Blog
Uncategorized

ಗರ್ಭಧಾರಣೆಯ ಮರು ನಿಗದಿ- ಅಂಡಾಣು ಘನೀಕರಣದಿಂದ ಫಲವಂತಿಕೆಯ ಸಂರಕ್ಷಣೆ (ಸೋಷಿಯಲ್ ಫ್ರೀಜಿಂಗ್)

ಗರ್ಭಧಾರಣೆಯ ಮರು ನಿಗದಿ- ಅಂಡಾಣು ಘನೀಕರಣದಿಂದ ಫಲವಂತಿಕೆಯ ಸಂರಕ್ಷಣೆ (ಸೋಷಿಯಲ್ ಫ್ರೀಜಿಂಗ್)

Author: Dr. V Ramya, Consultant & Fertility Specialist

ಸಾಕಷ್ಟು ದಂಪತಿಗಳು ತಮ್ಮ ಉದ್ಯೋಗ ಮತ್ತು ವೈಯಕ್ತಿಕ ಪ್ರಗತಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಫಲವಂತಿಕೆಯ ಸಂರಕ್ಷಣೆಯ ನೆರವಿನಿಂದ ಗರ್ಭಧಾರಣೆಯನ್ನು ಮುಂದೂಡುತ್ತಾರೆ. ವೃತ್ತಿಯ ಆದ್ಯತೆ ಹೊಂದಿರುವ ಮಹಿಳೆಯರಲ್ಲಿ ಅಂಡಾಣು ಸಂರಕ್ಷಣೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಆದಾಗ್ಯೂ ಅಂಡಾಣು ಸಂರಕ್ಷಣೆ ಕುರಿತಾದ ಮಿಥ್ಯೆಗಳು ಮತ್ತು ಅನುಮಾನಗಳಿಂದ ಹಲವು ಮಂದಿ ಈ ಆಲೋಚನೆಯನ್ನು ಒಪ್ಪುವುದಿಲ್ಲ. ಆತಂಕ ಪಡಬೇಡಿ, ನಾವು ನಿಮಗೆ ವಿವರಗಳೊಂದಿಗೆ ನೆರವಾಗಲು ಇಲ್ಲಿದ್ದೇವೆ.

ಮೊದಲಿಗೆ ಅಂಡಾಣು ಘನೀಕರಣ ಎಂದರೇನು?

ವೈದ್ಯಕೀಯ ಪದಗಳಲ್ಲಿ ಹೇಳಬೇಕೆಂದರೆ ತಾಂತ್ರಿಕವಾಗಿ ಊಸೈಟ್ ಕ್ರಯೋಪ್ರಿಸರ್ವೇಷನ್ ಎನ್ನಲಾಗುತ್ತದೆ. ಇದು ಮಹಿಳೆಯರಲ್ಲಿ ಸಂತಾನೋತ್ಪಾದನೆಯ ಸಾಮರ್ಥ್ಯವನ್ನು ಸಂರಕ್ಷಿಸಲು ಬಳಸಲಾಗುತ್ತದೆ. ಹಲವು ಪ್ರಬುದ್ಧ ಅಂಡಾಣುಗಳನ್ನು ಸಂಗ್ರಹಿಸಲು ಅಂಡಾಶಯಗಳನ್ನು ಹಾರ್ಮೋನುಗಳ ಇಂಜೆಕ್ಷನ್ ಗಳ ಮೂಲಕ ಪ್ರಚೋದಿಸಲಾಗುತ್ತದೆ. ಈ ಪ್ರಬುದ್ಧ ಅಂಡಾಣುಗಳನ್ನು ನಂತರದ ಬಳಕೆಗೆ ಕಡಿಮೆ ಉಷ್ಣತೆಯಲ್ಲಿ ಘನೀಕರಿಸಲಾಗುತ್ತದೆ.

ಅಂಡಾಣು ಘನೀಕರಣಕ್ಕೆ ಕಾರಣಗಳು:

ಅಂಡಾಣು ಘನೀಕರಣ ಪರಿಗಣಿಸಲು ಹಲವಾರು ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳಲ್ಲಿ ಕೆಲವು ಹೀಗಿವೆ:

– ವೃತ್ತಿ ಮತ್ತು ಶೈಕ್ಷಣಿಕ ಯೋಜನೆಗಳು · ಲಿಂಫೋಮಾ, ಸ್ತನ ಮತ್ತಿತರೆ ಕ್ಯಾನ್ಸರ್ ಗಳ ಕ್ಯಾನ್ಸರ್ ಚಿಕಿತ್ಸೆ

– ಸಂಗಾತಿಯ ಕೊರತೆ ಅಥವಾ ಸಂಗಾತಿಯ ಫಲವಂತಿಕೆಯ ಸಮಸ್ಯೆಗಳಂತಹ ವೈಯಕ್ತಿಕ ಸಂದರ್ಭಗಳು

– ಫಲವಂತಿಕೆಗೆ ಹಾನಿಯುಂಟು ಮಾಡುವ ಅನುವಂಶಿಕ ರೋಗಲಕ್ಷಣಗಳ ಕೌಟುಂಬಿಕ ಇತಿಹಾಸ

– ಸೋಂಕುಗಳು, ಅಂಗ ವೈಫಲ್ಯ ಮತ್ತಿತರೆ ಆರೋಗ್ಯದ ಸ್ಥಿತಿಗಳು

 

 

ಅಂಡಾಣು ಘನೀಕರಣಕ್ಕೆ ಅತ್ಯುತ್ತಮ ವಯಸ್ಸು

ಮಹಿಳೆಯರ ಫಲವಂತಿಕೆ ವಯಸ್ಸಿಒಂದಿಗೆ ಕುಗ್ಗುತ್ತದೆ ಎಂದು ಎಲ್ಲರಿಗೂ ತಿಳಿದಿರುವ ವಾಸ್ತವ ಎಕೆಂದರೆ ವಯಸ್ಸು ಹೆಚ್ಚಾದಂತೆ ಅಂಡಾಣುಗಳ ಗುಣಮಟ್ಟ ಮತ್ತು ಸಂಖ್ಯೆ ಕುಸಿಯುತ್ತದೆ. ಅಲ್ಲದೆ ಮಹಿಳೆಯರ ಫಲವಂತಿಕೆ 25-30ರ ವರ್ಷದಲ್ಲಿ ಗರಿಷ್ಠ ಮಟ್ಟದಲ್ಲಿರುತ್ತದೆ.

35-40ರ ನಂತರ ಅದು ತೀವ್ರವಾಗಿ ಕುಸಿಯಲು ಪ್ರಾರಂಭಿಸುತ್ತದೆ. ಆದ್ದರಿಂದ ಅತ್ಯುತ್ತಮ ಫಲಿತಾಂಶಗಳಿಗೆ ನಿಮ್ಮ 20ರ ನಂತರ ಅಥವಾ 30ರ ವಯಸ್ಸಿನ ಒಳಗಡೆ ಅಂಡಾಣುಗಳನ್ನು ಘನೀಕರಿಸುವುದು ಮುಖ್ಯ.

40ರ ವಯಸ್ಸಿನಲ್ಲೂ ನಿಮ್ಮ ಅಂಡಾಣುಗಳನ್ನು ಘನೀಕರಿಸುವುದು ಸಾಧ್ಯ, ಆದರೆ ಫಲವಂತಿಕೆ ಕುಸಿಯಲು ಪ್ರಾರಂಭಿಸುತ್ತದೆ. ಪಡೆಯಲಾದ ಅಂಡಾಣುಗಳು ಕನಿಷ್ಠವಾಗಿರುತ್ತವೆ ಮತ್ತು ಅಂಡಾಣು ಸಂಗ್ರಹದಲ್ಲಿ ಕುಸಿತ

ಪ್ರಾರಂಭವಾಗುತ್ತದೆ. 40ಕ್ಕೆ ತಮ್ಮ ತಾಯ್ತನವನ್ನು ಮುಂದೂಡಲು ಬಯಸುವ ಮಹಿಳೆಯರಿಗೆ ಅತ್ಯುತ್ತಮ ಫಲಿತಾಂಶಗಳಿಗೆ ದಾನಿಗಳ ಅಂಡಾಣು ಪಡೆಯಲು ಸಲಹೆ ನೀಡಲಾಗುತ್ತದೆ.

ಘನೀಕರಿಸಿದ ಅಂಡಾಣುಗಳ ಜೀವಿತಾವಧಿ:

ಘನೀಕರಿಸಿದ ಅಂಡಾಣುಗಳನ್ನು ಜೀವಿತಾವಧಿ ಪೂರಾ ಸಂಗ್ರಹಿಸಬಹುದು. ಆದಾಗ್ಯೂ ಜನರು ಘನೀಕರಿಸಿದ 10 ವರ್ಷಗಳ ಒಳಗೆ ಬಳಸುತ್ತಾರೆ. 10 ವರ್ಷಗಳಿಗಿಂತ ಮೀರಿದ ಘನೀಕರಿಸಿದ ಅಂಡಾಣುಗಳು ದೀರ್ಘ ಅವಧಿಯ ಸಂಗ್ರಹದಿಂದ ಹಾಳಾಗುತ್ತವೆ ಎಂಬ ಯಾವುದೇ ಆಧಾರವಿಲ್ಲ. ಬಳಸಲಾಗದೇ ಇರುವ ಘನೀಕರಿಸಿದ ಅಂಡಾಣುಗಳನ್ನು ನಿರ್ಲಕ್ಷಿಸಬಹುದು ಅಥವಾ ದಾನ ಮಾಡಬಹುದು.

ಅಂತಿಮವಾಗಿ:

ಅಂಡಾಣು ಘನೀಕರಣವು ಹಲವಾರು ಕಾರಣಗಳಿಗೆ ತಮ್ಮ ಗರ್ಭಧಾರಣೆ ಮುಂದೂಡಲು ಬಯಸುವ ಮಹಿಳೆಯರಿಗೆ ಭರವಸೆ ನೀಡುತ್ತದೆ. ಅಲ್ಲದೆ ಘನೀಕರಿಸಲು ಬಯಸುವ ಮಹಿಳೆಯರಿಗೆ ಅದನ್ನು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಮಾಡುವುದು ಉತ್ತಮ ಎಂದು ತಿಳಿದಿರಬೇಕು. ನಿರ್ದಿಷ್ಟ ಸಂಖ್ಯೆಯ ಅಂಡಾಣುಗಳನ್ನು ಸಂಗ್ರಹಿಸಬೇಕು ಎನ್ನುವುದಿಲ್ಲ. ಬಳಸುವಾಗ ಯಶಸ್ಸಿನ ಪ್ರಮಾಣ ಹೆಚ್ಚಿಸಲು ಹೆಚ್ಚು ಅಂಡಾಣುಗಳನ್ನು ಘನೀಕರಿಸುವುದು ಸೂಕ್ತ. ಆದಾಗ್ಯೂ ಪಡೆಯುವ ಅಂಡಾಣುಗಳ ಸಂಖ್ಯೆಯು ಮಹಿಳೆಯರಲ್ಲಿನ ಅಂಡಾಶಯದ ರಿಸರ್ವ್, ವಯಸ್ಸು ಮತ್ತಿತರೆ ವೈದ್ಯಕೀಯ ಪರಿಸ್ಥಿತಿಗಳನ್ನು ಆಧರಿಸಿರುತ್ತವೆ.

Write a Comment

BOOK A FREE CONSULTATION