Secondary Infertility

ದೀರ್ಘಕಾಲದಿಂದ ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದೀರಾ?- ಸೆಕೆಂಡರಿ ಇನ್ಫರ್ಟಿಲಿಟಿ ಕಾರಣವಾಗಿರಬಹುದು!

ದೀರ್ಘಕಾಲದಿಂದ ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದೀರಾ?-  ಸೆಕೆಂಡರಿ ಇನ್ಫರ್ಟಿಲಿಟಿ  ಕಾರಣವಾಗಿರಬಹುದು!

ಬಂಜೆತನ ನಿಮ್ಮ ಮೊದಲ ಮಗುವಿನೊಂದಿಗೆ ಸರಿಯಾಗುವ ಸಮಸ್ಯೆಯಲ್ಲ. ಹೌದು. ನೀವು ನಿಮ್ಮ ಎರಡನೆಯ ಮಗುವಿನ ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವಾಗಲೂ ನಿಮ್ಮನ್ನು ಬಾಧಿಸಬಹುದು. ಅದನ್ನು ಎರಡನೆಯ ಬಂಜೆತನ ಎಂದು ಕರೆಯುತ್ತಾರೆ. ಬಹಳಷ್ಟು ಮಂದಿಗೆ ಅಂತಹ ಸ್ಥಿತಿ ಇದೆ ಎಂದು ಗೊತ್ತೇ ಇಲ್ಲ. ಆದರೆ ಬಹಳಷ್ಟು ದಂಪತಿಗಳು ಅವರ 30ರ ವಯಸ್ಸಿನಲ್ಲಿ ಎರಡನೆಯ ಮಗುವಿಗೆ ಪ್ರಯತ್ನಿಸುತ್ತಾರೆ ಆದರೆ ಫರ್ಟಿಲಿಟಿ ಸಮಸ್ಯೆಗಳಿಂದ ಅವರು ಬಯಸಿದಷ್ಟು ದೊಡ್ಡ ಕುಟುಂಬ ಹೊಂದಲು ಸಾಧ್ಯವಾಗುವುದಿಲ್ಲ. ಇದು ಭಾವನಾತ್ಮಕವಾಗಿ ಅತ್ಯಂತ ಸವಾಲಿನ ಸನ್ನಿವೇಶ. ದಂಪತಿಗಳು ಇದರ ಕುರಿತು ಮುಕ್ತವಾಗಿ ಮಾತನಾಡುವುದಿಲ್ಲ ಏಕೆಂದರೆ ಅವರಿಗೆ ಈಗಾಗಲೇ ಮಗುವಿರುತ್ತದೆ ಮತ್ತು ಈ ವಿಷಯವನ್ನು ಯಾರೂ ಕಾಳಜಿಯಿಂದ ಆಲಿಸುವುದಿಲ್ಲ.  

ಯಾವುದು ಸೆಕೆಂಡರಿ ಇನ್ಫರ್ಟಿಲಿಟಿ  ಉಂಟು ಮಾಡುತ್ತದೆ? 

ಉದ್ಯೋಗ ಮತ್ತಿತರೆ ವೈಯಕ್ತಿಕ ಬದ್ಧತೆಗಳು ಮೊದಲ ಮಗುವನ್ನು ಹೊಂದುವ ವಯಸ್ಸನ್ನು 29 ಅಥವಾ 30 ಆಗಿಸುತ್ತದೆ. ಎರಡನೆಯ ಮಗುವನ್ನು ಹೊಂದುವ ಆಲೋಚನೆ 34 ಅಥವಾ 35ರಲ್ಲಿ ಉಂಟಾಗುತ್ತದೆ ಮತ್ತು ಈ ವೇಳೆಗೆ ಮಹಿಳೆಯರ ಫಲವತ್ತತೆ ಕುಸಿಯಲು ಪ್ರಾರಂಭವಾಗಿರುತ್ತದೆ. ಪುರುಷರ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಕೂಡಾ ವಯಸ್ಸು ಹಾಗೂ ಜೀವನಶೈಲಿ ಬದಲಾವಣೆಗಳಿಂದ ಕಡಿಮೆಯಾಗುತ್ತದೆ.  

ಮಹಿಳೆಯರಲ್ಲಿ ಸೆಕೆಂಡರಿ ಇನ್ಫರ್ಟಿಲಿಟಿಗೆ  ಕಾರಣ ಎಂಡೋಮೆಟ್ರಿಯಾಸಿಸ್, ಡಿಂಬನಾಳ ಕಟ್ಟಿಕೊಳ್ಳುವುದು, ಅನಿಯಮಿತ ಅಂಡೋತ್ಪತ್ತಿ, ಗರ್ಭಾಶಯದ ಗಡ್ಡೆಗಳು, ಲೈಂಗಿಕವಾಗಿ ವರ್ಗಾವಣೆಯಾದ ಸೋಂಕುಗಳು, ಪಿಸಿಒಎಸ್, ಸಿ-ಸೆಕ್ಷನ್ ಇತಿಹಾಸ, ವಿವರಿಸಲಾಗದ ಬಂಜೆತನ ಇತ್ಯಾದಿ ಪ್ರಮುಖ ಕಾರಣಗಳಾಗಿವೆ.

ಎರಡು ಗರ್ಭಧಾರಣೆಗಳ ನಡುವೆ ಮಹಿಳೆಯರ ವಯಸ್ಸು ಹೆಚ್ಚಾಗುತ್ತದೆ, ಮಹಿಳೆಯರು ಪಿಸಿಒಎಸ್ ಗೆ ಒಳಗಾಗಬಹುದು ಅಥವಾ ಪುರುಷ ಮತ್ತು ಮಹಿಳೆಯರು ವ್ಯಾಯಾಮದ ಕೊರತೆಯಿಂದ ಮಧುಮೇಹಕ್ಕೆ ಒಳಗಾಗಬಹುದು, ಇದು ಗರ್ಭಧಾರಣೆಯಲ್ಲಿ ಮತ್ತಷ್ಟು ಸಂಕೀರ್ಣತೆ ಉಂಟು ಮಾಡಬಹುದು. ಧೂಮಪಾನದಂತಹ ಅಭ್ಯಾಸಗಳೂ ಪುರುಷ ಹಾಗೂ ಮಹಿಳೆಯರಲ್ಲಿ ಬಂಜೆತನ ಉಂಟು ಮಾಡಬಹುದು.  

ಹಿಂದೆ ಮಗುವನ್ನು ಪಡೆದು ನಂತರ ಗರ್ಭಧಾರಣೆ ಸಾಧಿಸಲು ಅಶಕ್ತರಾದ ದಂಪತಿಗಳು ಆಘಾತ ಅನುಭವಿಸುತ್ತಾರೆ. 35 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಹಿಳೆಯರು ಮತ್ತು ಒಂದು ವರ್ಷದ ನಂತರವೂ ಗರ್ಭಧಾರಣೆ ಪಡೆಯಲು ಅಶಕ್ತರಾದವರು ಹಾಗೂ 35 ವರ್ಷ ಮೇಲ್ಪಟ್ಟು ಹಾಗೂ 6 ತಿಂಗಳ ನಂತರ ಎರಡನೆಯ ಮಗುವನ್ನು ಪಡೆಯದೇ ಇದ್ದವರು ತಡ ಮಾಡದೆ ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಬೇಕು.  

ಸೆಕೆಂಡರಿ ಇನ್ಫರ್ಟಿಲಿಟಿ  ನಿವಾರಣೆ ಹೇಗೆ 

ಎರಡನೆಯ ಬಂಜೆತನವನ್ನು ಔಷಧಗಳು, ಶಸ್ತ್ರಚಿಕಿತ್ಸೆಗಳು, ಅಥವಾ ಐಯುಐ, ಐವಿಎಫ್ ಇತ್ಯಾದಿ ಅಸಿಸ್ಟೆಡ್ ರೀಪ್ರೊಡಕ್ಟಿವ್ ಟೆಕ್ನಿಕ್ಸ್ ಅನ್ನು ವಯಸ್ಸು ಮತ್ತು ಆರೋಗ್ಯದ ಪರಿಸ್ಥಿತಿಗಳನ್ನು ಆಧರಿಸಿ ಚಿಕಿತ್ಸೆ ನೀಡಬಹುದು.  

ಸೆಕೆಂಡರಿ ಇನ್ಫರ್ಟಿಲಿಟಿ  ಸಮಸ್ಯೆ ಎಂದರೆ ಅದು ಸಾಕಷ್ಟು ಒತ್ತಡ ಹಾಗೂ ನಿರಾಶೆ ಉಂಟು ಮಾಡುತ್ತದೆ ಏಕೆಂದರೆ ದಂಪತಿಗಳು ತಮ್ಮ ಮಗುವಿಗೆ ಸೋದರ/ಸೋದರಿ ನೀಡಲಾಗದ ಅಸಹಾಯಕತೆಯಿಂದ ಕುಗ್ಗಿ ಹೋಗುತ್ತಾರೆ. ಜೀವನಶೈಲಿ ಬದಲಾವಣೆಗಳು ಅವರ ಆರೋಗ್ಯದ ಮೇಲೆ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರಬಲ್ಲದು ಮತ್ತು ದಂಪತಿಗಳಿಗೆ ಅವರ ಮನಸ್ಸಿನಲ್ಲಿರುವಂತೆ ಸಂಪೂರ್ಣ ಕುಟುಂಬದ ಕನಸನ್ನು ನನಸಾಗಿಸಿಕೊಳ್ಳಬಹುದು.

ದಂಪತಿಗಳು ಅವರ ಮೊದಲ ಗರ್ಭಧಾರಣೆ ತಡ ಮಾಡಿದರೆ ಎರಡನೆಯ ಗರ್ಭಧಾರಣೆಯೂ ತಡವಾಗುತ್ತದೆ. ಹೆಚ್ಚು ಜನರು ತಮ್ಮ ಎರಡನೆಯ ಮಗುವನ್ನು ಪಡೆಯಲಾಗದ ಪೂರ್ಣಗೊಳ್ಳದ ಕನಸಿನಿಂದ ಸಂಕಷ್ಟ ಅನುಭವಿಸುತ್ತಾರೆ. ದಂಪತಿಗಳು ಅವರ ಗೂಡಿನಿಂದ ಹೊರಕ್ಕೆ ಬರಬೇಕು ಮತ್ತು ಸೆಕೆಂಡರಿ ಇನ್ಫರ್ಟಿಲಿಟಿ  ಮೀರಲು ಫರ್ಟಿಲಿಟಿ ತಜ್ಞರ ಮಾರ್ಗದರ್ಶನ ಪಡೆಯಬೇಕು.

Was this article helpful?
YesNo

fill up the form to get a

Free Consultation

Your data is 100% safe with us.

Avail 0% interest on EMI
All Procedures | No Upper Limit

How we reviewed this article:

HISTORY
  • Current Version
  • August 23, 2022 by Oasis Fertility
  • March 15, 2022 by Oasis Fertility

LatestTrending

Ad

BOOK A FREE CONSULTATION

Book

Appointment

Call Us

1800-3001-1000
User ID: 17 - Username: hema
User ID: 13 - Username: jigna.n
User ID: 12 - Username: kavya.j
User ID: 19 - Username: maheswari.d
User ID: 8 - Username: Oasis Fertility
User ID: 14 - Username: parinaaz.parhar
User ID: 9 - Username: Piyush_leo9
User ID: 22 - Username: poornima
User ID: 23 - Username: prasanta
User ID: 15 - Username: pratibha
User ID: 16 - Username: prinkabajaj
User ID: 18 - Username: radhikap
User ID: 21 - Username: rajesh.sawant
User ID: 10 - Username: ramya.v
User ID: 11 - Username: saimanasa
User ID: 20 - Username: shalini
User ID: 7 - Username: shootorder