Blog
Uncategorized

ಮಹಿಳೆಯರಲ್ಲಿ ಗರ್ಭಾಶಯದ ಒಳಗಿನ ಅಂಟುಕೊಳ್ಳುವಿಕೆಗಳು (ಇಂಟ್ರಾಯುಟೆರಿನ್ ಅಡ್ಹೆಷನ್ಸ್) ಮತ್ತು ಬಂಜೆತನ

ಮಹಿಳೆಯರಲ್ಲಿ ಗರ್ಭಾಶಯದ ಒಳಗಿನ ಅಂಟುಕೊಳ್ಳುವಿಕೆಗಳು (ಇಂಟ್ರಾಯುಟೆರಿನ್ ಅಡ್ಹೆಷನ್ಸ್)    ಮತ್ತು ಬಂಜೆತನ

ಮಹಿಳೆಯರಲ್ಲಿ ಬಂಜೆತನವು ಪಿಸಿಒಎಸ್, ಎಂಡೋಮೆಟ್ರಿಯೋಸಿಸ್, ಹೆಚ್ಚುತ್ತಿರುವ ವಯಸ್ಸು, ಗರ್ಭಾಶಯದ ಫೈಬ್ರಾಯಿಡ್ ಗಳು, ಬೊಜ್ಜು ಇತ್ಯಾದಿ ಕಾರಣಗಳಿಂದ ಉಂಟಾಗಬಹುದು. ಗರ್ಭಾಶಯದ ಒಳಗಿನ ಅಂಟಿಕೊಳ್ಳುವಿಕೆಗಳು ಕೂಡಾ ಬಂಜೆತನಕ್ಕೆ ಕಾರಣವಾಗಬಲ್ಲವು ಎಂದು ಬಹಳಷ್ಟು ಜನರಿಗೆ ತಿಳಿದಿಲ್ಲ. ಸುಧಾರಿತ ಶಸ್ತ್ರಚಿಕಿತ್ಸೆಗಳು ಮತ್ತು ಬಂಜೆತನ ನಿವಾರಣ ಚಿಕಿತ್ಸೆಗಳು ಮಹಿಳೆಯರಿಗೆ ಈ ಪರಿಸ್ಥಿತಿಯಿಂದ ಹೊರಬರಲು ಮತ್ತು ತಾಯಿಯರಾಗಲು ನೆರವಾಗುತ್ತವೆ. ಮಹಿಳೆಯೊಬ್ಬರಿಗೆ ತೀವ್ರ ಹೊಟ್ಟೆನೋವು ಅಥವಾ ಋತುಚಕ್ರದಲ್ಲಿ ಅತ್ಯಲ್ಪ ಅಥವಾ ತೀವ್ರವಾದ ರಕ್ತಸ್ರಾವ ಇದ್ದಲ್ಲಿ ಅಥವಾ ಗರ್ಭಧಾರಣೆ ಅಸಾಧ್ಯವಾದಲ್ಲಿ ಫರ್ಟಿಲಿಟಿ ತಜ್ಞರನ್ನು ಭೇಟಿ ಮಾಡುವುದು ಉತ್ತಮ.

ಇಂಟ್ರಾಯುಟೆರಿನ್ ಅಡ್ಹೆಷನ್ಸ್(ಐ.ಯು.ಎ) ಎಂದರೇನು?

ಇಂಟ್ರಾಯುಟೆರಿನ್ ಅಡ್ಹೆಷನ್ ಅನ್ನು ಆಶರ್ ಮ್ಯಾನ್ ಸಿಂಡ್ರೋಮ್ ಎನ್ನಲಾಗುತ್ತದೆ. ಗರ್ಭಕೋಶದ ಒಳಪರದೆಗೆ ಎಂಡೋಮೆಟ್ರಿಯಂ ಎನ್ನಲಾಗುತ್ತದೆ ಮತ್ತು ಈ ಒಳಪರದೆಗೆ  ಯಾವುದೇ ಗಾಯ(ಉದಾಹರಣೆಗೆ ಡಿ ಅಂಡ್ ಸಿ) ಅಥವಾ ಸೋಂಕುರೋಗ ಇದ್ದಾಗ ಗರ್ಭಕೋಶದಲ್ಲಿ ಅಡ್ಹೆಷನ್ಸ್(ಸ್ಕಾರ್ ಟಿಶ್ಯೂಗಳು) ಉಂಟಾಗುತ್ತವೆ ಇವು ಬಂಜೆತನದ ಸಮಸ್ಯೆಗಳನ್ನು ಉಂಟು ಮಾಡಬಲ್ಲವು. ಎಂಡೋಮೆಟ್ರಿಯಂ ಸಹಜ ಗರ್ಭಧಾರಣೆಗೆ ಅತ್ಯಂತ ಮುಖ್ಯ. ಅಲ್ಲದೆ ಐ.ವಿ.ಎಫ್.ನಂತಹ ಚಿಕಿತ್ಸೆಗಳ  ಯಶಸ್ಸು ಕೂಡಾ ಗರ್ಭಾಶಯದ ಒಳಪರದೆಯಾದ ಎಂಡೋಮೆಟ್ರಿಯಂ ಮೇಲೆ ಆಧರಿಸಿರುತ್ತದೆ.

ಇಂಟ್ರಾಯುಟೆರಿನ್ ಅಡ್ಹೆಷನ್ಸ್ ಗೆ ಕಾರಣಗಳು:

  • ಗರ್ಭಕೋಶದ ಹಿಂದಿನ ಶಸ್ತ್ರಚಿಕಿತ್ಸೆ
  • ಶ್ರೋಣಿಯ ಸೋಂಕುಗಳ ಹಿನ್ನೆಲೆ, ಮುಖ್ಯವಾಗಿ ಕ್ಷಯರೋಗ
  • ಡಿ&ಸಿ(ಡೈಲೇಟೇಷನ್ ಮತ್ತು ಕ್ಯೂರೆಟ್ಯಾಜ್)
  • ಎಂಡೋಮೆಟ್ರೆಟಿಸ್(ಎಂಡೋಮೆಟ್ರಿಯಂ ಸೋಂಕು)
  • ಸಿಸೇರಿಯನ್ ಸೆಕ್ಷನ್

ರೋಗಲಕ್ಷಣಗಳು:

  • ಹಗುರ ಋತುಚಕ್ರಗಳು
  • ಋತುಚಕ್ರಗಳ ಅನುಪಸ್ಥಿತಿ
  • ಬಂಜೆತನ
  • ಪುನರಾವರ್ತಿತ ಗರ್ಭಪಾತ

ರೋಗಪರೀಕ್ಷೆ:

  • ಅಲ್ಟ್ರಾಸೌಂಡ್
  • ಹಿಸ್ಟೆರೊಸ್ಕೋಪಿ
  • ಹಿಸ್ಟೆರೊಸಲ್ಪಿಂಗೊಗ್ರಾಮ್

ಚಿಕಿತ್ಸೆ:

ಇಂಟ್ರಾಯುಟೆರೈನ್ ಅಡ್ಹೆಷನ್ಸ್(ಐ.ಯು.ಎ) ಹೊಂದಿರುವ ಮಹಿಳೆಯರಿಗೆ ಲಭ್ಯವಿರುವ ಚಿಕಿತ್ಸೆಯು ಅಡ್ಹೆಷನ್ಸ್ ನಿವಾರಿಸಲು ಆಪರೇಟಿವ್ ಹಿಸ್ಟೆರೋಸ್ಕೋಪಿ, ಪಿ.ಆರ್.ಪಿ. ಇಂಜೆಕ್ಷನ್ ಗಳೊಂದಿಗೆ ಐ.ವಿ.ಎಫ್. ಮತ್ತೆ ಅಡ್ಹೆಷನ್ಸ್ ರೂಪುಗೊಳ್ಳುವುದನ್ನು ತಡೆಯಲು ಔಷಧಗಳನ್ನು ನೀಡಲಾಗುತ್ತದೆ. ಆಪರೇಟಿವ್ ಹಿಸ್ಟೆರೋಸ್ಕೋಪಿ ಗರ್ಭಕೋಶದ ಅಸಹಜ ಸ್ಥಿತಿಗಳಿಗೆ ಬಹಳ ಉಪಯುಕ್ತವಾದ ಶಸ್ತ್ರ ಚಿಕಿತ್ಸೆಯಾಗಿದೆ. ಐ.ಯು.ಎ.ಯಲ್ಲಿ ಗಾಯದ ಜೀವಕೋಶವನ್ನು ಹಿಸ್ಟೆರೆಸ್ಕೋಪಿ ಮೂಲಕ ನಿವಾರಿಸಲಾಗುತ್ತದೆ. ಗರ್ಭಕೋಶದ ಎಂಡೋಮೆಟ್ರಿಯಂ ಪುನರುತ್ಥಾನಕ್ಕೆ ನೆರವಾಗಲು ಕೆಲವೊಂದು ಮಾತ್ರೆಗಳು, ಪಿ.ಆರ್.ಪಿ.(ಪ್ಲೇಟ್ ಲೆಟ್ ರಿಚ್ ಪ್ಲಾಸ್ಮಾ) ಇಂಜೆಕ್ಷನ್ ಗಳನ್ನು ನೀಡಲಾಗುತ್ತದೆ ಮತ್ತು ಸ್ವಲ್ಪ ಸಮಯಕ್ಕೆ ಗರ್ಭಾಶಯದ ಸಾಧನಗಳನ್ನು ಅಳವಡಿಸಲಾಗುತ್ತದೆ. ಏಕೆಂದರೆ ಗರ್ಭಾಶಯದ ಒಳಪರದೆ ಗರ್ಭಧಾರಣೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪಿ.ಆರ್.ಪಿ.ಯನ್ನು ರೋಗಿಯ ರಕ್ತದ ನಮೂನೆ ಬಳಸಿ ಸೃಷ್ಟಿಸಲಾಗುತ್ತದೆ. ಇದರಲ್ಲಿ ರಕ್ತದ ಮುಖ್ಯ ಅಂಗವಾದ ಕಿರುಬಿಲ್ಲೆಗಳು(ಪ್ಲೇಟ್ ಲೆಟ್ಸ್) ಸಮೃದ್ಧವಾಗಿದ್ದು ಗರ್ಭಕೋಶದ ಒಳಪರದೆಯ ಪುನರುತ್ಪಾದನೆಗೆ ಬಹಳ ನೆರವಾಗುತ್ತಿದೆ.

ಎಷ್ಟು ಬೇಗ ಚಿಕಿತ್ಸೆ ಕೊಡಿಸಿದರೆ ಅಷ್ಟು ಉತ್ತಮ ಫಲಿತಾಂಶ ಲಭ್ಯವಾಗುತ್ತದೆ. ಹ್ಯಾಪಿ ಪೇರೆಂಟ್ ಹುಡ್!

ಡಾ.ಮೇಘನಾ ನ್ಯಾಪತಿ, ಕರ್ನಾಟಕದ ಖ್ಯಾತ ಐ.ವಿ.ಎಫ್. ತಜ್ಞೆ ಮತ್ತು ಬಂಜೆತನ ಹಾಗೂ ಸಂತಾನೋತ್ಪಾದನೆಯ ಔಷಧ ಕ್ಷೇತ್ರದಲ್ಲಿ ತಜ್ಞರಾಗಿದ್ದಾರೆ. ಡಾ.ಮೇಘನಾ ಎಲ್ಲ ಬಗೆಯ ಬಂಜೆತನದ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಖ್ಯಾತಿ ಪಡೆದಿದ್ದು ಉತ್ತಮ ಯಶಸ್ಸಿನ ಪ್ರಮಾಣ ಹೊಂದಿದ್ದಾರೆ ಮತ್ತು ತಮ್ಮ ಪರಿಣಿತಿ ಹಾಗೂ ಸಹಾನುಭೂತಿಯ ಆರೈಕೆಯಿಂದ ಹಲವು ದಂಪತಿಗಳು ತಂದೆ ತಾಯಿಯರಾಗುವ ಆನಂದ ಹರಡುತ್ತಿದ್ದಾರೆ.

Write a Comment

BOOK A FREE CONSULTATION