PCOD Management

ಸೂಕ್ತವಾದ ಆಹಾರ ಸೇವನೆ ಪಿಸಿಒಎಸ್ ಉಳ್ಳ ಮಹಿಳೆಯರಿಗೆ ಗರ್ಭದಾರಣೆಗೆ ನೆರವಾಗುತ್ತದೆಯೇ?

Author: Dr. Sai Manasa Darla, Consultant, Fertility Specialist & Laparoscopic Surgeon

ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್(ಪಿಸಿಒಎಸ್) ಮಹಿಳೆಯರಲ್ಲಿ ಬಂಜೆತನ ಉಂಟು ಮಾಡುವ ಪ್ರಮುಖ ಕಾರಣವಾಗಿದೆ ಮತ್ತು ಅದು ಸಂತಾನೋತ್ಪಾದನೆಯ ವಯಸ್ಸಿನ ಶೇ.6ರಿಂದ ಶೇ.12ರಷ್ಟು ಮಹಿಳೆಯರನ್ನು ಬಾಧಿಸುತ್ತದೆ.

ಪಿಸಿಒಎಸ್ ಅಂಡಾಶಯಗಳು ಮತ್ತು ಋತುಚಕ್ರಗಳಿಗೆ ಸೀಮಿತವಾಗಿಲ್ಲ. ನಿಯಮಿತ ಋತುಚಕ್ರಗಳು ಮತ್ತು ಅಂಡಾಶಯದ ಚೀಲಗಳೊಂದಿಗೆ ಪಿಸಿಒಎಸ್ ಬೊಜ್ಜು, ಇನ್ಸುಲಿನ್ ಪ್ರತಿರೋಧ, ಸಂತಾನೋತ್ಪಾದನೆಯ ಹಾರ್ಮೋನು ಅಸಮತೋನ ಮತ್ತು ಹಿರ್ಸುಟಿಸಂ(ಅಸಹಜ ಕೂದಲ ಬೆಳವಣಿಗೆ) ಉಂಟು ಮಾಡುತ್ತದೆ.

ವೈದ್ಯಕೀಯ ಚಿಕಿತ್ಸೆಯೊಂದಿಗೆ ಪಧ್ಯವು ಪಿಸಿಒಎಸ್ ರೋಗಲಕ್ಷಣಗಳನ್ನು ನಿವಾರಿಸುವಲ್ಲಿ ಮತ್ತು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ. ಹಲವಾರು ಅಧ್ಯಯನಗಳ ಪ್ರಕಾರ ಮಹಿಳೆಯರಲ್ಲಿ ಫಲವಂತಿಕೆ ಸುಧಾರಿಸುವಲ್ಲಿ ಮತ್ತು ಜೀವನದ ಗುಣಮಟ್ಟದ ಮೇಲೆ ಅದರ ಪರಿಣಾಮ ಕಡಿಮೆ ಮಾಡುವಲ್ಲಿ ಪಥ್ಯದ ಪ್ರಾಮುಖ್ಯತೆಯನ್ನು ಎತ್ತಿ ಹೇಳಿವೆ.

ಪಿಸಿಒಎಸ್ ನಿರ್ವಹಣೆ ಮತ್ತು ಫಲವಂತಿಕೆ ಸುಧಾರಿಸಲು ಪಥ್ಯದ ಸಲಹೆಗಳು

1. ಸಮಗ್ರ ಆಹಾರ ಸೇವಿಸಿರಿ

ಸಮಗ್ರ ಆಹಾರವುಳ್ಳ ಭೋಜನ ಅಂದರೆ ಧಾನ್ಯಗಳು(ಗೋಧಿ, ಕಂದು ಅಕ್ಕಿ ಇತ್ಯಾದಿ), ತಾಜಾ ಹಣ್ಣುಗಳು ಮತ್ತು ತರಕಾರಿಗಳ ಆಹಾರ ಸೇವಿಸಿ, ಆರೋಗ್ಯಕರ ಕೊಬ್ಬುಗಳಾದ ಅವಕಾಡೊ ಮತ್ತು ಬೀಜಗಳು, ತೆಳು ಮಾಂಸ ಮತ್ತು ಸಸ್ಯಜನ್ಯ ಪ್ರೊಟೀನ್(ಸೊಪ್ಪು ಮತ್ತು ಹುರುಳಿಕಾಯಿ) ಸೇವಿಸಿ.

2. ನಿಮ್ಮ ಕಾರ್ಬ್ ಗಮನಿಸಿ

ನಿಮ್ಮ ಕಾರ್ಬೊಹೈಡ್ರೇಟ್ ಸೇವನೆ ಮಿತಿಗೊಳಿಸಿ. ಕಾರ್ಬೊಹೈಡ್ರೇಟ್ ಗಳು ಇನ್ಸುಲಿನ್ ಮಟ್ಟಕ್ಕೆ ಪರಿಣಾಮ ಬೀರುತ್ತವೆ, ಇದರಿಂದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ. ರಿಫೈನ್ಡ್ ಕಾರ್ಬೊಹೈಡ್ರೇಟ್ ಗಳು ಅಂದರೆ ರಿಫೈನ್ಡ್ ಹಿಟ್ಟು, ಬಿಳಿ ಬ್ರೆಡ್ ಮತ್ತು ಪಾಸ್ತಾ, ಇನ್ಸ್ ಟಂಟ್ ಫುಡ್ಸ್, ಸಕ್ಕರೆ, ಪಿಝಾ, ಬ್ರೇಕ್ ಫಾಸ್ಟ್ ಸೆರಿಯಲ್ಸ್ ಮತ್ತು ಫ್ರೈಡ್ ಫುಡ್ಸ್ ನಿಂದ ದೂರವಿರಿ.

3. ನಾರಿನಂಶ ಸೇವನೆ ಹೆಚ್ಚಿಸಿ

ಪಿಸಿಒಎಸ್ ಉಳ್ಳ ಮಹಿಳೆಯರು ಇನ್ಸುಲಿನ್ ಪ್ರತಿರೋಧ ಬೆಳೆಸಿಕೊಳ್ಳುತ್ತಾರೆ ಮತ್ತು ಇದು ರಕ್ತದ ಸಕ್ಕರೆ ಅಂಶ ಹೆಚ್ಚಿಸಬಹುದು. ನಾರಿನಂಶ ಸೇವನೆ ಇನ್ಸುಲಿನ್ ಮಟ್ಟ ನಿಯಂತ್ರಣದಲ್ಲಿರಿಸಲು ಮತ್ತು ರಕ್ತದ ಸಕ್ಕರೆ ಮಟ್ಟ ಕಡಿಮೆ . ಇರಿಸಿಕೊಳ್ಳಲು ನೆರವಾಗುತ್ತದೆ. ನಾರಿನಂಶವು ಜೀರ್ಣವಾಗುವುದನ್ನು ಮತ್ತು ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ನಾರಿನಂಶವುಳ್ಳ ಆಹಾರ ಸೇರಿಸಿ.

4. ಪ್ರೊಟೀನ್ ಗಳನ್ನು ಸೇರಿಸಿ

ದೇಹದಲ್ಲಿ ಸ್ನಾಯುಗಳನ್ನು ರಿಪೇರಿ ಮತ್ತು ನಿರ್ಮಾಣ ಮಾಡುವುದರೊಂದಿಗೆ ಪ್ರೊಟೀನ್ ಇನ್ಸುಲಿನ್ ಮಟ್ಟ ಹೆಚ್ಚಿಸಲು ಮತ್ತು ಉರಿಯೂತ ಕಡಿಮೆ ಮಾಡಲು ನೆರವಾಗುತ್ತದೆ. ಸಸ್ಯ ಜನ್ಯ ಆಯ್ಕೆಗಳಾದ ಹಣ್ಣುಗಳು, ತರಕಾರಿಗಳು, ಬೀಜಗಳು, ಮೊಳಕೆಕಾಳುಗಳು ಮತ್ತು ಬೇಳೆಕಾಳುಗಳು ಹೆಚ್ಚು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿರುತ್ತವೆ. ಮೀನು, ಮೊಟ್ಟೆಗಳು, ಚಿಕನ್, ಪನೀರ್ ಮತ್ತು ಟೊಫುವಿನಂತಹ ಪ್ರೊಟೀನ್ ಬಳಸಿ. ಕೆಂಪು ಮಾಂಸ ತಪ್ಪಿಸಿ.

5. ಹೆಚ್ಚುವರಿ ಸಕ್ಕರೆ? ದೂರವಿರಿ

ಯಾವುದೇ ಸಕ್ಕರೆ ಆಧರಿತ ಪಾನೀಯಗಳು, ಸಂಸ್ಕರಿಸಿದ ಆಹಾರಗಳು ಮತ್ತು ಡೆಸೆರ್ಟ್ಸ್ ನಿಂದ ದೂರವಿರಿ. ಸೇರಿಸಲಾದ ಸಕ್ಕರೆಗಳು ತೂಕ ಹೆಚ್ಚಿಸುತ್ತವೆ, ಉರಿಯೂತ ಮತ್ತು ಬೊಜ್ಜು ಹೆಚ್ಚಿಸುತ್ತವೆ. ಇದರಿಂದ ಗರ್ಭದಾರಣೆ ಕಷ್ಟವಾಗುತ್ತದೆ. ಜೇನು ಮತ್ತು ಮೇಪಲ್ ಸಿರಪ್ ನಂತಹ ಪರ್ಯಾಯ ಸಿಹಿಗಳನ್ನು ಬಳಸಿ.

6. ಒಮೇಗಾ-3 ಫ್ಯಾಟಿ ಆಮ್ಲಗಳನ್ನು ಸೇವಿಸಿ

ಒಮೇಗಾ-3 ಫ್ಯಾಟಿ ಆಮ್ಲಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ. ಒಮೇಗಾ-3 ಫ್ಯಾಟಿ ಆಮ್ಲಗಳ ಕೆಲ ಮೂಲಗಳಲ್ಲಿ ವಾಲ್ ನಟ್ ಗಳು, ಚಿಯಾ ಸೀಡ್ ಗಳು, ಫ್ಲಾಕ್ಸ ಸೀಡ್ ಗಳು, ಆಲಿವ್ ಎಣ್ಣೆ ಮತ್ತು ಮೀನು ರೀತಿಯ ಟುನಾ ಮತ್ತು ಸಾಲ್ಮನ್ ಮೀನು ಒಳಗೊಂಡಿವೆ.

7. ಸಸ್ಯ ಜನ್ಯ ಆಹಾರಗಳನ್ನು ಸೇವಿಸಿ

ಸಸ್ಯ ಜನ್ಯ ಆಹಾರಗಳು ಉತ್ತಮ ಇನ್ಸುಲಿನ್ ಸೆನ್ಸಿಟಿವಿಟಿಗೆ ನೆರವಾಗುತ್ತವೆ ಮತ್ತು ಪಿಸಿಒಎಸ್ ಉಳ್ಳ ಮಹಿಳೆಯರಲ್ಲಿ ಋತುಚಕ್ರ ನಿಯಂತ್ರಿಸುತ್ತವೆ.

8. ಹೈಡ್ರೇಟ್ ಆಗಿರಿ

ಅಗತ್ಯವಿದ್ದಷ್ಟು ನೀರು ಸೇವಿಸುವುದು ಒಟ್ಟಾರೆ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮ ಅಲ್ಲಗಳೆಯುವಂತಿಲ್ಲ. ಪ್ರತಿನಿತ್ಯ 8-10 ಲೋಟ ನೀರು ಸೇವಿಸಿ. ಸಕ್ಕರೆಯ ಪಾನೀಯಗಳನ್ನು ತಪ್ಪಿಸಿ.

9. ಪೂರಕಗಳನ್ನು ಸೇವಿಸಿ

ಆರೋಗ್ಯಕರ ಸಮತೋಲನದ ಆಹಾರ ಸೇವಿಸಿದರೂ ಕೆಲವೊಮ್ಮೆ ಪೂರಕ ಆಹಾರ ಸೇವಿಸುವುದು ಅನುಕೂಲಕರ. ಯಾವುದೇ ಪೂರಕ ಆಹಾರ ಸೇವಿಸುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸುವ ಮೂಲಕ ಔಷಧದ ಅಡ್ಡ ಪರಿಣಾಮಗಳನ್ನು ತಪ್ಪಿಸಿ.

10. ಕೆಫೀನ್ ಮತ್ತು ಮದ್ಯ ಬೇಡ

ಬೆಳಿಗ್ಗೆ ಎದ್ದು ಕಾಫಿ ಸೇವಿಸುವಿರಾದರೆ ಸ್ವಲ್ಪ ಪ್ರಮಾಣದ ಕಾಫಿ ಸೇವಿಸುವ ಮೂಲಕ ನಿಮ್ಮ ದಿನಚರಿ ಪ್ರಾರಂಭಿಸಿ. ದಿನಕ್ಕೆ 1-2 ಕಪ್ ಗಳಷ್ಟು ಕಾಫಿಗೆ ಸೀಮಿತವಾಗಿರಿ. ಡಿ-ಕೆಫಿನೇಟೆಡ್ ಪಾನೀಯಗಳಿಗೆ ಆದ್ಯತೆ ನೀಡಿ. ಮಲಗುವ ಮುನ್ನ ಕಾಫಿ ಸೇವನೆ ಬೇಡ.

ಗರ್ಭಧಾರಣೆ ಯೋಜಿಸುತ್ತಿದ್ದರೆ ಮದ್ಯ ಸೇವನೆ ಮಾಡಬೇಡಿ, ಏಕೆಂದರೆ ಅದು ಹಾರ್ಮೋನಿನ ಅಸಮತೋಲನ ಉಂಟು ಮಾಡುತ್ತದೆ ಮತ್ತು ಫಲವಂತಿಕೆಗೆ ಹಾನಿಯಂಟು ಮಾಡುತ್ತದೆ.

ಪಿಸಿಒಎಸ್ ಗೆ ಚಿಕಿತ್ಸೆ ಇಲ್ಲದೇ ಇದ್ದರೂ ಆರೋಗ್ಯಕರ ಸಮತೋಲನದ ಪಥ್ಯ ಯೋಜನೆಯು ಪಿಸಿಒಎಸ್ ನಿರ್ವಹಣೆಗೆ ನೆರವಾಗುತ್ತದೆ ಮತ್ತು ನಿಮ್ಮ ಫರ್ಟಿಲಿಟಿ ಗುರಿಗಳಿಗೆ ಬೆಂಬಲಿಸುತ್ತದೆ. ನಾವು ಏನು ಸೇವಿಸುತ್ತೇವೆ ಎನ್ನುವುದು ಸದಾ ಆಯ್ಕೆ. ಆರೋಗ್ಯಕರ ಆಯ್ಕೆ ಮಾಡಿಕೊಳ್ಳಿ ಮತ್ತು ಯಾವುದನ್ನು ನಿಯಂತ್ರಿಸಬೇಡಿ. ನೀವು ಆಗಾಗ್ಗೆ ನಿಮಗೆ ಇಷ್ಟ ಬಂದದ್ದು ಸೇವಿಸಿ.

Was this article helpful?
YesNo

fill up the form to get a

Free Consultation

Your data is 100% safe with us.

Avail 0% interest on EMI
All Procedures | No Upper Limit

How we reviewed this article:

HISTORY
  • Current Version
  • October 6, 2023 by Oasis Fertility
  • October 5, 2023 by Oasis Fertility
  • September 27, 2023 by Oasis Fertility

LatestTrending

Ad

BOOK A FREE CONSULTATION

Book

Appointment

Call Us

1800-3001-1000