IVF

ಐ.ವಿ.ಎಫ್/ಐ.ಯು.ಐ.ಗೆ ಅಂಡಾಶಯದ ಪ್ರಚೋದನೆಯ ಕುರಿತು ನಿಮಗೆ ಗೊತ್ತೇ?

ಐ.ವಿ.ಎಫ್/ಐ.ಯು.ಐ.ಗೆ ಅಂಡಾಶಯದ ಪ್ರಚೋದನೆಯ ಕುರಿತು ನಿಮಗೆ ಗೊತ್ತೇ?

Author: Dr.Hema Vaithianathan ,Senior Consultant & Fertility Specialist

ಬಂಜೆತನ ವಿಶ್ವದಾದ್ಯಂತ 6 ವ್ಯಕ್ತಿಗಳಲ್ಲಿ 1 ಮಂದಿಗೆ ಬಾಧಿಸುವ ಸಮಸ್ಯೆಯಾಗಿದೆ.

ಬಂಜೆತನವು ಪುರುಷರು ಹಾಗೂ ಮಹಿಳೆಯರ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯಕ್ಕೆ ಅಪಾರ ಪರಿಣಾಮ ಬೀರುತ್ತದೆ.

ಅಸಿಸ್ಟೆಡ್ ರೀಪ್ರೊಡಕ್ಟಿವ್ ಟೆಕ್ನಾಲಜೀಸ್(ಎ.ಆರ್.ಟಿ.) ಪರಿಣಾಮಕಾರಿಯಾಗಿ ಯೋಜಿಸಿದ ಸಂಕೀರ್ಣ ಪ್ರಕ್ರಿಯೆಗಳ ಗುಚ್ಛವಾಗಿದ್ಉ ಅವುಗಳು ಫಲವಂತಿಕೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ನಿರಾಳತೆ ನೀಡುತ್ತವೆ.

ತಾಂತ್ರಿಕ ಸುಧಾರಣೆಗಳು ಮತ್ತು ಪುರಾವೆ ಆಧರಿತ ಸಂಶೋಧನೆಯಿಂದ ಈ ಪ್ರಕ್ರಿಯೆಗಳನ್ನು ಚಿಕಿತ್ಸೆಗೆ ತೆಗೆದುಕೊಳ್ಳುವ ಸಮಯ ಮತ್ತು ಸುಲಭ ಯೋಜನೆ ಮತ್ತು ಚಿಕಿತ್ಸೆಯ ನಿರ್ವಹಣೆಗೆ ಅನುಗುಣವಾಗಿ ಬದಲಾಯಿಸಲಾಗಿದೆ ಮತ್ತು ಸರಳೀಕರಿಸಲಾಗಿದೆ. ಈ ಸುಧಾರಣೆಗಳು ಪ್ರಸ್ತುತ ಅಸಿಸ್ಟೆಡ್ ರೀಪ್ರೊಡಕ್ಟಿವ್ ಚಿಕಿತ್ಸೆಯನ್ನು `ರೋಗಿಯ ಸ್ನೇಹಿ’ ಮತ್ತು ಹಚ್ಚು ಯಶಸ್ವಿಯಾಗಿಸಿವೆ.

ಐ.ವಿ.ಎಫ್. ಮತ್ತು ಐ.ಯು.ಐ.ನಂತಹ ಚಿಕಿತ್ಸೆಗಳಲ್ಲಿ ಈ ಚಿಕಿತ್ಸೆಯ ಯಶಸ್ಸು ಉನ್ನತ ಗುಣಮಟ್ಟದ ಗ್ಯಾಮಿಟ್ ಗಳನ್ನು ಪಡೆದುಕೊಳ್ಳುವುದರಲ್ಲಿದೆ. ಪ್ರಾರಂಭಿಕ ದಿನಗಳಲ್ಲಿ ಅಸಿಸ್ಟೆಡ್ ರೀಪ್ರೊಡಕ್ಟಿವ್ ಚಿಕಿತ್ಸೆಗಳನ್ನು ಸಹಜವಾದ ಋತುಚಕ್ರದ ಸಂದರ್ಭದಲ್ಲಿ ನಡೆಸಲಾಗುತ್ತಿತ್ತು. ಅಂಡಾಣುಗಳನ್ನು ನೈಸರ್ಗಿಕ ಅಂಡೋತ್ಪತ್ತಿಯ ಸಂದರ್ಭದಲ್ಲಿ ಪಡೆದುಕೊಳ್ಳಲಾಗುತ್ತಿತ್ತು. ನಂತರ ಅಂಡಾಶಯದ ಪ್ರಚೋದನೆಗೆ ಹೊಸ ಔಷಧಗಳನ್ನು ಕಂಡು ಹಿಡಿದ ನಂತರ ಅಂಡಾಶಯದ ಪ್ರಚೋದನೆಯ ಸುಧಾರಿತ ಹಂತವನ್ನು ಎ.ಆರ್.ಟಿ. ಚಿಕಿತ್ಸೆಯೊಂದಿಗೆ ಒಗ್ಗೂಡಿಸಲಾಗಿದೆ.

ಅಂಡಾಶಯ ಪ್ರಚೋದನೆ:

ಕೆಲ ಔಷಧಗಳ(ಹಾರ್ಮೋನಲ್ ಡಿರೈವೇಟಿವ್ಸ್) ಬಳಕೆಯಿಂದ ಪಕ್ವಗೊಂಡ ಅಂಡಾಣುಗಳನ್ನು ಉತ್ಪಾದಿಸುವಂತೆ ಅಂಡಾಶಯವನ್ನು ಪ್ರಚೋದಿಸಲಾಗುತ್ತದೆ.

ಈ ಪ್ರಕ್ರಿಯೆಯು ತಕ್ಕಷ್ಟು ಮತ್ತು ಹಲವಾರು ಉತ್ತಮ ಗುಣಮಟ್ಟದ ಭ್ರೂಣಗಳನ್ನು ಗರ್ಭಾಶಯಕ್ಕೆ ವರ್ಗಾಯಿಸಲು ಅವಕಾಶ ನೀಡುವ ಮೂಲಕ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಇದರೊಂದಿಗೆ ಇದು ಕಡಿಮೆ ಅಂಡಾಣು ಸಂಗ್ರಹ ಮತ್ತು ಅವರ ಫಲವಂತಿಕೆ ಸಂರಕ್ಷಿಸುವವರಿಗೆ ಕೂಡಾ ನೆರವಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಅಂಡಾಶಯಕ್ಕೆ 8-14 ದಿನಗಳ ಕಾಲ ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್(ಎಸ್.ಎಫ್.ಎಚ್.) ಇಂಜೆಕ್ಷನ್ ಮತ್ತು ಲುಟೀನೈಜಿಂಗ್ ಹಾರ್ಮೋನ್(ಎಲ್.ಎಚ್.) ನೀಡುವ ಮೂಲಕ ಅಂಡಾಣು ಪಡೆಯಲು ಹೆಚ್ಚು ಅಂಡೋತ್ಪತ್ತಿ

ಮಾಡಲಾಗುತ್ತದೆ. ಈ ಹಾರ್ಮೋನುಗಳು ದೇಹದಲ್ಲಿ ಸಹಜವಾಗಿ ಉತ್ಪಾದನೆಯಾದರೂ ಇಂಜೆಕ್ಷನ್ ಗಳು ಈ ಹಾರ್ಮೋನುಗಳ ಉನ್ನತ ಮಟ್ಟ ಕಾಪಾಡಲು ನೆರವಾಗುತ್ತವೆ, ಇದರಿಂದ ಅಂಡಾಶಯದಲ್ಲಿ ಹಲವಾರು ಅಂಡಾಣುಗಳು ಪಕ್ವಗೊಳ್ಳುತ್ತವೆ.

ಪ್ರಚೋದನೆಗೆ ತೆಗೆದುಕೊಳ್ಳುವ ಸಮಯ ಫಾಲಿಕಲ್ಸ್ ಪಕ್ವಗೊಳ್ಳುವ ಸಮಯವನ್ನು ಆಧರಿಸುತ್ತದೆ.

ಕೆಲವೊಮ್ಮೆ ಓವರಿಯನ್ ಫಾಲಿಕಲ್ಸ್ ಅನ್ನು ಸಿದ್ಧಗೊಳಿಸಲು ಅಂಡಾಶಯದ ಪ್ರಚೋದನೆ ಪ್ರಾರಂಭವಾಗುವ ಮುನ್ನ

ಹಾರ್ಮೋನುಗಳ ಔಷಧಗಳನ್ನು ಸೂಚಿಸಲಾಗುತ್ತದೆ.

ಒಮ್ಮೆ ಚಿಕಿತ್ಸೆ ಪ್ರಾರಂಭಿಸಿದ ನಂತರ ಏನನ್ನು ನಿರೀಕ್ಷಿಸಬಹುದು?

  1. ಹಾರ್ಮೋನುಗಳ ಔಷಧಗಳನ್ನು ಪ್ರತಿನಿತ್ಯ ನೀಡಲಾಗುತ್ತದೆ
  2. ದೇಹದ ಹಾರ್ಮೋನು ಮಟ್ಟವನ್ನು ಪರೀಕ್ಷಿಸಲು ನಿಯಮಿತ ರಕ್ತ ಪರೀಕ್ಷೆ ಮಾಡಲಾಗುತ್ತದೆ
  3. ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡುವ ಮೂಲಕ ಅಂಡಾಶಯದಲ್ಲಿನ ಫಾಲಿಕಲ್ ಗಳ ಬೆಳವಣಿಗೆಯನ್ನು ಅಂದಾಜಿಸಲಾಗುತ್ತದೆ
  4. ಔಷಧಗಳು ಮತ್ತು ಹಾರ್ಮೋನು ಇಂಜೆಕ್ಷನ್ ಗಳು ಮೂಡ್ ಬದಲಾವಣೆಯತಹ ಕೆಲ ಪರಿಣಾಮಗಳನ್ನು ತರಬಹುದು
  5. ನಿರೀಕ್ಷೆಯಂತೆ ಅಂಡಾಶಯ ಪ್ರತಿಕ್ರಿಯಿಸದೇ ಇದ್ದರೆ ಈ ಆವರ್ತ ರದ್ದುಪಡಿಸಬೇಕಾಗಬಹುದು
 

ಈ ಅಡ್ಡ ಪರಿಣಾಮಗಳು ಉಂಟಾಗಬಹುದು:

  1. ಸ್ತನದ ಮೃದುತ್ವ
  2. ಇಂಜೆಕ್ಷನ್ ನೀಡಿದ ಪ್ರದೇಶದಲ್ಲಿ ಊತ ಅಥವಾ ದದ್ದು
  3. ನೈಸರ್ಗಿಕ ಗರ್ಭಧಾರಣೆಯ ಸಂದರ್ಭದಲ್ಲಿ ಹಲವು ಫಲವಂತಿಕೆಯ ಭ್ರೂಣಗಳು
  4. ಓವರಿಯನ್ ಹೈಪರ್ ಸ್ಟಿಮುಲೇಷನ್ ಸಿಂಡ್ರೋಮ್
  5. ಮೂಡ್ ಬದಲಾವಣೆಗಳು ಮತ್ತು ಕಿರಿಕಿರಿ
 

ಓವರಿಯನ್ ಹೈಪರ್ ಸ್ಟಿಮುಲೇಷನ್ ಸಿಂಡ್ರೋಮ್(ಒ.ಎಚ್.ಎಸ್.ಎಸ್.)

ಹೆಸರೇ ಹೇಳುವಂತೆ, ಅಂಡಾಶಯಗಳು ಅತಿಯಾದ ಪ್ರಚೋದನೆಗೊಂಡು ಹೆಚ್ಚು ಹಾರ್ಮೋನುಗಳಿಂದ ಊತ ಉಂಟಾದಾಗ ಮತ್ತು ದೇಹದಲ್ಲಿ ದ್ರವ ಸೋರುವಿಕೆ ಪ್ರಾರಂಭವಾದಾಗ ಈ ಸಮಸ್ಯೆಯು ಉಂಟಾಗುತ್ತದೆ.

ಐ.ವಿ.ಎಫ್. ಚಿಕಿತ್ಸೆ ಪಡೆಯುತ್ತಿರುವ ಪಿಸಿಒಎಸ್ ಉಳ್ಳ ಮಹಿಳೆಯರಲ್ಲಿ ಇದು ಸಾಮಾನ್ಯ.

ಚಿಕಿತ್ಸೆಯು ಈ ರೋಗದ ತೀವ್ರತೆ ಮತ್ತು ಲಕ್ಷಣಗಳನ್ನು ಆಧರಿಸಿರುತ್ತದೆ.

ಒ.ಎಚ್.ಎಸ್.ಎಸ್. ತೊಂದರೆ ಹೆಚ್ಚಿಸುವ ಮಹಿಳೆಯರು ಸಿಎಪಿಎ-ಐವಿಎಂ ಆಯ್ಕೆ ಮಾಡಿಕೊಳ್ಳಬಹುದು.

ಸಿಎಪಿಎ-ಐವಿಎಂ, ಔಷಧಮುಕ್ತ ಐವಿಎಫ್ ಚಿಕಿತ್ಸೆ

ಇದು ಇನ್ ವಿಟ್ರೊ ಮೆಚುರೇಷನ್(ಐವಿಎಂ)ನ ಸುಧಾರಿತ ಆವೃತ್ತಿಯಾಗಿದೆ ಮತ್ತು ಸಾಂಪ್ರದಾಯಿಕ ಇನ್ ವಿಟ್ರೊ ಫರ್ಟಿಲೈಸೇಷನ್(ಐವಿಎಫ್)ನಲ್ಲಿ ಇಂಜೆಕ್ಷನ್ ಗಳ ಸಂಖ್ಯೆ ಮತ್ತು ತೀವ್ರವಾದ ಅಡ್ಡ ಪರಿಣಾಮಗಳನ್ನು ಹೊರತಾಗಿಸಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಇದು ಕಡಿಮೆ ವೆಚ್ಚ ಮತ್ತು ಕಡಿಮೆ ತೀವ್ರತೆಯ ಪ್ರಕ್ರಿಯೆಯಾಗಿದ್ದು ಪಿಸಿಒಎಸ್ ಉಳ್ಳ ಮಹಿಳೆಯರಿಗೆ, ಹೆಚ್ಚಿನ ಪ್ರಮಾಣದ ಓವರಿಯನ್ ಹೈಪರ್ ಸ್ಟಿಮುಲೇಷನ್ ಸಿಂಡ್ರೋಮ್(ಒ.ಎಚ್.ಎಸ್.ಎಸ್.) ಉಳ್ಳವರಿಗೆ ಶಿಫಾರಸು ಮಾಡಲಾಗುತ್ತದೆ.

ಈ ಪ್ರಕ್ರಿಯೆಗೆ ಯಾವುದೇ ಅಂಡಾಶಯದ ಪ್ರಚೋದನೆ ಅಗತ್ಯವಿಲ್ಲ ಅಥವಾ ಕನಿಷ್ಠತಮವಾಗಿರುತ್ತದೆ.

ನೀವು ಅಂಡಾಶಯದ ಪ್ರಚೋದನೆಗೆ ಒಳಗಾಗುವಂತಿದ್ದರೆ ಈ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ:

  1. 1.ಸದಾ ನಿಮ್ಮ ಔಷಧಗಳು, ಪರೀಕ್ಷೆಗಳು ಮತ್ತು ಸ್ಕ್ಯಾನ್ ಗಳನ್ನು ಗಮನಿಸುತ್ತಿರಿ
  2. 2.ಯಾವುದೇ ಕಾಳಜಿಯ ರೋಗ ಲಕ್ಷಣಗಳಿದ್ದಲ್ಲಿ ತಕ್ಷಣದ ವೈದ್ಯರ ಗಮನಕ್ಕರ ತರುವುದು
  3. 3.ಈ ಪ್ರಕ್ರಿಯೆಯು ಕೆಲವೊಮ್ಮೆ ಅತಿಯಾದ ಸಂಕಷ್ಟದ್ದು ಮತ್ತು ಒತ್ತಡ ತರುವಂಥದ್ದು. ನಿಮಗೆ ನೀವು ಕರುಣೆ ಮತ್ತು ಮೃದುವಾಗಿರಿ

Was this article helpful?
YesNo

fill up the form to get a

Free Consultation

Your data is 100% safe with us.

Avail 0% interest on EMI
All Procedures | No Upper Limit

How we reviewed this article:

HISTORY
  • Current Version
  • September 11, 2023 by Oasis Fertility
  • August 29, 2023 by Oasis Fertility

LatestTrending

Ad

BOOK A FREE CONSULTATION

Book

Appointment

Call Us

1800-3001-1000