ಐಯುಐ(ಇಂಟ್ರಾಯುಟೆರಿನ್ ಇನ್ಸೆಮಿನೇಷನ್) ನಿಮಗೆ ಸೂಕ್ತವಾದ ಆಯ್ಕೆಯೇ?
ಬಂಜೆತನ ಎಂದರೆ ಒಂದು ವರ್ಷ ಪ್ರಯತ್ನಿಸಿದ ನಂತರವೂ ಗರ್ಭಧಾರಣೆ ಮಾಡಲು ಅಶಕ್ತರಾಗುವುದು. ಅದು ವೀರ್ಯದ ಅಸಹಜತೆಗಳು, ಅಂಡೋತ್ಪತ್ತಿಯ ನಿಷ್ಕ್ರಿಯತೆ, ನಾಳದ ಅಂಶಗಳು, ಎಂಡೋಮೆಟ್ರಿಯಾಸಿಸ್ ಇತ್ಯಾದಿ ಕಾರಣಗಳಿರಬಹುದು. ಪುರುಷ ಹಾಗೂ ಮಹಿಳಾ ಸಂಗಾತಿ ಇಬ್ಬರ ಫಲವಂತಿಕೆಯ ಮೌಲ್ಯಮಾಪನವು ಮೂಲ ಕಾರಣ ಗುರುತಿಸಲು ಮತ್ತು ಅದರ ಚಿಕಿತ್ಸೆಗೆ ಅತ್ಯಂತ ಅಗತ್ಯವಾಗಿದೆ. ದಂಪತಿಗಳ ವಯಸ್ಸು, ಜೀವನಶೈಲಿ, ಸಂಬಂಧಿಸಿದ ವೈದ್ಯಕೀಯ ಪರಿಸ್ಥಿತಿಗಳು, ಬಂಜೆತನದ ಅವಧಿ ಮತ್ತು ಬೇಸ್ಲೈನ್ ಪರೀಕ್ಷೆಗಳನ್ನು ಆಧರಿಸಿ ಅದಕ್ಕೆ ಸೂಕ್ತವಾದ ಫಲವಂತಿಕೆಯ ಚಿಕಿತ್ಸೆಯ ಯೋಜನೆಯನ್ನು ಬಳಸುವ ಮೂಲಕ ಸಕ್ರಿಯ ಪಾಲಕತ್ವಕ್ಕೆ ನೆರವಾಗಬಹುದು.
ಇಂಟ್ರಾಯುಟೆರಿನ್ ಇನ್ಸೆಮಿನೇಷನ್ ಚಿಕಿತ್ಸೆಯನ್ನು ಮೈಲ್ಡ್ ಮೇಲ್ ಫ್ಯಾಕ್ಟರ್ ಮತ್ತು ವಿವರಿಸಲಾದ ಬಂಜೆತನಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇದು ವೀರ್ಯದ ನಮೂನೆಯನ್ನು ನೇರವಾಗಿ ಗರ್ಭಕೋಶದ ಕುಹರದ ಒಳಗೆ ಅಡೋತ್ಪತ್ತಿಯ ಸಮಯದಲ್ಲಿ ಸೇರಿಸಲಾಗುತ್ತದೆ.
ಐಯುಐ ಚಿಕಿತ್ಸೆಯನ್ನು ಸಾಮಾನ್ಯವಾಗಿ ಹೀಗೆ ಮಾಡಲಾಗುತ್ತದೆ:
- ಮಹಿಳೆಯರಲ್ಲಿ ಅಂಡೋತ್ಪತ್ತಿಯ ಕಾರ್ಯದ ದೋಷ
- ಮೈಲ್ಡ್ ಎಂಡೋಮೆಟ್ರಿಯಾಸಿಸ್ ಉಳ್ಳ ಮಹಿಳೆಯರು
- ನಿಮಿರುವಿಕೆ ಸಮಸ್ಯೆಯುಳ್ಳ ಪುರುಷರು, ವೀರ್ಯದ ಚಲನೆ ಅಥವಾ ಸಂಖ್ಯೆ ಕಡಿಮೆಯಾಗಿರುವುದು
- ವಿವರಿಸಲಾಗದ ಬಂಜೆತನ
- ಗರ್ಭಕಂಠದ ಲೋಳೆಯ ಪ್ರತಿಕೂಲತೆ
- ಗರ್ಭಕೋಶದ ಸಂಕೋಚನ
- ನಿಮಿರುವಿಕೆಯ ಸಮಸ್ಯೆ
- ವೀರ್ಯದಾನದ ಚಿಕಿತ್ಸೆ
ಐಯುಐ ಇವುಗಳಿಗೆ ಶಿಫಾರಸು ಮಾಡಲಾಗುವುದಿಲ್ಲ:
- ಫಾಲೋಪಿಯನ್ ನಾಳಗಳಲ್ಲಿ ತಡೆ
- ಸಾಧಾರಣದಿಂದ ತೀವ್ರ ಎಂಡೋಮೆಟ್ರಿಯಾಸಿಸ್ಗಂ
- ಭೀರ ಮೇಲ್ ಫ್ಯಾಕ್ಟರ್- ಅತ್ಯಂತ ಕಡಿಮೆ ವೀರ್ಯದ ಸಂಖ್ಯೆ ಅಥವಾ ಚಲನೆ
ಹಂತ ಹಂತವಾಗಿ ಐಯುಐ ಪ್ರಕ್ರಿಯೆ
ಗರ್ಭಧಾರಣೆಯ ನೈಸರ್ಗಿಕ ಪ್ರಕ್ರಿಯೆಯಲ್ಲಿ ಅಂಡಾಣು ಅಂಡಾಶಯದಲ್ಲಿ ಬೆಳೆಯುತ್ತದೆ ಅದು ಬೆಳೆಯುತ್ತದೆ ಮತ್ತು 14ನೇ ದಿನದಂದು ಫಾಲೋಪಿಯನ್ ಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತದೆ. ಈ ಸಮಯದಲ್ಲಿ ದಂಪತಿ ಸಂಭೋಗ ನಡೆಸಿದರೆ ಸಂಗಾತಿಯ ವೀರ್ಯಾಣು ಯೋನಿಯಲ್ಲಿ ಶೇಖರವಾಗುತ್ತದೆ. ಈ ವೀರ್ಯಾಣುಗಳು ಯೋನಿಯ ಮೂಲಕ ಗರ್ಭಕಂಠದ ಕುಹರದಿಂದ ಫಾಲೋಪಿಯನ್ ಟ್ಯೂಬ್ ಗೆ ಪ್ರಯಾಣಿಸುತ್ತವೆ, ಅಲ್ಲಿ ಅಂಡಾಣು ಭೇಟಿಯಾಗುತ್ತದೆ ಮತ್ತು ಫಲವಂತಿಕೆ ಆಗುತ್ತದೆ. ಇಂಟ್ರಾಯುಟೆರಿನ್ ಪ್ರೊಸೀಜರ್ ಅನ್ನು ಔಷಧಗಳನ್ನು ಬಳಸದೆ ನೈಸರ್ಗಿಕ ಆವರ್ತದಲ್ಲಿ ನಡೆಸಬಹುದು ಅಥವಾ ಓವರಿಯನ್ ಸ್ಟಿಮುಲೇಷನ್ ಮೂಲಕವೂ ನಿರ್ವಹಿಸಬಹುದು. ಐಯುಐ ಆವರ್ತದಲ್ಲಿ ಔಷಧಗಳನ್ನು ಗರ್ಭಕೋಶದಲ್ಲಿ ಅಂಡಾಣು ಅಭಿವೃದ್ಧಿ ದೃಢೀಕರಿಸಲು ನೀಡಲಾಗುತ್ತದೆ. ಈ ಆವರ್ತವನ್ನು ಸರಣಿ ಅಲ್ಟ್ರಾಸೌಂಡ್ ಮೂಲಕ ಗಮನಿಸಲಾಗುತ್ತದೆ. ಅಂಡಾಣು ಸೂಕ್ತ ಪ್ರಮಾಣದಲ್ಲಿ ಬೆಳೆದಾಗ ಅಂಡಾಣುಗಳನ್ನು ಬಿಡುಗಡೆ ಮಾಡಲು ಇಂಜೆಕ್ಷನ್ ಗಳನ್ನು ನೀಡಲಾಗುತ್ತದೆ. ಅಂಡಾಣು ಬಿಡುಗಡೆಯ ಸಮಯದಲ್ಲಿ ಸಂಸ್ಕರಿಸಿದ ವೀರ್ಯದ ನಮೂನೆಯನ್ನು ಗರ್ಭಕೋಶದ ಕುಹರಕ್ಕೆ ಸೇರಿಸಲಾಗುತ್ತದೆ.
ಐಯುಐ ಪ್ರಕ್ರಿಯೆ ಪ್ರಾರಂಭಕ್ಕೆ ಮುನ್ನ ಪುರುಷ ಹಾಗೂ ಮಹಿಳಾ ಸಂಗಾತಿಗಳು ವೀರ್ಯ ವಿಶ್ಲೇಷಣೆ, ರಕ್ತ ಪರೀಕ್ಷೆಗಳು, ಅಲ್ಟ್ರಾಸೌಂಡ್, ಟ್ಯೂಬಲ್ ಪೇಟೆನ್ಸಿ ಟೆಸ್ಟಿಂಗ್ ಇತ್ಯಾದಿ ಸರಣಿ ಪರೀಕ್ಷೆಗೆ ಒಳಪಡಬೇಕಾಗುತ್ತದೆ.
ಇದು ನೋವುರಹಿತ ಪ್ರಕ್ರಿಯೆಯಾಗಿದೆ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಐಯುಐ ಪ್ರಕ್ರಿಯೆ ಮುಗಿದ ನಂತರ ಮಹಿಳೆಯು 20-30 ನಿಮಿಷಗಳ ವಿಶ್ರಾಂತಿ ತೆಗೆದುಕೊಂಡು ನಂತರ ಮನೆಗೆ ಹೋಗಬಹುದು. ಎರಡು ವಾರಗಳ ನಂತರ ಗರ್ಭಧಾರಣೆ ದೃಢಪಡಿಸಿಕೊಳ್ಳಲು ರಕ್ತಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಐಯುಐ ಯಶಸ್ಸಿನ ಪ್ರಮಾಣ ಸುಧಾರಿಸುವುದು ಹೇಗೆ?
ಐಯುಐ ಯಶಸ್ಸಿನ ಪ್ರಮಾಣವನ್ನು ಹಲವಾರು ಅಂಶಗಳು ಪ್ರಭಾವಿಸುತ್ತವೆ ಆದರೆ ಗರ್ಭಧಾರಣೆಯ ಸಾಧ್ಯತೆ ಸುಧಾರಿಸಲು ನೀವು ಕೆಲವು ಅಂಶಗಳನ್ನು ಅನುಸರಿಸಬೇಕು.
ತೀವ್ರ ವ್ಯಾಯಾಮ ತಪ್ಪಿಸಿ:
ಸಾಧಾರಣ ವ್ಯಾಯಾಮವಾದ ವಾಕಿಂಗ್ ಅಥವಾ ಯೋಗ ನಿಮಗೆ ಉತ್ತಮ, ಏಕೆಂದರೆ ಅದು ಸಂತಾನೋತ್ಪಾದನೆಯ ಅಂಗಗಳಿಗೆ ರಕ್ತದ ಹರಿವು ಸುಧಾರಿಸುತ್ತದೆ. ತೀವ್ರವಾದ ವ್ಯಾಯಾಮವನ್ನು ತಪ್ಪಿಸಬೇಕು.
ಸಮತೋಲಿತ ಆಹಾರ ಸೇವಿಸಿ:
ಆರೋಗ್ಯಕರ ಆಹಾರದಲ್ಲಿ ಬೀಜಗಳು, ಧಾನ್ಯಗಳು ಮತ್ತು ಮೊಟ್ಟೆಗಳಿದ್ದು ಅವು ನಿಮ್ಮ ಆರೋಗ್ಯ ಸುಧಾರಿಸುತ್ತವೆ ಮತ್ತು ಐಯುಐ ಚಿಕಿತ್ಸೆಯ ಯಶಸ್ಸಿಗೆ ನೆರವಾಗುತ್ತವೆ. ದಿನಕ್ಕೆ ಕನಿಷ್ಠ 3 ಲೀಟರ್ ಗಳ ನೀರು ಕುಡಿಯುವುದು ಅಗತ್ಯ.
ಉತ್ತಮ ನಿದ್ರೆಯ ಮಾದರಿ:
ದಿನಕ್ಕೆ 7-8 ಗಂಟೆಗಳ ನಿದ್ರೆ ಅಗತ್ಯವಿದ್ದು ಅದು ಒತ್ತಡ ಕಡಿಮೆ ಮಾಡಿ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
ವಾಸ್ತವಿನ ನಿರೀಕ್ಷೆಗಳನ್ನು ಇರಿಸಿಕೊಳ್ಳಿ:
ಐಯುಐ ಶೇ.10-20ರಷ್ಟು ಯಶಸ್ಸಿನ ಪ್ರಮಾಣ ಹೊಂದಿದೆ. ಸಕಾರಾತ್ಮಕ ಮನಸ್ಥಿತಿ ಹೊಂದಿರಿ, ಏಕೆಂದರೆ ಐಯುಎಫ್ ವೈಫಲ್ಯವು ನಿಮ್ಮ ತಂದೆ ತಾಯಿಯರಾಗುವ ಕನಸನ್ನು ಕೊನೆಗೊಳಿಸುವುದಿಲ್ಲ.
ಐಯುಐ ನಂತರ ಗರ್ಭಧಾರಣೆಯ ಸೂಚನೆಗಳು ಯಾವುವು?
ಐಯುಐ ನಂತರ ಗರ್ಭಧಾರಣೆಯನ್ನು ಮೂತ್ರದ ಗರ್ಭಧಾರಣೆ ಪರೀಕ್ಷೆ ಅಥವಾ ಸೆರಂ ಎಚ್.ಸಿ.ಜಿ. ಮಟ್ಟದ ಪರೀಕ್ಷೆಯು ದೃಢಪಡಿಸುತ್ತದೆ.
ಗರ್ಭಧಾರಣೆಗೆ ಐಯುಐ ಚಿಕಿತ್ಸೆಯ ಅನುಕೂಲಗಳು
- ಹೊರರೋಗಿ ಚಿಕಿತ್ಸೆ
- ಮಿನಿಮಲಿ ಇನ್ವೇಸಿವ್ಕ
- ಡಿಮೆ ವೆಚ್ಚ