ಏಡ್ಸ್ ನಿಮ್ಮ ಪಿತೃತ್ವವನ್ನು ಕಳೆದುಕೊಳ್ಳಬೇಕಾಗಿಲ್ಲ! ಫಲವತ್ತತೆ ಚಿಕಿತ್ಸೆಗಳು HIV ದಂಪತಿಗಳನ್ನು ಪೋಷಕರಾಗಲು ಸಕ್ರಿಯಗೊಳಿಸಬಹುದು
ಏಡ್ಸ್ ನಿಮ್ಮ ತಂದೆ ತಾಯಿಯರಾಗುವ ದಾರಿಯಲ್ಲಿ ಅಡ್ಡ ಬರುವುದಿಲ್ಲ! ಫಲವಂತಿಕೆ ಚಿಕಿತ್ಸೆಗಳು ಎಚ್.ಐ.ವಿ. ದಂಪತಿಗಳಿಗೆ ತಂದೆ ತಾಯಿಯರಾಗಲು ನೆರವಾಗಬಲ್ಲವು.
ಶ್ರೀ ಸುನಿಲ್ ಮತ್ತು ಶ್ರೀಮತಿ ದಿವ್ಯಾ ಅವರಿಗೆ ವಾಡಿಕೆಯ ಪರೀಕ್ಷೆಗಳನ್ನು ನಡೆಸಿದಾಗ ರೆಟ್ರೋವೈರಲ್ ಪಾಸಿಟಿವ್ ಎಂದು ಬಂದಾಗ ಅವರ ಜೀವನಗಳು ಆಘಾತಕ್ಕೆ ಒಳಗಾದವು. ಕೆಲ ವೈದ್ಯರು ವೀರ್ಯದಾನಿ ಅಥವಾ ದತ್ತು ಪಡೆಯುವ ಮೂಲಕ ಮಗುವನ್ನು ಪಡೆಯಿರಿ ಎಂದು ಸಲಹೆ ನೀಡಿದಾಗ ಜೈವಿಕ ಮಗುವನ್ನು ಹೊಂದುವ ಅವರ ಕನಸು ಕೂಡಾ ಕಮರಿತು. ದಂಪತಿಗಳು ಓಯಸಿಸ್ ಫರ್ಟಿಲಿಟಿಗೆ ಭೇಟಿ ನೀಡಿದಾಗ ಮತ್ತು ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳ ಮೂಲಕ ತಂದೆ ತಾಯಿಯರಾಗಬಹುದು ಎಂಬ ಹೊಸ ಭರವಸೆ ಮತ್ತು ಆಸೆ ಹುಟ್ಟಿತು ಮತ್ತು ಅವರು ಜೈವಿಕ ಮಗು ಪಡೆಯುವಲ್ಲಿ ಯಶಸ್ವಿಯಾದರು. ಇದು ಎಚ್.ಐ.ವಿ. ರೋಗಿಗಳಿಗೆ ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳು ಮತ್ತು ಆಂಟಿರೆಟ್ರೋವೈರಲ್ ಥೆರಪಿಗಳ ಲಭ್ಯತೆಯ ಮೂಲಕ ಎಚ್.ಐ.ವಿ. ಸಂಗಾತಿಗೆ ಮತ್ತು ಮಗುವಿಗೆ ವರ್ಗಾವಣೆಯಾಗುವ ತೊಂದರೆ ಕಡಿಮೆ ಮಾಡಲು ನೆರವಾದವು. ತಂದೆ ತಾಯಿಯರಾಗುವ ದಂಪತಿಗಳಿಗೆ ಏಡ್ಸ್ ಹಿನ್ನಡೆಯಾಗಬಾರದು. ಈ ಕುರಿತು ಅರಿವನ್ನು ಮೂಡಿಸುವುದು ಮುಖ್ಯವಾಗಿದೆ. ಓಯಸಿಸ್ ಫರ್ಟಿಲಿಟಿಗೆ ಎಚ್.ಐ.ವಿ. ದಂಪತಿಗಳು ಬಂಜೆತನದಿಂದ ಹೊರಬರಲು ನೆರವಾಗುವ ಪರಿಣಿತಿ ಹಾಗೂ ಅನುಭವವಿದೆ ಹಾಗೂ ಅಂತಹ ಹಲವು ದಂಪತಿಗಳು ತಂದೆ ತಾಯಿಯರಾಗಲು ನೆರವಾಗಿದೆ. ಗೋಪ್ಯತೆ ಕಾಪಾಡಲು ದಂಪತಿಗಳ ಹೆಸರನ್ನು ಬದಲಾಯಿಸಲಾಗಿದೆ.
ಎಚ್.ಐ.ವಿ. ಹೇಗೆ ಮಹಿಳೆಯರ ಫಲವಂತಿಕೆಯ ಮೇಲೆ ಪರಿಣಾಮ ಬೀರುತ್ತದೆ?
ಎಚ್.ಐ.ವಿ. ಮಹಿಳೆಯರಿಗೆ ದೈಹಿಕವಾಗಿ, ಜೈವಿಕವಾಗಿ, ಮಾನಸಿಕವಾಗಿ ಬಾಧಿಸುತ್ತದೆ ಮತ್ತು ಅದು ತೂಕನಷ್ಟ, ದೀರ್ಘಕಾಲದ ಅಂಡೋತ್ಪತ್ತಿಯಾಗದಿರುವುದು ಮತ್ತು ಋತುಚಕ್ರದಲ್ಲಿ ಅಸಹಜತೆ ಉಂಟು ಮಾಡಬಹುದು. ಇದು ಎಚ್.ಐ.ವಿ. ಪಾಸಿಟಿವ್ ಮಹಿಳೆಯರಲ್ಲಿ ಶ್ರೋಣಿಯ ಉರಿಯೂತದ ರೋಗ, ನಾಳದಲ್ಲಿ ತಡೆಯಿಂದ ಬಂಜೆತನ ಇತ್ಯಾದಿ ಉಂಟು ಮಾಡಬಹುದು.
ಗರ್ಭಧಾರಣೆಯಲ್ಲಿ ನಾಚಿಕೆ ಮತ್ತು ಭಯದಿಂದ ಉಂಟಾಗುವ ಒತ್ತಡ ಹಾಗೂ ಮಗುವಿನ ಆರೋಗ್ಯ ಕೂಡಾ ಈ ಮಹಿಳೆಯರ ಫಲವಂತಿಕೆಯ ಸಾಮರ್ಥ್ಯಕ್ಕೆ ಹಾನಿಯುಂಟು ಮಾಡುತ್ತದೆ. ಅವರು ಗರ್ಭಪಾತದ ಹೆಚ್ಚಿನ ರಿಸ್ಕ್ ಗೂ ಒಳಗಾಗುವ ಸಂಭವನೀಯತೆ ಇರುತ್ತದೆ. ಆದರೆ ಈ ಎಲ್ಲವುಗಳು ಕುಟುಂಬ ಹೊಂದುವ ಕನಸಿಗೆ ಅಡ್ಡಿಯಾಗಬೇಕಿಲ್ಲ.
ಎಚ್.ಐ.ವಿ. ಹೇಗೆ ಪುರುಷರ ಫಲವಂತಿಕೆಗೆ ಹಾನಿಯುಂಟು ಮಾಡುತ್ತದೆ?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಎಚ್.ಐ.ವಿ. ಪಾಸಿಟಿವ್ ಪುರುಷರು ಹೈಪೊಗೊನಾಡಿಸಂ ಬೆಳೆಸಿಕೊಳ್ಳುತ್ತಾರೆ ಮತ್ತು ವೀರ್ಯದ ಸಾಂದ್ರತೆ, ವೀರ್ಯ ಸಂಖ್ಯೆ ಮತ್ತು ಚಲನೆ ಕಡಿಮೆಯಾಗುತ್ತದೆ. ಅಲ್ಲದೆ ಅವರು ನಿಮಿರುವಿಕೆಯ ಕೊರತೆ, ಕಾಮಾಸಕ್ತಿಯ ಕೊರತೆ, ಆಲಿಗೊಸ್ಪರ್ಮಿಯಾ ಮತ್ತು ನಪುಂಸಕತ್ವ ಅನುಭವಿಸುತ್ತಾರೆ.
ಫರ್ಟಿಲಿಟಿ ಚಿಕಿತ್ಸೆಗಳು:
ಪುರುಷ ಸಂಗಾತಿ ಎಚ್.ಐ.ವಿ. ಸೋಂಕಿತನಾಗಿದ್ದರೆ ಆತನಿಗೆ ಆಂಟಿರೆಟ್ರೋವೈರಲ್ ಔಷಧಗಳನ್ನು ನೀಡಿ ಚಿಕಿತ್ಸೆ ನೀಡಲಾಗುತ್ತದೆ ಇದರಿಂದ ಸೆರಂ ಮತ್ತು ವೀರ್ಯದ ವೈರಲ್ ಪ್ರಮಾಣ ಕಡಿಮೆಯಾಗುತ್ತದೆ. ವೈರಲ್ ಲೋಡ್ ಅನ್ನು ಪುರುಷ ಸಂಗಾತಿಯಲ್ಲಿ ಪತ್ತೆ ಮಾಡದೇ ಇರುವಾಗ ಮಾತ್ರ ದಂಪತಿಗೆ ಎ.ಆರ್.ಟಿ. ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ. ಪ್ರಿ-ಎಕ್ಸ್ ಪೋಷರ್ ಪ್ರೊಫೈಲಕ್ಸಿಸ್(ಪಿಆರ್.ಇಪಿ) ಅನ್ನು ಮಹಿಳಾ ಸಂಗಾತಿಗೆ ನೀಡುವ ಮೂಲಕ ಆಕೆಗೆ ರೋಗ ವರ್ಗಾವಣೆಯ ತೊಂದರೆ ಕಡಿಮೆ ಮಾಡಲಾಗುತ್ತದೆ. ಸೆಮಿನಲ್ ಪ್ಲಾಸ್ಮಾದ ಡಬಲ್ ವಾಷ್, ಐಯುಐ ಮತ್ತು ಐಸಿಎಸ್ಐನೊಂದಿಗೆ ಐವಿಎಫ್ ಪತ್ನಿ ಹಾಗೂ ಮಗುವಿಗೆ ರೋಗ ವರ್ಗಾವಣೆಯ ಸಾಧ್ಯತೆ ಕಡಿಮೆ ಮಾಡುತ್ತದೆ.
ಹಲವಾರು ಚಿಕಿತ್ಸೆಯ ಸಾಧ್ಯತೆಗಳು ಲಭ್ಯವಿದ್ದು ಅವು ಎಚ್.ಐ.ವಿ. ಹೊಂದಿರುವ ದಂಪತಿಗಳಿಗೆ ತಮ್ಮದೇ ಜೈವಿಕ ಮಗುವನ್ನು ಹೊಂದುವ ಸಂತೋಷ ನೀಡುತ್ತವೆ, ಅರಿವಿನ ಕೊರತೆಯಿಂದ ಹಲವರನ್ನು ಭರವಸೆ ಮತ್ತು ಸಂತೋಷ ಕಳೆದುಕೊಳ್ಳುವಂತೆ ಮಾಡುತ್ತದೆ.
ಎಚ್.ಐ.ವಿ. ದಂಪತಿಗಳಿಗೆ ಪ್ರಿ-ಕನ್ಸೆಪ್ಷನ್ ಕೌನ್ಸೆಲ್ಲಿಂಗ್ ಬಹಳ ಮುಖ್ಯ ಏಕೆಂದರೆ ಅದು ಅವರಿಗೆ ಕುಟುಂಬ ಪ್ರಾರಂಭಿಸುವ ಮುನ್ನ ರಿಸ್ಕ್ ಗಳು, ಮುನ್ನೆಚ್ಚರಿಕೆಯ ಕ್ರಮಗಳು ಮತ್ತು ಚಿಕಿತ್ಸೆಯ ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.
ಭರವಸೆ ಖಂಡಿತಾ ಇದೆ! ತಂದೆ ತಾಯಿಯರಾಗುವ ನಿಮ್ಮ ಕನಸನ್ನು ಕೈ ಬಿಡಬೇಡಿ. ಏಡ್ಸ್ ವಿರುದ್ಧ ಹೋರಾಡಿ ಮತ್ತು ಪೋಷಕತ್ವವನ್ನು ಸಾಧಿಸಿರಿ!