Blog
Uncategorized

ಐವಿಎಫ್ ಯಶಸ್ಸಿನ ಪ್ರಮಾಣ ಅರ್ಥ ಮಾಡಿಕೊಳ್ಳುವುದು

ಐವಿಎಫ್ ಯಶಸ್ಸಿನ ಪ್ರಮಾಣ ಅರ್ಥ ಮಾಡಿಕೊಳ್ಳುವುದು

Author: Dr D Maheswari, Consultant & Fertility Specialist, Oasis Fertility.

ತಂದೆ ತಾಯಿಯರಾಗುವುದನ್ನು ತಡ ಮಾಡಲು, ಜೀವನಶೈಲಿ ಅಂಶಗಳು, ಮಧುಮೇಹ, ಪಿಸಿಒಎಸ್ ಮತ್ತಿತರೆ ಹಾರ್ಮೋನು ಸಮಸ್ಯೆಗಳಿಂದ ಹಲವಾರು ದಂಪತಿಗಳು ಐವಿಎಫ್ ಚಿಕಿತ್ಸೆ ಪಡೆದುಕೊಳ್ಳಲು ಬಯಸುತ್ತಾರೆ. ಆದರೆ ಎಲ್ಲರೂ ಐವಿಎಫ್ ಯಶಸ್ಸಿನ ಪ್ರಮಾಣವನ್ನು ಮತ್ತು ಯಶಸ್ಸಿನ ಪ್ರಮಾಣ ನಿರ್ಧರಿಸುವ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ದಂಪತಿಯು ಐವಿಎಫ್ ಪಡೆದುಕೊಳ್ಳುವ ಮುನ್ನ ದಂಪತಿಗಳು ಐವಿಎಫ್ ಪ್ರಕ್ರಿಯೆ ಕುರಿತು ಮಾತ್ರವಲ್ಲ ಫರ್ಟಿಲಿಟಿ ಕ್ಲಿನಿಕ್ ನೀಡುತ್ತಿರುವ ಯಶಸ್ಸಿನ ಪ್ರಮಾಣವನ್ನೂ ಅರಿಯಬೇಕು. ಗುಣಮಟ್ಟದ ಅಂಡಾಣು ಮತ್ತು ವೀರ್ಯ, ಭ್ರೂಣದ ಗುಣಮಟ್ಟ, ಐವಿಎಫ್ ಲ್ಯಾಬ್ ಮಾನದಂಡಗಳು, ಕ್ಲಿನಿಷಿಯನ್ ಮತ್ತು ಎಂಬ್ರಿಯಾಲಜಿಸ್ಟ್ ಗಳ ಪರಿಣಿತಿ, ದಂಪತಿಯ ಜೀವನಶೈಲಿ ಇತ್ಯಾದಿಗಳು ಒಳಗೊಂಡು ಹಲವಾರು ಅಂಶಗಳು ಯಶಸ್ಸಿನ ಪ್ರಮಾಣಕ್ಕೆ ಪ್ರಭಾವ ಬೀರುತ್ತವೆ. ಐವಿಎಫ್ ಯಶಸ್ಸಿನ ಪ್ರಮಾಣಕ್ಕೆ ಕೊಡುಗೆ ನೀಡುವ ಪ್ರತಿಯೊಂದು ಅಂಶದ ಬಗ್ಗೆಯೂ ನಾವು ತಿಳಿಯೋಣ.

ಇನ್ ವಿಟ್ರೊ ಫರ್ಟಿಲೈಸೇಷನ್ ಪ್ರಕ್ರಿಯೆ ಎಂದರೇನು?

ಐವಿಎಫ್/ಇನ್ ವಿಟ್ರೊ ಫರ್ಟಿಲೈಸೇಷನ್ ಎನ್ನುವುದು ದಂಪತಿಗಳಿಗೆ ಪುರುಷರ ಬಂಜೆತನ, ಎಂಡೋಮೆಟ್ರಿಯೋಸಿಸ್, ಟ್ಯೂಬ್ ನಲ್ಲಿ ತಡೆ, ಕಡಿಮೆ ಅಂಡಾಣು ಸಂಗ್ರಹ ಮತ್ತಿತರೆ ಫಲವಂತಿಕೆಯ ಸಮಸ್ಯೆಗಳಿಂದ ಸಹಜವಾಗಿ ಅವರು ಗರ್ಭಧಾರಣೆ ಹೊಂದಲು ಸಾಧ್ಯವಾಗದೇ ಇದ್ದಾಗ ನೆರವಾಗುವ ಅಸಿಸ್ಟೆಡ್ ರೀಪ್ರೊಡಕ್ಟಿವ್ ತಂತ್ರವಾಗಿದೆ. ಈ ಪ್ರಕ್ರಿಯೆಯಲ್ಲಿ ಕೆಲ ಹಾರ್ಮೋನುಗಳ ಇಂಜೆಕ್ಷನ್ ಗಳ ಮೂಲಕ ಅಂಡಾಣುಗಳನ್ನು ಸ್ತ್ರೀ ಮೂಲಕ ಪಡೆಯಲಾಗುತ್ತದೆ ಮತ್ತು ಪುರುಷ ಸಂಗಾತಿಯ ವೀರ್ಯದೊಂದಿಗೆ ಸಂಯೋಜಿಸುವ ಮೂಲಕ ಭ್ರೂಣ ಉತ್ಪಾದಿಸಲಾಗುತ್ತದೆ ಅದನ್ನು ಮತ್ತೆ ಇನ್ನಷ್ಟು ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಹಿಳೆಯ ಗರ್ಭಕೋಶದಲ್ಲಿ ಭ್ರೂಣ ರೂಪುಗೊಂಡ 3ರಿಂದ 5 ದಿನಗಳಲ್ಲಿ ಸೇರಿಸಲಾಗುತ್ತದೆ, ಇದನ್ನು ಹೊಸ ಭ್ರೂಣ ವರ್ಗಾವಣೆ ಎನ್ನಲಾಗುತ್ತದೆ. ಒಂದು ತಿಂಗಳ ನಂತರ ಭ್ರೂಣವನ್ನೂ ಘನೀಕರಿಸಿದಾಗ ಮತ್ತು ಮಹಿಳೆಯ ಗರ್ಭಕೋಶಕ್ಕೆ ವರ್ಗಾಯಿಸಿದಾಗ ಅದನ್ನು ಘನೀಕರಿಸಿದ ಭ್ರೂಣ ವರ್ಗಾವಣೆ ಎನ್ನಲಾಗುತ್ತದೆ.ಘನೀಕರಿಸಿದ ಭ್ರೂಣ ವರ್ಗಾವಣೆ ಹೊಸ ಭ್ರೂಣ ವರ್ಗಾವಣೆಗಿಂತ ಉತ್ತಮ ಯಶಸ್ಸಿನ ಪ್ರಮಾಣ ಇರುತ್ತದೆ.

ಒಂದು ಭ್ರೂಣ ವರ್ಗಾವಣೆಯಂತಹ ಸುಧಾರಿತ ತಂತ್ರಜ್ಞಾನಗಳಲ್ಲಿ ಒಂದು ಆರೋಗ್ಯಕರ ಭ್ರೂಣವನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ವರ್ಗಾವಣೆ ಮಾಡುವ ಮೂಲಕ ಯಶಸ್ವಿ ಗರ್ಭಧಾರಣೆ ಸಾಧ್ಯವಾಗಿಸಲಾಗುತ್ತದೆ ಮತ್ತು ತಾಯಿ ಮತ್ತು ಮಗು ಇಬ್ಬರಿಗೂ ಹಲವು ಗರ್ಭಧಾರಣೆಗಳ ತೊಂದರೆ ಮತ್ತು ಅದಕ್ಕೆ ಸಂಬಂಧಿಸಿದ ಸಂಕೀರ್ಣತೆಗಳಿಲ್ಲದೆ ಐವಿಎಫ್ ಮೂಲಕ ಒಂದು ಆರೋಗ್ಯಕರ ಮಗುವಿನ ಹೆರಿಗೆ ಸಾಧ್ಯವಾಗಿಸಲಾಗುತ್ತದೆ. ಹಲವಾರು ಲಕ್ಷಾಂತರ ದಂಪತಿಗಳು ಐವಿಎಫ್ ಮೂಲಕ ತಂದೆ ತಾಯಿಯರಾಗುವ ಆನಂದ ಪಡೆದಿದ್ದಾರೆ.

ಐವಿಎಫ್ ಯಶಸ್ಸಿನ ಪ್ರಮಾಣಕ್ಕೆ ಪರಿಣಾಮ ಬೀರುವ ಅಂಶಗಳು:

1.ಮಹಿಳೆಯ ವಯಸ್ಸು:

32 ವರ್ಷಗಳ ವಯಸ್ಸಿನ ನಂತರ ಮಹಿಳೆಯರಲ್ಲಿ ಫಲವಂತಿಕೆ ಕುಸಿಯುವುದರಿಂದ ಐವಿಎಫ್ ಯಶಸ್ಸಿನ ಪ್ರಮಾಣ ಊಹಿಸುವಲ್ಲಿ ಮಹಿಳೆಯ ವಯಸ್ಸು ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಮತ್ತು ಅದು 37ರ ನಂತರ ತೀವ್ರ ಕುಸಿತ ಉಂಟಾಗುತ್ತದೆ. ಅಂಡಾಣುಗಳ ಗುಣಮಟ್ಟ ಮತ್ತು ಪ್ರಮಾಣ ಕುಸಿಯುವುದು ಗರ್ಭಪಾತದ ಹೆಚ್ಚಿನ ರಿಸ್ಕ್ ಮತ್ತು ಮಗುವಿಗೆ ಜನ್ಮಜಾತ ಅಸಹಜತೆಗಳಿಗೆ ಕಾರಣವಾಗುತ್ತದೆ. ಹೆಚ್ಚಾಗುವ ವಿವಾಹದ ವಯಸ್ಸಿನಿಂದ ಐವಿಎಫ್ ಫಲಿತಾಂಶಗಳು ಕೂಡಾ ಋಣಾತ್ಮಕವಾಗಿ ಪರಿಣಾಮ ಬೀರುವ ಮೂಲಕ ಗರ್ಭಪಾತಗಳು ಮತ್ತು ಗರ್ಭಧಾರಣೆಯ ತೊಂದರೆಗಳನ್ನು ಉಂಟು ಮಾಡುತ್ತವೆ.

2. ಬಂಜೆತನದ ಕಾರಣ:

ಹಲವಾರು ಅಧ್ಯಯನಗಳು ಹೇಳುವಂತೆ ಬಂಜೆತನದ ಕಾರಣ ಕೂಡಾ ಐವಿಎಫ್ ಚಿಕಿತ್ಸೆಯ ಯಶಸ್ಸು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

3. ಮಹಿಳೆಯರ ತೂಕ:

ಅತಿಯಾದ ತೂಕ/ಬೊಜ್ಜಿನ ಮಹಿಳೆಯರು ಐವಿಎಫ್ ಚಿಕಿತ್ಸೆಯ ಪ್ರಕ್ರಿಯೆಯ ಅವಧಿಯಲ್ಲಿ ದುರ್ಬಲ ಪ್ರತಿಕ್ರಿಯೆ ಪಡೆಯುವ ಸಾಧ್ಯತೆ ಇರುತ್ತದೆ ಮತ್ತು ಕೆಲವೇ ಅಂಡಾಣುಗಳನ್ನು ಅವರಿಂದ ಪಡೆಯಲು ಸಾಧ್ಯವಾಗುತ್ತದೆ. ಬೊಜ್ಜು ಕಡಿಮೆ ಫಲವಂತಿಕೆಯ ಪ್ರಮಾಣ ಮತ್ತು ಹೆಚ್ಚಿನ ಗರ್ಭಪಾತದ ಪ್ರಮಾಣ ಉಂಟು ಮಾಡಬಹುದು. ತೂಕ ನಷ್ಟವು ಐವಿಎಫ್ ಫಲಿತಾಂಶ ಸುಧಾರಿಸುವಲ್ಲಿ ನೆರವಾಗಬಹುದು.

4. ಅಂಡಾಣು, ವೀರ್ಯಾಣು ಮತ್ತು ಭ್ರೂಣದ ಗುಣಮಟ್ಟ:

ಸಕಾರಾತ್ಮಕ ಐವಿಎಫ್ ಫಲಿತಾಂಶಕ್ಕೆ ಗ್ಯಾಮೀಟ್ ಗಳ ಗುಣಮಟ್ಟ ಅಂದರೆ ಅಂಡಾಣು ಮತ್ತು ವೀರ್ಯದ ಗುಣಮಟ್ಟ ಮತ್ತು ಅಂಡಾಣು ಹಾಗೂ ವೀರ್ಯದ ಸಂಯೋಜನೆಯಿಂದ ರೂಪುಗೊಂಡ ಭ್ರೂಣದ ಗುಣಮಟ್ಟ ಕೂಡಾ ಮುಖ್ಯವಾಗುತ್ತದೆ. ಮೈಕ್ರೊಫ್ಲೂಯಿಡ್ಸ್ ರೀತಿಯ ಸುಧಾರಿತ ವೀರ್ಯ ಆಯ್ಕೆ ವಿಧಾನಗಳಿದ್ದು ಅವು ಐವಿಎಫ್ ಪ್ರಕ್ರಿಯೆಗೆ ಅತ್ಯುತ್ತಮ ಗುಣಮಟ್ಟದ ವೀರ್ಯದ ಆಯ್ಕೆಯಲ್ಲಿ ನೆರವಾಗಬಲ್ಲವು. ದುರ್ಬಲ ಅಂಡಾಣುವಿನ ಗುಣಮಟ್ಟವು ಯಶಸ್ಸಿನ ಪ್ರಮಾಣದ ಮೇಲೆ ಪರಿಣಾಮ ಬೀರಬಲ್ಲದು ಮತ್ತು ಕೆಲವು ಪ್ರಕರಣಗಳಲ್ಲಿ, ಐವಿಎಫ್ ಯಶಸ್ಸಿನ ಪ್ರಮಾಣ ಸುಧಾರಿಸಲು ದಾನಿಯ ಅಂಡಾಣುಗಳಿಗೆ ಆದ್ಯತೆ ನೀಡಲಾಗುತ್ತದೆ.

35 ವರ್ಷಗಳು ಮೇಲ್ಪಟ್ಟ ಮಹಿಳೆಯರಲ್ಲಿ ಅಥವಾ ಅನಿವಂಶಿಕ ಸಮಸ್ಯೆಗಳುಳ್ಳವರಲ್ಲಿ ಗರ್ಭಪಾತದ ತೊಂದರೆ ಕಡಿಮೆ ಮಾಡಲು ಸುಧಾರಿತ ತಂತ್ರಜ್ಞಾನಗಳಾದ ಪಿಜಿಟಿ(ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್) ಬಳಸುವ ಮೂಲಕ ಅತ್ಯುತ್ತಮ ಭ್ರೂಣವನ್ನು ವರ್ಗಾವಣೆಗೆ ಆಯ್ಕೆ ಮಾಡಲಾಗುತ್ತದೆ.

5. ಜೀವನಶೈಲಿ ಅಂಶಗಳು

ಧೂಮಪಾನ, ಮದ್ಯಪಾನ ಮತ್ತು ಜಂಕ್ ಫುಡ್ ಸೇವನೆಯು ಐವಿಎಫ್ ಫಲಿತಾಂಶಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಲ್ಲವು.

6. ಎಂಡೋಮೆಟ್ರಿಯಲ್ ದಪ್ಪ ಮತ್ತು ಐವಿಎಫ್ ಯಶಸ್ಸಿನ ಪ್ರಮಾಣ:

ಎಂಡೋಮೆಟ್ರಿಯಂ/ಗರ್ಭಕೋಶದ ಲೈನಿಂಗ್ ದಪ್ಪವು ಯಶಸ್ವಿ ಗರ್ಭಧಾರಣೆಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತದೆ. ಎಂಡೋಮೆಟ್ರಿಯಂ 7 ಎಂಎಂಗಿಂತ ಕಡಿಮೆ ಇದ್ದರೆ ಭ್ರೂಣ ಸೇರ್ಪಡಿಕೆ ಮತ್ತು ಗರ್ಭಧಾರಣೆಯ ಯಶಸ್ಸಿನ ಪ್ರಮಾಣ ಕಡಿಮೆ ಮಾಡುತ್ತದೆ.

ಭಾರತದಲ್ಲಿ ಐವಿಎಫ್ ಯಶಸ್ಸಿನ ಪ್ರಮಾಣ ಎಷ್ಟು?

ಐವಿಎಫ್ ಯಶಸ್ಸಿನ ಪ್ರಮಾಣ ದಂಪತಿಯಿಂದ ದಂಪತಿಗೆ ಅವರ ವಯಸ್ಸು, ಬಿಎಂಐ, ಬಂಜೆತನದ ಕಾರಣ, ಜೀವನಶೈಲಿ ಇತ್ಯಾದಿಗಳಿಂದ ವ್ಯತ್ಯಾಸಗೊಳ್ಳಬಹುದು. ಭಾರತದಲ್ಲಿ ಓಯಸಿಸ್ ಫರ್ಟಿಲಿಟಿಯಲ್ಲಿ ಐವಿಎಫ್ ಯಶಸ್ಸಿನ ಪ್ರಮಾಣವು ಅಲ್ಲಿನ ಅತ್ಯಾಧುನಿಕ ಐವಿಎಫ್ ಲ್ಯಾಬ್ ಗಳು, ಪರಿಣಿತ ಫರ್ಟಿಲಿಟಿ ಸ್ಪೆಷಲಿಸ್ಟ್ ಗಳು ಮತ್ತು ಎಂಬ್ರಿಯಾಲಜಿಸ್ಟ್ ಗಳಿಂದ ಶೇ.69ರಷ್ಟಿದೆ.

 

ವಯಸ್ಸಿನಿಂದ ಐವಿಎಫ್ ಯಶಸ್ಸಿನ ಪ್ರಮಾಣ:

ವಯಸ್ಸು ಐವಿಎಫ್ ಚಿಕಿತ್ಸಾ ಪ್ರಕ್ರಿಯೆ ಫಲಿತಾಂಶದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಓಯಸಿಸ್ ಫರ್ಟಿಲಿಟಿಯಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಐವಿಎಫ್ ಯಶಸ್ಸಿನ ಪ್ರಮಾಣ ಶೇ.60ಕ್ಕಿಂತ ಹೆಚ್ಚಿದ್ದು 35 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರಲ್ಲಿ ಯಶಸ್ಸಿನ ಪ್ರಮಾಣ ಶೆ.50ರಷ್ಟಿದೆ.

ಐವಿಎಫ್ ಚಿಕಿತ್ಸಾ ಪ್ರಕ್ರಿಯೆ ಕೈಗೊಳ್ಳುವ ಮುನ್ನ ಕೈಗೊಳ್ಳಬೇಕಾದ ಜೀವನಶೈಲಿ ಬದಲಾವಣೆಗಳು:

– ತೂಕ ನಿರ್ವಹಣೆ:

ತೂಕ ಕಡಿಮೆ ಮಾಡುವುದು ಐವಿಎಫ್ ಯಶಸ್ಸಿನ ಪ್ರಮಾಣ ಸುಧಾರಿಸುವಲ್ಲಿ ನೆರವಾಗಬಲ್ಲದು. ನಿಮ್ಮ ಬಿಎಂಐ ತಿಳಿಯಿರಿ ಮತ್ತು ಐವಿಎಫ್ ಕೈಗೊಳ್ಳುವ ಮುನ್ನ ತೂಕ ನಷ್ಟಕ್ಕೆ ಆದ್ಯತೆ ನೀಡಿ.

– ಆರೋಗ್ಯಕರ ಪಥ್ಯ

ಆರೋಗ್ಯಕರ ಪಥ್ಯವು ಯಶಸ್ವಿ ಗರ್ಭಧಾರಣೆಯನ್ನು ಸಾಧಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಬಲ್ಲದು.

– ವ್ಯಾಯಾಮ

ನಿಯಮಿತ ವ್ಯಾಯಾಮವು ಒಟ್ಟಾರೆ ಆರೋಗ್ಯ ಸುಧಾರಿಸಲು ಅತ್ಯಂತ ಅಗತ್ಯವಾಗಿದೆ ಮತ್ತು ಉತ್ತಮ ಐವಿಎಫ್ ಯಶಸ್ಸಿನ ಪ್ರಮಾಣಕ್ಕೆ ನೆರವಾಗುತ್ತದೆ.

– ಒತ್ತಡ ನಿರ್ವಹಣೆ:

ಒತ್ತಡವು ಋತುಚಕ್ರದ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು ಮತ್ತು ದುರ್ಬಲ ಐವಿಎಫ್ ಫಲಿತಾಂಶಕ್ಕೆ ಕಾರಣವಾಗಬಲ್ಲದು. ಒಮ್ಮೆ ನೀವು ಐವಿಎಫ್ ಪಡೆಯಲು ನಿರ್ಧರಿಸಿದ ನಂತರ ನೀವು ಶಾಂತವಾಗಿರಬೇಕು ಮತ್ತು ಒತ್ತಡ ಮುಕ್ತ ಮನಸ್ಸು ಹೊಂದಿರಬೇಕು. ಆತಂಕ, ಭಯ ಅಥವಾ ಖಿನ್ನತೆಯು ಗರ್ಭಧಾರಣೆಯ ಸಾಧ್ಯತೆ ಕಡಿಮೆ ಮಾಡಬಲ್ಲದು.

ಸಹಜವಾಗಿ ಅಥವಾ ಐವಿಎಫ್ ಮೂಲಕ ತಂದೆ ತಾಯಿಯರಾಗುವುದು ಅದ್ಭುತ ಪ್ರಯಾಣವಾಗಿದೆ. ನೀವು ಐವಿಎಫ್ ಚಿಕಿತ್ಸೆ ಹೊಂದುವ ಮುನ್ನ ಇನ್ ವಿಟ್ರೊ ಫರ್ಟಿಲೈಸೇಷನ್ ಪ್ರಕ್ರಿಯೆ ಕುರಿತು ಸ್ಪಷ್ಟತೆ ಪಡೆಯುವುದು ಬಹಳ ಮುಖ್ಯ. ಅಷ್ಟೇ ಅಲ್ಲದೆ ಸಕಾರಾತ್ಮಕ ಮನಸ್ಥಿತಿ ಮತ್ತು ವಾಸ್ತವವಾದ ನಿರೀಕ್ಷೆಗಳು ನಿಮಗೆ ಚಿಕಿತ್ಸಾ ಪ್ರಕ್ರಿಯೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಒಳಗಾಗಲು ನೆರವಾಗುತ್ತದೆ. ಐವಿಎಫ್ ಯಶಸ್ಸಿನ ಪ್ರಮಾಣಕ್ಕೆ ಬಂದಾಗ ಜೀವನಶೈಲಿ ಅಂಶಗಳು ಬಹಳ ಮುಖ್ಯವಾಗಿವೆ, ಧೂಮಪಾನ, ಮದ್ಯಪಾನ ಕಡಿಮೆ ಮಾಡುವುದು ಮತ್ತು ಆರೋಗ್ಯಕರ ಪಥ್ಯ ಹೊಂದುವ ಮೂಲಕ ನಿಮ್ಮ ಜೀವನಶೈಲಿಯನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಬಹಳ ಮುಖ್ಯ. ಹ್ಯಾಪಿ ಪೇರೆಂಟ್ ಹುಡ್! ನಿಮ್ಮ ಆತಂಕಗಳನ್ನು ದೂರವಿರಿಸಿ ಮತ್ತು ನಿಮ್ಮ ವೈದ್ಯರು ಶಿಫಾರಸು ಮಾಡಿದರೆ ವಿಶ್ವಾಸದಿಂದ ಐವಿಎಫ್ ಗೆ ಒಳಗಾಗಿರಿ!

Write a Comment

BOOK A FREE CONSULTATION