಗಳು
ವಯಸ್ಸಾಗುವಿಕೆ, ಧೂಮಪಾನ, ಬೊಜ್ಜು, ನಿಯಂತ್ರಣವಿಲ್ಲದ ಮಧುಮೇಹ ಇತ್ಯಾದಿಗಳು ಗರ್ಭಪಾತ ಉಂಟು ಮಾಡುವ ಕೆಲವು ಕಾರಣಗಳು. ಮಹಿಳೆಯರ ವಯಸ್ಸು ಹೆಚ್ಚಾದಂತೆ ಅಂಡಾಣುಗಳ ಗುಣಮಟ್ಟ ಕುಸಿಯುತ್ತದೆ. ಅಲ್ಲದೆ ನೀವು 35 ವರ್ಷಗಳ ನಂತರ ಗರ್ಭಧಾರಣೆಗೆ ಪ್ರಯತ್ನಿಸಿದರೆ ಮತ್ತು ಐವಿಎಫ್ ಚಿಕಿತ್ಸೆ ಪಡೆಯುತ್ತಿದ್ದರೆ ಪಿಜಿಟಿ(ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್)ನಂತಹ ಸುಧಾರಿತ ಜೆನೆಟಿಕ್ ಟೆಸ್ಟಿಂಗ್ ಆರೋಗ್ಯಕರ ಅಂಡಾಣುಗಳನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗುವ ಮೂಲಕ ಗರ್ಭಪಾತದ ತೊಂದರೆಯನ್ನು ಕಡಿಮೆ ಮಾಡುತ್ತದೆ.
ಗರ್ಭಧಾರಣೆ ಪೂರ್ವದ ಕೌನ್ಸೆಲ್ಲಿಂಗ್/ಫಲವಂತಿಕೆ ಮೌಲ್ಯಮಾಪನವು ಕೂಡಾ ನಿಮಗೆ ಎಲ್ಲಿ ಸಮಸ್ಯೆಯಿದೆ ಎಂದು ಕಂಡುಕೊಳ್ಳಲು ಮತ್ತು ಮುಂದಿನ ಬಾರಿ ಯಶಸ್ವಿ ಗರ್ಭಧಾರಣೆ ಹೊಂದಲು ನೆರವಾಗುತ್ತದೆ.
ಕೆಲವೊಮ್ಮೆ ತಂದೆ ತಾಯಿಯರಾಗುವ ಮಾರ್ಗವು ಕಠಿಣ ಎಂದು ಕಾಣಬಹುದು, ಆದರೆ ಅದರ ಅರ್ಥ ಅದೇ ಕೊನೆ ಎಂದಲ್ಲ! ಭರವಸೆ ಕಳೆದುಕೊಳ್ಳಬೇಡಿ!
ಹ್ಯಾಪಿ ಪೇರೆಂಟ್ ಹುಡ್!
fill up the form to get a
Free Consultation
Avail 0% interest on EMI
All Procedures | No Upper Limit
How we reviewed this article:
- Current Version
- February 23, 2023 by Oasis Fertility
- January 20, 2023 by Oasis Fertility
- January 19, 2023 by Oasis Fertility