Uncategorized

ಹೆಚ್ಚಿನ ಎಎಂಎಚ್ ಮಟ್ಟ ಇರುವವರು ಗರ್ಭಿಣಿಯಾಗಲು ಸಾಧ್ಯವೇ?

ಹೆಚ್ಚಿನ ಎಎಂಎಚ್ ಮಟ್ಟ ಇರುವವರು ಗರ್ಭಿಣಿಯಾಗಲು ಸಾಧ್ಯವೇ?

Author: Dr. V Ramya, Consultant & Fertility Specialist

ಗರ್ಭಧಾರಣೆಯನ್ನು ಯೋಜಿಸುತ್ತಿರುವಾಗ ಫಲವಂತಿಕೆಯ ವಿಂಡೋ, ಅಂಡಾಶಯದ ಪರಿಸ್ಥಿತಿಗಳು, ಅಂಡಾಣು ಮತ್ತು ವೀರ್ಯದ ಆರೋಗ್ಯ ಮತ್ತು ಹಾರ್ಮೋನುಗಳು ಗರ್ಭಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಒಂದು ಪ್ರಮುಖ ಹಾರ್ಮೋನು ಎಎಂಎಚ್ ಅಥವಾ ಆಂಟಿ-ಮುಲ್ಲೆರಿಯನ್ ಹಾರ್ಮೋನ್.

ಮೊದಲಿಗೆ ಎಎಂಎಚ್ ಎಂದರೇನು?

ಎಂಐಎಸ್-ಮುಲ್ಲೆರಿಯನ್ ಇನ್ಹಿಬಿಟಿಂಗ್ ಸಬ್ ಸ್ಟೆನ್ಸ್ ಎಂದು ಕರೆಯಲ್ಪಡುವ ಇದು ಭ್ರೂಣಾವಸ್ಥೆಯಲ್ಲಿ ಪುರುಷ ಮತ್ತು ಸ್ತ್ರೀ ಜನನಾಂಗ ಬೆಳವಣಿಗೆಗೆ ಅಗತ್ಯವಾದ ಹಾರ್ಮೋನು.

ಎಎಂಎಚ್ ಪುರುಷರ ವೃಷಣಗಳಿಂದ ಉತ್ಪಾದನೆಯಾಗುತ್ತದೆ. ಪುರುಷರಲ್ಲಿ ಅದಕ್ಕೆ ಯಾವುದೇ ಕ್ಲಿನಿಕಲ್ ಪ್ರಾಮುಖ್ಯತೆ ಇಲ್ಲ.

ಮಹಿಳೆಯರಲ್ಲಿ ಎಎಂಎಚ್ ಅಂಡಾಶಯದ ಕಿರುಚೀಲಗಳಲ್ಲಿ ಉತ್ಪಾದನೆಯಾಗುತ್ತದೆ. ಇದು ಅಂಡಾಶಯದ

ಕಿರುಚೀಲಗಳ ಬೆಳವಣಿಗೆ ಮತ್ತು ಪ್ರಬುದ್ಧತೆಗೆ ನೆರವಾಗುತ್ತದೆ.

ಎಎಂಎಚ್ ಪರೀಕ್ಷೆಯ ಪ್ರಯೋಜನಗಳು

1.ಎಎಂಎಚ್ ಮಟ್ಟಗಳನ್ನು ಅಳೆಯುವುದು ಮಹಿಳಾ ಸಂತಾನೋತ್ಪಾದನೆಯ ಸಮಸ್ಯೆಗಳಾದ ಪಿಸಿಒಡಿ ಕುರಿತಂತೆ ಬೆಳಕು ಚೆಲ್ಲುವುದಾದರೂ ಎಎಂಎಚ್ ಅಂಡಾಶಯದ ರಿಸರ್ವ್ ಅಳೆಯಲು ಬಯೋಮಾರ್ಕರ್ ಆಗಿ ಕೆಲಸ ಮಾಡುತ್ತದೆ. ಇದನ್ನು ಅಂಡಾಶಯದಲ್ಲಿ ಉಳಿದ ಅಂಡಾಣುಗಳ ಸಂಖ್ಯೆಯನ್ನು ಅಂದಾಜಿಸಲು ಬಳಸಲಾಗುತ್ತದೆ.

2.ಎಎಂಎಚ್ ಪರೀಕ್ಷೆಯು ಮಹಿಳೆಯರಲ್ಲಿ ಅವರ ಅಂಡಾಣುಗಳ ಘನೀಕರಣದಲ್ಲಿ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ.

3.ಹದಿವಯಸ್ಸಿನ ಬಾಲಕಿಯರಲ್ಲಿ ಋತುಚಕ್ರದ ಕೊರತೆ(ಅಮೆನೊರಿಯಾ)ಯನ್ನು ಎಎಂಎಚ್ ಮಟ್ಟಗಳಿಂದ ಪತ್ತೆ ಮಾಡಬಹುದು.

4.ಇದು ಐವಿಎಫ್ ಮತ್ತು ಐಯುಐ ರೀತಿಯ ಫರ್ಟಿಲಿಟಿ ಚಿಕಿತ್ಸೆಗಳ ಫಲಿತಾಂಶ ಊಹಿಸಲು ಕೂಡಾ ಇದು ನೆರವಾಗುತ್ತದೆ.

5.ಮೆನೋಪಾಸ್ ಪ್ರಾರಂಭವನ್ನು ಊಹಿಸಲು ನೆರವಾಗುತ್ತದೆ.

ಸಾಮಾನ್ಯ ಎಎಂಎಚ್ ಮಟ್ಟಗಳೆಂದರೇನು?

ಎಎಂಎಚ್ ಮಟ್ಟಗಳನ್ನು ಮಹಿಳೆಯ ವಯಸ್ಸು ಆಧರಿಸಿ ಮೌಲ್ಯಮಾಪನ ಮಾಡಲಾಗುತ್ತದೆ.

ಹದಿ ವಯಸ್ಸಿನಲ್ಲಿ ಎಎಂಎಚ್ ಮಟ್ಟಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ ಮತ್ತು 25 ವರ್ಷದಲ್ಲಿ ಗರಿಷ್ಠ ಮಟ್ಟದಲ್ಲಿರುತ್ತವೆ. ವಯಸ್ಸು ಹೆಚ್ಚಾದಂತೆ ಪ್ರತಿ ಮಹಿಳೆಯಲ್ಲೂ ಎಎಂಎಚ್ ಮಟ್ಟ ಕುಸಿಯುತ್ತದೆ. ಆದ್ದರಿಂದ ಕಡಿಮೆ ಎಎಂಎಚ್ ಮಟ್ಟವು ಕಡಿಮೆ ಅಂಡಾಣು ಸಂಗ್ರಹ ಮತ್ತು ಹೆಚ್ಚಿನ ಎಎಂಎಚ್ ಮಟ್ಟ ಎಂದರೆ ಹೆಚ್ಚಿನ ಅಂಡಾಣು ಸಂಗ್ರಹವಿರುತ್ತದೆ.

ಸ್ಟಾಂಡರ್ಡ್ ಮಟ್ಟಗಳು ವ್ಯತ್ಯಾಸಗೊಳ್ಳುತ್ತವೆ. ಈ ಕೆಳಗಡೆ ಎಎಂಎಚ್ ಮಟ್ಟಗಳ ಸಾಮಾನ್ಯ ಶ್ರೇಣಿಗಳನ್ನು ನೀಡಲಾಗಿದೆ.

1.ಸರಾಸರಿ: 1.0ಎನ್.ಜಿ./ಎಂಎಲ್ ನಿಂದ 4.0 ಎನ್.ಜಿ./ಎಂಎಲ್(ಅಂದಾಜು).

2.ಕಡಿಮೆ: 1.0 ಎನ್.ಜಿ./ಎಂ.ಎಲ್.ಗಿಂತ ಕಡಿಮೆ

3.ಅತ್ಯಂತ ಕಡಿಮೆ: 0.4/ಎಂಎಲ್ ಗಿಂತ ಕಡಿಮೆ

ವಯಸ್ಸಿನ ಗುಂಪುಗಳನ್ನು ಆಧರಿಸಿ ಎಎಂಎಚ್ ಮಟ್ಟಗಳು:

ಪ್ರತಿ ವಯೋಮಾನದ ಗುಂಪುಗಳಿಗೆ ಸರಾಸರಿ ಕನಿಷ್ಠ ಮಟ್ಟಗಳು ಹೀಗಿವೆ.

1.25 ವರ್ಷ ವಯಸ್ಸು: 3.0 ಎನ್.ಜಿ/ಎಂ.ಎಲ್

2.30 ವರ್ಷ ವಯಸ್ಸು: 3.0 ಎನ್.ಜಿ/ಎಂ.ಎಲ್

3.35 ವರ್ಷ ವಯಸ್ಸು: 1.5 ಎನ್.ಜಿ/ಎಂ.ಎಲ್

4.40 ವರ್ಷ ವಯಸ್ಸು: 1 ಎನ್.ಜಿ/ಎಂ.ಎಲ್

5.45 ವರ್ಷ ವಯಸ್ಸು: 0.5 ಎನ್.ಜಿ/ಎಂ.ಎಲ್

ಎಎಂಎಚ್ ಮಟ್ಟಗಳು ಮತ್ತು ಗರ್ಭಧಾರಣೆ:

ಎಎಂಎಚ್ ಮಟ್ಟಗಳು ಗರ್ಭಧಾರಣೆಯ ಸಾಧ್ಯತೆಗಳಿಗೆ ಪರಿಣಾಮ ಬೀರುತ್ತದೆ. 25-30 ವರ್ಷ ವಯಸ್ಸಿನ ಯಾವುದೇ ಫಲವಂತಿಕೆಯ ಮಹಿಳೆ ಮತ್ತು 2.5 ಎನ್.ಜಿ./ಎಂಎಲ್ ನಿಂದ 3.5 ಎನ್.ಜಿ./ಎಂಎಲ್ ರೀಡಿಂಗ್

ಹೊಂದಿರುವವರಿಗೆ ವಯಸ್ಸಾದ ಮಹಿಳೆಯರು ಮತ್ತು ಕಡಿಮೆ ಎಎಂಎಚ್ ಮಟ್ಟ ಇರುವ ಮಹಿಳೆಯರಿಗಿಂತ ಹೆಚ್ಚಿನ ಗರ್ಭಧಾರಣೆ ಸಾಧ್ಯತೆ ಇರುತ್ತದೆ.

ಹೆಚ್ಚಿನ ಎಎಂಎಚ್ ಒಳ್ಳೆಯದೇ?

ಹೆಚ್ಚಿನ ಎಎಂಎಚ್ ಮಟ್ಟಗಳಿವೆ ಎಂದರೆ ಉತ್ತಮ ಅಂಡಾಣು ಸಂಗ್ರಹ ಮತ್ತು ಹೆಚ್ಚಿನ ಸಂಖ್ಯೆಯ ಅಂಡಾಣುಗಳು ಇದ್ದರೂ ಇವು ಅಂಡಾಣುಗಳ ಗುಣಮಟ್ಟವನ್ನು ಮತ್ತು ಫರ್ಟಿಲಿಟಿ ಚಿಕಿತ್ಸೆಯ ಫಲಿತಾಂಶ ಸೂಚಿಸುವುದಿಲ್ಲ. ಎಎಂಎಚ್ ಮಟ್ಟಗಳನ್ನು ಅಂಡಾಣುಗಳ ಗುಣಮಟ್ಟ ಅಳೆಯಲು ಬಳಸಲಾಗದು.

ಹೆಚ್ಚಾದರೆ ಎಎಂಎಚ್ ಮಟ್ಟಗಳಿಂದ ಗರ್ಭಧಾರಣೆಯ ಉತ್ತಮ ಅವಕಾಶಗಳಿರಬೇಕೆಂದಿಲ್ಲ.

4.0 ಎನ್.ಜಿ./ಎಂ.ಎಲ್ ಯಾವುದೇ ಎಎಂಎಚ್ ರೀಡಿಂಗ್ ಅಸಾಧಾರಣ ಹೆಚ್ಚಾಗಿದ್ದರೆ ಅದು ಕಾಳಜಿ ವಹಿಸಬೇಕಾದ ವಿಷಯವಾಗಿರುತ್ತದೆ.

ಅಸಹಜವಾಗಿ ಹೆಚ್ಚಿನ ಎಎಂಎಚ್ ಮಟ್ಟಗಳು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್(ಪಿಸಿಒಎಸ್) ಎಂಬ ಹಾರ್ಮೋನಿನ ಸಮಸ್ಯೆಯನ್ನು ಸೂಚಿಸುತ್ತವೆ ಅದು ಅಂಡಾಶಯದಲ್ಲಿ ದ್ರವ ತುಂಬಿದ ಚೀಲಗಳಾಗಿದ್ದು ಅವು ಹೆಚ್ಚಿನ ಎಎಂಎಚ್ ಉತ್ಪಾದನೆಗೆ ಕಾರಣವಾಗುತ್ತವೆ.

ಅಂಡಾಣು ಘನೀಕರಣದ ಸಂದರ್ಭದಲ್ಲಿ ಹೆಚ್ಚಿನ ಎಎಂಎಚ್ ಮಟ್ಟಗಳು ನಿಮಗೆ ಓವರಿಯನ್ ಹೈಪರ್ ಸ್ಟಿಮುಲೇಷನ್ ಸಿಂಡ್ರೋಮ್(ಒ.ಎಚ್.ಎಸ್.ಎಸ್.) ಉಂಟು ಮಾಡಬಹುದು.

ಹೆಚ್ಚಿನ ಎಎಂಎಚ್ ಮಟ್ಟಗಳು ಮಹಿಳೆಯರ ಸಂತಾನೋತ್ಪಾದನೆಯ ವ್ಯವಸ್ಥೆಯ ಅಂಡಾಶಯದ ಕ್ಯಾನ್ಸರ್ ಮತ್ತು ಗ್ರಾನುಲೊಸಾ ಸೆಲ್ ಟ್ಯೂಮರ್ ಗಳನ್ನು ಉಂಟು ಮಾಡಬಹುದು.

ಟೇಕ್ ಅವೇ:

ಎಎಂಎಚ್ ಮಟ್ಟಗಳು ನಿಮ್ಮ ಫಲವಂತಿಕೆಯ ಸ್ಥಾನಮಾನವನ್ನು ನಿರ್ಧರಿಸುವುದಿಲ್ಲ. ಅಂಡಾಶಯದ ಸ್ಥಿತಿ, ನಾಳದ ಆರೋಗ್ಯ, ವೀರ್ಯದ ಅಂಶಗಳು ಮತ್ತು ಅಂತರ್ಗತ ವೈದ್ಯಕೀಯ ಪರಿಸ್ಥಿತಿಗಳು ಗರ್ಭಧಾರಣೆಗೆ ಕೊಡುಗೆ ನೀಡುತ್ತವೆ.

ಭರವಸೆಯ ವಿಷಯವೆಂದರೆ ಗರ್ಭಧಾರಣೆಯ ಕೆಲವೇ ಸಾಧ್ಯತೆಗಳಿದ್ದರೂ ಕಡಿಮೆ ಅಂಡಾಣುಗಳು ಅಥವಾ ಕಡಿಮೆ ಎಎಂಎಚ್ ಮಟ್ಟಗಳಿಂದಲೂ ಗರ್ಭಧಾರಣೆ ಪಡೆಯಬಹುದು ಎನ್ನುವುದು.

Write a Comment

BOOK A FREE CONSULTATION

Book

Appointment

Call Us

1800-3001-1000
BOOK A FREE CONSULTATION