Irregular Periods

ಅನಿಯಮಿತ ಋತುಚಕ್ರಗಳು ಮತ್ತು ಗರ್ಭಧಾರಣೆ ಕುರಿತು ನೀವು ತಿಳಿಯಬೇಕಾದ ಪ್ರತಿಯೊಂದು ಅಂಶಗಳು

ಅನಿಯಮಿತ ಋತುಚಕ್ರಗಳು ಮತ್ತು ಗರ್ಭಧಾರಣೆ ಕುರಿತು ನೀವು ತಿಳಿಯಬೇಕಾದ ಪ್ರತಿಯೊಂದು ಅಂಶಗಳು

Author: Dr. Sai Manasa Darla, Consultant, Fertility Specialist & Laparoscopic Surgeon

ಗರ್ಭಧಾರಣೆಯು ಅತ್ಯಂತ ಕಠಿಣ ಪ್ರಯಾಣ ಮತ್ತು ಅದು ಗರ್ಭಧಾರಣೆಯಲ್ಲಿ ನಿಮಗೆ ಕಷ್ಟ ಎದುರಾದಾಗ ಅದು ಇನ್ನೂ ಅಗಾಧವಾಗುತ್ತದೆ.

ಮಹಿಳೆಯರ ಋತುಚಕ್ರವನ್ನು ಗಮನಿಸುವುದು ಈ ಪ್ರಯಾಣದಲ್ಲಿ ಮೊದಲ ಹೆಜ್ಜೆಯಾಗಿದೆ. ಗರ್ಭಧಾರಣೆ ಯೋಜಿಸಲು ಋತುಚಕ್ರದ ಆವರ್ತದ ಅವಧಿ, ಫಲವಂತಿಕೆಯ ವಿಂಡೋ ಮತ್ತು ಅಂಡಾಣು ಬಿಡುಗಡೆಯನ್ನು ತಿಳಿಯುವುದು ಮುಖ್ಯವಾಗಿದೆ. ಅನಿಯಮಿತ ಋತುಚಕ್ರವು ಗರ್ಭಧಾರಣೆ ಹೊಂದುವಲ್ಲಿ ಅಡೆತಡೆಗಳನ್ನು ಉಂಟು ಮಾಡಬಹುದು.

ಅನಿಯಮಿತ ಋತುಚಕ್ರಗಳು ಎಂದರೇನು?

ಮಹಿಳೆಯ ಋತುಚಕ್ರದ ಅವಧಿ ಸಾಮಾನ್ಯವಾಗಿ ವ್ಯತ್ಯಾಸಗೊಳ್ಳುತ್ತದೆ. ಮಹಿಳೆಯ `ಸಹಜ’ ಋತುಚಕ್ರವು 21ರಿಂದ 35 ದಿನಗಳವರೆಗೆ ಇರುತ್ತಿದ್ದು ಆವರ್ತದಿಂದ ಆವರ್ತಕ್ಕೆ 2-3 ದಿನಗಳ ವ್ಯತ್ಯಾಸವಿರುತ್ತದೆ.

ಈ ಕೆಳಕಂಡ ಪರಿಸ್ಥಿತಿಗಳಲ್ಲಿ ಋತುಚಕ್ರವನ್ನು ಅನಿಯಮಿತ ಎಂದು ಪರಿಗಣಿಸಲಾಗುತ್ತದೆ:

  1. `ಸಹಜತೆ’ಯ ಶ್ರೇಣಿಗಿಂತ ಆಚೆಗೆ ಅಥವಾ ಕೆಳಕ್ಕೆ ಬೀಳುವ ಯಾವುದೇ ಆವರ್ತ.
  2. 8 ದಿನಗಳನ್ನೂ ಮೀರಿ ಋತುಚಕ್ರ ತಪ್ಪಿ ಹೋಗುವುದು(ಕೆಲ ಪ್ರಕರಣಗಳಲ್ಲಿ ಅದು ಗರ್ಭಧಾರಣೆ ಇರಬಹುದು).
  3. ಪಾಲಿಮೆನೊರಿಯಾ: ಆಗಾಗ್ಗೆ ಅಥವಾ ಬಹಳ ಬೇಗನೆ ಆಗುವ ಮುಟ್ಟು ಎನ್ನಲಾಗುತ್ತದೆ. ಇದು ಮುಟ್ಟಿನ ಸಮಸ್ಯೆಯಾಗಿದ್ದು ಇದರಲ್ಲಿ ಋತುಚಕ್ರದ ಆವರ್ತ 21 ದಿನಗಳಿಗಿಂತ ಕಡಿಮೆ ಇರುತ್ತದೆ.
  4. ಆಲಿಗೊಮೆನೋರಿಯಾ: ಅನಿಯಮಿತ ಋತುಚಕ್ರಗಳಿಂದ ಉಂಟಾಗುವ ಮುಟ್ಟಿನ ಸ್ಥಿತಿ. ಅಂತಹ ಪ್ರಕರಣಗಳಲ್ಲಿ ಋತುಚಕ್ರದ ಆವರ್ತ 35 ದಿನಗಳಿಗೂ ಮೇಲ್ಪಟ್ಟು ಇರುತ್ತದೆ.

ಅನಿಯಮಿತ ಋತುಚಕ್ರದ ಕಾರಣಗಳು

ಹಲವಾರು ಕಾರಣಗಳು ಅನಿಯಮಿತ ಋತುಚಕ್ರಕ್ಕೆ ಕಾರಣವಾಗುತ್ತವೆ:

  • ಅಂಡೋತ್ಪತ್ತಿಯ ಸಮಸ್ಯೆಗಳು: ಗರ್ಭಧಾರಣೆಯ ಸಾಧ್ಯತೆಯು ಪಕ್ವವಾದ ಅಂಡಾಣು ಬಿಡುಗಡೆ ಅಥವಾ ಋತುಚಕ್ರದ ಅಂಡೋತ್ಪತ್ತಿ ಆಧರಿಸಿರುತ್ತದೆ. ಅನಿಯಮಿತ ಅಂಡೋತ್ಪತ್ತಿ ಅಥವಾ ಅಂಡೋತ್ಪತ್ತಿಯ ಕೊರತೆ ಅನಿಯಮಿತ ಋತುಚಕ್ರ ಉಂಟು ಮಾಡುತ್ತದೆ.
  • ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್(ಪಿಸಿಒಎಸ್): ಇದು ಹಾರ್ಮೋನುಗಳ ಅಸಹಜತೆಯಾಗಿದ್ದು ದೇಹವು ಅತ್ಯಂತ ಹೆಚ್ಚಿನ ಸಂಖ್ಯೆಯ ಪುರುಷರ ಸೆಕ್ಸ್ ಹಾರ್ಮೋನುಗಳನ್ನು(ಆಂಡ್ರೋಜೆನ್ ಗಳು) ಉತ್ಪಾದಿಸುತ್ತದೆ ಇದರಿಂದ ಅನಿಯಮಿತ ಅಂಡೋತ್ಪತ್ತಿ, ಗರ್ಭಾಶಯದಲ್ಲಿ ಚೀಲಗಳು ಮತ್ತು ಬಂಜೆತನ ಉಂಟು ಮಾಡುತ್ತವೆ.
  • ಥೈರಾಯ್ಡ್ ರೋಗ: ಕಡಿಮೆ ಸಕ್ರಿಯ ಅಥವಾ ಅತಿಯಾದ ಸಕ್ರಿಯತೆಯ ಥೈರಾಯ್ಡ್ ಋತುಚಕ್ರದ ಆವರ್ತದ ಮೇಲೆ ಪರಿಣಾಮ ಬೀರುತ್ತದೆ.
  • ತೂಕ ಗಳಿಕೆ ಅಥವಾ ನಷ್ಟ
  • ಒತ್ತಡ ಮತ್ತು ಆತಂಕ
  • ಹಾರ್ಮೋನುಗಳ ಅಸಮತೋಲನಗಳು
  • ಜನನ ನಿಯಂತ್ರಣ ಮಾತ್ರೆಗಳ ಅನಿಯಮಿತ ಬಳಕೆ
  • ಫೈಬ್ರಾಯಿಡ್ಸ್, ಎಂಡೋಮೆಟ್ರಿಯೋಸಿಸ್ ಮತ್ತು ಮಧುಮೇಹದಂತಹ ಪರಿಸ್ಥಿತಿಗಳು
  • ಲೈಂಗಿಕವಾಗಿ ವರ್ಗಾವಣೆಯಾಗುವ ರೋಗಗಳು

ಅನಿಯಮಿತ ಋತುಚಕ್ರದಲ್ಲಿ ಗರ್ಭಧಾರಣೆಯನ್ನು ಯೋಜಿಸುವುದು ಹೇಗೆ?

ಮಹಿಳೆಯರು ಅನಿಯಮಿತ ಋತುಚಕ್ರದಿಂದ ಗರ್ಭಧಾರಣೆ ಪಡೆಯುವುದು ಸಾಧ್ಯವಿಲ್ಲ ಎಂದು ಕಾಣುತ್ತದೆ. ಆದರೆ ಅದಕ್ಕೆ ಆತಂಕ ಪಡಬೇಕಾಗಿಲ್ಲ, ಅನಿಯಮಿತ ಋತುಚಕ್ರದಲ್ಲಿ ಗರ್ಭಧಾರಣೆ ಪಡೆಯಲು ಸಾಧ್ಯವಿದೆ, ಆದರೆ ಅನಿಯಮಿತ ಋತುಚಕ್ರದ ಸಮಸ್ಯೆಯನ್ನು ನಿವಾರಿಸಬೇಕು.

ಅಂಡೋತ್ಪತ್ತಿ ಮತ್ತು ಅಂಡೋತ್ಪತ್ತಿಯ ಸಂದರ್ಭದಲ್ಲಿ ಸಕಾಲಿಕ ಸಂಭೋಗವು ಗರ್ಭಧಾರಣೆಯ ಸಾಧ್ಯತೆಗಳನ್ನು ಅಪಾರವಾಗಿ ಹೆಚ್ಚಿಸುತ್ತದೆ. ಅಂಡೋತ್ಪತ್ತಿಯ ಸೂಚನೆಗಳನ್ನು ಅಂಡೋತ್ಪತ್ತಿಗೆ ಕಂಡುಕೊಳ್ಳಬಹುದು.

ಅಂಡೋತ್ಪತ್ತಿಯ ಸೂಚನೆಗಳು

  1. ಸರ್ವಿಕಲ್ ಮ್ಯೂಕಸ್ ಹೆಚ್ಚಳ- ಹಿಗ್ಗಿಸಿದ, ಸ್ಪಷ್ಟ ಮತ್ತು ಮೊಟ್ಟೆಯ ಬಿಳಿಯಂತಹ ಸ್ರಾವ
  2. ನಿಮ್ಮ ತಳದ ದೇಹದ ಉಷ್ಣತೆಯಲ್ಲಿ ಹೆಚ್ಚಳ

ಓವ್ಯುಲೇಷನ್ ಪ್ರಿಡಿಕ್ಟರ್ ಕಿಟ್ ಗಳು, ಅಲ್ಟ್ರಾಸೌಂಡ್ ಮತ್ತು ರಕ್ತ ಪರೀಕ್ಷೆಗಳನ್ನು ಅಂಡೋತ್ಪತ್ತಿ ನಿರ್ಧರಿಸಲು ಬಳಸಬಹುದು. ಅನಿಯಮಿತ ಓವ್ಯುಲೇಷನ್ ಅಥವಾ ಅನೊವುಲೇಷನ್ ಸಂದರ್ಭದಲ್ಲಿ ವೈದ್ಯರು ಮೂಲ ಕಾರಣವನ್ನು ಆಧರಿಸಿ ವೈದ್ಯರು ಚಿಕಿತ್ಸೆಯ ಆಯ್ಕೆಗಳನ್ನು ನೀಡುತ್ತಾರೆ. ಅಂತರ್ಗತ ರೋಗಕ್ಕೆ ಚಿಕಿತ್ಸೆ ನೀಡುವುದು ನಿಮ್ಮ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಬಹುದು.

ಕೆಲವು ಜೀವನಶೈಲಿಯ ಬದಲಾವಣೆಗಳು ಋತುಚಕ್ರ ಮತ್ತು ಅಂಡೋತ್ಪತ್ತಿ ನಿಯಂತ್ರಣದಲ್ಲಿ ಬಹಳ ಪರಿಣಾಮ ಬೀರಬಹುದು.

ಈ ಸನ್ನಿವೇಶಗಳಲ್ಲಿ ವೈದ್ಯರನ್ನು ಕಾಣಿರಿ:

  1. ಮೂರು ತಿಂಗಳು ಮೇಲ್ಪಟ್ಟು ಮುಟ್ಟು ಆಗದೇ ಇರುವುದು
  2. ಒಂದು ವಾರ ಮೀರಿ ಮುಟ್ಟಿನ ರಕ್ತಸ್ರಾವ
  3. ಅತಿಯಾದ ರಕ್ತಸ್ರಾವ
  4. ನೋವಿನ ಋತುಚಕ್ರಗಳು
  5. ನೀವು 35ಕ್ಕಿಂತ ಕಿರಿಯರಾಗಿದ್ದರೆ ಮತ್ತು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಗರ್ಭಧಾರಣೆ ಸಾಧ್ಯವಾಗದೇ ಇದ್ದರೆ

ಕೊನೆಯದಾಗಿ:

ಅನಿಯಮಿತ ಋತುಚಕ್ರಗಳು ಗರ್ಭಧಾರಣೆಯ ಪ್ರಯಾಣದಲ್ಲಿ ಕಾಳಜಿಯ ವಿಷಯಗಳಾಗಿದ್ದರೂ ಅದರಿಂದ ಕಂಗೆಡುವ ಅಗತ್ಯವಿಲ್ಲ. ಸಕಾಲಿಕ ಕ್ರಮ ತೆಗೆದುಕೊಳ್ಳುವುದು ಮತ್ತು ಮೂಲ ಕಾರಣ ಕಂಡುಕೊಂಡು ಅದನ್ನು ಪರಿಹರಿಸಿಕೊಳ್ಳುವುದು ಆರೋಗ್ಯಕರ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುತ್ತದೆ.

ಅನಿಯಮಿತ ಋತುಚಕ್ರಗಳು, ಅಂಡೋತ್ಪತ್ತಿಯ ಸಮಸ್ಯೆಗಳು ಮತ್ತು ಹಾರ್ಮೋನುಗಳ ಅಸಮತೋಲನಗಳು ಅನಿಯಮಿತ ಋತುಚಕ್ರಕ್ಕೆ ಕಾರಣವಾಗಿ ಗರ್ಭಧಾರಣೆ ಕಷ್ಟಕರವಾಗಿಸುತ್ತವೆ.

ಫರ್ಟಿಲಿಟಿ ತಜ್ಞರು ಅಸಹಜ ಋತುಚಕ್ರಕ್ಕೆ ಕಾರಣವಾಗುವ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಮತ್ತು ಅಂಡೋತ್ಪತ್ತಿಯ ನಿಯಂತ್ರಣ ಮತ್ತು ನಿರ್ಧರಣದ ಮೂಲಕ ನಿಮ್ಮ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುತ್ತಾರೆ.

Was this article helpful?
YesNo

fill up the form to get a

Free Consultation

Your data is 100% safe with us.

Avail 0% interest on EMI
All Procedures | No Upper Limit

How we reviewed this article:

HISTORY
  • Current Version
  • September 12, 2023 by Oasis Fertility
  • September 11, 2023 by Oasis Fertility
  • September 8, 2023 by Oasis Fertility

LatestTrending

Ad

BOOK A FREE CONSULTATION

Book

Appointment

Call Us

1800-3001-1000