Blog
Enquire Now
Uncategorized

ಅತ್ಯುತ್ತಮ ಐವಿಎಫ್ ಕ್ಲಿನಿಕ್ ಕಂಡುಕೊಳ್ಳುವುದು: ಪರಿಗಣಿಸಬೇಕಾದ 8 ಪ್ರಮುಖ ಅಂಶಗಳು

ಅತ್ಯುತ್ತಮ ಐವಿಎಫ್ ಕ್ಲಿನಿಕ್ ಕಂಡುಕೊಳ್ಳುವುದು: ಪರಿಗಣಿಸಬೇಕಾದ 8 ಪ್ರಮುಖ ಅಂಶಗಳು

Author: Dr. V Ramya, Consultant & Fertility Specialist

ತೀವ್ರವಾಗಿ ಬದಲಾಗುತ್ತಿರುವ ಮತ್ತು ನಗರೀಕರಣಗೊಳ್ಳುತ್ತಿರುವ ವಿಶ್ವವು ಅಸಂಖ್ಯ ಅವಕಾಶಗಳನ್ನು ತರುತ್ತಿದ್ದರೆ ಅದು ಜನರ ಜೀವನಶೈಲಿ, ಜೀವನದ ಗುಣಮಟ್ಟ ಮತ್ತು ಆಹಾರ ಸೇವನೆಯ ಅಭ್ಯಾಸಗಳಲ್ಲೂ ಅಪಾರ ಬದಲಾವಣೆ ತರುತ್ತಿದೆ. ಇದರಿಂದ ವ್ಯಕ್ತಿಗಳಲ್ಲಿ ಆರೋಗ್ಯ ಕುಸಿಯುತ್ತಿದೆ. ಸಂತಾನೋತ್ಪಾದನೆಯ ವಯಸ್ಸಿನಲ್ಲಿರುವ ಪುರುಷ ಮತ್ತು ಮಹಿಳೆಯರಿಗೆ ಜೀವನಶೈಲಿ ಬದಲಾವಣೆಗಳಿಂದ ಬಾಧಿಸುತ್ತಿರುವ ಒಂದು ಅಂತಹ ಆರೋಗ್ಯದ ಪರಿಸ್ಥಿತಿ ಎಂದರೆ ಬಂಜೆತನ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಸ್ತುತದ ಅಂಕಿ ಅಂಶಗಳ ಪ್ರಕಾರ ಏಳು ದಂಪತಿಗಳಲ್ಲಿ ಒಬ್ಬರು ಬಂಜೆತನದಿಂದ ಬಳಲುತ್ತಿದ್ದಾರೆ. ಬಂಜೆತನದ ಚಿಕಿತ್ಸೆಗಳಲ್ಲಿ ವೈದ್ಯಕೀಯ ಸುಧಾರಣೆಗಳಿಂದ ಬಂಜೆತನದ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ.

ಐವಿಎಫ್ ಎಂದು ಕರೆಯಲ್ಪಡುವ ಇನ್ ವಿಟ್ರೊ ಫರ್ಟಿಲೈಸೇಷನ್ ಸುಧಾರಿತ ಫಲವಂತಿಕೆಯ ಚಿಕಿತ್ಸೆಯಾಗಿದ್ದು ಅದು ಪ್ರಯೋಗಾಲಯದಲ್ಲಿ ಅಂಡಾಣುವನ್ನು ವೀರ್ಯದಲ್ಲಿ ಫಲಿಸುವಂತೆ ಮಾಡುತ್ತದೆ. ಐವಿಎಫ್ ತಂತ್ರಜ್ಞಾನವು ಸಂತಾನೋತ್ಪಾದನೆಯ ಔಷಧದ ಕ್ಷೇತ್ರದಲ್ಲಿ ಕ್ರಾಂತಿ ತಂದಿದೆ. ಐವಿಎಫ್ ತಂತ್ರಜ್ಞಾನವು ಹಲವಾರು ಫಲವಂತಿಕೆಯನ್ನು ಎದುರಿಸುತ್ತಿರುವ ದಂಪತಿಗಳಿಗೆ ಅವರ ತಂದೆ ತಾಯಿಯರಾಗುವ ಕನಸನ್ನು ಈಡೇರಿಸಿಕೊಳ್ಳಲು ನೆರವಾಗಿದೆ.

ಗರ್ಭ ಧರಿಸುವಲ್ಲಿ ಸಮಸ್ಯೆ ಎದುರಿಸುವ ದಂಪತಿಗಳಿಗೆ ಸರಿಯಾದ ಐವಿಎಫ್ ಕ್ಲಿನಿಕ್ ಕಂಡುಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ.

ಸರಿಯಾದ ಐವಿಎಫ್ ಕ್ಲಿನಿಕ್ ಕಂಡುಕೊಳ್ಳುವುದು ಏಕೆ ಮುಖ್ಯ?

ಆರೋಗ್ಯಸೇವಾ ವಲಯದಲ್ಲಿ ಗುಣಮಟ್ಟದ ಸೇವೆ ಪೂರೈಸುವುದು ಬಹಳ ಮುಖ್ಯವಾಗಿದೆ ಮತ್ತು ಹಲವಾರು ಅಂಶಗಳು ಪಾತ್ರ ವಹಿಸುವುದರಿಂದ ನಿಯಂತ್ರಣ ವಹಿಸುವುದು ಸವಾಲಿನ ಕೆಲಸವಾಗಿದೆ. ಪರೀಕ್ಷೆಗಳು, ಪ್ರಯೋಗಾಲಯದ ಸಾಧನ, ರೋಗಪರೀಕ್ಷೆ, ವೈದ್ಯರ ಪರಿಣಿತಿ ಮತ್ತು ಅನುಭವ, ರೋಗಿಯ ಸೇವೆ ಇತ್ಯಾದಿ ಸಂತೃಪ್ತಿಕರ ಗ್ರಾಹಕ ಸೇವೆ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮತ್ತು ಅತ್ಯಂತ ಸಣ್ಣ ನ್ಯೂನತೆಯೂ ಅಹಿತಕರ ಅನುಭವಕ್ಕೆ ಕಾರಣವಾಗಬಹುದು.

ಫಲವಂತಿಕೆಯ ಚಿಕಿತ್ಸೆಯು ದಂಪತಿಯಿಂದ ದಂಪತಿಗೆ ವ್ಯತ್ಯಾಸಗೊಳ್ಳುತ್ತದೆ. ಫಲವಂತಿಕೆಯ ಚಿಕಿತ್ಸೆಗಳನ್ನು ಮತ್ತು ಐವಿಎಫ್ ಕ್ಲಿನಿಕ್ ಆಯ್ಕೆ ಮಾಡಿಕೊಳ್ಳುವ ಮುನ್ನ ಮೊದಲಿಗೆ ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸುವ ಮೂಲಕ ನೀವು ಏಕೆ ಗರ್ಭಧಾರಣೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅರ್ಥ ಮಾಡಿಕೊಳ್ಳುವುದು ಮುಖ್ಯ.

ನಿಮಗೆ ಅತ್ಯುತ್ತಮವಾಗಿ ಹೊಂದಿಕೊಳ್ಳಬಲ್ಲ ಐವಿಎಫ್ ಕ್ಲಿನಿಕ್ ಕಂಡುಕೊಳ್ಳಲು ನೀವು ಪರಿಗಣಿಸಬೇಕಾದ 8 ಪ್ರಮುಖಾಂಶಗಳು ಹೀಗಿವೆ:

1. ಫರ್ಟಿಲಿಟಿ ತಜ್ಞರು: ವೈದ್ಯಕೀಯ ಅನುಭವ ಮತ್ತು ಪರಿಣಿತಿ

ನಿಮ್ಮ ಅಗತ್ಯಗಳಿಗೆ ಹೊಂದುವ ಫರ್ಟಿಲಿಟಿ ತಜ್ಞರನ್ನು ಕಂಡುಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ. ಯಾವುದೇ ಚಿಕಿತ್ಸೆಗೆ ವೈದ್ಯ-ರೋಗಿ ಬಾಂಧವ್ಯ ಮತ್ತು ವಿಶ್ವಾಸ ಬಹಳ ಮುಖ್ಯ. ಅತ್ಯಂತ ಉನ್ನತ ಅರ್ಹತೆಯ, ಅನುಭವಿ ಮತ್ತು ನಿಮಗೆ ಅನುಕೂಲಕರವಾದ ಫರ್ಟಿಲಿಟಿ ತಜ್ಞರನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲದೆ ನಿಮಗೆ ಗರ್ಭಧಾರಣೆ ಪಡೆಯಲು ನೆರವಾಗುವ ಚಿಕಿತ್ಸೆಯ ಬಗೆಯನ್ನು ವಿವರಿಸುವ ಮತ್ತು ತಿಳಿದಿರುವ ಫರ್ಟಿಲಿಟಿ ತಜ್ಞರನ್ನು ಕಾಣಿರಿ.

2. ಐವಿಎಫ್ ಆರೈಕೆಯ ಮಾನದಂಡಗಳು ಮತ್ತು ಗುಣಮಟ್ಟ

ವೈದ್ಯಕೀಯ ಕ್ಷೇತ್ರಕ್ಕೆ ಬಂದರೆ ಗುಣಮಟ್ಟ ಅತ್ಯಂತ ಮುಖ್ಯವಾಗಿದೆ. ಗುಣಮಟ್ಟಕ್ಕೆ ಕಠಿಣ ಬದ್ಧತೆಯ ಐವಿಎಫ್ ಕ್ಲಿನಿಕ್ ಕಂಡುಕೊಳ್ಳುವುದು ಬಹಳ ಮುಖ್ಯ.

ಮೂಲಭೂತ ಮಾನದಂಡಗಳು, ಪ್ರಮಾಣೀಕರಣಗಳು ಮತ್ತು ಗುಣಮಟ್ಟದ ಅನುಸರಣೆಗಳಲ್ಲಿ:

– ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್) ಪ್ರಮಾಣೀಕರಿಸಿರಬೇಕು.

– ಫರ್ಟಿಲಿಟಿ ಕೇಂದ್ರವು ಎ.ಆರ್.ಟಿ. ಕಾನೂನು ಅನ್ವಯ ಮಾನದಂಡಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುತ್ತಿರಬೇಕು.

– ಉತ್ತಮ ದರ್ಜೆಯ 10,000 ಐವಿಎಫ್ ಲ್ಯಾಬ್ ಹೊಂದಿರಬೇಕು.

3. ವೈಯಕ್ತಿಕಗೊಳಿಸಿದ ಚಿಕಿತ್ಸೆ ಮತ್ತು ಆರೈಕೆ

ಫರ್ಟಿಲಿಟಿ ಚಿಕಿತ್ಸೆಗೆ ಒಳಗಾಗುವುದು ನಿಜಕ್ಕೂ ಭಾವನಾತ್ಮಕ ಪ್ರಯಾಣ. ಐವಿಎಫ್ ಪ್ರಯಾಣದಲ್ಲಿ ಮಾನಸಿಕ ಆರೋಗ್ಯದ ಬೆಂಬಲ, ವೈಯಕ್ತಿಕಗೊಳಿಸಿದ ಮತ್ತು ಸಹಾನುಭೂತಿಯ ಆರೈಕೆ ಮಾಡುವ ಐವಿಎಫ್ ಕೇಂದ್ರ ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ನಿಮ್ಮ ಅಗತ್ಯಗಳು ಮತ್ತು ಕಾಳಜಿಗಳನ್ನು ಪೂರೈಸುವ ಸಿಬ್ಬಂದಿಯೊಂದಿಗೆ ಸನ್ನದ್ಧವಾಗಿರುವ ಕೇಂದ್ರವನ್ನು ಕಂಡುಕೊಳ್ಳಿ.

4. ನೀಡಲಾಗುವ ಸೌಲಭ್ಯಗಳು ಮತ್ತು ಬಳಸಲಾಗುವ ತಂತ್ರಜ್ಞಾನ

ಅತ್ಯಾಧುನಿಕ ಮತ್ತು ಸುಸಜ್ಜಿತ ತಂತ್ರಜ್ಞಾನ ಮತ್ತು ಸಾಧನಗಳೊಂದಿಗೆ ಸನ್ನದ್ಧವಾದ ಕ್ಲಿನಿಕ್ ಆಯ್ಕೆ ಮಾಡಿಕೊಳ್ಳಿರಿ. ಐವಿಎಫ್ ಕೇಂದ್ರವು ಇಂಟ್ರಾ-ಯುಟೆರಿನ್ ಇನ್ಸೆಮಿನೇಷನ್(ಐಯುಐ), ಅಸಿಸ್ಟೆಡ್ ಹ್ಯಾಚಿಂಗ್, ಇನ್ ವಿಟ್ರೊ ಮೆಚುರೇಷನ್(ಐವಿಎಂ) ಇತ್ಯಾದಿ ನಿರ್ವಹಿಸಲು ಮಾನದಂಡಗಳು ಮತ್ತು ಮಾರ್ಗದರ್ಶಿ ಸೂತ್ರಗಳ ಅನ್ವಯ ನಿರ್ವಹಿಸುವ ವಿಶೇಷ ಸೌಲಭ್ಯಗಳನ್ನು ಹೊಂದಿರಬೇಕು.

 

5. ಭ್ರೂಣ ಘನೀಕರಣ ಅಥವಾ ಸಂರಕ್ಷಣೆ

ಭ್ರೂಣ ಘನೀಕರಣವು ತಕ್ಷಣವೇ ಗರ್ಭಧಾರಣೆ ಯೋಜಿಸಲು ಅಶಕ್ತರಾಗುವ ದಂಪತಿಗಳಿಗೆ ಅಗತ್ಯವಾದ ಸೌಲಭ್ಯವಾಗಿದೆ ಮತ್ತು ಸುಧಾರಿತ ತಂತ್ರಜ್ಞಾನವಾಗಿದೆ. ಐವಿಎಫ್ ಚಿಕಿತ್ಸೆಯಲ್ಲಿ ಸಿದ್ಧವಾಗುವ ಎಲ್ಲ ಭ್ರೂಣಗಳೂ ಅಳವಡಿಕೆಗೆ ಬಳಸಲಾಗುವುದಿಲ್ಲ. ಲಿಕ್ವಿಡ್ ನೈಟ್ರೊಜನ್ ನಲ್ಲಿ ಘನೀಕರಿಸಿದ ಹೆಚ್ಚುವರಿ ಭ್ರೂಣಗಳನ್ನು ಭವಿಷ್ಯದ ಉದ್ದೇಶಗಳಿಗೆ ಬಳಸಲಾಗುತ್ತದೆ. ಆದ್ದರಿಂದ ಐವಿಎಫ್ ಕೇಂದ್ರವು ಭ್ರೂಣ ಘನೀಕರಣ ಸೇವೆ ಒದಗಿಸುತ್ತಿದೆಯೇ ಎಂದು ನೋಡುವುದು ಬಹಳ ಮುಖ್ಯ.

ಭ್ರೂಣದ ಘನೀಕರಣವನ್ನು ಈ ಕೆಳಕಂಡ ಸಂದರ್ಭದಲ್ಲಿ ನಡೆಸಬಹುದು

– ಶಸ್ತ್ರಚಿಕಿತ್ಸೆಯ ಮೂಲಕ ಅಂಡಾಶಯ ಅಥವಾ ವೃಷಣಗಳ ನಿವಾರಣೆಯಿಂದ ಫಲವಂತಿಕೆಗೆ ಧಕ್ಕೆಯುಂಟಾದಾಗ

– ಗಂಭೀರ ಎಂಡೋಮೆಟ್ರಿಯಾಸಿಸ್

– ಕ್ಯಾನ್ಸರ್

– ವ್ಯಕ್ತಿಯು ಹಲವಾರು ವೈಯಕ್ತಿಕ ಕಾರಣಗಳಿಗೆ ಗರ್ಭಧಾರಣೆ ಮುಂದೂಡಲು ಬಯಸಿದಾಗ

6. ಐವಿಎಫ್ ಯಶಸ್ಸಿನ ಪ್ರಮಾಣಗಳು

ಸಂತಾನೋತ್ಪಾದನೆಯ ಔಷಧವು ಸತತವಾಗಿ ಯಶಸ್ಸಿನ ಪ್ರಮಾಣಗಳನ್ನು ಹೆಚ್ಚಿಸಲು ಪ್ರಗತಿ ಸಾಧಿಸುತ್ತಿದೆ. ಮತ್ತು ಅಂದಿನಿಂದಲೂ ಲಕ್ಷಾಂತರ ರೋಗಿಗಳು ಐವಿಎಫ್ ತಂತ್ರಜ್ಞಾನದ ಮೂಲಕ ತಮ್ಮ ಶಿಶುಗಳನ್ನು ಸ್ವಾಗತಿಸಿದ್ದಾರೆ. ಐವಿಎಫ್ ಕೇಂದ್ರ ಕಾಯ್ದಿರಿಸುವ ಮುನ್ನ ದಂಪತಿಯು ಯಶಸ್ಸಿನ ಪ್ರಮಾಣಗಳನ್ನು ತಿಳಿಯುವ ಮೂಲಕ ತರ್ಕಬದ್ಧ ನಿರೀಕ್ಷೆಗಳನ್ನು ಮತ್ತು ಪ್ರಮುಖ ಆಯ್ಕೆಗೆ ಹೊಂದಬಹುದು.

ಐವಿಎಫ್ ಯಶಸ್ಸನ್ನು ಹಲವಾರು ಅಂಶಗಳು ನಿರ್ಧರಿಸುತ್ತವೆ

– ವಯಸ್ಸು

– ಆರೋಗ್ಯದ ಪರಿಸ್ಥಿತಿಗಳು

– ಅಂಡಾಣು ಮತ್ತು ವೀರ್ಯದ ಗುಣಮಟ್ಟ

– ಬಂಜೆತನದ ಕಾರಣ

ಯಶಸ್ಸಿನ ಪ್ರಮಾಣವನ್ನು ಮುಖಬೆಲೆಯಲ್ಲಿ ನಿರ್ಧರಿಸಬೇಡಿ. ನಿಮ್ಮ ಫರ್ಟಿಲಿಟಿ ತಜ್ಞರೊಂದಿಗೆ ವಿವರವಾಗಿ ಯಶಸ್ಸಿನ ಪ್ರಮಾಣ ಕುರಿತು ಚರ್ಚೆ ಮಾಡಿ, ಏಕೆಂದರೆ ದಂಪತಿಯಿಂದ ದಂಪತಿಗೆ ಯಶಸ್ಸಿನ ಪ್ರಮಾಣ ಬದಲಾಗುತ್ತದೆ ಮತ್ತು ರೋಗಿಯ ವಯಸ್ಸು ಆಧರಿಸಿ ಬದಲಾವಣೆಯಾಗುತ್ತದೆ.

ವಯಸ್ಸು ಮತ್ತು ಐವಿಎಫ್ ಯಶಸ್ಸಿನ ಪ್ರಮಾಣಗಳು:

ಐವಿಎಫ್ ಚಿಕಿತ್ಸೆಯ ಯಶಸ್ಸಿನಲ್ಲಿ ಇತರೆ ಎಲ್ಲ ಅಂಶಗಳಿಗಿಂತ ವಯಸ್ಸು ಪ್ರಮುಖ ಪಾತ್ರ ವಹಿಸುತ್ತದೆ. ವಯಸ್ಸು ಮತ್ತು ಐವಿಎಫ್ ಯಶಸ್ಸಿನ ಪ್ರಮಾಣಗಳು ಪರಸ್ಪರ ಸಂಬಂಧ ಹೊಂದಿವೆ. ಹೆಚ್ಚಿನ ವಯಸ್ಸು ಆರೋಗ್ಯ ಮತ್ತು ಅಂಡಾಣು ಹಾಗೂ ವೀರ್ಯಾಣುವಿನ ಗುಣಮಟ್ಟದ ಮೇಲೆ ಪುರುಷ ಹಾಗೂ ಮಹಿಳೆಯರಿಬ್ಬರಲ್ಲೂ ಪರಿಣಾಮ ಬೀರುತ್ತದೆ.

7. ಐವಿಎಫ್ ಪ್ಯಾಕೇಜ್ ವೆಚ್ಚ

ಫರ್ಟಿಲಿಟಿ ಚಿಕಿತ್ಸೆಗಳು ದುಬಾರಿಯಾಗಿರುತ್ತವೆ. ಯಾವುದೇ ಫರ್ಟಿಲಿಟಿ ಚಿಕಿತ್ಸೆಗೆ ಒಳಗಾಗುವ ಮುನ್ನ ಐವಿಎಫ್ ಪ್ಯಾಕೇಜ್ ವೆಚ್ಚದ ಕುರಿತು ಸ್ಪಷ್ಟತೆ ಪಡೆಯುವುದು ಅತ್ಯಂತ ಅಗತ್ಯ. ಐವಿಎಫ್ ಪ್ಯಾಕೇಜ್ ವೆಚ್ಚದ ಕುರಿತು ಅರಿವನ್ನು ಹೊಂದಿರುವುದು ಹಣಕಾಸು ಯೋಜನೆಗೆ ನೆರವಾಗುತ್ತದೆ.

ಪಾರದರ್ಶಕ ಬೆಲೆ ವ್ಯವಸ್ಥೆ ಹೊಂದಿರುವ ಮತ್ತು ಯಾವುದೇ ಗೋಪ್ಯ ವೆಚ್ಚಗಳಿಲ್ಲದ ಐವಿಎಫ್ ಕೇಂದ್ರ ಆಯ್ಕೆ ಮಾಡಿಕೊಳ್ಳಿ.

8. ಸೌಲಭ್ಯವಿರುವ ಸ್ಥಳ

ಇದು ಅಗತ್ಯವಿಲ್ಲ ಎನಿಸಿದರೂ ಐವಿಎಫ್ ಕೇಂದ್ರದ ತಾಣವು ಪರಿಗಣಿಸಬೇಕಾದ ಪ್ರಮುಖ ಅಂಶವಾಗಿದೆ.

ಅನುಕೂಲಕರವಾದ ಸ್ಥಳದಲ್ಲಿರುವ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುವುದು ಆಗಾಗ್ಗೆ ಭೇಟಿ ಮಾಡಬೇಕಾಗಿರುವುದರಿಂದ ಪ್ರಯಾಣದ ಒತ್ತಡ ಕಡಿಮೆ ಮಾಡುತ್ತದೆ ಮತ್ತು ಸಮಯವನ್ನೂ ಉಳಿಸುತ್ತದೆ.

ನೀವು ಓಯಸಿಸ್ ಫರ್ಟಿಲಿಟಿಯನ್ನು ಆಯ್ಕೆ ಮಾಡಿಕೊಳ್ಳಿ! ಓಯಸಿಸ್ ಫರ್ಟಿಲಿಟಿ ಮುಂಚೂಣಿಯ ಮತ್ತು ಬೆಳೆಯುತ್ತಿರುವ ಫರ್ಟಿಲಿಟಿ ಸರಣಿಯಾಗಿದ್ದು ಭಾರತದಾದ್ಯಂತ 31 ಕೇಂದ್ರಗಳನ್ನು ಹೊಂದಿದೆ. ಇದು ವಿಶ್ವಮಟ್ಟದ ಸೌಲಭ್ಯಗಳನ್ನು ಒದಗಿಸುತ್ತದೆ ಮತ್ತು ಅನುಭವಿ ತಜ್ಞರು ಮತ್ತು ಕಾಳಜಿಯ ಮ್ಯಾನೇಜ್ ಮೆಂಟ್ ಸಿಬ್ಬಂದಿ ಹೊಂದಿದೆ. ಪ್ರಯೋಗಾಲಯಗಳು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸನ್ನದ್ಧವಾಗಿಎ ಮತ್ತು ಮಾನದಂಡಗಳು ಮತ್ತು ಗುಣಮಟ್ಟಕ್ಕೆ ಕಠಿಣ ಬದ್ಧತೆ ಹೊಂದಿವೆ. ಓಯಸಿಸ್ ಐಎಸ್ಒ 2011 ಪ್ರಮಾಣೀಕೃತ ಸಂಸ್ಥೆಯಾಗಿದೆ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್(ಐಸಿಎಂಆರ್) ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಪಾಲಿಸುತ್ತದೆ. ಓಯಸಿಸ್ ಫರ್ಟಿಲಿಟಿಯಲ್ಲಿ ಪರೀಕ್ಷೆ, ಪ್ರಯೋಗಾಲಯ ಪ್ರಕ್ರಿಯೆ, ಚಿಕಿತ್ಸೆ ಮತ್ತು ಸಲಹೆ ಎಲ್ಲವೂ ಒಂದೇ ಸೂರಿನಡಿ ಲಭ್ಯ.

ನಿಮ್ಮ ತಂದೆ ತಾಯಿಯರಾಗುವ ಕನಸನ್ನು ಓಯಸಿಸ್ ಫರ್ಟಿಲಿಟಿಯ ಫರ್ಟಿಲಿಟಿ ತಜ್ಞರೊಂದಿಗೆ ನನಸಾಗಿಸಿಕೊಳ್ಳಿರಿ, ಅವರು ನಿಮ್ಮ ತಂದೆ ತಾಯಿಯರಾಗುವ ಪ್ರಯಾಣದಲ್ಲಿ ನಿಮ್ಮ ಪ್ರತಿ ಹೆಜ್ಜೆಯಲ್ಲೂ ನಿಮ್ಮೊಂದಿಗೆ ಇರುತ್ತಾರೆ.

Write a Comment