Blog
Uncategorized

ಪಿಸಿಒಎಸ್, ಬಿಎಂಐ ಮತ್ತು ಗರ್ಭಧಾರಣೆಯ ನಡುವಿನ ಸಂಬಂಧ

ಪಿಸಿಒಎಸ್, ಬಿಎಂಐ ಮತ್ತು ಗರ್ಭಧಾರಣೆಯ ನಡುವಿನ ಸಂಬಂಧ

ಪಿಸಿಒಎಸ್(ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಈ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗಿದ್ದು 5ರಲ್ಲಿ 1 ಮಹಿಳೆಯರು ಇದರೊಂದಿಗೆ ಜೀವಿಸುತ್ತಿದ್ದಾರೆ. ಇದು ಅತ್ಯಂತ ಪ್ರಮುಖ ಎಂಡೋಕ್ರೈನ್ ಸಮಸ್ಯೆಯಾಗಿದ್ದು ಅದು ಮೆನೋಪಾಸ್ ಪೂರ್ವದ ಶೇ.8ರಿಂದ 13ರಷ್ಟು ಮಂದಿಗೆ ಬಾಧಿಸುತ್ತದೆ. ಪಿಸಿಒಎಸ್ ನ ಪ್ರಮುಖ ಸಂತಾನೋತ್ಪಾದನೆಯ ವಿಶೇಷತೆಗಳಲ್ಲಿ ಹೆಚ್ಚಿನ ಆಂಡ್ರೋಜನ್ ಉತ್ಪಾದನೆ, ಋತುಚಕ್ರದ ವ್ಯತ್ಯಾಸ ಉಂಟು ಮಾಡುವ ಅಸಹಜ ಗೊನಡೊಟ್ರೊಪಿನ್ ಸ್ರವಿಸುವಿಕೆ, ದೇಹದ ಕೂದಲು ಹೆಚ್ಚಾಗುವುದು, ಮೊಡವೆ ಮತ್ತು ಬಂಜೆತನ ಉಂಟು ಮಾಡುತ್ತದೆ.

ಬಹಳಷ್ಟು ಪ್ರಕರಣಗಳಲ್ಲಿ ಪಿಸಿಒಎಸ್ ಉಳ್ಳ ಮಹಿಳೆಯರು ಬೊಜ್ಜಿನಿಂದ ಇರುತ್ತಾರೆ ಮತ್ತು ಇದು ಒಂದು ವಿಷವರ್ತುಲ. ಪಿಸಿಒಎಸ್ ಉಳ್ಳ ಶೇ.38ರಿಂದ 88ರಷ್ಟು ಮಹಿಳೆಯರು ಅತಿಯಾದ ತೂಕ/ಬೊಜ್ಜು ಹೊಂದಿರುತ್ತಾರೆ ಮತ್ತು ಬಹಳ ಮುಖ್ಯವಾದುದೆಂದರೆ ಬೊಜ್ಜು ಗರ್ಭಧಾರಣೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಗರ್ಭಪಾತದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಸಂಶೋಧನೆಯ ಪ್ರಕಾರ ಮಹಿಳೆಯರು ತೂಕ ಇಳಿಸಲು ಪ್ರಯತ್ನಿಸಿದರೆ ಯಶಸ್ಸಿನ ಪ್ರಮಾಣದಲ್ಲಿ ಗಮನಾರ್ಹ ಸುಧಾರಣೆಯಾಗುತ್ತದೆ ಎಂದು ಸಂಶೋಧನೆಗಳು ಹೇಳಿವೆ.

ಹೇಗೆ ವ್ಯಕ್ತಿಯ ಬಿಎಂಐ(ಬಾಡಿ ಮಾಸ್ ಇಂಡೆಕ್ಸ್) ನೇರವಾಗಿ ಗರ್ಭಧಾರಣೆಯ ಸಾಧ್ಯತೆಗೆ ಸಂಬಂಧಿಸಿರುತ್ತದೆ ಮತ್ತು ಹೇಗೆ ತೂಕ ನಷ್ಟವೂ ಗರ್ಭಧಾರಣೆಯ ಸಾಧ್ಯತೆಗಳನ್ನು ಸುಧಾರಿಸುತ್ತದೆ ಎಂದು ತಿಳಿಯೋಣ.

ಬಿಎಂಐ ಎಂದರೇನು:

ಬಿಎಂಐ ವ್ಯಕ್ತಿಯಲ್ಲಿ ಆತ ಅಥವಾ ಆಕೆಯ ಎತ್ತರದಿಂದ ತೂಕದ ಅನುಪಾತ ಬಳಸಿ ಆರೋಗ್ಯಕರ ತೂಕ ಹೊಂದಿದ್ದಾರೆಯೇ ಎಂದು ತಿಳಿಯಲು ನೆರವಾಗುತ್ತದೆ.

ಬಿಎಂಐ ಚಾರ್ಟ್:

18.5ಕ್ಕಿಂತ ಕಡಿಮೆ ಬಿಎಂಐ- ಕಡಿಮೆ ತೂಕ

18.5<25ರವರೆಗೆ ಇರುವ ಬಿಎಂಐ- ಆರೋಗ್ಯಕರ ತೂಕ

25<30ರವರೆಗೆ ಇರುವ ಬಿಎಂಐ- ಅತಿಯಾದ ತೂಕ

30 ಅಥವಾ ಅದಕ್ಕಿಂತ ಹೆಚ್ಚು- ಬೊಜ್ಜು

ಬೊಜ್ಜನ್ನು ಮತ್ತಷ್ಟು ಹೀಗೆ ವಿಂಗಡಿಸಲಾಗಿದೆ:

ವರ್ಗ 1: ಬಿಎಂಐ 30<35

ವರ್ಗ 2: ಬಿಎಂಐ 35<40

ವರ್ಗ 3: 40 ಮತ್ತು 40ಕ್ಕಿಂತ ಹೆಚ್ಚು ಬಿಎಂಐ

ಪಿಸಿಒಎಸ್ ಉಳ್ಳ ಮಹಿಳೆಯರು, ಹೆಚ್ಚಿನ ಬಿಎಂಐ ಒಳಗೊಂಡಿದ್ದಲ್ಲಿ ಗರ್ಭದಾರಣೆಯ ಸಾಧ್ಯತೆ ಕಡಿಮೆಯಾಗುತ್ತದೆ. ಗರ್ಭಧಾರಣೆಯ ಸಾಧ್ಯತೆಯನ್ನು ಹಲವು ವಯೋಮಾನಗಳಲ್ಲಿ ಅಧ್ಯಯನ ನಡೆಸಲಾಗಿದ್ದು 27 ವರ್ಷಗಳಲ್ಲಿರುವ ಸಾಮಾನ್ಯ ತೂಕದ ಮಹಿಳೆಯರ ಪಿಸಿಒಎಸ್ ರೋಗಪರೀಕ್ಷೆಯನ್ನು ರೆಫರೆನ್ಸ್ ಆಗಿ ಐದು ಬಿಎಂಐ ವಿಭಾಗಗಳಿಗೆ ಅದರಲ್ಲಿ ಪಿಸಿಒಎಸ್ ರೋಗಪರೀಕ್ಷೆ(18-45 ವರ್ಷಗಳು) ನಡೆಸಲಾಗಿದೆ.

ಬೊಜ್ಜು ವರ್ಗ II (ಬಿಎಂಐ 35-39.9) ಇರುವ 31 ವರ್ಷಗಳ ಮಹಿಳೆಯು ಪಿಸಿಒಎಸ್ ರೋಗಪರೀಕ್ಷೆಯಲ್ಲಿ 27 ವರ್ಷಗಳ ಸಾಮಾನ್ಯ ತೂಕದ ಮಹಿಳೆಗೆ ಹೋಲಿಸಿದರೆ ಗರ್ಭಧಾರಣೆಯ ಸಾಧ್ಯತೆ ಅರ್ಧದಷ್ಟಿದೆ. ಅಲ್ಲದೆ ಗರ್ಭಧಾರಣೆಯ ಸಾಧ್ಯತೆ ಕೂಡಾ 35 ವರ್ಷಗಳ ಸಾಮಾನ್ಯ ತೂಕದ ಮಹಿಳೆಗೂ ಗರ್ಭಧಾರಣೆಯ ಸಾಧ್ಯತೆ ಅದೇ ರೀತಿಯಲ್ಲಿದೆ.

ಬಿಎಂಐ ವಿಧದಿಂದ ಪಿಸಿಒಎಸ್ ರೋಗಪರೀಕ್ಷೆಯ ಸಂದರ್ಭದಲ್ಲಿನ ವಯಸ್ಸು ಆಧರಿಸಿ ಗರ್ಭಧಾರಣೆಯ ಸಾಧ್ಯತೆ

 

ಆಧಾರ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮತ್ತು ಅತಿಯಾದ ತೂಕ ಅಥವಾ ಬೊಜ್ಜು ಒಳಗೊಂಡ ಮಹಿಳೆಯರಲ್ಲಿ ಬಾಡಿ ಮಾಸ್ ಇಂಡೆಕ್ಸ್, ತೂಕ ನಷ್ಟದ ಜೊತೆಗೆ ಇರುವ ಸಂಬಂಧ: ಯುಕೆ ಹ್ಯೂಮನ್ ರೀಪ್ರೊಡಕ್ಷನ್ ನಡೆಸಿದ ರೆಟ್ರಾಸ್ಪೆಕ್ಟಿವ್ ಕೊಹರ್ಟ್ ಸ್ಟಡಿ, Vol.38, No.3, pp. 471–481, 2023

ತೂಕ ನಷ್ಟ ಮತ್ತು ಗರ್ಭಧಾರಣೆಯ ನಡುವಿನ ಸಹಯೋಗ:

ಪಿಸಿಒಎಸ್ ಮತ್ತು ಅತಿಯಾದ ತೂಕ/ಬೊಜ್ಜು ಒಳಗೊಂಡ ಮಹಿಳೆಯರಿಗೆ ತೂಕ ನಿರ್ವಹಣೆಯೊಂದಿಗೆ ಜೀವನಶೈಲಿ ಬದಲಾವಣೆಯ ಅಂತಾರಾಷ್ಟ್ರೀಯ ಮಾರ್ಗಸೂಚಿಗಳನ್ನು ನೀಡಲಾಗಿದೆ. ತೂಕ ನಷ್ಟವು ಹೆಚ್ಚಿನ ಗರ್ಭಧಾರಣೆಯ ಸಾಧ್ಯತೆ ಹೊಂದಿರುತ್ತದೆ ಅದಕ್ಕೆ ವಿರುದ್ಧವಾಗಿ ಸ್ಥಿರ ತೂಕ ಅಥವಾ ತೂಕ ಪಡೆಯುವುದು ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುತ್ತದೆ. ತೂಕ ಇಳಿಸಿಕೊಳ್ಳುವುದು ಗರ್ಭಧಾರಣೆಯ ಫಲಿತಾಂಶಗಳನ್ನು ಸುಧಾರಿಸುತ್ತದೆ ಅದಕ್ಕೆ ಹಾರ್ಮೋನ್ ಪ್ರೊಫೈಲ್ ಗಳನ್ನು ಸುಧಾರಣೆ, ಅಂಡೋತ್ಪತ್ತಿಯ ಪ್ರಮಾಣಗಳು, ಅಂಡಾಣುವಿನ ಆರೋಗ್ಯ, ಎಂಡೋಮೆಟ್ರಿಯಲ್ ರಿಸೆಪ್ಟಿವಿಟಿ, ಇನ್ಸುಲಿನ್ ಪ್ರತಿರೋಧ ಮತ್ತಿತರೆ ಚಯಾಪಚಯ ನಿಯತಾಂಕಗಳು ಕಾರಣವಾಗುತ್ತವೆ.

ಪ್ರಮುಖಾಂಶಗಳು:

1.ಪಿಸಿಒಎಸ್ ಉಳ್ಳ ಮಹಿಳೆಯರಲ್ಲಿ ಹೆಚ್ಚಿನ ಬಿಎಂಐ ಗರ್ಭಧಾರಣೆಯ ಸಾಧ್ಯತೆ ಕಡಿಮೆ ಮಾಡುತ್ತದೆ.

2.ಪಿಸಿಒಎಸ್ ರೋಗಪರೀಕ್ಷೆಯ ನಂತರ ತೂಕನಷ್ಟವು ಸ್ಥಿರವಾದ ತೂಕ ಅಥವಾ ತೂಕ ಹೆಚ್ಚಿಸಿಕೊಂಡವರಿಗೆ ಹೋಲಿಸಿದರೆ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿರುತ್ತದೆ.

3.ಪಿಸಿಒಎಸ್ ರೋಗಪರೀಕ್ಷೆಯ ನಂತರ ಶೇ.5ರಿಂದ ಶೇ.15ರಷ್ಟು ತೂಕ ನಷ್ಟವು ಗರ್ಭಧಾರಣೆಯನ್ನು ಹೆಚ್ಚಿಸುತ್ತದೆ.

4.ಬಿಎಂಐ 45ಕ್ಕಿಂತ ಹೆಚ್ಚಿರುವ ಶೇ.10ಕ್ಕಿಂತ ಕಡಿಮೆ ಮಹಿಳೆಯರು ಗರ್ಭಧಾರಣೆ ಹೊಂದಬಲ್ಲರು.

5.31 ವರ್ಷ ವಯಸ್ಸಿನ ಮಹಿಳೆಗೆ(ಪಿಸಿಒಎಸ್ ರೋಗಪರೀಕ್ಷೆಯಲ್ಲಿ) 35ಕ್ಕಿಂತ ಹೆಚ್ಚು ಬಿಎಂಐ ಇದ್ದಲ್ಲಿ ಸಾಮಾನ್ಯ ತೂಕದ 27 ವರ್ಷದ ಮಹಿಳೆಗಿಂತ ಗರ್ಭಧಾರಣೆಯ ಸಾಧ್ಯತೆ ಅರ್ಧದಷ್ಟು ಇರುತ್ತದೆ.

6.31 ವರ್ಷ ವಯಸ್ಸಿನ 35ಕ್ಕಿಂತ ಹೆಚ್ಚು ಬಿಎಂಐ ಹೊಂದಿರುವ ಮಹಿಳೆಗೆ ಸಾಮಾನ್ಯ ತೂಕದ ಮತ್ತು ಪಿಸಿಒಎಸ್ ಪರೀಕ್ಷೆಯ ಸಂದರ್ಭದಲ್ಲಿ 35 ವಯಸ್ಸಿರುವ ಮಹಿಳೆಗಿಂತ ಗರ್ಭಧಾರಣೆ ಸಾಧ್ಯತೆ ಹೆಚ್ಚಾಗಿರುತ್ತದೆ.

7.40ಕ್ಕಿಂತ ಹೆಚ್ಚು ಬಿಎಂಐ ಒಳಗೊಂಡ ಮಹಿಳೆಗೆ ಗರ್ಭಧಾರಣೆಯ ಸಾಧ್ಯತೆಯು ಸಾಮಾನ್ಯ ತೂಕದ ಮಹಿಳೆಗೆ ಹೋಲಿಸಿದರೆ ಶೇ.63ರಷ್ಟು ಕಡಿಮೆ ಇರುತ್ತದೆ.

8.ಪಿಸಿಒಎಸ್ ರೋಗಪರೀಕ್ಷೆಯ ನಂತರ ಶೇ.5 ತೂಕ ಪಡೆಯುವುದು ಗರ್ಭಧಾರಣೆಯ ಸಾಧ್ಯತೆಯನ್ನು ಕೊಂಚ ಕಡಿಮೆ ಮಾಡುತ್ತದೆ.

ಪ್ರಮುಖ ಸೂಚಕಗಳು ಗರ್ಭಧಾರಣೆಯ ಸಾಧ್ಯತೆ 
ಪಿಸಿಒಎಸ್+ ತೂಕ ಗಳಿಕೆ ಕಡಿಮೆ
ಪಿಸಿಒಎಸ್+ತೂಕ ನಷ್ಟ ಹೆಚ್ಚು
ಪಿಸಿಒಎಸ್+ ಸ್ಥಿರ ತೂಕ ಕಡಿಮೆ

ಪಿಸಿಒಎಸ್ ಮತ್ತು ಅತಿಯಾದ ತೂಕ ಹೊಂದಿರುವ ಮಹಿಳೆಯರ ಆರೋಗ್ಯದ ಗುರಿಗಳು:

ಪಿಸಿಒಎಸ್ ಅನ್ನು ಗುಣಪಡಿಸಲು ಸಾಧ್ಯವಿಲ್ಲ; ಆದರೆ ಭರವಸೆ ಕಳೆದುಕೊಳ್ಳಬೇಡಿ. ಜೀವನಶೈಲಿ ಬದಲಾವಣೆಗಳು ನಿಮಗೆ ಆರೋಗ್ಯಕರವಾಗಿರಲು ಮತ್ತು ಗರ್ಭಧಾರಣೆ ಹೊಂದಲು ನೆರವಾಗುತ್ತವೆ. ಹಲವಾರು ಗರ್ಭಧಾರಣೆ ಸಂಬಂಧಿತ ಸಂಕೀರ್ಣತೆಗಳನ್ನು ಕೂಡಾ ಸಮತೋಲನದ ಪಥ್ಯ, ತೂಕ ಇಳಿಸುವಿಕೆ ಮತ್ತು ನಿಯಮಿತ ವ್ಯಾಯಾಮದಿಂದ ತಪ್ಪಿಸಬಹುದು. ಸದಾ ಉತ್ತೇಜನದಿಂದಿರಿ ಮತ್ತು ನಿಮ್ಮನ್ನು ಆರೋಗ್ಯಕರ ಮತ್ತು ಸಂತೋಷವಾಗಿರಿಸುವ ಕಠಿಣ ದಿನಚರಿ ಅನುಸರಿಸಿ.

1.ನೀವು ಗರ್ಭಧಾರಣೆ ಯೋಜಿಸುತ್ತಿದ್ದರೆ ಆರೋಗ್ಯಕರ ತೂಕ ಹೊಂದಿರಲು ಪ್ರಯತ್ನಿಸಿ. ತೂಕನಷ್ಟವು ಋತುಚಕ್ರವನ್ನು ನಿಯಮಿತಗೊಳಿಸಲು ಮತ್ತು ನಿಮಗೆ ಗರ್ಭಧಾರಣೆ ಹೊಂದಲು ನೆರವಾಗಬಲ್ಲದು.

2.ಇನ್ಸುಲಿನ್ ಪ್ರತಿರೋಧವು ಪಿಸಿಒಎಸ್ ಉಳ್ಳ ಮಹಿಳೆಯರ ಪ್ರಮುಖ ಸಮಸ್ಯೆಯಾಗಿದೆ. ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಿ ಮತ್ತು ಸಕ್ಕರೆಗಳ ಸೇವನೆ ಕಡಿಮೆ ಮಾಡಿ. ಸಾಕಷ್ಟು ನಾರಿನಂಶ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಳ್ಳುವ ಮೂಲಕ ಮಧುಮೇಹ ಮತ್ತು ಹೃದಯರೋಗದ ತೊಂದರೆ ಕಡಿಮೆ ಮಾಡಿ.

3.ಕ್ಯಾಲೊರಿಗಳನ್ನು ಕಡಿತಗೊಳಿಸಿ; ವ್ಯಾಯಾಮವನ್ನು ನಿಮ್ಮ ದಿನಚರಿಯ ಭಾಗವಾಗಿಸಿ.

ಸೇವಿಸಬಾರದ ಆಹಾರಗಳು ಸೇವಿಸಬೇಕಾದ ಆಹಾರಗಳು
ಸ್ಯಾಚುರೇಟೆಡ್ ಫ್ಯಾಟ್ ಗಳು(ಬಿಸ್ಕತ್ತು,ಕೇಕ್, ಬೆಣ್ಣೆ) ಹುರುಳೀಕಾಯಿ, ಹಸಿರು ತರಕಾರಿಗಳು
ಕೆಂಪು ಮಾಂಸ ಕಂದು ಅಕ್ಕಿ, ಬಾರ್ಲೀ
ಕರಿದ ಆಹಾರಗಳು ಸೊಪ್ಪು, ಹೂಕೋಸು, ಟೊಮ್ಯಾಟೊ
ಮದ್ಯಪಾನ ಸಾಲ್ಮನ್ ಮತ್ತಿತರೆ ಒಮೇಗಾ-ರ ಫ್ಯಾಟಿ ಆಮ್ಲ ಹೆಚ್ಚಿರುವ ಮೀನು 
ಸೋಡಾ ಹಣ್ಣುಗಳು

 

Write a Comment

BOOK A FREE CONSULTATION