Blog
Enquire Now
Uncategorized

ಜೀವನಶೈಲಿ ಮತ್ತು ಬಂಜೆತನ

ಜೀವನಶೈಲಿ ಮತ್ತು ಬಂಜೆತನ

Author : Dr Akhila Ayyagari, Consultant & Fertility Specialist, Oasis Fertility, Banjara Hills

ನಮ್ಮ ವೇಗದ ಜೀವನಶೈಲಿಗಳು ನಾವು ಸೇವಿಸುವ ಆಹಾರದಲ್ಲಿ, ನಾವು ಬೆಳೆಸಿಕೊಳ್ಳುವ ಅಭ್ಯಾಸಗಳಲ್ಲಿ, ನಾವು ನಿದ್ರಿಸುವ ವಿಧಾನದಲ್ಲಿ ಮತ್ತು ನಾವು ಕೆಲಸ ಮಾಡುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿವೆ. ಪಿಜ್ಜಾಗಳು, ಎನರ್ಜಿ ಡ್ರಿಂಕ್ ಗಳು, ಕೇಕ್ ಗಳು, ಫ್ರೈಡ್ ಆಹಾರಗಳು, ರಾತ್ರಿ ಪಾಳಿಗಳು, ಸೌಂದರ್ಯವರ್ಧಕಗಳ ಹೆಚ್ಚಿನ ಬಳಕೆ, ರಾತ್ರಿ ವೇಳೆಯ ಪಾರ್ಟಿಗಳು, ಜಡ ಜೀವನಶೈಲಿ ಮತ್ತು ನಿದ್ರಾರಹಿತ ರಾತ್ರಿಗಳು ಜೆನ್ ಝಡ್ ಗಳ ಜೀವನಗಳ ಭಾಗವಾಗಿವೆ. ಆದರೆ ಈ ಸಾಮಾನ್ಯ ಪ್ರತಿನಿತ್ಯದ ಚಟುವಟಿಕೆಗಳು ಪುರುಷ ಹಾಗೂ ಮಹಿಳೆಯರ ಫಲವಂತಿಕೆಯ ಮೇಲೆ ಅಪಾರ ಪರಿಣಾಮ ಬೀರಬಲ್ಲವು. ಇದು ಆಘಾತಕಾರಿಯಾಗಿದ್ದರೂ ಪೂರ್ವಸಿದ್ಧ ವಾಸ್ತವವಾಗಿದೆ.

ಜೀವನಶೈಲಿ ಹೇಗೆ ಫಲವಂತಿಕೆಗೆ ಪರಿಣಾಮ ಬೀರುತ್ತದೆ?

ಫಲವಂತಿಕೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಜೀವನಶೈಲಿ ಅಂಶಗಳು ಹೀಗಿವೆ:

· ಹೆಚ್ಚಾದ ವಯಸ್ಸು

· ಜಂಕ್ ಫುಡ್ ಗಳ ಸೇವನೆ

· ಕಡಿಮೆ ತೂಕ ಅಥವಾ ಅತಿಯಾದ ತೂಕವಿರುವುದು

· ನಿದ್ರೆ(ಬಹಳ ಕಡಿಮೆ ಅಥವಾ ಅತ್ಯಂತ ಹೆಚ್ಚು)

· ಕೆಫೀನ್

· ಧೂಮಪಾನ

· ಮದ್ಯ ಸೇವನೆ

· ಒತ್ತಡ

· ವೃತ್ತಿಯಲ್ಲಿ ಒಡ್ಡಿಕೊಳ್ಳುವಿಕೆ

· ಅಕ್ರಮ ಮಾದಕ ವಸ್ತುಗಳು

· ಸೂಚಿತ ಔಷಧಗಳು

1. ಹೆಚ್ಚಾದ ವಯಸ್ಸು

ವಯಸ್ಸು ವ್ಯಕ್ತಿಯ ಫಲವಂತಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಶೈಕ್ಷಣಿಕ ಆಕಾಂಕ್ಷೆಗಳು ಮತ್ತು ಉದ್ಯೋಗದ ಕನಸುಗಳಿಂದ ಹಲವಾರು ದಂಪತಿಗಳು ತಂದೆ ತಾಯಿಯರಾಗುವುದನ್ನು ಮುಂದೂಡುತ್ತಾರೆ ಅವರಲ್ಲಿ ಬಹಳಷ್ಟು ಮಂದಿಗೆ ಫಲವಂತಿಕೆಯ ಸಾಮರ್ಥ್ಯ ಒಂದು ನಿರ್ದಿಷ್ಟ ವಯಸ್ಸಿನಲ್ಲಿ

ಅತ್ಯಂತ ಗರಿಷ್ಠ ಮಟ್ಟದಲ್ಲಿರುತ್ತದೆ ಮತ್ತು ನಂತರ ಕುಸಿಯಲು ಪ್ರಾರಂಭವಾಗುತ್ತದೆ ಎಂದು ತಿಳಿವಳಿಕೆ ಇರುವುದಿಲ್ಲ. ವೀರ್ಯಾಣು ಸಂಖ್ಯೆ, ಚಲನೆ ಮತ್ತು ವೀರ್ಯದ ಪ್ರಮಾಣವು ಪುರುಷರಲ್ಲಿ 35 ವರ್ಷದ ನಂತರ ಕಡಿಮೆಯಾಗುತ್ತದೆ; ಮಾರ್ಫಾಲಜಿ ಹೆಚ್ಚು ಅಸಹಜವಾಗಬಹುದು ಮತ್ತು 40ರ ನಂತರ ವೀರ್ಯದಲ್ಲಿ ಡಿಎನ್ಎ ಹಾನಿಯ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗುತ್ತದೆ.

ಮಹಿಳೆಯರಲ್ಲಿ 30ರ ನಂತರ ಗರ್ಭಧಾರಣೆಯ ಪ್ರವೃತ್ತಿ ಕಡಿಮೆಯಾಗುತ್ತದೆ. ಮಹಿಳೆಯರ ಅಂಡಾಣುಗಳು ವಯಸ್ಸಾಗುತ್ತಿದ್ದಂತೆ ಕ್ರೋಮೋಸೋಮ್ ನ ಅಸಹಜತೆ ಬೆಳೆಸಿಕೊಳ್ಳುತ್ತವೆ ಮತ್ತು ಗರ್ಭಪಾತಗಳು, ಇತರೆ ಗರ್ಭಧಾರಣೆ ಸಂಬಂಧಿತ ಸಂಕೀರ್ಣತೆಗಳು ಮತ್ತು ಅನುವಂಶಿಕ ಸಮಸ್ಯೆಗಳನ್ನುಮಗುವಿನಲ್ಲಿ ಉಂಟು ಮಾಡುತ್ತದೆ. 30ರ ವಯಸ್ಸಿನ ಒಳಗೆ ಮಹಿಳೆಯ ಗರ್ಭಧಾರಣೆಯ ಸಾಧ್ಯತೆ ಅತ್ಯಂತ ಹೆಚ್ಚು ಶೇ.71ರಷ್ಟಿದ್ದು, 36 ವರ್ಷ ವಯಸ್ಸಾದ ನಂತರ ಅದು ಶೇ.41ರಷ್ಟು ಮಾತ್ರ. ದಂಪತಿಗಳು ಮಗುವನ್ನು ಪಡೆಯುವುದನ್ನು ಮುಂದೂಡಲು ಬಯಸಿದರೆ ಅವರು ಅಂಡಾಣುಗಳು ಅಥವಾ ವೀರ್ಯ ಅಥವಾ ಭ್ರೂಣಗಳ ಸಂಗ್ರಹಿಸುವ ಮೂಲಕ ಫಲವಂತಿಕೆ ಸಂರಕ್ಷಣೆ ವಿಧಾನಗಳನ್ನು ಅನುಸರಿಸಬಹುದು, ಇದರಿಂದ ಅವರು ತಮ್ಮ ಫಲವಂತಿಕೆಯನ್ನು ಸಂರಕ್ಷಿಸಬಹುದು ಮತ್ತು ಭವಿಷ್ಯದಲ್ಲಿ ಗರ್ಭ ಪಡೆಯಬಹುದು.

2. ಜಂಕ್ ಫುಡ್ ಗಳ ಸೇವನೆ

ಅಧ್ಯಯನಗಳ ಪ್ರಕಾರ ಜಂಕ್ ಫುಡ್ ಗಳ ಸೇವನೆಯು ಗರ್ಭಧಾರಣೆಯ ಸಮಯವನ್ನು ಹೆಚ್ಚಿಸಬಹುದು ಎಂದು ಹೇಳಿವೆ. ಮಹಿಳೆಯರಲ್ಲಿ ಜಂಕ್ ಫುಡ್ ಗಳಲ್ಲಿರುವ ಕೊಬ್ಬಿನಂಶ ಸಂತಾನೋತ್ಪಾದನೆಯ ಹಾರ್ಮೋನುಗಳ ಮಟ್ಟವನ್ನು ಬದಲಾಯಿಸಬಹುದು ಮತ್ತು ಋತುಚಕ್ರ ಆವರ್ತ ಬದಲಾಯಿಸಬಹುದು. ಸಂಶೋಧನೆಯ ಪ್ರಕಾರ ದ್ವಿದಳ ಧಾನ್ಯಗಳು, ಮೀನು ಮತ್ತು ತರಕಾರಿಗಳು ಹೆಚ್ಚಾಗಿರುವ ಆಹಾರ ಫಲವಂತಿಕೆ ಸುಧಾರಿಸಬಹುದು.

3. ಕಡಿಮೆ ತೂಕ ಅಥವಾ ಅತಿಯಾದ ತೂಕ ಹೊಂದಿರುವುದು

ಬಿಎಂಐ < 18.5- ಕಡಿಮೆ ತೂಕ

ಬಿಎಂಐ > 25 ಅತಿಯಾದ ತೂಕ

ಬಿಎಂಐ > 30- ಬೊಜ್ಜು

ಕಡಿಮೆ ತೂಕ ಹೊಂದಿರುವುದು ಅಂಡಾಶಯದ ನಿಷ್ಕ್ರಿಯತೆ ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ; ಈ ಮಹಿಳೆಯರಿಗೆ ಅವಧಿಪೂರ್ವ ಜನನದ ಹೆಚ್ಚಿನ ತೊಂದರೆ ಇರುತ್ತದೆ. ಪುರುಷರಲ್ಲಿ ಕಡಿಮೆ ತೂಕ ಹೊಂದಿರುವುದು ಕಡಿಮೆ ವೀರ್ಯದ ಕ್ರೋಢೀಕರಣ ಉಂಟಾಗುತ್ತದೆ.

ಬೊಜ್ಜಿನ ಮಹಿಳೆಯರು ಅವರ ಋತುಚಕ್ರದ ಆವರ್ತದಲ್ಲಿ ಅಸಹಜತೆಗಳನ್ನು ಎದುರಿಸುತ್ತಾರೆ ಮತ್ತು ಬಂಜೆತನ, ಗರ್ಭಪಾತ ಮತ್ತು ಸತ್ತ ಶಿಶುವಿನ ಜನನದ ಸಮಸ್ಯೆ ಎದುರಿಸುತ್ತಾರೆ. ಬೊಜ್ಜಿನ ಪುರುಷರು ಸಾಮಾನ್ಯ ತೂಕದ ವ್ಯಕ್ತಿಗೆ ಹೋಲಿಸಿದರೆ ವೀರ್ಯದ ಗುಣಮಟ್ಟದಲ್ಲಿ 3 ಪಟ್ಟು ಕುಸಿತವನ್ನು ಕಾಣುವ ಸಂಭವನೀಯತೆ ಇರುತ್ತದೆ. ಬೊಜ್ಜು ನಿಮಿರುವಿಕೆಯ ಸಮಸ್ಯೆಯನ್ನೂ ಉಂಟು ಮಾಡಬಲ್ಲದು. ಅಧ್ಯಯನಗಳ ಪ್ರಕಾರ ಬೊಜ್ಜು ಐವಿಎಫ್ ಚಿಕಿತ್ಸೆಯ ಫಲಿತಾಂಶವನ್ನೂ ಕಡಿಮೆ ಮಾಡುತ್ತದೆ. ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಗರ್ಭಧಾರಣೆಯ ಸಾಧ್ಯತೆಗಳು ಸುಧಾರಿಸುವ ಸಂಭವನೀಯತೆ ಇರುತ್ತದೆ.

4. ನಿದ್ರೆ

ಅತಿಯಾದ ಅಥವಾ ಕಡಿಮೆ ನಿದ್ರೆಯು ಪುರುಷ ಹಾಗೂ ಮಹಿಳೆಯರಲ್ಲಿ ಫಲವಂತಿಕೆಗೆ ಹಾನಿಯುಂಟು ಮಾಡುತ್ತದೆ. ನಿದ್ರೆಯ ಕೊರತೆಯು ಹಾರ್ಮೋನುಗಳ ಅಸಮತೋಲನ ಉಂಟು ಮಾಡಿ ಬಂಜೆತನ ಉಂಟು ಮಾಡಬಲ್ಲದು. ಸುಧಾರಿತ ಫಲವಂತಿಕೆಯ ಫಲಿತಾಂಶಗಳಿಗೆ ಪ್ರತಿನಿತ್ಯ 7-8 ಗಂಟೆಗಳಷ್ಟು ನಿದ್ರೆಯು ಅಗತ್ಯ.

5. ಕೆಫೀನ್

ಅತಿಯಾದ ಕೆಫೀನ್ ಮಹಿಳೆಯರ ಫಲವಂತಿಕೆಯ ಮೇಲೆ ಋಣಾತ್ಮಕ ಪರಿಣಾಮಗಳನ್ನು(ಗರ್ಭಪಾತ, ಭ್ರೂಣದ ಮರಣ, ಸತ್ತ ಮಗುವಿನ ಜನನ) ಉಂಟು ಮಾಡಬಲ್ಲದು. ದಿನಕ್ಕೆ 100 ಎಂಜಿಗಿಂತಲೂ ಹೆಚ್ಚು ಕೆಫೀನ್ ಸೇವಿಸುವ ಮಹಿಳೆಯರು ಹೆಚ್ಚಿನ ಗರ್ಭಪಾತ ಸಾಧ್ಯತೆ ಹೆಚ್ಚು ಅನುಭವಿಸುತ್ತಾರೆ.

6. ಧೂಮಪಾನ

ಸಿಗರೇಟ್ ಧೂಮದಲ್ಲಿ 4000ಕ್ಕೂ ಹೆಚ್ಚು ರಾಸಾಯನಿಕಗಳಿರುತ್ತವೆ. ಧೂಮಪಾನವು ವೀರ್ಯದ ಎಣಿಕೆ, ಮಾರ್ಫಾಲಜಿ ಮೇಲೆ ಪರಿಣಾಮ ಬೀರುತ್ತದೆ ಮತ್ತು ವೀರ್ಯದ ಡಿಎನ್ಎ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಅಧ್ಯಯನಗಳ ಪ್ರಕಾರ ಧೂಮಪಾನ ಮಾಡುವವರಲ್ಲಿ ಅಂಡಾಣುಗಳ ಮೀಸಲು ಕಡಿಮೆ ಮಾಡುತ್ತದೆ, ಗರ್ಭಾಶಯ ಬದಲಾಯಿಸುತ್ತದೆ ಮತ್ತು ನಾಳದ ಕಾರ್ಯ ಮತ್ತು ಹಾರ್ಮೋನುಗಳ ಮಟ್ಟದಲ್ಲಿ ಬದಲಾವಣೆ ತರುತ್ತದೆ.

7. ಮದ್ಯ ಸೇವನೆ

ಮದ್ಯ ಸೇವನೆಯು ವೃಷಣಗಳ ಕ್ಷೀಣತೆ, ವೀರ್ಯದ ಪ್ರಮಾಣ ಕಡಿಮೆ ಮಾಡುತ್ತದೆ ಮತ್ತು ಪುರುಷರಲ್ಲಿ ಕಾಮಾಸಕ್ತಿ ಕಡಿಮೆ ಮಾಡುತ್ತದೆ. ಮದ್ಯಪಾನ ಮಾಡುವ ಮಹಿಳೆಯರಲ್ಲಿ ಕಡಿಮೆ ಗರ್ಭಧಾರಣೆಯ ಪ್ರಮಾಣ ಮತ್ತು ಹೆಚ್ಚಿನ ಪ್ರಮಾಣದ ದಿಢೀರ್ ಗರ್ಭಪಾತ ಆಗುವ ಸಾಧ್ಯತೆ ಮತ್ತು ಭ್ರೂಣದ ಮರಣದ ಸಂಭವನೀಯತೆ ಇರುತ್ತದೆ. ಅಧ್ಯಯನಗಳ ಪ್ರಕಾರ ಜಡತ್ವ ಅನುಭವಿಸುವ ಮಹಿಳೆಯರು ಜಡತ್ವ

ಅನುಭವಿಸದ ಮಹಿಳೆಯರಿಗಿಂತ ಹೆಚ್ಚು ಬಂಜೆತನದ ಸಾಧ್ಯತೆ ಹೆಚ್ಚಿರುತ್ತದೆ. ಎಷ್ಟು ಪ್ರಮಾಣದ ಮದ್ಯ ಸೇವಿಸುತ್ತಾರೆ ಎನ್ನುವುದು ಮುಖ್ಯವಲ್ಲ.

8. ಒತ್ತಡ

ಒತ್ತಡವು ಯಾವುದೇ ಸಮಾಜದ ಪ್ರಮುಖ ಭಾಗವಾಗಿದ್ದು ಅದರಲ್ಲಿ ದೈಹಿಕ, ಸಾಮಾಜಿಕ ಅಥವಾ ಮಾನಸಿಕವಾಗಿರಬಹುದು. ಬಂಜೆತನವು ಸಾಮಾಜಿಕ ಒತ್ತಡಗಳು, ಪರೀಕ್ಷೆ, ರೋಗ ನಿರ್ಣಯ, ಚಿಕಿತ್ಸೆಗಳು, ವೈಫಲ್ಯಗಳು, ಪೂರ್ಣಗೊಳ್ಳದ ಬಯಕೆಗಳು ಮತ್ತು ಆರ್ಥಿಕ ವೆಚ್ಚಗಳೂ ಅವುಗಳೊಂದಿಗೆ ಸೇರಿ ಸ್ವತಃ ಒತ್ತಡ ತರುವಂಥವಾಗಿದೆ.

ಒತ್ತಡ ಮತ್ತು ಖಿನ್ನತೆಯಿಂದ ಟೆಸ್ಟೊಸ್ಟಿರೋನ್ ಕಡಿಮೆ ಮಾಡುತ್ತದೆ, ಸಂತಾನೋತ್ಪಾದನೆಯ ಕಾರ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ ಮತ್ತು ಅಂತಿವಾಗಿ ವೀರ್ಯದ ನಿಯತಾಂಕಗಳನ್ನು ಕಡಿಮೆ ಮಾಡುತ್ತವೆ. ಮಹಿಳೆಯರು ವಾರಕ್ಕೆ >32 ಗಂಟೆಗಳು ಕೆಲಸ ಮಾಡುವವರು ಗರ್ಭಧಾರಣೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ.

9. ವೃತ್ತಿಯಲ್ಲಿ ಒಡ್ಡಿಕೊಳ್ಳುವಿಕೆ

i. ವಾಯುಮಾಲಿನ್ಯ ಕಾರಕಗಳು

ಇಂಗಾಲದ ಮಾನಾಕ್ಸೈಡ್, ಕೈಗಾರಿಕೆಗಳಿಂದ ಹೊರಬರುವ ಹೊಗೆ ಮತ್ತು ಸಲ್ಫರ್ ಡೈಆಕ್ಸೈಡ್ ಪುರುಷರ ಫಲವಂತಿಕೆಯ ಮೇಲೆ ಪರಿಣಾಮ ಬೀರಬಲ್ಲದು ಮತ್ತು ಅವಧಿಪೂರ್ವ ಹೆರಿಗೆ, ಮರಣಿಸಿದ ಶಿಶು ಜನನ ಮತ್ತು ಭ್ರೂಣ ನಷ್ಟ ಉಂಟು ಮಾಡಬಲ್ಲದು.

ii. ಭಾರ ಲೋಹಗಳು

ಪೇಂಟ್ ಗಳು, ಸೆರಾಮಿಕ್ ಗಳು ಇತ್ಯಾದಿ ಋತುಚಕ್ರಕ್ಕೆ ಹಾನಿಯುಂಟು ಮಾಡಬಲ್ಲದು ಮತ್ತು ಗರ್ಭಪಾತ, ಅಕಾಲ ಪ್ರಸವ ಇತ್ಯಾದಿ ಉಂಟು ಮಾಡಬಹುದು.

ಕೈಗಾರಿಕಾ ಹೊಗೆ, ಥರ್ಮಾಮೀಟರ್ ಗಳಲ್ಲಿರುವ ಪಾದರಸವು ವೀರ್ಯದ ಅಭಿವೃದ್ಧಿಗೆ ಹಾನಿಯುಂಟು ಮಾಡಬಲ್ಲದು.

iii. ಲ್ಯೂಬ್ರಿಕೆಂಟ್ ಗಳು

ಕೆವೈ ಜೆಲ್ಲಿಯಂತಹ ಎಲ್ಲ ಲ್ಯೂಬ್ರಿಕೆಂಟ್ ಗಳು ವೀರ್ಯಕ್ಕೆ ಹಾನಿಯುಂಟು ಮಾಡಬಲ್ಲವು.

iv. ಎಂಡೋಕ್ರೈನ್-ಅಡ್ಡಿಪಡಿಸುವ ರಾಸಾಯನಿಕಗಳು(ಇಡಿಸಿ)

ಇಡಿಸಿಯು ನೈಸರ್ಗಿಕ ಹಾರ್ಮೋನುಗಳಂತೆ ಕಾಣುವ ಹಾರ್ಮೋನುಗಳಾಗಿವೆ ಮತ್ತು ದೇಹದ ಹಾರ್ಮೋನುಗಳ ಕಾರ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಇಡಿಸಿಗಳು ಮನೆಯಲ್ಲಿನ ಆಹಾರ ಸಂಗ್ರಹಿಸುವ ಪ್ಲಾಸ್ಟಿಕ್ ಗಳು, ಮಕ್ಕಳ ಆಟಿಕೆಗಳು, ಸಾಬೂನುಗಳು, ಲ್ಯೂಬ್ರಿಕೇಟಿಂಗ್ ತೈಲಗಳು, ಶಾಂಪೂಗಳು ಇತ್ಯಾದಿಗಳಲ್ಲಿರುತ್ತವೆ.

v. ರೇಡಿಯೇಷನ್

ಅಧ್ಯಯನಗಳ ಪ್ರಕಾರ ಗಾಮಾ ಮತ್ತು ಎಕ್ಸ್-ರೇಗಳು ಫಲವಂತಿಕೆಯ ಮೇಲೆ ತೀವ್ರ ಹಾನಿಯುಂಟು ಮಾಡಬಲ್ಲವು. ಸೆಲ್ ಫೋನ್ ಗಳು ಪುರುಷರ ಫಲವಂತಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಅಧ್ಯಯನಗಳ ಪ್ರಕಾರ ತಮ್ಮ ಸೊಂಟದಲ್ಲಿ ಸೆಲ್ ಫೋನ್ ಗಳನ್ನು ಇರಿಸಿಕೊಳ್ಳುವ ಪುರುಷರಲ್ಲಿ ಫೋನ್ ಗಳನ್ನು ಬೇರೆ ಕಡೆ ಇರಿಸಿಕೊಳ್ಳುವವರಿಗಿಂತ ಕಡಿಮೆ ವೀರ್ಯದ ಸಂಖ್ಯೆ ಇರುತ್ತವೆ ಎಂದು ದೃಢೀಕರಿಸಿವೆ.

vi. ಬಟ್ಟೆ ಮತ್ತು ಬಿಸಿ ನೀರಿನ ಸ್ನಾನ

ಬಿಗಿಯಾದ ದಿರಿಸುಗಳು ಸ್ಕ್ರೋಟಲ್ ವೃಷಣಕೋಶದ ಉಷ್ಣತೆಯನ್ನು ಹೆಚ್ಚಿಸಬಹುದು ಇದರಿಂದ ವೀರ್ಯದ ಗುಣಮಟ್ಟಕ್ಕೆ ಹಾನಿಯುಂಟು ಮಾಡಬಹುದು. ಬಿಸಿನೀರಿನ ಸ್ನಾನ ವೀರ್ಯದ ಉತ್ಪಾದನೆಯ ಮೇಲೆ ಪರಿಣಾಮ ಉಂಟು ಮಾಡುತ್ತವೆ.

10. ಅಕ್ರಮ ಮಾದಕ ದ್ರವ್ಯಗಳು

ಮಾರಿಜುವಾನಾ, ಕೊಕೇನ್ ಇತ್ಯಾದಿ ವೀರ್ಯದ ಉತ್ಪಾದನೆ, ವೀರ್ಯದ ಚಲನೆ ಕಡಿಮೆ ಮಾಡಬಲ್ಲದು ಮತ್ತು ಇದು ಲೈಂಗಿಕ ಉದ್ರೇಕ, ನಿಮಿರುವಿಕೆ ಸಮಸ್ಯೆ ಇತ್ಯಾದಿ ಉಂಟು ಮಾಡಬಲ್ಲವು.

11. ಸೂಚಿತ ಔಷಧಗಳು

ಕೊಲ್ಚಿಸಿನ್, ಐಕ್ಲೊಫಾಸ್ಫಮೈಡ್, ಆಂಟಿಸೈಕೋಟಿಕ್ಸ್, ಎಚ್2 ಬ್ಲಾಕರ್ ಗಳು ಪ್ರೊಲಾಕ್ಟಿನ್ ನಲ್ಲಿ ಹೆಚ್ಚಳ ಉಂಟು ಮಾಡಬಲ್ಲದು ಮತ್ತು ಲೈಂಗಿಕ ನಿಷ್ಕ್ರಿಯತೆ ಉಂಟು ಮಾಡಬಲ್ಲವು. ಫಲವಂತಿಕೆ ಸಮಸ್ಯೆಗಳನ್ನು ಉಂಟು ಮಾಡುವ ಔಷಧಗಳನ್ನು ಕಂಡುಕೊಳ್ಳುವುದು ಮತ್ತು ಈ ಪರಿಣಾಮಗಳು ಶಾಶ್ವತವೇ ಎಂದು ಪರೀಕ್ಷಿಸಿಕೊಳ್ಳುವುದು ಮುಖ್ಯವಾಗಿದೆ.

ಆರೋಗ್ಯಕರ ಆಹಾರಕ್ಕೆ ಸಲಹೆಗಳು:

ಕಾರ್ಬೊಹೈಡ್ರೇಟ್ ಗಳು, ನಾರು, ಫೊಲೇಟ್, ಲೈಕೊಪೀನ್ ಅಲ್ಲದೆ ಹಣ್ಣು ಹಾಗೂ ತರಕಾರಿಗಳು ಹೆಚ್ಚಾಗಿ ಇರುವ ಆಹಾರಗಳು ವೀರ್ಯದ ಪ್ರಮಾಣ ಹೆಚ್ಚಾಗುವುದರೊಂದಿಗೆ ಸಂಬಂಧ ಹೊಂದಿವೆ. ಕಡಿಮೆ ಪ್ರಮಾಣದ ಪ್ರೊಟೀನ್ ಮತ್ತು ಕೊಬ್ಬಿನಂಶ ಸೇವನೆ ಮಾಡುವುದು ಪುರುಷರು ಹಾಗೂ ಮಹಿಳೆಯರಲ್ಲಿ ಫಲವಂತಿಕೆಗೆ ಹೆಚ್ಚು ಅನುಕೂಲಕರವಾಗಿದೆ.

ಫರ್ಟಿಲಿಟಿ ಪಥ್ಯ ಎಂದರೇನು?

ಫರ್ಟಿಲಿಟಿ ಪಥ್ಯವು ಹೆಚ್ಚಿನ ಮಾನೋಸ್ಯಾಚುರೇಟೆಡ್ ಒಳಗೊಂಡಿದ್ದು ಟ್ರಾನ್ಸ್ ಫ್ಯಾಟ್ ಅನುಪಾತ, ಸಸ್ಯ ಹಾಗೂ ಪ್ರಾಣಿ ಪ್ರೋಟೀನ್, ಹೆಚ್ಚಿನ ಕೊಬ್ಬಿಗೆ ವಿರುದ್ಧವಾಗಿ ಕಡಿಮೆ ಕೊಬ್ಬಿನ ಡೈರಿ ಉತ್ಪನ್ನ, ಕಡಿಮೆ ಗ್ಲೈಸೆಮಿಕ್ ಪ್ರಮಾಣ ಮತ್ತು ಕಬ್ಬಿಣ ಹಾಗೂ ಮಲ್ಟಿವಿಟಮಿನ್ ಗಳ ಸೇವನೆ.

ಅಧ್ಯಯನಗಳ ಪ್ರಕಾರ ಈ ಫರ್ಟಿಲಿಟಿ ಆಹಾರ ಸೇವನೆ ಮಾಡುವವರಲ್ಲಿ ಕಡಿಮೆ ಪ್ರಮಾಣದ ಬಂಜೆತನವಿರುತ್ತದೆ.

ಉತ್ಕರ್ಷಣಕಾರಿ ನಿರೋಧಕಗಳ ಪಾತ್ರ

ಉತ್ಕರ್ಷಣಕಾರಿ ನಿರೋಧಕಗಳು ಹೆಚ್ಚುವರಿ ಆರ್.ಒ.ಎಸ್.(ರಿಯಾಕ್ಟಿವ್ ಆಕ್ಸಿಜನ್ ಸ್ಪೀಸೀಸ್) ಅನ್ನು ವೀರ್ಯದಿಂದ ನಿವಾರಿಸಲು ನೆರವಾಗುತ್ತವೆ ಮತ್ತು ಆರ್.ಒಎಸ್. ಅನ್ನು ಪುರುಷರಿಗೆ ಕಡಿಮೆ ಹಾನಿಯುಂಟು ಮಾಡುವ ಸಂಯುಕ್ತಗಳಿಗೆ ಪರಿವರ್ತಿಸುವಲ್ಲಿ ನೆರವಾಗುತ್ತವೆ. ಮಲ್ಟಿವಿಟಮಿನ್ ಸೇವಿಸುವ ಮಹಿಳೆಯರು ಅಂಡಾಶಯದ ಬಂಜೆತನದ ಅನುಭವ ಪಡೆಯುವ ಸಾಧ್ಯತೆ ಕಡಿಮೆ. ಉತ್ಕರ್ಷಣ ನಿರೋಧಕಗಳಾದ ವಿಟಮಿನ್ ಸಿ, ಇ, ಅಲ್ಬುಮಿನ್, ಸೆರುಲೊಪ್ಲಾಸ್ಮಿನ್, ಫೆರ್ರಿಟಿನ್ ಇತ್ಯಾದಿ.

ಡರ್ಟಿ ಡಜನ್: (ಹೆಚ್ಚು ಕೀಟನಾಶಕಗಳನ್ನು ಹೊಂದಿರುವ ಆಹಾರಗಳು): ಸೇಬು, ಸೆಲೆರಿ, ಸ್ಟ್ರಾಬೆರಿಗಳು, ಪೀಚ್, ಪಾಲಕ ಸೊಪ್ಪು, ಆಮದಾದ ದ್ರಾಕ್ಷಿಗಳು ಮತ್ತು ನೆಕ್ಟರಿನ್ ಗಳು, ಸ್ವೀಟ್ ಬೆಲ್ ಪೆಪ್ಪರ್, ಆಲೂಗಡ್ಡೆ, ಬ್ಲೂಬೆರಿ, ಸೊಪ್ಪು ಮತ್ತು ಕೊಲಾರ್ಡ್ ಸೊಪ್ಪುಗಳು.

ಕ್ಲೀನ್ ಫಿಫ್ಟೀನ್: (ಕಡಿಮೆ ಕೀಟನಾಶಕಗಳನ್ನು ಹೊಂದಿರುವ ಆಹಾರಗಳು): ಈರುಳ್ಳಿ, ಸ್ವೀಟ್ ಕಾರ್ನ್, ಪೈನಾಪಲ್, ಅವಕಾಡೊ, ಆಸ್ಪರಾಗಸ್, ಸ್ವೀಟ್ ಪೀಸ್, ಮಾವು, ಬದನೆಕಾಯಿ, ಹಲಸು, ಕಿವಿ, ಕ್ಯಾಬೇಜ್, ಕಲ್ಲಂಗಡಿ, ಅಣಬೆ, ಸಿಹಿ ಆಲೂಗಡ್ಡೆ, ಗ್ರೇಪ್ ಫ್ರೂಟ್.

ಮೀನು ಮತ್ತು ಚಿಪ್ಪು ಮೀನು ಸೇವಿಸಲು ಸುರಕ್ಷತೆಯ ಸಲಹೆಗಳು

1. ಶಾರ್ಕ್, ಸ್ವೋರ್ಡ್ ಫಿಷ್ ಮತ್ತು ಕಿಂಗ್ ಮ್ಯಾಕೆರೆಲ್ ಸೇವಿಸಬೇಡಿ ಅವುಗಳಲ್ಲಿ ಹೆಚ್ಚಿನ ಪಾದರಸದ ಅಂಶವಿರುತ್ತದೆ.

2. ಪಾದರಸ ಕಡಿಮೆ ಇರುವ ಶ್ರಿಂಪ್, ಕ್ಯಾನ್ಡ್ ಲೈಟ್ ಟುನಾ, ಸಾಲ್ಮನ್, ಪೊಲಾಕ್ ಮತ್ತು ಕ್ಯಾಟ್ ಫಿಶ್ ಸೇವಿಸಿ. ವೈಟ್ ಟುನಾದಲ್ಲಿ ಕ್ಯಾನ್ಡ್ ಲೈಟ್ ಟುನಾಗಿಂತ ಹೆಚ್ಚು ಪಾದರಸವಿರುತ್ತದೆ.

ವಿಷಕಾರಿ ಅಂಶವನ್ನು ಮಿತಿಗೊಳಿಸಲು ಸರಳ ಅಭ್ಯಾಸಗಳು

1. ಲೇಬಲ್ ಗಳನ್ನು ಓದಿರಿ: ನೀವು ಉಚ್ಛರಿಸಲು ಸಾಧ್ಯವಿಲ್ಲದೇ ಇದ್ದರೆ ಖರೀದಿಸಬೇಡಿ.

2. ಸಾವಯವ ಬಳಸಿ: ಇದು ಹೆಚ್ಚು ವೆಚ್ಚವಾದರೂ ಕೀಟನಾಶಕಗಳು ಮತ್ತಿತರೆ ಹಾನಿಕಾರಕ ವಸ್ತುಗಳನ್ನು ಹೊಂದಿರುವ ಆಹಾರ ಸೇವನೆ ಮಾಡುವುದು ಕೂಆ ಹಾಗೆಯೇ. ಆಹಾರದ ಪ್ರಯಾಣ ಕಡಿಮೆಯಾದರೆ ರಾಸಾಯನಿಕಗಳ ಬಳಕೆಯ ಸಾಧ್ಯತೆ ಕಡಿಮೆ ಇರುತ್ತದೆ.

3. ರಾಸಾಯನಿಕಗಳನ್ನು ತಪ್ಪಿಸಿ: ಸೌಂದರ್ಯವರ್ಧಕಗಳು ಮತ್ತು ನೀರು ವಿಷಕಾರಿ ಅಂಶಗಳನ್ನು ತರುವ ಸಾಮಾನ್ಯ ವಾಹಕಗಳಾಗಿದ್ದು ಕ್ಯಾನ್ ನ ಆಹಾರ, ಸುಗಂಧ ದ್ರವ್ಯಗಳು, ಏರ್ ಫ್ರೆಶ್ ನರ್ ಗಳು ಮತ್ತು ಮನೆಯ ಒಳಗಿನ ಕ್ಲೀನರ್ ಗಳು ಕೂಡಾ ವಿಷಕಾರಿ ಅಂಶಗಳನ್ನು ತರುತ್ತವೆ. ನೀವು ನಿಂಬೆ ರಸ ಮತ್ತು ವಿನೆಗರ್ ಬಳಸಿ ನಿಮ್ಮದೇ ಕ್ಲೀನರ್ ಗಳನ್ನು ಸೃಷ್ಟಿಸಬಹುದು ಮತ್ತು ಅಗತ್ಯ ತೈಲಗಳನ್ನು ಏರ್ ಫ್ರೆಶ್ ನರ್ ಗಳಂತೆ ಬಳಸಬಹುದು.

4. ಶೋಧಿಸಿದ ನೀರು ಕುಡಿಯಿರಿ: ಬಿಪಿಎ(ಬಿಸ್ಫೆನಾಲ್ ಎ) ಇಲ್ಲದ ಬಾಟಲಿಗಳನ್ನು ಬಳಸಿ. ಲೋಹದ ಕಂಟೈನರ್ ಗಳು ಮತ್ತು ಗಾಜಿನ ಬಾಟಲಿಗಳು ಪ್ಲಾಸ್ಟಿಕ್ ಗಿಂತ ಸುರಕ್ಷಿತ.

5. ಪ್ಲಾಸ್ಟಿಕ್ ಅಥವಾ ಗುರುತಿಸಲಾಗದ ಕಂಟೈನರ್ ಗಳಲ್ಲಿ ಮೈಕ್ರೊವೇವ್ ಮಾಡಬೇಡಿ: “ಮೈಕ್ರೊವೇವ್ ಸೇಫ್” ಎಂದು ಗುರುತಿಸಲಾದ ಪ್ಲಾಸ್ಟಿಕ್ ಗಳನ್ನು ಮಾತ್ರ ಬಳಸಿರಿ.

ವ್ಯಾಯಾಮ

ಪುರುಷರು ಮತ್ತು ಮಹಿಳೆಯರಲ್ಲಿ ಆರೋಗ್ಯಕರ ಪ್ರಮಾಣದ ವ್ಯಾಯಾಮ ಅನುಕೂಲಕರವಾಗಿದೆ. ವಾರಕ್ಕೆ ಕನಿಷ್ಠ 3 ಗಂಟೆಗಳ ದೈಹಿಕ ಚಟುವಟಿಕೆ ಶಿಫಾರಸು ಮಾಡಲಾಗುತ್ತದೆ.

ಜೀವನಶೈಲಿ ಬದಲಾವಣೆಗಳು ಪುರುಷರು ಮತ್ತು ಮಹಿಳೆಯ ಫಲವಂತಿಕೆ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಗರ್ಭಧಾರಣೆ ಪಡೆಯಲು ಪ್ರಯತ್ನಿಸುತ್ತಿದ್ದರೆ ಜಂಕ್ ಫುಡ್, ಧೂಮಪಾನ ಮತ್ತು

ಮದ್ಯಪಾನ ತಪ್ಪಿಸಿ, ಆರೋಗ್ಯಕರ ತೂಕ ಕಾಪಾಡಿಕೊಳ್ಳಿ ಮತ್ತು ಸಮತೋಲನದ ಆಹಾರ ಸೇವಿಸಿ. ಹ್ಯಾಪಿ ಪೇರೆಂಟ್ ಹುಡ್!

Write a Comment