Blog
Uncategorized

ಮಹಿಳೆಯರಲ್ಲಿ ಬಂಜೆತನದ ಕಾರಣಗಳನ್ನು ಗುರುತಿಸುವುದು

ಮಹಿಳೆಯರಲ್ಲಿ ಬಂಜೆತನದ ಕಾರಣಗಳನ್ನು ಗುರುತಿಸುವುದು

Author:  Dr. Sai Manasa Darla, Consultant, Fertility Specialist &  Laparoscopic Surgeon

ಬಂಜೆತನ ಹಲವಾರು ವೈದ್ಯಕೀಯ ಮತ್ತು ಜೀವನಶೈಲಿ ಕಾರಣಗಳಿಂದ ಉಂಟಾಗುವ ಸರ್ವತ್ರ ಆರೋಗ್ಯದ ಪರಿಸ್ಥಿತಿಯಾಗಿದೆ. ಶೇ.30ರಷ್ಟು ಬಂಜೆತನದ ಪ್ರಕರಣಗಳು ಮಹಿಳೆಯರ ಫಲವಂತಿಕೆಯ ಕಾರಣಗಳಿಂದ ಉಂಟಾಗುತ್ತವೆ. ಮಹಿಳೆಯರ ಬಂಜೆತನವು ಮಾನಸಿಕವಾಗಿ ಮತ್ತು ದೈಹಿಕವಾಗಿ ಘಾಸಿಗೊಳಿಸುತ್ತದೆ. ಮಹಿಳೆಯರಲ್ಲಿ ಬಂಜೆತನದ ಕಾರಣಗಳನ್ನು ಅರಿಯುವುದು ಮತ್ತು ಗುರುತಿಸುವುದು ಅದನ್ನು ಪರಿಹರಿಸಲು, ಚಿಕಿತ್ಸೆ ನೀಡಲು ಮತ್ತು ಅದರಿಂದ ಗರ್ಭಧಾರಣೆಗೆ ನೆರವಾಗುತ್ತದೆ.

ಮಹಿಳೆಯರಲ್ಲಿ ಬಂಜೆತನಕ್ಕೆ ಸಾಮಾನ್ಯ ಕಾರಣಗಳನ್ನು ಕಂಡುಕೊಳ್ಳುವುದು:

– ಅಂಡೋತ್ಪತ್ತಿಯ ಸಮಸ್ಯೆಗಳು

– ಗರ್ಭಾಶಯದ ರೋಗಗಳು

– ಟ್ಯೂಬಲ್-ಸಂಬಂಧಿತ ಬಂಜೆತನ

ಅಂಡೋತ್ಪತ್ತಿಯ ಬಂಜೆತನ

ಅಂಡೋತ್ಪತ್ತಿಯ ಸಮಸ್ಯೆಗಳು ಮಹಿಳೆಯರಲ್ಲಿ ಬಂಜೆತನಕ್ಕೆ ಪ್ರಮುಖ ಕಾರಣಗಳಾಗಿವೆ. ಅಂಡೋತ್ಪತ್ತಿಯು ಋತುಚಕ್ರದಲ್ಲಿ ಅಂಡಾಶಯದಿಂದ ಒಂದು ಪ್ರಬುದ್ಧ ಅಂಡಾಣು ಬಿಡುಗಡೆಯಾಗಿ ವೀರ್ಯದೊಂದಿಗೆ ಫಲವಂತಿಕೆ ಪಡೆದಾಗ ಗರ್ಭಧಾರಣೆ ಉಂಟಾಗುತ್ತದೆ. ಅಂಡೋತ್ಪತ್ತಿಯ ಪ್ರಕ್ರಿಯೆಯಲ್ಲಿ ಯಾವುದೇ ಅಡೆತಡೆಯು ಅಂಡೋತ್ಪತ್ತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂಡೋತ್ಪತ್ತಿಯ ಸಮಸ್ಯೆಗಳು ಬಂಜೆತನದ ಶೇ.25ರಷ್ಟು ಸಮಸ್ಯೆಗಳಿಗೆ ಕೊಡುಗೆ ನೀಡುತ್ತದೆ.

ಅಂಡೋತ್ಪತ್ತಿಯ ಅಸ್ವಸ್ಥತೆಗಳು ಹಲವಾರು ಅಂಶಗಳ ಫಲಿತಾಂಶವಾಗಿದ್ದು ಅವು ಈ ಜೈವಿಕ ಪ್ರಕ್ರಿಯೆಯೊಂದಿಗೆ ಹಸ್ತಕ್ಷೇಪ ಮಾಡುತ್ತವೆ ಮತ್ತು ಮಹಿಳೆಯರಲ್ಲಿ ಬಂಜೆತನದ ಪ್ರಮುಖ ಕಾರಣಗಳಿಗೆ ಕೊಡುಗೆ ನೀಡುತ್ತವೆ.

ಅಂಡೋತ್ಪತ್ತಿಯಲ್ಲಿ ಕ್ರಮವಿಲ್ಲದಿರುವುದು ಅಥವಾ ಅಂಡೋತ್ಪತ್ತಿ ಇಲ್ಲದಿರುವುದು ಹಲವಾರು ಕಾರಣಗಳಿಂದ ಉಂಟಾಗಬಹುದು:

1. ಪ್ರಾಥಮಿಕ ಅಂಡೋತ್ಪತ್ತಿಯ ಅಸಮರ್ಪಕತೆ(ಪಿಒಐ):

ಅವಧಿಪೂರ್ವ ಅಂಡೋತ್ಪತ್ತಿಯ ವೈಫಲ್ಯ ಎಂದೂ ಪರಿಗಣಿಸುವ ಪಿಒಐ ಅತ್ಯಂತ ಕಡಿಮೆ ಪ್ರಮಾಣದ ಅಂಡಾಣುಗಳು ಇರುವುದು ಅಥವಾ ಕೆಲ ಪ್ರಕರಣಗಳಲ್ಲಿ 40ಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ

ಆಟೊಇಮ್ಯೂನ್ ಕಾರಣಗಳು ಅಥವಾ ಅನುವಂಶಿಕ ಕಾರಣಗಳಿಂದ ಅಂಡಾಣುಗಳನ್ನು ಉತ್ಪಾದಿಸುವುದು ಕಡಿಮೆ ಮಾಡುವುದು ಮಹಿಳೆಯರಲ್ಲಿ ಬಂಜೆತನದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

2. ಹಾರ್ಮೋನ್ ಅಸಹತೆಗಳು:

ಅನಿಯಮಿತ ಅಂಡೋತ್ಪತ್ತಿಯ ಪ್ರಮುಖ ಕಾರಣಗಳಲ್ಲಿ ಒಂದು ಹಾರ್ಮೋನ್ ಅಸಹಜತೆಗಳು. ಕೋಶಕ-ಉತ್ತೇಜಿಸುವ ಹಾರ್ಮೋನ್ (ಎಫ್.ಎಸ್.ಎಚ್.), ಲ್ಯುಟೈನೈಜಿಂಗ್ ಹಾರ್ಮೋನ್ (ಎಲ್.ಎಚ್.) ಮತ್ತು ಪ್ರೊಲ್ಯಾಕ್ಟಿನ್ ಹಾರ್ಮೋನುಗಳ ಸಂಕೀರ್ಣ ಮತ್ತು ಸೂಕ್ಷ್ಮ ಸಮತೋಲನವು ಅಂಡೋತ್ಪತ್ತಿಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಯಾವುದೇ ಹಾರ್ಮೋನ್ ಅಸಹಜತೆಗಳು ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರುತ್ತವೆ ಮತ್ತು ಗರ್ಭಧಾರಣೆಯ ಸಾಧ್ಯತೆಗಳ ಮೇಲೆ ಪರಿಣಾಮ ಬೀರುತ್ತವೆ. ಹಾರ್ಮೋನ್ ಅಸಹಜತೆಗಳಿಂದ ಉಂಟಾಗುವ ಕೆಲವು ಪರಿಸ್ಥಿತಿಗಳು:

– ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್(ಪಿಸಿಒಎಸ್): ಮಹಿಳೆಯರಲ್ಲಿ ಬಂಜೆತನ ಉಂಟು ಮಾಡುವ ಅತ್ಯಂತ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹಲವಾರು ಸಣ್ಣ ಚೀಲಗಳು(ದ್ರವ ತುಂಬಿದ ಚೀಲಗಳು) ಗರ್ಭಕೋಶದಲ್ಲಿ ರೂಪುಗೊಂಡು ಅವು ಅಂಡೋತ್ಪತ್ತಿಯಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಅಸಹಜ ಋತುಚಕ್ರ, ಟೆಸ್ಟೊಸ್ಟೆರೋನ್ ಹೆಚ್ಚು ಉತ್ಪಾದನೆ, ಮಹಿಳಾ ಹಾರ್ಮೋನುಗಳ ಅಸಹಜತೆಗಳು, ಅನೊವ್ಯುಲೇಷನ್ ಮತ್ತು ಇನ್ಸುಲಿನ್ ನಿರೋಧಕತೆಗಳು ಪಿಸಿಒಎಸ್ ಗೆ ಸಂಬಂಧಿಸಿವೆ.

– ಹೆಚ್ಚು ಪ್ರೊಲಾಕ್ಟಿನ್ ಮಟ್ಟಗಳು(ಹೈಪರ್ ಪ್ರೊಲಾಕ್ಟಿನೀಮಿಯಾ): ಕೆಲವು ಸಂದರ್ಭಗಳಲ್ಲಿ, ಪಿಟ್ಯುಟರಿ ಗ್ರಂಥಿಯ ಅಸಮರ್ಪಕ ಕಾರ್ಯವು ಹೆಚ್ಚಿನ ಪ್ರೊಲ್ಯಾಕ್ಟಿನ್ ಹಾರ್ಮೋನ್ ಉತ್ಪಾದನೆಗೆ ಕಾರಣವಾಗುತ್ತದೆ. ಪ್ರೊಲ್ಯಾಕ್ಟಿನ್‌ನ ಉನ್ನತ ಮಟ್ಟಗಳು ಎಫ್‌ಎಸ್‌ಎಚ್ ಮತ್ತು ಎಲ್‌ಹೆಚ್ ಮಟ್ಟಕ್ಕೆ ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ, ಇದು ಅಂಡೋತ್ಪತ್ತಿ ಅಸ್ವಸ್ಥತೆಗಳು ಮತ್ತು ಫಲವಂತಿಕೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

– ಥೈರಾಯ್ಡ್ ಅಸಹಜ ಕ್ರಿಯೆ: ಥೈರಾಯ್ಡ್ ಅಸಹಜ ಕ್ರಿಯೆಯಂತಹ ಅಂತಃಸ್ರಾವಕ ಅಸ್ವಸ್ಥತೆಗಳು ಥೈರಾಯ್ಡ್ ಹಾರ್ಮೋನ್ ಮಟ್ಟದಲ್ಲಿ ಏರುಪೇರುಗಳನ್ನು ಉಂಟುಮಾಡುವ ಥೈರಾಯ್ಡ್ ಗ್ರಂಥಿಯ ನಿಷ್ಕ್ರಿಯತೆ ಅಥವಾ ಅತಿಯಾಗಿ ಕ್ರಿಯಾಶೀಲತೆಗೆ ಕಾರಣವಾಗಬಹುದು. ಥೈರಾಯ್ಡ್ ಅಸಹಜ ಕ್ರಿಯೆಯು ಅಂಡೋತ್ಪತ್ತಿ ಮತ್ತು ಗರ್ಭಧರಿಸುವ ಸಾಧ್ಯತೆಗಳ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.

3. ಕಡಿಮೆ ಅಂಡಾಣು ಗುಣಮಟ್ಟ ಮತ್ತು ಪ್ರಮಾಣ:

ಮಹಿಳೆಯರ ಫಲವಂತಿಕೆಯನ್ನು ಅಂಡಾಣು ಗುಣಮಟ್ಟ ಮತ್ತು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ. ಮಹಿಳೆಯರು ನಿರ್ದಿಷ್ಟ ಸಂಖ್ಯೆಯ ಅಂಡಾಣುಗಳೊಂದಿಗೆ ಜನಿಸುತ್ತಾರೆ ಮತ್ತು ಈ ಅಂಡಾಣು ಗುಣಮಟ್ಟ ಮತ್ತು ಪ್ರಮಾಣವು ಹೆಚ್ಚುತ್ತಿರುವ ವಯಸ್ಸಿನೊಂದಿಗೆ ಅಪಾರವಾಗಿ ಕ್ಷೀಣಿಸುತ್ತದೆ. ವಯಸ್ಸು ಮುಂದುವರೆದಂತೆ, ಮೊಟ್ಟೆಗಳು ಆನುವಂಶಿಕ ಅಸಹಜತೆಗಳಿಗೆ ಒಳಗಾಗುತ್ತವೆ. ಇದರಿಂದ ಜನ್ಮಜಾತ ದೋಷಗಳು ಅಥವಾ ಪುನರಾವರ್ತಿತ ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ.

 

ಗರ್ಭಾಶಯದ ರೋಗಗಳು

ಗರ್ಭಾಶಯದ ಆರೋಗ್ಯವು ಗರ್ಭ ಸೇರ್ಪಡೆ ಮತ್ತು ಅವಧಿಯವರೆಗೆ ಗರ್ಭಧಾರಣೆಯನ್ನು ಕೊಂಡೊಯ್ಯಲು ಮುಖ್ಯವಾಗಿದೆ. ಗರ್ಭಾಶಯದ ರೋಗಗಳು ಗರ್ಭ ಸೇರ್ಪಡೆ ತಡೆಯುವ ಮೂಲಕ ಭ್ರೂಣದ ಬೆಳವಣಿಗೆಯನ್ನು ತಡೆಯುತ್ತದೆ. ಭ್ರೂಣ ಸೇರ್ಪಡೆ ಮಾಡಿದರೂ ಸಹ ಗರ್ಭಪಾತದ ಅಪಾಯ ಹೆಚ್ಚಾಗುತ್ತದೆ.

ಗರ್ಭಾಶಯದ ಕಾಯಿಲೆಗಳಾದ ಫೈಬ್ರಾಯ್ಡ್‌ಗಳು, ಗರ್ಭಾಶಯದ ಪಾಲಿಪ್‌ಗಳು, ಗರ್ಭಾಶಯದ ಅಸಹಜತೆಗಳು, ಎಂಡೊಮೆಟ್ರಿಯೊಸಿಸ್ ಮತ್ತು ಗರ್ಭಾಶಯದ ಗುರುತುಗಳು ಇವೆಲ್ಲವೂ ಗರ್ಭಧಾರಣೆಯ ಸಾಧ್ಯತೆಗಳ ಮೇಲೆ ಪರಿಣಾಮ ಬೀರುತ್ತವೆ.

1. ಫೈಬ್ರಾಯಿಡ್ ಗಳು:

ಫೈಬ್ರಾಯ್ಡ್‌ ಗಳು ಗರ್ಭಾಶಯದ ಸ್ನಾಯುವಿನ ಕ್ಯಾನ್ಸರ್ ಅಲ್ಲದ ಬೆಳವಣಿಗೆಗಳಾಗಿವೆ. ಅವು ಫಲವತ್ತಾದ ಅಂಡಾಣು ಅಳವಡಿಕೆಗೆ ಅಡ್ಡಿಯಾಗುತ್ತವೆ ಅಥವಾ ಅದರ ಗಾತ್ರ ಮತ್ತು ಬೆಳವಣಿಗೆಯ ಸ್ಥಳವನ್ನು ಅವಲಂಬಿಸಿ ಅಂಡಾಣು ಅಥವಾ ವೀರ್ಯದ ಚಲನೆಯನ್ನು ನಿರ್ಬಂಧಿಸುತ್ತವೆ.

2. ಗರ್ಭಾಶಯದ ಅಸಹಜತೆಗಳು:

ಕೆಲವು ಮಹಿಳೆಯರು ಜನ್ಮಜಾತ ಕಾರಣಗಳಿಂದ ಅಸಹಜ ಆಕಾರದ ಗರ್ಭಾಶಯದೊಂದಿಗೆ ಜನಿಸುತ್ತಾರೆ. ಈ ರಚನಾತ್ಮಕ ವಿರೂಪಗಳು ಗರ್ಭಧರಿಸುವಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತವೆ ಮತ್ತು ಮರುಕಳಿಸುವ ಗರ್ಭಪಾತದ ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ.

3. ಎಂಡೊಮೆಟ್ರಿಯೊಸಿಸ್:

ಮಹಿಳೆಯರಲ್ಲಿ ಎಂಡೊಮೆಟ್ರಿಯೊಸಿಸ್ ಬಂಜೆತನದ ಪ್ರಮುಖ ಕಾರಣವಾಗಿದೆ. ಸುಮಾರು ಶೇ.30ರಷ್ಟು ಸ್ತ್ರೀ ಬಂಜೆತನ ಪ್ರಕರಣಗಳಿಗೆ ಎಂಡೊಮೆಟ್ರಿಯೊಸಿಸ್ ಕಾರಣವಾಗಿದೆ. ಇದು ಒಳಗಿನ ಗರ್ಭಾಶಯದ ಒಳಪದರವು (ಎಂಡೊಮೆಟ್ರಿಯಮ್) ಅಂಡಾಶಯಗಳು, ಗರ್ಭಾಶಯದ ಹಿಂಭಾಗ, ಫಾಲೋಪಿಯನ್ ಟ್ಯೂಬ್ ಗಳು ಮತ್ತು ಶ್ರೋಣಿಯ ಪ್ರದೇಶದಂತಹ ಗರ್ಭಾಶಯದ ಹೊರಗೆ ಬೆಳೆಯುವ ಸ್ಥಿತಿಯಾಗಿದೆ. ತೀವ್ರತರವಾದ ಪ್ರಕರಣಗಳಲ್ಲಿ, ಇದು ಗರ್ಭಾಶಯದ ಗಾಯದ

ಜೀವಕೋಶಕ್ಕೆ ಕಾರಣವಾಗುತ್ತದೆ. ಎಂಡೊಮೆಟ್ರಿಯೊಸಿಸ್‌ನ ಲಕ್ಷಣಗಳು ನೋವಿನ ಮತ್ತು ಅನಿಯಮಿತ ಋತುಚಕ್ರ, ತೀವ್ರವಾದ ಶ್ರೋಣಿ ಕುಹರದ ನೋವು, ಸಂಭೋಗದ ಸಮಯದಲ್ಲಿ ನೋವು ಇತ್ಯಾದಿ.

ಇದು ಫಾಲೋಪಿಯನ್ ಟ್ಯೂಬ್‌ ಗಳನ್ನು ನಿರ್ಬಂಧಿಸುವುದು, ಭ್ರೂಣ ಸೇರ್ಪಡೆ ತಡೆಯುವುದು ಮತ್ತು ಗರ್ಭಾಶಯದ ಉರಿಯೂತವನ್ನು ಉಂಟುಮಾಡುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ ಇದು ಭ್ರೂಣ ಸೇರ್ಪಡೆ ವೈಫಲ್ಯ ಮತ್ತು ಮರುಕಳಿಸುವ ಗರ್ಭಪಾತಕ್ಕೆ ಕಾರಣವಾಗಬಹುದು.

4. ಪೆಲ್ವಿಕ್ ಉರಿಯೂತದ ಕಾಯಿಲೆ (ಪಿಐಡಿ) :

ಪೆಲ್ವಿಕ್ ಉರಿಯೂತದ ಕಾಯಿಲೆಯು ಮಹಿಳೆಯರಲ್ಲಿ ಬಂಜೆತನದ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಸ್ತ್ರೀ ಸಂತಾನೋತ್ಪತ್ತಿ ಅಂಗಗಳು ಲೈಂಗಿಕವಾಗಿ ಹರಡುವ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾಗುತ್ತವೆ, ಅದು ಯೋನಿಯಿಂದ ಗರ್ಭಾಶಯ, ಫಾಲೋಪಿಯನ್ ಟ್ಯೂಬ್ ಗಳು ಮತ್ತು ಅಂಡಾಶಯಗಳಿಗೆ ಹರಡುತ್ತದೆ. ದೀರ್ಘಕಾಲದ ಪಿಐಡಿ ಗಾಯದ ಅಂಗಾಂಶವನ್ನು ನಿರ್ಮಿಸಲು ಕಾರಣವಾಗುತ್ತದೆ ಮತ್ತು ರಚನಾತ್ಮಕ ತೊಡಕುಗಳಿಗೆ ಕಾರಣವಾಗುತ್ತದೆ. ಚಿಕಿತ್ಸೆ ಪಡೆಯದ ದೀರ್ಘಕಾಲದ ಪಿಐಡಿ ಅಪಸ್ಥಾನೀಯ ಗರ್ಭಧಾರಣೆ ಮತ್ತು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ.

ಟ್ಯೂಬ್-ಸಂಬಂಧಿತ ಬಂಜೆತನ

ಫಾಲೋಪಿಯನ್ ಟ್ಯೂಬ್‌ ನಲ್ಲಿನ ಅಡಚಣೆಯು ವೀರ್ಯವು ಅಂಡಾಣು ಫಲಿಸದಂತೆ ತಡೆಯುತ್ತದೆ. ಅಲ್ಲದೆ, ಫಲೀಕರಣವು ಸಂಭವಿಸಿದರೂ ಸಹ, ಫಾಲೋಪಿಯನ್ ಟ್ಯೂಬ್‌ ನಲ್ಲಿನ ಅಡಚಣೆಯಿಂದಾಗಿ ಭ್ರೂಣವನ್ನು ಗರ್ಭಾಶಯಕ್ಕೆ ಸಾಗಿಸಲು ಸಾಧ್ಯವಿಲ್ಲ, ಇದರ ಪರಿಣಾಮವಾಗಿ ಅಪಸ್ಥಾನೀಯ ಗರ್ಭಧಾರಣೆಯನ್ನು ನಿವಾರಿಸಬೇಕಾಗುತ್ತದೆ.

ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಲೈಂಗಿಕವಾಗಿ ಹರಡುವ ಸೋಂಕುಗಳು, ಹಿಂದಿನ ಶಸ್ತ್ರಚಿಕಿತ್ಸೆಗಳಿಂದಾಗಿ ಗಾಯದ ಗುರುತುಗಳು, ದೀರ್ಘಕಾಲದ ಪಿಐಡಿ, ಎಂಡೊಮೆಟ್ರಿಯೊಸಿಸ್, ಫೈಬ್ರಾಯ್ಡ್‌ ಗಳು ಅಥವಾ ಪಾಲಿಪ್ಸ್, ಇತ್ಯಾದಿಗಳು ಟ್ಯೂಬ್‌ಗಳನ್ನು ಹಾನಿಗೊಳಿಸಬಹುದು ಮತ್ತು ಟ್ಯೂಬಲ್ ಬ್ಲಾಕೇಜ್ ಮೂಲಕ ಫಲವಂತಿಕೆ ದುರ್ಬಲಗೊಳಿಸಬಹುದು.

ಮಹಿಳೆಯರಲ್ಲಿ ಫಲವಂತಿಕೆ ಮೇಲೆ ಪರಿಣಾಮ ಬೀರುವ ರಿಸ್ಕ್ ಅಂಶಗಳು

ಮೇಲೆ ತಿಳಿಸಿದ ಕಾರಣಗಳ ಹೊರತಾಗಿ, ಗರ್ಭಧಾರಣೆಯ ಸಾಧ್ಯತೆಗಳ ಮೇಲೆ ಪ್ರಭಾವ ಬೀರುವ ಕೆಲವು ಅಪಾಯಕಾರಿ ಅಂಶಗಳು:

– ವಯಸ್ಸು: ಅಂಡಾಣುಗಳ ಗುಣಮಟ್ಟ ಮತ್ತು ಸಂಖ್ಯೆಯಲ್ಲಿನ ಕುಸಿತದಿಂದಾಗಿ ಮಹಿಳೆಯರ ಫಲವಂತಿಕೆ ವಯಸ್ಸಾದಂತೆ ಕಡಿಮೆಯಾಗುತ್ತದೆ.

– ಲೈಂಗಿಕವಾಗಿ ವರ್ಗಾವಣೆಯಾದ ಸೋಂಕುಗಳು: ಹಿಂದೆ ಚರ್ಚಿಸಲಾದಂತೆ ಎಸ್.ಟಿ.ಐ.ಗಳು ಗರ್ಭಕೋಶ, ಗರ್ಭಕಂಠ ಮತ್ತು ಫಾಲೋಪಿಯನ್ ಟ್ಯೂಬ್ ಗಳಿಗೆ ಹರಡಿ ಮಹಿಳೆಯರಲ್ಲಿ ಫಲವಂತಿಕೆಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ.

– ಧೂಮಪಾನ ಮತ್ತು ಮದ್ಯಪಾನ: ಇದು ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಪ್ರಮುಖ ರಿಸ್ಕ್ ಅಂಶಗಳಲ್ಲಿ ಒಂದಾಗಿದೆ. ಇದು ಫಲವಂತಿಕೆಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ವ್ಯಕ್ತಿಯ ಒಟ್ಟಾರೆ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ.

– ಬೊಜ್ಜು: ಅತಿಯಾದ ತೂಕ ಹೊಂದಿರುವುದು ಫಲವಂತಿಕೆಗೆ ಋಣಾತ್ಮಕ ಪರಿಣಾಮ ಬೀರುತ್ತದೆ ಮತ್ತು ಗರ್ಭಧಾರಣೆಯಲ್ಲಿ ಕಷ್ಟಕರವಾಗಿಸುತ್ತದೆ.

– ಕೊರತೆಗಳು ಮತ್ತಿತರೆ ಪೌಷ್ಠಿಕತೆಯ ಅಂಶಗಳು: ವಿಟಮಿನ್ ಕೊರತೆಗಳು ಮತ್ತು ಅಸಮತೋಲನದ ಆಹಾರ ನಿಮ್ಮ ಗರ್ಭಧಾರಣಾ ವ್ಯವಸ್ಥೆಯನ್ನು ಹಾರ್ಮೋನು ಉತ್ಪಾದನೆಗೆ ಸೂಕ್ತ ಪೂರಕ ಗರ್ಭಧಾರಣೆಗೆ ಅಶಕ್ತವಾಗಿಸಬಹುದು ಮತ್ತು ಸಂತಾನೋತ್ಪಾದನೆಯ ವ್ಯವಸ್ಥೆಯ ಕಾರ್ಯಕ್ಕೆ ಅಡ್ಡಿಪಡಿಸಬಹುದು.

– ಒತ್ತಡ: ಒತ್ತಡವು ಅಂಡೋತ್ಪತ್ತಿಗೆ ಪರಿಣಾಮ ಬೀರುತ್ತದೆ ಮತ್ತು ಲೈಂಗಿಕ ಉತ್ಸಾಹ ಕುಗ್ಗಿಸುತ್ತದೆ.

ಸಮಾರೋಪ:

ಬಂಜೆತನದಿಂದ ಬಳಲುತ್ತಿರುವ ದಂಪತಿಗಳಿಗೆ, ಬಂಜೆತನದ ಮೂಲ ಕಾರಣಗಳ ಅರಿವು ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಸರಿಯಾದ ರೋಗನಿರ್ಣಯವು ಪರಿಣಾಮಕಾರಿ ವೈಯಕ್ತಿಕ ಚಿಕಿತ್ಸಾ ಯೋಜನೆಯನ್ನು ರೂಪಿಸಲು ಸಹಾಯ ಮಾಡುತ್ತದೆ. ಅದಕ್ಕೆ ಸಂತಾನೋತ್ಪತ್ತಿ ಚಿಕಿತ್ಸಾ ಕ್ಷೇತ್ರದಲ್ಲಿನ ಪ್ರಗತಿ ಕಾರಣವಾಗಿದೆ. ಫಲವಂತಿಕೆಯ ಸಮಸ್ಯೆಗಳನ್ನು ಹೊಂದಿರುವ ಮಹಿಳೆಯರು ಇನ್ ವಿಟ್ರೊ ಫರ್ಟಿಲೈಸೇಷನ್, ಇಂಟ್ರಾ ಯುಟೆರಿನ್ ಇನ್ಸೆಮಿನೇಷನ್, ಇನ್ ವಿಟ್ರೊ ಮೆಚುರೇಷನ್ ಇತ್ಯಾದಿಗಳ ಮೂಲಕ ತಾಯ್ತನದ ಕನಸನ್ನು ಸಾಧಿಸಬಹುದು. ನಿಮ್ಮ ಫಲವಂತಿಕೆಯ ಸಮಸ್ಯೆಗಳನ್ನು ನಿವಾರಿಸಲು ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಿ.

Write a Comment

BOOK A FREE CONSULTATION