Blog
Enquire Now
Uncategorized

ಅಡಿನೋಮಯೋಸಿಸ್- ನೀವು ತಿಳಿಯಬೇಕಾದ ಪ್ರತಿಯೊಂದು ವಿಷಯ

ಅಡಿನೋಮಯೋಸಿಸ್- ನೀವು ತಿಳಿಯಬೇಕಾದ ಪ್ರತಿಯೊಂದು ವಿಷಯ

Author: Dr Jigna Tamagond, Consultant – Fertility Specialist

ಯುಟೆರಿನ್ ಅಡಿನೊಮಯೋಸಿಸ್ ನೋವಿನ ಋತುಚಕ್ರಕ್ಕಿಂತ ಹೆಚ್ಚಾದುದು. ಅಡಿನೊಮಯೋಸಿಸ್ ಅರ್ಥ ಮಾಡಿಕೊಳ್ಳಲು ಗರ್ಭಕೋಶದ ಅಂಗರಚನಾಶಾಸ್ತ್ರ ಅರ್ಥ ಮಾಡಿಕೊಳ್ಳುವುದ ಬಹಳ ಮುಖ್ಯ.

ಗರ್ಭಕೋಶವು ಈ ಕೆಳಕಂಡಲ್ಲಿ ನಮೂದಿಸಿದ ಪದರಗಳನ್ನು ಹೊಂದಿರುತ್ತದೆ.

ಮಯೋಮೆಟ್ರಿಯಂ: ಹೊರಗಿನ ಮೃದು ಸ್ನಾಯು.

ಎಂಡೋಮೆಟ್ರಿಯಂ: ಋತುಚಕ್ರದ ಸಂದರ್ಭದಲ್ಲಿ ಬೆಳೆಯುವ ಒಳಪದರ ಮತ್ತು ಫಲವತ್ತಾದ ಅಂಡಾಣು ಗರ್ಭಕೋಶ ಸ್ವೀಕರಿಸುವ ಲೈನಿಂಗ್.

“ಜಂಕ್ಷನಲ್ ಜೋನ್” ಅಥವಾ “ಇನ್ನರ್ ಮಯೋಮೆಟ್ರಿಯಂ” ಈ ಎರಡೂ ಪದರಗಳ ನಡುವೆ ಇರುವ ಪ್ರದೇಶವಾಗಿದ್ದು ಅದು ಎಂಡೋಮೆಟ್ರಿಯಂ ಮತ್ತು ಸ್ನಾಯುಗಳ ಪದರವನ್ನು ಪ್ರತ್ಯೇಕಿಸುತ್ತದೆ. ಆರೋಗ್ಯಕರ ಗರ್ಭಕೋಶದಲ್ಲಿ ಈ ಪ್ರದೇಶದ ದಪ್ಪ 2-8 ಎಂಎಂ ಇರುತ್ತದೆ.

ಅಡಿನೋಮಯೋಸಿಸ್ ಒಳಗೊಂಡ ಮಹಿಳೆಯರಲ್ಲಿ ಎಂಡೋಮೆಟ್ರಿಯಲ್ ಜೀವಕೋಶವು ಗರ್ಬಕೋಶದ ಸ್ನಾಯುವಿನ ಗೋಡೆಯತ್ತ ಬೆಳೆಯುವ ಮೂಲಕ ಜಂಕ್ಷನಲ್ ಜೋನ್ ಅನ್ನು ದಪ್ಪಗೊಳಿಸುತ್ತದೆ. ಅಡಿನೋಮಯೋಸಿಸ್ ನಲ್ಲಿ ಈ ಜಂಕ್ಷನಲ್ ಜೋನ್ ದಪ್ಪವು 12ಎಂಎಂ ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ. ಇದರಿಂದ ಗರ್ಭಕೋಶ ವಿಸ್ತಾರವಾಗುವುದು ಮತ್ತು ಇತರೆ ಅನುಕೂಲದ ಮತ್ತು ನೋವಿನ ಲಕ್ಷಣಗಳನ್ನು ನೀಡುತ್ತದೆ. ಮಯೋಮೆಟ್ರಿಯಂನಲ್ಲಿ ಚೀಲಗಳಿರುವುದು ಕೂಡಾ ಅಡಿನೋಮಯೋಸಿಸ್ ಸ್ಥಿತಿಯನ್ನು ಸೂಚಿಸುತ್ತದೆ.

35 ವರ್ಷಗಳ ವಯಸ್ಸಿನ ಮಧ್ಯ ವಯಸ್ಸಿನ ಮಹಿಳೆಯರು ಅಥವಾ ಎಂಡೋಮೆಟ್ರಿಯಾಸಿಸ್ ಒಳಗೊಂಡ ಮಹಿಳೆಯರಿಗೆ ಅಡಿನೋಮಯೋಸಿಸ್ ಅಭಿವೃದ್ಧಿಪಡಿಸಿಕೊಳ್ಳುವ ಹೆಚ್ಚಿನ ಸಾಧ್ಯತೆ ಇರುತ್ತದೆ.

ಈ ರೋಗಲಕ್ಷಣಗಳನ್ನು ಗಮನಿಸಿ:

– ನೋವಿನ ಸೆಳೆತಗಳು ಅಥವಾ ಶ್ರೋಣಿಯ ನೋವು

– ಸುದೀರ್ಘ ಮತ್ತು ತೀವ್ರ ಋತುಚಕ್ರದ ರಕ್ತಸ್ರಾವ

– ನೋವಿನ ಸಂಭೋಗ

– ಬಂಜೆತನ

ಈ ರೋಗಲಕ್ಷಣಗಳು ಇತರೆ ಆಂತರಿಕ ಸಮಸ್ಯೆಗಳು ಮತ್ತು ಎಂಡೋಮೆಟ್ರಿಯಾಸಿಸ್ ರೀತಿಯ ಸಮಸ್ಯೆಗಳನ್ನು ಸೂಚಿಸಬಹುದು.

ಸಂಕೀರ್ಣತೆಗಳು:

ಅಇನೋಮಯೋಸಿಸ್ ಬಾಧಿತ ಮಹಿಳೆಯರ ದಿನನಿತ್ಯದ ಜೀವನಕ್ಕೆ ಬಾಧಿಸುತ್ತದೆ.

ಅಡಿನೋಮಯೋಸಿಸ್ ಒಳಗೊಂಡ ಮಹಿಳೆಯರು ರಕ್ತಹೀನತೆ, ಬಂಜೆತನ ಮತ್ತಿತರೆ ಗರ್ಭಕೋಶದ ಸಮಸ್ಯೆಗಳನ್ನು ಬೆಳೆಸಿಕೊಳ್ಳುವ ಹೆಚ್ಚಿನ ತೊಂದರೆ ಹೊಂದಿರುತ್ತಾರೆ.

ಅಡಿನೋಮಯೋಸಿಸ್ ಮತ್ತು ಫಲವಂತಿಕೆ:

ಅಡಿನೋಮಯೋಸಿಸ್ ನಿಂದ ಗರ್ಭಕೋಶವು ಊದಿಕೊಂಡು ಮತ್ತು ದಪ್ಪವಾಗುವುದರಿಂದ ಮಹಿಳೆಯರಲ್ಲಿ ಫಲವಂತಿಕೆಗೆ ಸಂಬಂಧಿಸಿದ ಹಲವಾರು ಸಂಕೀರ್ಣತೆಗಳು ಉಂಟಾಗುತ್ತವೆ. ಇದರಿಂದ ಸೂಕ್ತವಲ್ಲದ ಗರ್ಭಕೋಶದ ಪರಿಸರವು ಗರ್ಭಸೇರ್ಪಡೆ ಸಮಸ್ಯೆಗಳು ಮತ್ತು ಗರ್ಭಪಾತದ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಅಧ್ಯಯನಗಳನ್ನು ಆಧರಿಸಿ ಹೇಳುವುದಾದರೆ ಅಡಿನೋಮಯೋಸಿಸ್ ಇತರೆ ರೋಗಲಕ್ಷಣಗಳಾದ ಎಂಡೋಮೆಟ್ರಿಯೋಸಿಸ್ ಮತ್ತು ಪಾಲಿಪ್ ಇತ್ಯಾದಿಗಳೊಂದಿಗೆ ಜೊತೆಯಲ್ಲಿಯೇ ಇರುತ್ತದೆ, ಇದರಿಂದ ಫಲವಂತಿಕೆ ಸಮಸ್ಯೆಗಳು ಉಂಟಾಗಬಹುದು. ಫಲವಂತಿಕೆಯ ಮೇಲೆ ಪರಿಣಾಮ ಬೀರುವ ಕೆಲ ವಿಧಾನಗಳು ಇಲ್ಲಿವೆ.

1. ಗರ್ಭಧಾರಣೆಯಲ್ಲಿ ಸಮಸ್ಯೆಗಳು: ಜಂಕ್ಷನಲ್ ಜೋನ್ ನಲ್ಲಿ ದಪ್ಪವಾಗುವುದರಿಂದ ಗರ್ಭಕೋಶದ ವಿರೂಪಗೊಂಡ ರಚನೆಯು ವೀರ್ಯದ ಚಲನೆಯನ್ನು ನಿರ್ಬಂಧಿಸಬಹುದು ಮತ್ತು ಅಪ್ರಬುದ್ಧ ಅಂಡಾಣುಗಳು ಗರ್ಭಧಾರಣೆಯನ್ನು ತಡೆಯಬಹುದು.

2. ಎಂಡೋಮೆಟ್ರಿಯಲ್ ಕಾರ್ಯದಲ್ಲಿ ಸಮಸ್ಯೆಗಳು: ಎಂಡೋಮೆಟ್ರಿಯಂ ಕಾರ್ಯ ಮತ್ತು ಗ್ರಹಿಕೆಯು ಉರಿಯೂತ ಮತ್ತು ಈಸ್ಟ್ರೋಜನ್ ಹಾರ್ಮೋನಿನ ಹೆಚ್ಚಿನ ಉತ್ಪಾದನೆಯಿಂದ ಕುಂಠಿತವಾಗುತ್ತದೆ.

3. ದುರ್ಬಲ ಅಳವಡಿಕೆ: ಎಂಡೋಮೆಟ್ರಿಯಂ ಜೀವಕೋಶವು ಮಯೋಮೆಟ್ರಿಯಂ ಒಳಗಡೆ ಆಕ್ರಮಣ ಮಾಡುವುದರಿಂದ ಗರ್ಭ ಸೇರ್ಪಡೆ ವಿಫಲವಾಗುವ ಸಾಧ್ಯತೆಗಳು ಹೆಚ್ಚಾಗಿದ್ದು ಅದು ಕಾರ್ಯ ನಿರ್ವಹಿಸಲು ವಿನ್ಯಾಸಗೊಂಡಿರುವುದರಿಂದ ಅದು ಬೀಳುವುದು ಮತ್ತು ರಕ್ತಸ್ರಾವ ಮುಂದುವರಿಸುತ್ತದೆ.

ಅಡಿನೋಮಯೋಸಿಸ್ ಮತ್ತು ಗರ್ಭಧಾರಣೆ:

ಅಡಿನೋಮಯೋಸಿಸ್ ಮಹಿಳೆಯರಿಗೆ ಗರ್ಭಧಾರಣೆ ಮಾಡುವ ಸಾಮರ್ಥ್ಯಕ್ಕೆ ಹಾನಿಯುಂಟು ಮಾಡುತ್ತದೆ. ಆದರೆ ಮಹಿಳೆಯು ಗರ್ಭಧಾರಣೆ ಹೊಂದಿದರೂ ಗರ್ಭಪಾತ, ಜನನದಲ್ಲಿ ತೂಕ ಕಡಿಮೆ, ಅವಧಿಪೂರ್ವ ಪ್ರಸವ, ಅಮ್ನಿಯೋಟಿಕ್ ಮೆಂಬ್ರೇನ್ ಗಳ ಅವಧಿಪೂರ್ವ ಛಿದ್ರಗೊಳ್ಳುವಿಕೆ, ಗರ್ಭಧಾರಣೆಯ ಸೋಂಕುಗಳು ಇತ್ಯಾದಿ ಉಂಟಾಗುತ್ತವೆ.

ಬಂಜೆತನದಲ್ಲಿ ಅಡಿನೋಮಯೋಸಿಸ್ ಚಿಕಿತ್ಸೆಯ ಆಯ್ಕೆಗಳು:

ನೀವು ಭವಿಷ್ಯದಲ್ಲಿ ಮಗು ಹೊಂದಬೇಕೆಂದರೆ ಸರಿಯಾದ ಮತ್ತು ಸೂಕ್ತ ಫಲವಂತಿಕೆ ಚಿಕಿತ್ಸೆಯನ್ನು ಪಡೆಯುವುದು ಅತ್ಯಂತ ಅಗತ್ಯವಾಗಿದೆ.

ಅಡಿನೋಮಯೋಸಿಸ್ ಚಿಕಿತ್ಸೆಗೆ ಮತ್ತು ಸಕಾರಾತ್ಮಕ ಗರ್ಭಧಾರಣೆಯ ಫಲಿತಾಂಶಗಳಿಗೆ ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸೆಯ ಆಯ್ಕೆಗಳು ಲಭ್ಯವಿವೆ.

ಗೊನಾಡೊ್ರೊಫಿನ್ ನಂತಹ ಹಾರ್ಮೋನುಗಳು(ಜಿ.ಎನ್.ಆರ್.ಎಚ್) ಚಿಕಿತ್ಸೆಯನ್ನು ಹಾರ್ಮೋನುಗಳ ಪರಿಣಾಮ ಮತ್ತು ಉರಿಯೂತ ನಿಯಂತ್ರಿಸಲು ಮತ್ತು ಕಡಿಮೆ ಮಾಡಲು ಹಾಗೂ ನೈಸರ್ಗಿಕ ಗರ್ಭಧಾರಣೆಯ ಸಾಧ್ಯತೆಗಳನ್ನು ಸುದಾರಿಸಲು ಶಿಫಾರಸು ಮಾಡಲಾಗುತ್ತದೆ.

ಅಂತಿಮವಾಗಿ ಮಾಡಬೇಕಾದುದು:

40ರ ವಯಸ್ಸಿನ 6ರಿಂದ 10 ಮಹಿಳೆಯರು ಅಡಿನೋಮಯೋಸಿಸ್ ನಿಂದ ಬಾಧಿತರಾಗಿರುತ್ತಾರೆ. ಗಂಭೀರ ಋತುಚಕ್ರದ ಬಿಗಿತ ಮತ್ತು ಶ್ರೋಣಿಯ ನೋವು ಅಡಿನೋಮಯೋಸಿಸ್ ಜೊತೆಯಲ್ಲಿ ಸಂಬಂಧ ಹೊಂದಿರಬಹುದು. ಇದರ ದುಷ್ಪರಿಣಾಮಗಳು ಫಲವಂತಿಕೆ ಮೇಲೆ ಮಾತ್ರವಲ್ಲ ಬದಲಿಗೆ ಮಹಿಳೆಯ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಗರ್ಭಧಾರಣೆಗೆ ಮುನ್ನ ರೋಗಪರೀಕ್ಷೆ, ಕೌನ್ಸೆಲ್ಲಿಂಗ್ ಮತ್ತು ಅರಿವಿನಿಂದ ಈ ಸಮಸ್ಯೆ ಇದ್ದಲ್ಲಿ ಪ್ರಾರಂಭಿಕ ರೋಗಪರೀಕ್ಷೆ ಮತ್ತು ಚಿಕಿತ್ಸೆ ಅಗತ್ಯ.

ನಿಯಮಿತವಾದ ಗೈನಕಾಲಜಿಕಲ್ ಚೆಕಪ್ ಗಳನ್ನು ಮಾಡಿಸಿ ನಿಮ್ಮ ಸಂತಾನೋತ್ಪಾದನೆಯ ಆರೋಗ್ಯದ ಮೇಲೆ ನಿಯಂತ್ರಣ ಹೊಂದಿರಿ.

Write a Comment