ಎಂಡೋಕ್ರೈನ್ ಅಡ್ಡಿಪಡಿಸುವ ರಾಸಾಯನಿಕಗಳು ಮತ್ತು ಫಲವತ್ತತೆ
ಅಂತಃಸ್ರಾವಕ ಅಡ್ಡಿಪಡಿಸುವ ರಾಸಾಯನಿಕಗಳು ಮತ್ತು ಫಲವಂತಿಕೆ:
ತಂದೆ ತಾಯಿಯರಾಗುವುದು ಅಸಾಧಾರಣ ಪ್ರಯಾಣವಾಗಿದೆ, ಆದರೆ ಅದು ಫಲವಂತಿಕೆಯ ಸಮಸ್ಯೆ ಎದುರಿಸುತ್ತಿರುವ ದಂಪತಿಗಳಿಗೆ ಸಂಕಷ್ಟದ ಪ್ರಯಾಣವೂ ಆಗಿರಬಹುದು. ಬೊಜ್ಜು, ತಾಯ್ತನದ ವಯಸ್ಸು ಹೆಚ್ಚಾಗುವುದು, ಜೀವನಶೈಲಿ, ಧೂಮಪಾನ ಮತ್ತಿತರೆ ವೈದ್ಯಕೀಯ ಕಾರಣಗಳಂತಹ ಅಂಶಗಳು ವ್ಯಕ್ತಿಯ ಫಲವಂತಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಆದರೆ ನಿಮ್ಮಲ್ಲಿ ಬಹಳಷ್ಟು ಮಂದಿಗೆ ಗೊತ್ತಿಲ್ಲದೇ ಇರುವುದು ಇಡಿಸಿಗಳು(ಎಂಡೋಕ್ರೈನ್ ಡಿಸ್ರಪ್ಟಿಂಗ್ ಕೆಮಿಕಲ್ಸ್) ಫಲವಂತಿಕೆಗೆ ಹಾನಿಯುಂಟು ಮಾಡಬಹುದು ಮತ್ತು ಅವು ನಿಮ್ಮ ದೈನಂದಿನ ಜೀವನದ ಬಳಸುವ ಅಂಶಗಳಲ್ಲಿವೆ.
ಇಡಿಸಿಗಳು ಎಂದರೇನು?
ಹಾರ್ಮೋನುಗಳಂತೆ ಇರುವ ರಾಸಾಯನಿಕಗಳು/ನೈಸರ್ಗಿಕ ವಸ್ತುಗಳು ನೈಸರ್ಗಿಕ ಹಾರ್ಮೋನುಗಳನ್ನು ಅವುಗಳ ಕಾರ್ಯದಿಂದ ತಡೆಯುತ್ತವೆ ಅವುಗಳನ್ನು ಎಂಡೋಕ್ರೈನ್-ಡಿಸ್ರಪ್ಟಿಂಗ್ ಕೆಮಿಕಲ್ಸ್ ಎನ್ನಲಾಗುತ್ತದೆ. ಅವುಗಳು ಮನೆಯ ವಸ್ತುಗಳು, ಮಕ್ಕಳ ಆಟಿಕೆಗಳು, ಮೇಕಪ್ ವಸ್ತುಗಳು ಇತ್ಯಾದಿಗಳಲ್ಲಿರುತ್ತವೆ.
ಇದು ಭಾರಲೋಹಗಳು, ಔದ್ಯೋಗಿಕ ರಾಸಾಯನಿಕಗಳು, ಕೈಗಾರಿಕಾ ಮಾಲಿನ್ಯಕಾರಕಗಳು, ಕೃಷಿ ರಾಸಾಯನಿಕಗಳು ಮತ್ತು ಕೈಗಾರಿಕಾ ದ್ರಾವಕಗಳಲ್ಲಿ ಕೂಡಾ ಇರುತ್ತದೆ. ಇಡಿಸಿಗಳು ಗರ್ಭಧಾರಣೆಗೆ ಹಾನಿಯುಂಟು ಮಾಡುತ್ತವೆ ಮತ್ತು ಇತರೆ ಸಂಕೀರ್ಣತೆಗಳಿಗೆ ಕಾರಣವಾಗುತ್ತವೆ.
ಹಲವಾರು ಅಧ್ಯಯನಗಳ ಪ್ರಕಾರ ಟಾಲ್ಕ್ ಪೌಡರ್ ನ ಜನನಾಂಗದ ಬಳಕೆಯು ಮಹಿಳೆಯರಲ್ಲಿ ಅಂಡಾಶಯದ ಹೊರಗಿನ ಕ್ಯಾನ್ಸರ್ ಉಂಟು ಮಾಡಬಲ್ಲದು.
ಸಾಮಾನ್ಯ ಇಡಿಸಿಗಳ ಪಟ್ಟಿ:
- ಬಿಸ್ಫೆನಾಲ್ ಎ(ಬಿಪಿಎ)
- ಡಿಡಿಟಿ
- ಥಾಲೇಟ್
- ಟ್ರಿಕ್ಲೊಸಾನ್
ಸಾಫ್ಟ್ ಡ್ರಿಂಕ್ ಗಳನ್ನು ಕುಡಿಯುವಾಗ ಎರಡು ಬಾರಿ ಆಲೋಚಿಸಿ ಏಕೆಂದರೆ ಅವುಗಳಲ್ಲಿ ಕೀಟನಾಶಕವಿರುತ್ತದೆ
ಸಿ.ಎಸ್.ಇ. ವರದಿ: 2006ರ ಸಾಫ್ಟ್ ಡ್ರಿಂಕ್ ಗಳಲ್ಲಿನ ಕೀಟನಾಶಕ ಉಳಿಕೆಗಳ ವಿಶ್ಲೇಷಣೆ
ಸಾಮಾನ್ಯ ಮನೆಯ ವಸ್ತುಗಳು ಮತ್ತು ಇಡಿಸಿ:
ಮನೆಯ ವಸ್ತುಗಳು |
ಇಡಿಸಿ ಅಂಶ |
ಮಕ್ಕಳ ಆಟಿಕೆಗಳು | ಸೀಸ |
ಪ್ಲಾಸ್ಟಿಕ್ ಆಹಾರ ಸಂಗ್ರಹದ ವಸ್ತುಗಳು, ಇಂಕ್ ಗಳು, ಅಡ್ಹೆಸಿವ್ ಗಳು, ನೈಲ್ ಪಾಲಿಷ್, ಶಾಂಪೂಗಳು, ಹೇರ್ ಸ್ಪ್ರೇ, ಡಿಯೊಡರೆಂಟ್, ಬಾಡಿ ವಾಷ್, ಮಕ್ಕಳ ಮೇಕಪ್-ಐ ಶಾಡೋ, ಐ ಗ್ಲಿಟ್ಟರ್, ಡೈಪರ್ ಕ್ರೀಂ, ಮಾಯಿಸ್ಟ್ ವೈಪ್ಸ್, ಬೇಬಿ ಆಯಿಲ್, ಗ್ಲೋವ್ಸ್, ರೈನ್ ಕೋಟ್ ಗಳು | ಥಾಲೇಟ್ಸ್ |
ಪೌಡರ್, ಪೇಂಟ್ ಗಳು, ಲೆನ್ಸ್ ಗಳು, ಬೇಬಿ ಫೀಡಿಂಗ್ ಬಾಟಲಿಗಳು, ಡೆಂಟಲ್ ಸೀಲೆಂಟ್ಸ್, ವಾಟರ್ ಬಾಟಲಿಗಳು, ಲೋಹದ ಫುಡ್ ಕ್ಯಾನ್ ಗಳಿಗೆ ಲೇಪಿಸಿದ ಎಪೊಕ್ಸಿ ರೆಸಿನ್ ಗಳು, ಬೈಸಿಕಲ್ ಹೆಲ್ಮೆಟ್ ಗಳು, ಸ್ಟೋರ್ ಸೇಲ್ಸ್ ರಸೀದಿಗಳು | ಬಿಪಿಎ |
ಮಾಯಿಶ್ಚರೈಸರ್ ಗಳು, ಶೇವಿಂಗ್ ಕ್ರೀಂಗಳು, ಶಾಂಪೂಗಳು, ಡಿಯೊಡರೆಂಟ್, ಕೆಲ ಆಹಾರ ಪದಾರ್ಥಗಳು | ಪ್ಯಾರಾಬೆನ್ ಗಳು |
ಟೂಥ್ ಪೇಸ್ಟ್, ಮೌಥ್ ವಾಷ್, ಡಿಟರ್ಜೆಂಟ್ ಗಳು, ಟವಲ್ ಗಳು, ಶೂಗಳು, ಫೋನ್ ಗಳು, ಕಟಿಂಗ್ ಬೋರ್ಡ್ ಗಳು, ಡಿಷ್ ವಾಷಿಂಗ್ ಲಿಕ್ವಿಡ್, ಕಿಚನ್ ವೇರ್, ಟೂಥ್ ಬ್ರಷ್, ಕೂದಲ ಆರೈಕೆ ಉತ್ಪನ್ನಗಳು | ಟ್ರಿಕ್ಲೊಸಾನ್ |
ಎಲೆಕ್ಟ್ರಾನಿಕ್ಸ್, ಸೋಫಾ, ಮ್ಯಾಟ್ರೆಸ್ ಗಳು | ಬ್ರೋಮಿನೇಟೆಡ್ ಫ್ಲೇಮ್ ರಿಟಾರ್ಡೆಂಟ್ಸ್(ಬಿ.ಎಫ್.ಆರ್) |
ಎಲೆಕ್ಟ್ರಿಕಲ್ ಸಾಧನ, ತೈಲ ಆಧರಿತ ಪೇಂಟ್ | ಪಾಲಿಕ್ಲೋರಿನೇಟೆಡ್ ಬೈಫಿನೈಲ್ಸ್(ಪಿಸಿಬಿ) |
ಬ್ಯಾಟರಿಗಳು, ಪಿಗ್ಮೆಂಟ್ ಗಳು, ಪ್ಲಾಸ್ಟಿಕ್ ಸ್ಟೆಬಿಲೈಸರಗಳು | ಕ್ಯಾಡ್ಮಿಯಂ |
ಆಲೂಗಡ್ಡೆ, ಹಾಲು, ಬ್ರೆಡ್, ಹಣ್ಣುಗಳು, ಕುಡಿಯುವ ನೀರು | ಕೀಟನಾಶಕ |
ಮಹಿಳೆಯರ ಸಂತಾನೋತ್ಪಾದನೆಯ ಆರೋಗ್ಯ ಮತ್ತು ಜನಿಸದ ಮಗುವಿನ ಮೇಲೆ ಇಡಿಸಿಯ ಪರಿಣಾಮ:
- ಗರ್ಭಧಾರಣೆಗೆ ಹಾನಿಯುಂಟು ಮಾಡಬಹುದು
- ನವಜಾತ ಶಿಶುವಿನ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು
- ಮೈನೆರೆಯುವ ಅವಧಿ ಬದಲಾಯಿಸಬಹುದು
- ಕಲಿಕೆಯ ಮತ್ತು ವರ್ತನೆಯ ದೋಷಗಳಿಗೆ ಕಾರಣವಾಗಬಹುದು
- ಮಗುವಿನಲ್ಲಿ ಆಟಿಸ್ಟಿಕ್ ಸ್ಪೆಕ್ಟ್ರಂ ಸಮಸ್ಯೆಗಳಿಗೆ ಕಾರಣವಾಗಬಹುದು
ಪುರುಷರ ಸಂತಾನೋತ್ಪಾದನೆಯ ಆರೋಗ್ಯದ ಮೇಲೆ ಇಡಿಸಿ ಪರಿಣಾಮ
- ವೀರ್ಯದ ಗುಣಮಟ್ಟಕ್ಕೆ ಹಾನಿಯುಂಟು ಮಾಡಬಹುದು
- ವೀರ್ಯ ಉತ್ಪಾದನೆಗೆ ಬಾಧಿಸಬಹುದು
ಗರ್ಭಧಾರಣೆಯ ಅವಧಿಯಲ್ಲಿ ಇಡಿಸಿಗೆ ತೆರೆದುಕೊಳ್ಳುವುದು ಕೂಡಾ ಜನನಾಂಗದ ವಿರೂಪವಾದ ಕೆಳಗಿಳಿಯದ ವೃಷಣಗಳು, ಶಿಶ್ನದ ವಿರೂಪತೆ ಮತ್ತು ಅವಧಿಪೂರ್ವ ಜನನಕ್ಕೆ ಕಾರಣವಾಗಬಹುದು.
ಇಡಿಸಿಗಳಿಗೆ ತೆರೆದುಕೊಳ್ಳುವಿಕೆ ಕಡಿಮೆ ಮಾಡುವುದು ಹೇಗೆ?
- ಬಿಪಿಎ ಮುಕ್ತ ಉತ್ಪನ್ನಗಳನ್ನು ಬಳಸಿ
- ಪ್ಲಾಸ್ಟಿಕ್ ಕಂಟೈನರ್ ಗಳಲ್ಲಿ ಆಹಾರ ಬಿಸಿ ಮಾಡುವುದನ್ನು ತಪ್ಪಿಸಿ
- ಸುವಾಸನೆಯ ಸಾಬೂನು ತಪ್ಪಿಸಿ
- ಆಗಾಗ್ಗೆ ಧೂಳು ಮತ್ತು ವ್ಯಾಕ್ಯೂಮ್ ಮಾಡಿರಿ (ಮನೆಯೊಳಗಿನ ವಸ್ತುಗಳಲ್ಲಿ ಜ್ವಾಲೆ ನಿರೋಧಕ ರಾಸಾಯನಿಕಗಳಿಂದ ನಿವಾರಿಸಿ)
- ಸುವಾಸನೆಯಿಲ್ಲದ ಕ್ರೀಂಗಳು, ಸ್ವಚ್ಛತೆಯ ಉತ್ಪನ್ನಗಳು ಮತ್ತು ಲಾಂಡ್ರಿ ಡಿಟರ್ಜೆಂಟ್ ಗಳನ್ನು ಆಯ್ಕೆ ಮಾಡಿರಿ
- ಕ್ಯಾನ್ಡ್ ಫುಡ್ಸ್ ತಪ್ಪಿಸಿ
- ನೀವು ಯಾವುದೇ ಉತ್ಪನ್ನವನ್ನು ಖರೀದಿಸುವ ಮುನ್ನ ಲೇಬಲ್ ಗಳನ್ನು ನೋಡಿ
- ಕೀಟನಾಶಕಗಳ ಬಳಕೆಯಿಲ್ಲದ ಉತ್ಪಾದಿಸಿದ ಆಹಾರ ಸೇವಿಸಲು ಪ್ರಯತ್ನಿಸಿ
fill up the form to get a
Free Consultation
Avail 0% interest on EMI
All Procedures | No Upper Limit
How we reviewed this article:
- Current Version
- July 31, 2023 by Oasis Fertility