Blog
Uncategorized

ಫಾಲೋಪಿಯನ್ ಟ್ಯೂಬ್ ನಲ್ಲಿ ತಡೆ ಮತ್ತು ಬಂಜೆತನದ ಕುರಿತು ನೀವು ತಿಳಿಯಬೇಕಾದ ಪ್ರತಿಯೊಂದು ಅಂಶಗಳು

ಫಾಲೋಪಿಯನ್ ಟ್ಯೂಬ್ ನಲ್ಲಿ ತಡೆ ಮತ್ತು ಬಂಜೆತನದ ಕುರಿತು ನೀವು ತಿಳಿಯಬೇಕಾದ ಪ್ರತಿಯೊಂದು ಅಂಶಗಳು

Author: Dr. Jigna Tamagond ,Consultant – Fertility Specialist

ಬಂಜೆತನ ಅಪಾರ ಸಂಖ್ಯೆಯ ಜನರಿಗೆ ಪರಿಣಾಮ ಬೀರುತ್ತದೆ. ಎಲ್ಲ ಲಿಂಗದವರೂ ಗೊತ್ತಿರುವ ಮತ್ತು ಗೊತ್ತಿರದ ಕಾರಣಗಳಿಂದ ಬಂಜೆತನದ ಅನುಭವ ಪಡೆಯುತ್ತಾರೆ. ಫಾಲೋಪಿಯನ್ ಟ್ಯೂಬ್ ಗಳಲ್ಲಿನ ತಡೆ ಸ್ತ್ರೀಯರ ಬಂಜೆತನದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಫಾಲೋಪಿಯನ್ ಟ್ಯೂಬ್ ಗಳಲ್ಲಿನ ತಡೆಯು ವಿಶ್ವದಾದ್ಯಂತ ಸರಾಸರಿ ಶೇ.30ರಷ್ಟು ಮಹಿಳೆಯರಲ್ಲಿ ಬಂಜೆತನದ ಕಾರಣವಾಗಿದೆ.

ಈ ಫಾಲೋಪಿಯನ್ ಟ್ಯೂಬ್ ಗಳು ಅಂಡಾಶಯಗಳು ಮತ್ತು ಗರ್ಭಕೋಶದ ನಡುವಿನ ಸೇತುವೆಗಳಾಗಿವೆ.

ಇದು ಗರ್ಭಧಾರಣೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದು ಅಂಡಾಣುವಿಗೆ ಅಂಡಾಶಯದಿಂದ ಗರ್ಭಕೋಶಕ್ಕೆ ಪ್ರಯಾಣಿಸಲು ನೆರವಾಗುತ್ತದೆ. ವೀರ್ಯವು ಗರ್ಭಕೋಶದಿಂದ ಫಾಲೋಪಿಯನ್ ಟ್ಯೂಬ್ ಗಳಿಂದ ಮೇಲ್ಭಾಗಕ್ಕೆ ಸಂಚರಿಸಿ ಅಂಡಾಣುವಿನೊಂದಿಗೆ ಭೇಟಿಯಾಗುತ್ತದೆ ಅದು ಅಂಡಾಣುವಿನ ಸಂಭವನೀಯ ಫಲವಂತಿಕೆ ನೀಡಬಹುದು.

ಫಲಿಸಿದ ಅಂಡಾಣು ಈ ಸೇತುವೆಯ ಮೂಲಕ ಸಂಚರಿಸುತ್ತದೆ ಮತ್ತು ಗರ್ಭಕೋಶದಲ್ಲಿ ಸೇರಿಕೊಳ್ಳುವ ಮೂಲಕ ಗರ್ಭಧಾರಣೆ ನೀಡುತ್ತದೆ.

ನಾಳದ ತಡೆಯಿಂದ ಫಲವಂತಿಕೆಯ ಮೇಲೆ ಪರಿಣಾಮ:

ನಾಳದ ತಡೆಯಿಂದ ಅಂಡಾಣುವಿನ ಫಲವಂತಿಕೆ ಸಾಧ್ಯವಾಗುವುದಿಲ್ಲ. ಅಥವಾ ಫಲವಂತಿಕೆ ಉಂಟಾದರೂ(ಭಾಗಶಃ ತಡೆಯುಂಟಾದ ನಾಳಗಳಿಂದ), ಈ ಫಾಲೋಪಿಯನ್ ಟ್ಯೂಬ್ ಫಲವಂತಿಕೆಯ ಅಂಡಾಣುವಿನ ಚಲನೆಯನ್ನು ಗರ್ಭಕೋಶಕ್ಕೆ ತಡೆಯುವ ಮೂಲಕ ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟು ಮಾಡುತ್ತದೆ.

ಒಂದೇ ಒಂದು ಫಾಲೋಪಿಯನ್ ಟ್ಯೂಬ್ ಗಳಲ್ಲಿ ಒಂದರಲ್ಲಿ ತಡೆಯಿದ್ದರೂ ಅಂಡಾಣು ಫಲವಂತಿಕೆ ಪಡೆಯುವುದು ಮತ್ತು ಗರ್ಭಧಾರಣೆ ಆಗುವ ಸಾಧ್ಯತೆ ಇದೆ.

ಎಲ್ಲ ಬಗೆಯ ಕಾರಣಗಳಲ್ಲಿ, ಈ ಕೆಳಗಡೆ ನೀಡಲಾದ ಕೆಲ ಅಂಶಗಳು ನಾಳದ ತಡೆಯನ್ನು ಉಂಟು ಮಾಡುವ ಕೆಲ ಅಂಶಗಳಲ್ಲಿವೆ:

1.ಸೋಂಕುಗಳಿಂದ ಗಾಯದ ಜೀವಕೋಶದ ಉಪಸ್ಥಿತಿ(ಶ್ರೋಣಿಯ ಉರಿಯೂತದ ರೋಗ ಮತ್ತು ಎಸ್.ಟಿ.ಐ.ಗಳು)

2.ಹೊಟ್ಟೆಯ ಶಸ್ತ್ರಚಿಕಿತ್ಸೆಯ ಇತಿಹಾಸ- ಅಪೆಂಡಿಕ್ಸ್ ನಿವಾರಿಸುವ ಶಸ್ತ್ರಚಿಕಿತ್ಸೆ, ಎಕ್ಟೊಪಿಕ್ ಪ್ರೆಗ್ನೆನ್ಸಿ

3.ಎಂಡೋಮೆಟ್ರಿಯಾಸಿಸ್

4.ಗರ್ಭಕೋಶದಲ್ಲಿ ಮತ್ತು ಫಾಲೋಪಿಯನ್ ಟ್ಯೂಬ್ ಗಳಲ್ಲಿ ಉರಿಯೂತ5. ಗರ್ಭಕೋಶ ಮತ್ತು ಫಾಲೋಪಿಯನ್ ಟ್ಯೂಬ್ ಗಳಲ್ಲಿ ಜನ್ಮಜಾತ ದೋಷಗಳು ಮತ್ತು ಅಸಹಜತೆಗಳು

5.ಗರ್ಭಕೋಶದಲ್ಲಿ ಫೈಬ್ರಾಯಿಡ್ ಗಳು ಅಥವಾ ಫಾಲಿಪ್ ಗಳು

ನಾಳದ ತಡೆ ಇರಬಹುದಾದ ಸೂಚನೆಗಳು:

ಫಾಲೋಪಿಯನ್ ಟ್ಯೂಬ್ ನಲ್ಲಿನ ತಡೆಯ ಸೂಚನೆಗಳು ಈ ತಡೆಯ ಮೂಲ ಕಾರಣದ ಮೇಲೆ ಆಧಾರಪಟ್ಟಿರುತ್ತದೆ.

ಉದಾಹರಣೆಗೆ, ಎಂಡೋಮೆಟ್ರಿಯಾಸಿಸ್ ಪ್ರಕರಣದಲ್ಲಿ ವ್ಯಕ್ತಿಗೆ ತೀವ್ರ ಮತ್ತು ನೋವಿನ ಋತುಚಕ್ರವಿರಬಹುದು.

ಹೈಡ್ರೊಸಲ್ ಪಿಂಕ್ಸ್ ಆಗಿದ್ದಲ್ಲಿ ಹೊಟ್ಟೆಯ ಒಂದು ಬದಿಯಲ್ಲಿ ಸಣ್ಣಗಿನ ನಿಯಮಿತ ನೋವು ಇರಬಹುದು.

ಕೆಲ ಮಹಿಳೆಯರು ಆಗಾಗ್ಗೆ ಅಥವಾ ಋತುಚಕ್ರದ ಸಂದರ್ಭದಲ್ಲಿ ಶ್ರೋಣಿಯ ಪ್ರದೇಶದಲ್ಲಿ ನೋವು ಅನುಭವಿಸಬಹುದು.

ಆದಾಗ್ಯೂ, ರೋಗಪರೀಕ್ಷೆಯ ನಂತರ ಈ ಪರಿಸ್ಥಿತಿಯನ್ನು ನಿರ್ವಹಿಸಲಾಗುತ್ತದೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ.

ರೋಗಪರೀಕ್ಷೆ:

ಫಾಲೋಪಿಯನ್ ಟ್ಯೂಬ್ ಗಳು ಅವುಗಳ ಮೂಲ ಕಾರಣಕ್ಕೆ ಸಂಬಂಧಿಸಿದ ರೋಗಲಕ್ಷಣಗಳಿಂದ ಗುರುತಿಸುವುದು ಕಷ್ಟ. ಸಾಮಾನ್ಯವಾಗಿ ಈ ಸಮಸ್ಯೆಯನ್ನು ವ್ಯಕ್ತಿ ಗರ್ಭದಾರಣೆ ಕಷ್ಟಕರವಾಗುವ ಸಮಸ್ಯೆ ಎದುರಿಸುವವರೆಗೂ ಪತ್ತೆಯಾಗುವುದಿಲ್ಲ.

ಫಾಲೋಪಿಯನ್ ಟ್ಯೂಬ್ ಗಳ ತಡೆಯನ್ನು ಕಂಡುಕೊಳ್ಳಲು ಸಾಮಾನ್ಯವಾಗಿ ಬಳಸಲಾಗುವ ಪರೀಕ್ಷೆಗಳು:

1.ಹಿಸ್ಟರೊಸಲ್ಪಿಂಗೊಗ್ರಾಮ್ ಅಥವಾ ಎಚ್.ಎಸ್.ಜಿ ಎಕ್ಸ್-ರೇ ಪರೀಕ್ಷೆಯಾಗಿದ್ದು ಇದು ಸುರಕ್ಷಿತ ವಿಷರಹಿತ ಬಣ್ಣವನ್ನು ಗರ್ಭಕೋಶಕ್ಕೆ ಇಂಜೆಕ್ಟ್ ಮಾಡುವ ಮೂಲಕ ಫಾಲೋಪಿಯನ್ ಟ್ಯೂಬ್ ಗಳಲ್ಲಿ ತಡೆಯನ್ನು ಪತ್ತೆ ಮಾಡಲಾಗುತ್ತದೆ.

2.ಸೊನೊಗ್ರಾಮ್ ಎಂದು ಕರೆಯುವ ಸೊನೊಹಿಸ್ಟೆರೊಗ್ರಾಮ್ ಗರ್ಭಕೋಶದ ಒಳಗಡೆ ವೀಕ್ಷಿಸಲು ಬಳಸುವ ಅಲ್ಟ್ರಾಸೌಂಡ್ ಪರೀಕ್ಷೆಯಾಗಿದೆ. ಇದು ಶಬ್ದದ ಅಲೆಗಳನ್ನು ಬಳಸಿ ಕಂಪ್ಯೂಟರ್ ಚಿತ್ರ ಸೃಷ್ಟಿಸುತ್ತದೆ.

3.ಲ್ಯಾಪರೊಸ್ಕೊಪಿಯನ್ನು ಕೀಹೋಲ್ ಶಸ್ತ್ರಚಿಕಿತ್ಸೆ ಎಂದು ಕರೆಯಲಾಗುತ್ತದೆ ಇದರಲ್ಲಿ ದೇಹಕ್ಕೆ ಸಣ್ಣದಾಗಿ ಕತ್ತರಿಸಿ ಸಣ್ಣ ಕ್ಯಾಮರಾ ಅಳವಡಿಸಿ ಹೊಟ್ಟೆಯ ಒಳಗಡೆ ವೀಕ್ಷಿಸಲಾಗುತ್ತದೆ

ತಡೆಯಾಗಿರುವ ಫಾಲೋಪಿಯನ್ ಟ್ಯೂಬ್ ಗಳ ಚಿಕಿತ್ಸೆಯ ಆಯ್ಕೆಗಳು:

ಹಿಂದೆ ಹೇಳಲಾದಂತೆ, ಫಾಲೋಪಿಯನ್ ಟ್ಯೂಬ್ ಗಳು ಭಾಗಶಃ ತಡೆಯನ್ನು ಹೊಂದಿದ್ದರೆ ಅಥವಾ ಒಂದು ನಾಳ ತೆರೆದಿದ್ದರೂ ಗರ್ಭಧಾರಣೆ ಪಡೆಯಬಹುದು. ಆದಾಗ್ಯೂ, ಭಾಗಶಃ ನಾಳದಲ್ಲಿ ತಡೆಯಿದ್ದರೆ ಎಕ್ಟೊಪಿಕ್ ಪ್ರೆಗ್ನೆನ್ಸಿಯ ತೊಂದರೆ ಹೆಚ್ಚು.

ಎರಡೂ ಫಾಲೋಪಿಯನ್ ಟ್ಯೂಬ್ ಗಳಲ್ಲಿ ಸಂಪೂರ್ಣ ತಡೆಯಿದ್ದಲ್ಲಿ ಚಿಕಿತ್ಸೆಯಿಲ್ಲದೆ ಗರ್ಭಧಾರಣೆ ಪಡೆಯುವ ಸಾಧ್ಯತೆ ಬಹಳ ಕಡಿಮೆ.

ಫಾಲೋಪಿಯನ್ ಟ್ಯೂಬ್ ನ ತಡೆಯ ಚಿಕಿತ್ಸೆಯ ಆಯ್ಕೆಗಳು ಇದನ್ನು ಆಧರಿಸಿರುತ್ತದೆ

1.ವ್ಯಕ್ತಿಯ ವಯಸ್ಸು

2.ವಿರೂಪತೆಯ ವಿಧ/ಕಾರಣ

3.ತಡೆಯಿರುವ ಸ್ಥಳ

ಶ್ರೋಣಿಯ ಸೋಂಕು ಪತ್ತೆಯಾದಲ್ಲಿ ಆಂಟಿ ಬಯೋಟಿಕ್ಸ್ ಸೂಚಿಸಲಾಗುತ್ತದೆ.

ಶಸ್ತ್ರಚಿಕಿತ್ಸೆ ಅಗತ್ಯವಿರುವ ಸನ್ನಿವೇಶಗಳಲ್ಲಿ ಲ್ಯಾಪರೊಸ್ಕೊಪಿ ಬಳಸಲಾಗುತ್ತದೆ. ಈ ವಿಧಾನವು ನಾಳದ ತಡೆಯನ್ನು ನಿವಾರಿಸುವ ಮತ್ತು ಫಾಲೋಪಿಯನ್ ಟ್ಯೂಬ್ ಗಳನ್ನು ತೆರೆಯುವ ಉದ್ದೇಶ ಹೊಂದಿದ್ದು ಇದರಿಂದ ಮಹಿಳೆಗೆ ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚಾಗುತ್ತವೆ.

ಶಸ್ತ್ರಚಿಕಿತ್ಸೆಯ ನಂತರ ಗರ್ಭಧಾರಣೆಯ ಸಾಧ್ಯತೆಗಳು ಈ ಕಾರಣಗಳನ್ನು ಆಧರಿಸಿರುತ್ತವೆ:

1.ವಯಸ್ಸು

2.ಸಂಗಾತಿಯ ವೀರ್ಯದ ಆರೋಗ್ಯ

3.ಫಾಲೋಪಿಯನ್ ಟ್ಯೂಬ್ ಹಾನಿಯ ಮಟ್ಟ

ಶಸ್ತ್ರಚಿಕಿತ್ಸೆ ಶಿಫಾರಸು ಮಾಡಲಾಗದ ಪ್ರಕರಣಗಳಲ್ಲಿ ಅಥವಾ ಯಶಸ್ವಿಯಾಗದ ಶಸ್ತ್ರಚಿಕಿತ್ಸೆಯ ಸಂದರ್ಭ‍ದಲ್ಲಿ ವ್ಯಕ್ತಿಗಳಿಗೆ ಇನ್-ವಿಟ್ರೊ ಫರ್ಟಿಲೈಸೇಷನ್(ಐವಿಎಫ್) ಸಲಹೆ ಮಾಡಲಾಗುತ್ತದೆ.

ಐವಿಎಫ್ ನಲ್ಲಿ ಅಂಡಾಣುವನ್ನು ವೀರ್ಯದೊಂದಿಗೆ ನಿಯಂತ್ರಿತ ಪ್ರಯೋಗಾಲಯದ ಸನ್ನಿವೇಶಗಳನ್ನು ಫಲವಂತಿಕೆ ಬರುವಂತೆ ಮಾಡಲಾಗುತ್ತದೆ. ಫಲವಂತಿಕೆ ಪಡೆದ ಅಂಡಾಣುವನ್ನು ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ, ಅದನ್ನು ಗರ್ಭಕೋಶದಲ್ಲಿ ಸೇರಿಸಿದ ನಂತರ ಯಶಸ್ವಿ ಗರ್ಭಧಾರಣೆ ಸಾಧ್ಯವಾಗುತ್ತದೆ.

ಫಾಲೋಪಿಯನ್ ಟ್ಯೂಬ್ ನಲ್ಲಿ ತಡೆಯಿದ್ದಾಗಲೂ ಮಗುವನ್ನು ಪಡೆಯವ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸರಿಯಾದ ಸಮಯದಲ್ಲಿ ಸರಿಯಾದ ಮಧ್ಯಪ್ರವೇಶ ಅಗತ್ಯ.

ಲಭ್ಯವಿರುವ ಮತ್ತು ನಿಮಗೆ ಸೂಕ್ತವಾದ ಚಿಕಿತ್ಸೆಯ ಆಯ್ಕೆಗಳ ಕುರಿತು, ಆರೋಗ್ಯಕರ ಮತ್ತು ಸುರಕ್ಷಿತ ಗರ್ಭಧಾರಣೆಯ ಸಾಧ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಸದಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

Write a Comment

BOOK A FREE CONSULTATION