ಅಂಡಾಶಯದ ಕ್ಯಾನ್ಸರ್ ಚಿಕಿತ್ಸೆ- ಫಲವಂತಿಕೆ ಸಮಸ್ಯೆಗಳು ಮತ್ತು ಸಂರಕ್ಷಣೆ: ಭವಿಷ್ಯದತ್ತ ಮುನ್ನೋಟ
Author: Dr. D Maheshwari, Consultant & Fertility Specialist
ಅಂಡಾಶಯದ ಕ್ಯಾನ್ಸರ್ ಮಹಿಳೆಯರಲ್ಲಿ ಅತ್ಯಂತ ಹೆಚ್ಚಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್. ಅದು ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್ ಗಳು ಮತ್ತು ಪೆರಿಟೊನಿಯಂನಿಂದ ಪ್ರಾರಂಭವಾಗುತ್ತದೆ. ಅಂಡಾಶಯದ ಕ್ಯಾನ್ಸರ್ ಗಳನ್ನು ಸೌಮ್ಯ(ಮಾರಣಾಂತಿಕವಲ್ಲದ), ಬಾರ್ಡರ್ ಲೈನ್(ಕಡಿಮೆ ಮಾರಣಾಂತಿಕ) ಅಥವಾ ಮಾರಣಾಂತಿಕ(ಕ್ಯಾನ್ಸರಸ್) ಎಂದು ವರ್ಗೀಕರಿಸಬಹುದು. ಅಂಡಾಶಯದ ಕ್ಯಾನ್ಸರ್ ನ ಕೌಟುಂಬಿಕ ಇತಿಹಾಸ ಹೊಂದಿದವರಲ್ಲಿ ಅಂಡಾಶಯದ ಕ್ಯಾನ್ಸರ್ ತಪ್ಪಿಸಲು ಯಾವುದೇ ದಾರಿಯಿಲ್ಲ. ಇದರೊಂದಿಗೆ ಯಾವುದೇ ಅನುವಂಶಿಕ ಇತಿಹಾಸ ಹೊಂದಿಲ್ಲದ ವಯಸ್ಸಾದ ಮತ್ತು ಮೆನೋಪಾಸ್ ನಲ್ಲಿರುವ ಮಹಿಳೆಯರಿಗೂ ಅಂಡಾಶಯದ ಕ್ಯಾನ್ಸರ್ ಬೆಳೆಯುವ ಸಾಧ್ಯತೆ ಇರುತ್ತದೆ.
ಕ್ಯಾನ್ಸರ್ ಪತ್ತೆಯಾಗಿದೆ ಎನ್ನುವುದೇ ಅತ್ಯಂತ ಸಂಕಷ್ಟದ ವಿಷಯವಾಗಿದೆ ಮತ್ತು ಅದಕ್ಕೆ ಸಂಬಂಧಿಸಿದ ಚಿಕಿತ್ಸೆಯು ಅದರ ಒಟ್ಟಾರೆ ಆರೋಗ್ಯದ ಮೇಲಿನ ಪರಿಣಾಮದಿಂದ ಮತ್ತಷ್ಟು ಸಂಕಷ್ಟ ಹುಟ್ಟು ಹಾಕುತ್ತದೆ. ಕ್ಯಾನ್ಸರ್ ಬಾಧಿತ ಮಹಿಳೆಯರಲ್ಲಿ ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಯಿಂದ ಫಲವಂತಿಕೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕ್ಯಾನ್ಸರ್ ಚಿಕಿತ್ಸೆಗಳು ಮಹಿಳಾ ಫಲವಂತಿಕೆಯನ್ನು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಬಾಧಿಸುತ್ತವೆ.
ಕ್ಯಾನ್ಸರ್ ಚಿಕಿತ್ಸೆಯಿಂದ ಉಂಟಾಗುವ ಫಲವಂತಿಕೆ ಸಮಸ್ಯೆಗಳು
ಅಂಡಾಶಯದ ಕ್ಯಾನ್ಸರ್ ಚಿಕಿತ್ಸೆಯು ಅಂಡಾಶಯದ ಕಾರ್ಯಗಳು ಮತ್ತು ಇತರೆ ಸಂತಾನೋತ್ಪಾದನೆಯ ಅಂಗಗಳ ಕಾರ್ಯದಲ್ಲಿ ವ್ಯತ್ಯಯ ಉಂಟು ಮಾಡುತ್ತವೆ ಎಂದು ತಿಳಿಯುವುದು ಮುಖ್ಯ.
ಅಂಡಾಶಯದ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಸಾಮಾನ್ಯವಾಗಿ ರೇಡಿಯೇಷನ್ ಥೆರಪಿ, ಕೀಮೋಥೆರಪಿ ಮತ್ತು ಅಂಡಾಶಯವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕುವುದನ್ನು ಒಳಗೊಂಡಿದೆ.
ಕಿಮೋಥೆರಪಿಗೆ ಶಕ್ತಿಯುತ ಔಷಧಗಳು ಮತ್ತು ರೇಡಿಯೇಷನ್ ಬಳಸುವುದರಿಂದ ಅದು ಅಂಡಾಶಯಕ್ಕೆ ಹಾನಿಯುಂಟು ಮಾಡುತ್ತದೆ. ಅಂಡಾಶಯಗಳು ಅಪಕ್ವ ಅಂಡಾಣುಗಳನ್ನು ಹೊಂದಿರುತ್ತವೆ ಮತ್ತು ಪ್ರತಿ ತಿಂಗಳ ಋತುಚಕ್ರದ ಮಧ್ಯಭಾಗದಲ್ಲಿ ವೀರ್ಯದಿಂದ ಫಲವಂತಿಕೆ ಪಡೆಯಲು ಪ್ರಬುದ್ಧ ಅಂಡಾಣುಗಳನ್ನು ಬಿಡುಗಡೆ ಮಾಡುತ್ತವೆ. ಅಂಡಾಶಯಗಳಿಗೆ ಯಾವುದೇ ಹಾನಿಯು ಈ ಅಂಡಾಣುಗಳನ್ನು ನಾಶ ಮಾಡಿ ಬಂಜೆತನ ಮತ್ತು ಬೇಗನೆ ಮೆನೋಪಾಸ್ ಉಂಟು ಮಾಡುತ್ತವೆ.
ಕೆಲ ಮಹಿಳೆಯರಲ್ಲಿ ಕ್ಯಾನ್ಸರ್ ಚಿಕಿತ್ಸೆಯು ಬೇಗನೆ ಮೆನೋಪಾಸ್ ಉಂಟು ಮಾಡುತ್ತದೆ, ಅಂಡಾಶಯದ ಕಾರ್ಯದ ಗೈರಿನಿಂದ ಶಾಶ್ವತ ಬಂಜೆತನ ಉಂಟು ಮಾಡುತ್ತದೆ. ಕೀಮೋಥೆರಪಿಗೆ ಒಳಗಾದ ಕೆಲ ಮಹಿಳೆಯರಲ್ಲಿ ಚಿಕಿತ್ಸೆಯ ನಂತರ ಋತುಚಕ್ರ ಮರಳಬಹುದು, ಆದರೆ ಅವರು ಕಡಿಮೆ ಫಲವಂತಿಕೆಯಿಂದ ಬಳಲುತ್ತಾರೆ.
ಯುವ ಮಹಿಳೆಯರಲ್ಲಿ ರೇಡಿಯೇಷನ್ ಥೆರಪಿ ಬಹಳ ಬೇಗನೆ ಮೆನೋಪಾಸ್ ಉಂಟು ಮಾಡುತ್ತದೆ
ಫಲವಂತಿಕೆ ಸಂರಕ್ಷಣೆ
ನಿಮ್ಮ ಆಂಕಾಲಜಿಸ್ಟರಲ್ಲಿ ಚಿಕಿತ್ಸೆ ಪ್ರಾರಂಭಿಸುವ ಮುನ್ನ ನಿಮ್ಮ ಫಲವಂತಿಕೆಯ ಮೇಲೆ ಆಗಬಹುದಾದ ತೊಂದರೆಗಳು ಮತ್ತು ಪರಿಣಾಮಗಳ ಕುರಿತು ಚರ್ಚಿಸಿರಿ. ನಿಮ್ಮ ಫಲವಂತಿಕೆಯ ಸಂರಕ್ಷಣೆಯ ಆಯ್ಕೆಗಳ ಕುರಿತು ನಿಮ್ಮ ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಿ.
ಫರ್ಟಿಲಿಟಿ ಸಂರಕ್ಷಣೆಯ ಆಯ್ಕೆಗಳು ಹಲವಾರು ಅಂಶಗಳನ್ನು ಆಧರಿಸಿರುತ್ತವೆ, ಅವುಗಳಲ್ಲಿ:
– ವಯಸ್ಸು
– ಕ್ಯಾನ್ಸರ್ ಬಗೆ ಮತ್ತು ಹಂತ
– ಅಂಡಾಶಯದ ರಿಸರ್ವ್
– ಇಡೀ ಪ್ರಕ್ರಿಯೆಯ ವೆಚ್ಚ
ಅಂಡಾಣು ಮತ್ತು ಭ್ರೂಣ ಘನೀಕರಣ: ಫರ್ಟಿಲಿಟಿ ಸಂರಕ್ಷಿಸುವುದು ಅತ್ಯುತ್ತಮ ವಿಧಾನ. ಮಹಿಳೆಯರಲ್ಲಿ ಅಂಡಾಣು ಉತ್ಪಾದನೆಯನ್ನು ಹಾರ್ಮೋನುಗಳ ಇಂಜೆಕ್ಷನ್ ಗಳ ಮೂಲಕ ಉತ್ತೇಜಿಸಲಾಗುತ್ತದೆ ಮತ್ತು ಪಕ್ವಗೊಂಡ ಅಂಡಾಣುಗಳನ್ನು ಸಂಗ್ರಹಿಸಿ ಭವಿಷ್ಯದ ಉದ್ದೇಶಗಳಿಗೆ ಸಂಗ್ರಹಿಸಲಾಗುತ್ತದೆ. ವಿವಾಹಿತ ಮಹಿಳೆಯರಲ್ಲಿ ಈ ಸಂಗ್ರಹಿಸಿದ ಅಂಡಾಣುಗಳನ್ನು ಪ್ರಯೋಗಾಲಯಗಳಲ್ಲಿ ವೀರ್ಯದೊಂದಿಗೆ ಸಂಯೋಜಿಸಿ ಭ್ರೂಣ
ತಯಾರಿಸಲಾಗುತ್ತದೆ. ಈ ಭ್ರೂಣವನ್ನು ಭವಿಷ್ಯದಲ್ಲಿ ಭ್ರೂಣ ವರ್ಗಾವಣೆಗೆ ಸಂರಕ್ಷಿಸಲಾಗುತ್ತದೆ.
ಶಸ್ತ್ರಚಿಕಿತ್ಸೆಯಿಂದ ನಿವಾರಣೆ: ಕ್ಯಾನ್ಸರ್ ತನ್ನ ಪ್ರಾರಂಭಿಕ ಹಂತದಲ್ಲಿ ಪತ್ತೆಯಾದ ಕೆಲ ಪ್ರಕರಣಗಳಲ್ಲಿ ಮತ್ತು 1 ಅಂಡಾಶಯಕ್ಕೆ ಹಾನಿಯುಂಟು ಮಾಡಿದ್ದಲ್ಲಿ ಹಾನಿಗೊಳಗಾದ ಅಂಡಾಶಯವನ್ನು ಮಾತ್ರ ಶಸ್ತ್ರಚಿಕಿತ್ಸೆಯಿಂದ ನಿವಾರಿಸಲಾಗುತ್ತದೆ. ಇದು ಇತರೆ ಆರೋಗ್ಯಕರ ಅಂಡಾಶಯವನ್ನು ಸಂರಕ್ಷಿಸಿ ಶಾಶ್ವತ ಬಂಜೆತನ ತಡೆಯುವಲ್ಲಿ ನೆರವಾಗುತ್ತದೆ.
ಅಂಡಾಶಯದ ಜೀವಕೋಶ ಸಂರಕ್ಷಣೆ: ಅಂಡಾಶಯದ ಭಾಗ ಅಥವಾ ಇಡೀ ಅಂಡಾಶಯವನ್ನು ಶಸ್ತ್ರಚಿಕಿತ್ಸೆಯಿಂದ ನಿವಾರಿಸಲಾಗುತ್ತದೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ನಂತರ ಮತ್ತೆ ಅಳವಡಿಸಲು ಘನೀಕರಿಸಲಾಗುತ್ತದೆ.
ಈ ಪ್ರಕ್ರಿಯೆಯು ಪ್ರಸವಪೂರ್ವ ಪ್ರೌಢಾವಸ್ಥೆಯ ಮುಂಚಿನ ಬಾಲಕಿಯರು ಮತ್ತು ಅಂಡಾಶಯದ ಉತ್ತೇಜನಕ್ಕೆ ಒಳಗಾಗದ ಮಹಿಳೆಯರಲ್ಲಿ ಅತ್ಯಂತ ಉಪಯುಕ್ತವಾಗಿದೆ.
ಸಮಾರೋಪ
ಅಂಡಾಶಯದ ಕ್ಯಾನ್ಸರ್ ಅಥವಾ ಯಾವುದೇ ಬಗೆಯ ಕ್ಯಾನ್ಸರ್ ಪತ್ತೆಯಾಗುವುದು ಅತ್ಯಂತ ಒತ್ತಡದ ಮತ್ತು ಭಯದ ಅನುಭವ. ಮತ್ತು ಇನ್ನೂ ಮಕ್ಕಳಾಗದ ಹಂತದಲ್ಲಿ ನಿಮ್ಮ ಬಂಜೆತನಕ್ಕೆ ಹಾನಿ ಇನ್ನೂ ಸಂಕಷ್ಟದ ಅನುಭವ. ಅದಕ್ಕೆ ಸುಲಭ ಪರಿಹಾರವೆಂದರೆ ಕ್ಯಾನ್ಸರ್ ನಿಂದ ಗುಣವಾದವರಿಗೆ ತಾಯಿಯಾಗುವ ಸಾಧ್ಯತೆ ಇದೆ ಎಂದು ತಿಳಿಯುವುದು, ಅದಕ್ಕೆ ಅವರು ಸಕಾಲಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಫರ್ಟಿಲಿಟಿ ತಜ್ಞರು ನಿಮಗೆ ಸೂಕ್ತವಾದ ನಿಮ್ಮ ಆಯ್ಕೆಗಳನ್ನು ಮರು ಮೌಲ್ಯಮಾಪನ ಮಾಡಲು ನೆರವಾಗುತ್ತಾರೆ.