Blog
Uncategorized

ಎರಡು ವಾರಗಳ ಕಾಯುವಿಕೆ: ನಿಮಗೆ ತಿಳಿದಿರಬೇಕಾದ ಪ್ರತಿಯೊಂದು ಅಂಶ

ಎರಡು ವಾರಗಳ ಕಾಯುವಿಕೆ: ನಿಮಗೆ ತಿಳಿದಿರಬೇಕಾದ ಪ್ರತಿಯೊಂದು ಅಂಶ

Author: Dr. Sai Manasa Darla, Consultant, Fertility Specialist &  Laparoscopic Surgeon

ಐವಿಎಫ್ ಗೆ ಒಳಗಾಗುವವರ ಮತ್ತು “ಎರಡು ವಾರಗಳ ಕಾಯುವಿಕೆ” ವಾಕ್ಯ ಹೆಚ್ಚು ಪರಿಚಯವಿಲ್ಲದವರು ಚಿಂತಿಸಬೇಡಿ, ನಾವು ಅದರ ನಿರ್ದಿಷ್ಟತೆಗಳಳನ್ನು ನಾವು ನಿಮಗೆ ತಿಳಿಸುತ್ತೇವೆ.

ಮೊದಲಿಗೆ ಎಚ್.ಸಿ.ಜಿ ಹಾರ್ಮೋನು ಎಂದರೆ ನಿಮಗೆ ಗೊತ್ತೇ?

ಹ್ಯೂಮನ್ ಕೊರಿಯೊನಿಕ್ ಗೊನಾಡೊಟ್ರೊಪಿನ್(ಎಚ್.ಸಿ.ಜಿ) ಹಾರ್ಮೋನು ಭ್ರೂಣವು ಗರ್ಭಕೋಶದ ಗೋಡೆಗೆ ಅಂಟಿಕೊಂಡಾಗ ಬಿಡುಗಡೆಯಾಗುವ ಮೂಲಕ ಯಶಸ್ವಿ ಸೇರ್ಪಡಿಕೆಯನ್ನು ಸೂಚಿಸುತ್ತದೆ. ಇದು ಗರ್ಭಕೋಶದ ಲೈನಿಂಗ್ ಮತ್ತು ಭ್ರೂಣದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.

ರಕ್ತ ಮತ್ತು ಮೂತ್ರದ ನಮೂನೆಗಳಲ್ಲಿ ಎಚ್.ಸಿ.ಜಿ.ಯ ಅಸ್ತಿತ್ವವು ಗರ್ಭಧಾರಣೆಯನ್ನು ಸೂಚಿಸುತ್ತದೆ.

ಎರಡು ವಾರಗಳ ಕಾಯುವ ಅವಧಿ ಎಂದರೇನು?

ಐವಿಎಫ್ ಪ್ರಕ್ರಿಯೆಯ ಸಂದರ್ಭದಲ್ಲಿ ಭ್ರೂಣವನ್ನು ವರ್ಗಾಯಿಸಿದ ನಂತರ ಭ್ರೂಣವು ಗರ್ಭಕೋಶದ ಗೋಡೆಗೆ ಅಂಟಿಕೊಳ್ಳಲು ಮತ್ತು ತಕ್ಕಷ್ಟು ಎಚ್.ಸಿ.ಜಿ.(ಹ್ಯೂಮನ್ ಕೊರಿಯೊನಿಕ್ ಗೊನಾಡೊಟ್ರೊಪಿನ್) ಉತ್ಪಾದಿಸಲು ಎರಡು ವಾರಗಳನ್ನು ತೆಗೆದುಕೊಳ್ಳುತ್ತದೆ ಅದನ್ನು ರಕ್ತದ ಪರೀಕ್ಷೆಯಲ್ಲಿ ವಿಶ್ಲೇಷಿಸಬಹುದು. ಭ್ರೂಣ ವರ್ಗಾವಣೆ ಮತ್ತು ರಕ್ತ ಪರೀಕ್ಷೆಯ ನಡುವಿನ ಅವಧಿಯು ಸಕಾರಾತ್ಮಕ ಗರ್ಭಧಾರಣೆಯನ್ನು ಸೂಚಿಸುತ್ತದೆ ಅದನ್ನು ಎರಡು ವಾರಗಳ ಕಾಯುವ ಅವಧಿ ಎಂದು ಕರೆಯಲಾಗುತ್ತದೆ.

ಐವಿಎಫ್ ನಂತರ ಗರ್ಭಧಾರಣೆ ಹೊಂದಲು ಎರಡು ವಾರಗಳು ಕಾಯುವುದು ಏಕೆ?

ಮೂತ್ರದ ಗರ್ಭಧಾರಣೆ ಪರೀಕ್ಷೆಯಲ್ಲಿ ಅಂದರೆ ಮನೆಯಲ್ಲಿ ಗರ್ಭಧಾರಣೆ ಪರೀಕ್ಷೆಯು ಮೂತ್ರದಲ್ಲಿ ಎಚ್.ಸಿ.ಜಿ. ಇರುವುದನ್ನು ಮಾತ್ರ ಪತ್ತೆ ಮಾಡುತ್ತದೆ. ಆದರೆ ರಕ್ತದ ಪರೀಕ್ಷೆಯು ದೇಹದಲ್ಲಿರುವ ಎಚ್.ಸಿ.ಜಿ. ಪ್ರಮಾಣವನ್ನು ವಿಶ್ಲೇಷಿಸಲು ನೆರವಾಗುತ್ತದೆ. ದೇಹದಲ್ಲಿರುವ ಎಚ್.ಸಿ.ಜಿ. ಪ್ರಮಾಣದೊದಿಗೆ ಹಾರ್ಮೋನು ಪ್ರಮಾಣದಲ್ಲಿ ಹೆಚ್ಚಳವು ಮುಖ್ಯವಾಗಿದ್ದು ಅದನ್ನು ರಕ್ತಪರೀಕ್ಷೆಯ ನೆರವಿಲ್ಲದೆ ಯಶಸ್ವಿ ಸೇರ್ಪಡಿಕೆಯ 11-14 ದಿನಗಳ ನಂತರ ಮಾತ್ರ ವಿಶ್ಲೇಷಿಸಬಹುದು. ಅಲ್ಲದೆ ಐವಿಎಫ್ ಅವಧಿಯಲ್ಲಿ ಎಚ್.ಸಿ.ಜಿ.ಯನ್ನು ಅಂಡಾಣು ಉತ್ತೇಜನಕ್ಕೆ ಬಳಸಲಾಗುತ್ತದೆ ಅದು ದೇಹವನ್ನು ಕೃತಕ ಎಚ್.ಸಿ.ಜಿ. ತ್ಯಜಿಸಲು 14-16 ದಿನಗಳು ತೆಗೆದುಕೊಳ್ಳುತ್ತದೆ. ಆದ್ದರಿಂದ ಭ್ರೂಣ ವರ್ಗಾವಣೆಯ ಎರಡು ವಾರಗಳ ನಂತರ ರಕ್ತಪರೀಕ್ಷೆಯಿಂದ ಮನೆಯಲ್ಲಿ ನಡೆಸುವ ಪರೀಕ್ಷೆಗಿಂತ ಖಚಿತವಾಗಿ ಗರ್ಭಧಾರಣೆಯನ್ನು ದೃಢೀಕರಿಸಿಕೊಳ್ಳುವ ಖಚಿತ ವಿಧಾನವಾಗಿದೆ. ಈ ರಕ್ತ ಪರೀಕ್ಷೆಯು ಹುಸಿ ಸಕಾರಾತ್ಮಕ ಮತ್ತು ಹುಸಿ ಋಣಾತ್ಮಕ ಫಲಿತಾಂಶಗಳನ್ನು ತಪ್ಪಿಸಲು ಕೂಡಾ ನೆರವಾಗುತ್ತದೆ.

ಭ್ರೂಣ ವರ್ಗಾವಣೆಯ ನಂತರ ನಿರೀಕ್ಷಿಸಬಹುದಾದ ಸಂಭನೀಯ ರೋಗಲಕ್ಷಣಗಳು:

– ಸ್ಪಾಟಿಂಗ್ ಮತ್ತು ರಕ್ತಸ್ರಾವ

– ಸೆಳೆತ ಮತ್ತು ಶ್ರೋಣಿಯ ನೋವು

– ಸ್ತನಗಳಲ್ಲಿ ನೋವು

– ಆಯಾಸ

– ವಾಕರಿಕೆ

– ಯೋನಿಯ ವಿಸರ್ಜನೆಯಲ್ಲಿ ಬದಲಾವಣೆ

– ಋತು ಚಕ್ರ ತಪ್ಪಿ ಹೋಗುವುದು

ರೋಗಲಕ್ಷಣಗಳ ಕುರಿತು ಅತಿಯಾಗಿ ಓದಬೇಡಿ. ರೋಗಲಕ್ಷಣಗಳು ಹೆಚ್ಚು ಗಂಭೀರವಲ್ಲ ಆದ್ದರಿಂದ ನೀವು ಆತಂಕ ಪಡಬೇಕಾಗಿಲ್ಲ. ರೋಗಲಕ್ಷಣಗಳು ಹೆಚ್ಚಿನ ತೊಂದರೆ ಉಂಟು ಮಾಡಿದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಐವಿಎಫ್ ನಂತರ ಭ್ರೂಣ ಸೇರ್ಪಡೆಗೆ ನೆರವಾಗಲು ನೀವೇನು ಮಾಡಬಹುದು?

ವರ್ಗಾವಣೆಯ ನಂತರ ಭ್ರೂಣದ ಸೇರ್ಪಡೆಯು ಭ್ರೂಣ ಮತ್ತು ಗರ್ಭಕೋಶದ ಲೈನಿಂಗ್ ಆಧರಿಸಿರುತ್ತದೆ ಮತ್ತು ಈ ಪ್ರಕ್ರಿಯೆಯನ್ನು ಉತ್ತಮಪಡಿಸಲು ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಅದು ಒತ್ತಡದಾಯಕ ಮತ್ತು ಭಾವನಾತ್ಮಕ, ದೈಹಿಕ ಮತ್ತು ಮಾನಸಿಕವಾಗಿ ಅತ್ಯಂತ ಸಂಕಷ್ಟದ ಸಮಯವಾಗಿದೆ. 2 ವಾರಗಳ ಕಾಯುವಿಕೆಗೆ ಕೆಲ ಸಲಹೆಗಳು ಇಲ್ಲಿವೆ:

– ಶ್ರಮವನ್ನು ತಪ್ಪಿಸಿ. ಭಾರ ಎತ್ತುವುದು, ಬಿಸಿನೀರಿನ ಸ್ನಾನ ಮತ್ತು ತೀವ್ರ ವ್ಯಾಯಾಮಗಳನ್ನು ತಪ್ಪಿಸಿ.

– ಮದ್ಯಪಾನ, ಧೂಮಪಾನ ಮತ್ತು ತಂಬಾಕಿನಿಂದ ದೂರವಿರಿ.

– ನಿಮ್ಮ ವೈದ್ಯರು ಹೇಳುವವರೆಗೆ ಯಾವುದೇ ಔಷಧ ತಪ್ಪಿಸುವುದು ಅಥವಾ ನಿಲ್ಲಿಸುವುದು ಬೇಡ.

– ಮೂಡ್ ಬದಲಾವಣೆ ಮತ್ತು ಹಾರ್ಮೋನು ಬದಲಾವಣೆ ಸಹಜವಾಗಿರುತ್ತದೆ. ಕೊಂಚ ಬಿಡುವು ತೆಗೆದುಕೊಳ್ಳಿ ಮತ್ತು ವಿಶ್ರಾಂತಿ ತೆಗೆದುಕೊಳ್ಳುವ ತಂತ್ರಗಳನ್ನು ಅಭ್ಯಾಸ ಮಾಡಿ.

– ಸ್ಪಾಇಂಗ್ ಮತ್ತು ರಕ್ತಸ್ರಾವ ಉಂಟಾಗಬಹುದು. ಅದಕ್ಕೆ ಭಯಪಡಬೇಡಿ. ನಿಮ್ಮ ವೈದ್ಯರನ್ನು ಸಂಪರ್ಕಿಸಿ.

– ಆರೋಗ್ಯಕರ ಆಹಾರ ಸೇವಿಸಿ ಮತ್ತು ಚೆನ್ನಾಗಿ ನಿದ್ರೆ ಮಾಡಿ.

– ಹುಸಿ ಫಲಿತಾಂಶಗಳನ್ನು ತಪ್ಪಿಸಲು 2 ವಾರಗಳು ಪೂರ್ಣವಾಗುವವರೆಗೆ ಮನೆಯಲ್ಲಿ ಗರ್ಭಧಾರಣೆ ಪರೀಕ್ಷೆ ತೆಗೆದುಕೊಳ್ಳುವುದನ್ನು ತಪ್ಪಿಸಿ.

– ನಿಮಗೆ ತೀವ್ರವಾದ ಶ್ರೋಣಿಯ ನೋವು ಮತ್ತು ಸೆಳೆತ ರಕ್ತಸ್ರಾವ ಅಥವಾ ರಕ್ತಸ್ರಾವವಿಲ್ಲದೆ ಅನುಭವಕ್ಕೆ ಬರಬಹುದು. ಅದು ಸಹಜವಾಗಿದೆ ಮತ್ತು ಆತಂಕ ಪಡಬೇಡಿ.

– ಲೈಂಗಿಕತೆಯಿಂದ ದೂರವಿರಿ. ಭ್ರೂಣ ವರ್ಗಾವಣೆಯ ನಂತರ ಲೈಂಗಿಕ ಸಂಬಂಧ ಒಳ್ಳೆಯ ಕ್ರಮವಲ್ಲ.

ಅಂತಿಮವಾಗಿ:

ಕೊನೆಯದಾಗಿ ಒಳ್ಳೆಯದಕ್ಕಾಗಿ ಭರವಸೆ ಇರಿಸಿ ಮತ್ತು ಕೆಟ್ಟದ್ದಕ್ಕೆ ಸಿದ್ಧವಾಗಿರಿ. ಎರಡು ವಾರಗಳ ಕಾಯುವಿಕೆಯನ್ನು ಫರ್ಟಿಲಿಟಿ ಚಿಕಿತ್ಸೆಯಲ್ಲಿ ಅತ್ಯಂತ ಕಠಿಣ ಭಾಗವೆಂದು ಪರಿಗಣಿಸಲಾಗುತ್ತದೆ ಮತ್ತು ಅದು ಅತ್ಯಂತ ಸೂಕ್ಷ್ಮವಾದ ಸಮಯ. ಆದರೆ ಈ ಕಾಯುವಿಕೆ ಕೂಡಾ ಅತ್ಯಂತ ಉಪಯುಕ್ತವಾದುದು.

ಮೇಲ್ಕಂಡ ಕೆಲ ಸಲಹೆಗಳು ನಿಮಗೆ ಎರಡು ವಾರಗಳ ಕಾಯುವ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನೆರವಾಗುತ್ತವೆ ಎಂಬ ಭರವಸೆ ನಮ್ಮದು.

Write a Comment

BOOK A FREE CONSULTATION