Blog
Uncategorized

ಋತುಚಕ್ರ, ಪಿಸಿಒಎಸ್ ಮತ್ತು ಫಲವಂತಿಕೆಯಲ್ಲಿ ಸೀಡ್ ಸೈಕ್ಲಿಂಗ್ ನ ಮಹತ್ವ

ಋತುಚಕ್ರ, ಪಿಸಿಒಎಸ್ ಮತ್ತು ಫಲವಂತಿಕೆಯಲ್ಲಿ ಸೀಡ್ ಸೈಕ್ಲಿಂಗ್ ನ ಮಹತ್ವ

Author: Dr. Sai Manasa Darla, Consultant, Fertility Specialist &  Laparoscopic Surgeon

ಹಾರ್ಮೋನುಗಳು ಮಾನವ ವ್ಯವಸ್ಥೆಯ ವ್ಯವಸ್ಥಿತ ಕಾರ್ಯ ನಿರ್ವಹಣೆಯ ಅವಿಭಾಜ್ಯ ಅಂಗವಾಗಿವೆ. ಅವು ಮಾನವ ಸಂತಾನೋತ್ಪಾದನೆಯ ವ್ಯವಸ್ಥೆಯ ಸೂಕ್ತ ರೀತಿಯ ಕಾರ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಹಿಳಾ ಸಂತಾನೋತ್ಪಾದನೆಯ ವ್ಯವಸ್ಥೆ ಮತ್ತು ಋತುಚಕ್ರವು ಹಾರ್ಮೋನುಗಳ ಪ್ರಭಾವಕ್ಕೆ ಒಳಗಾಗುತ್ತವೆ ಮತ್ತು ಯಾವುದೇ ಅಡೆತಡೆಯು ಹಾರ್ಮೋನುಗಳ ಸೂಕ್ಷ್ಮ ಸಮತೋಲನದ ಮೇಲೆ ಪರಿಣಾಮ ಬೀರಿ ಫಲವಂತಿಕೆಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ.

ಹಾರ್ಮೋನಿನ ಅಸಮತೋಲನವು ಮಹಿಳೆಯರಲ್ಲಿ ಬಂಜೆತನಕ್ಕೆ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಸುಧಾರಿತ ಔಷಧವು ಹಾರ್ಮೋನುಗಳ ಅಸಮತೋಲನಗಳಿಗೆ ಚಿಕಿತ್ಸೆ ನೀಡಬಲ್ಲುದಾದರೂ ಸಮಗ್ರವಾದ ವಿಧಾನಗಳು ಎಂಡೋಕ್ರೈನ್ ವ್ಯವಸ್ಥೆ ಮತ್ತು ಒಟ್ಟಾರೆ ಮಾನವ ವ್ಯವಸ್ಥೆಯನ್ನು ಗುಣಪಡಿಸುವುದರಲ್ಲಿ ನೆರವಾಗುತ್ತವೆ, ಅವು ತಮ್ಮದೇ ಆದ ಅನುಕೂಲಗಳನ್ನು ಹೊಂದಿವೆ. ಅಂತಹ ಒಂದು ಸಮಗ್ರ ವಿಧಾನವೆಂದರೆ ಇತ್ತೀಚಿನ ದಿನಗಳಲ್ಲಿ ಗಮನ ಸೆಳೆಯುತ್ತಿರುವ “ಸೀಡ್ ಸೈಕ್ಲಿಂಗ್” ಎಂಬ ಪರಿಕಲ್ಪನೆ. ಸೀಡ್ ಸೈಕ್ಲಿಂಗ್ ಎಂದರೇನು ಮತ್ತು ಅದು ಮತ್ತೊಂದು ಟ್ರೆಂಡ್ ಅಷ್ಟೇನೋ ಅಥವಾ ಅದು ಉಪಯುಕ್ತವಾಗುತ್ತದೆಯೇ ಎಂದು ನೋಡೋಣ.

ಸೀಡ್ ಸೈಕ್ಲಿಂಗ್ ಅಂದರೆ:

ಸೀಡ್ ಸೈಕ್ಲಿಂಗ್ ನಲ್ಲಿ ಅಗಸೆ, ಕುಂಬಳಕಾಯ, ಸೂರ್ಯಕಾಂತಿ ಮತ್ತು ಎಳ್ಳು ಬೀಜಗಳನ್ನು ಋತುಚಕ್ರದ ವಿವಿಧ ಹಂತಗಳಲ್ಲಿ ಸೇವಿಸುವುದು ಒಳಗೊಂಡಿರುತ್ತದೆ. ಅಂದರೆ ಕೋಶಕಗಳು ಮತ್ತು ಲ್ಯೂಟೆಲ್ ಗಳು ರೂಪುಗೊಳ್ಳುವ ಹಂತ. ಇದು ಹಾರ್ಮೋನುಗಳ ಸಮತೋಲನಕ್ಕೆ ನೆರವಾಗುತ್ತದೆ ಮತ್ತು ಮಹಿಳೆಯರಲ್ಲಿ ಫಲವಂತಿಕೆ ಸುಧಾರಿಸುತ್ತದೆ.

ಸೀಡ್ ಸೈಕ್ಲಿಂಗ್ ಅನುಕೂಲಗಳು

ಅನಿಯಮಿತ ಋತುಚಕ್ರಗಳನ್ನು ನಿಯಂತ್ರಿಸುತ್ತದೆ

– ಪಿಸಿಒಎಸ್ ಮತ್ತು ಸಂಬಂಧಿತ ರೋಗಲಕ್ಷಣಗಳಲ್ಲಿ ನೆರವಾಗುತ್ತದೆ

– ಪಿಎಂಎಸ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ

– ಹಾರ್ಮೋನುಗಳ ಅಸಮತೋಲನ ಕಡಿಮೆ ಮಾಡುತ್ತದೆ

– ಪೂರ್ವ/ಅವಧಿಯ ಮೆನೋಪಾಸ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ

– ಕಾಮಾಸಕ್ತಿ ಹೆಚ್ಚಿಸುತ್ತದೆ

ಸೀಡ್ ಸೈಕ್ಲಿಂಗ್ ಹೇಗೆ ಕೆಲಸ ಮಾಡುತ್ತದೆ?

ಋತುಚಕ್ರಕ್ಕೆ ಸೀಡ್ ಸೈಕ್ಲಿಂಗ್ ಮತ್ತು ಪಿಸಿಒಎಸ್ ಗೆ ಸೀಡ್ ಸೈಕ್ಲಿಂಗ್ ಸತತವಾಗಿ ಬದಲಾಗುತ್ತಿರುವ ಋತುಚಕ್ರದಿಂದ ಬದಲಾಗುವ ಪ್ರಮುಖ ಹಾರ್ಮೋನುಗಳ(ಎಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್)ಗಳ ಸಮತೋಲನಕ್ಕೆ ಬೆಂಬಲಿಸುವಲ್ಲಿ ಅವುಗಳ ಪರಿಣಾಮಕಾರಿತ್ವಕ್ಕೆ ವೇಗ ಪಡೆಯುತ್ತಿವೆ.

ಸೀಡ್ ಸೈಕ್ಲಿಂಗ್ ಅನುಕೂಲಗಳನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಋತುಚಕ್ರ ಮತ್ತು ಅದರ ಹಂತಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಸರಾಸರಿ ಋತುಚಕ್ರವು 28 ದಿನಗಳು ಇರುತ್ತದೆ ಮತ್ತು 2 ಹಂತಗಳಿರುತ್ತದೆ.

ಋತುಚಕ್ರಗಳ ಹಂತಗಳು ಹೀಗಿರುತ್ತವೆ:

ಕೋಶಕಗಳ ಹಂತ:

ಇದು ಮೊದಲ ಹಂತವಾಗಿದ್ದು ಮುಟ್ಟಿನ ಮೊದಲ ದಿನದಿಂದ ಅಂಡೋತ್ಪತ್ತಿಯ ದಿನದವರೆಗೆ ಲೆಕ್ಕ ಹಾಕಲಾಗುತ್ತದೆ ಅಂದರೆ ಋತುಚಕ್ರದ ಮೊದಲ ಎರಡು ವಾರಗಳು(1-14 ದಿನ). ಈ ಹಂತದಲ್ಲಿ ಗರ್ಭಕೋಶದ ಒಳಪದರ ಬೀಳುತ್ತದೆ ಮತ್ತು ಕೋಶಕ-ಪ್ರಚೋದನೆಯ ಹಾರ್ಮೋನು (ಎಫ್.ಎಸ್.ಎಚ್.) ಅಂಡಾಶಯಗಳನ್ನು ಪ್ರಚೋದಿಸುತ್ತದೆ ಮತ್ತು ಅಂಡಾಣು ಬೆಳವಣಿಗೆ ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯು ಎಸ್ಟ್ರೋಜೆನ್ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆರೋಗ್ಯಕರ ಎಸ್ಟ್ರೋಜೆನ್ ಮಟ್ಟವು ಗರ್ಭಕೋಶದ ಒಳಪದೆ ನಿರ್ಮಿಸುವಲ್ಲಿ ಮತ್ತು ಲೈಂಗಿಕ ಬಯಕೆ ಉತ್ತೇಜಿಸುವುದರಲ್ಲಿ ನೆರವಾಗುತ್ತದೆ.

ಲ್ಯುಟಿಯಲ್ ಹಂತ:

ಋತುಚಕ್ರದ 15-28ನೇ ದಿನವನ್ನು ಲ್ಯುಟಿಯಲ್ ಹಂತ ಎಂದು ಕರೆಯಲಾಗುತ್ತದೆ ಅಂದರೆ ಇದು ಅಂಡೋತ್ಪತ್ತಿಯಿಂದ ಪ್ರಾರಂಭವಾಗಿ ಮುಂದಿನ ಋತುಚಕ್ರದವರೆಗೆ ಇರುತ್ತದೆ. ಪ್ರೊಜೆಸ್ಟೆರೋನ್  ಲ್ಯುಟಿಯಲ್ ಹಂತದಲ್ಲಿ ಪ್ರಬಾವಿ ಹಾರ್ಮೋನು. ಅಂಡೋತ್ಪತ್ತಿಯ ನಂತರ ಪ್ರೊಜೆಸ್ಟೆರೋನ್ ಮಟ್ಟವು ಹೆಚ್ಚಾಗಿ 1ನೇ ಟ್ರೈಮಿಸ್ಟರ್ ನಲ್ಲಿ ಭ್ರೂಣ ಸೇರ್ಪಡಿಕೆ ಮತ್ತು ಗರ್ಭಧಾರಣೆ

ಕಾಪಾಡಲು ನೆರವಾಗುತ್ತದೆ.

ಅಲ್ಲದೆ ಸೀಡ್ ಸೈಕ್ಲಿಂಗ್ ಅನುಕೂಲಗಳನ್ನು ಪೋಷಕಾಂಶಗಳಾದ ಲಿಗ್ನನ್ ಗಳು, ನಾರುಗಳು, ಒಮೇಗಾ-3 ಫ್ಯಾಟಿ ಆಮ್ಲಗಳು, ವಿಟಮಿನ್ ಗಳು ಮತ್ತು ಮಿನರಲ್ ಗಳ ಮೂಲಕ ಆಗುತ್ತದೆ. ಈ ಪೋಷಕಾಂಶಗಳು ಲೈಂಗಿಕ ಹಾರ್ಮೋನುಗಳ ಅಂದರೆ ಎಸ್ಟ್ರೋಜೆನ್ ಮತ್ತು ಪ್ರೊಜೆಸ್ಟೆರೋನ್ ಸಮತೋಲನಕ್ಕೆ ನೆರವಾಗುತ್ತವೆ ಮತ್ತು ಉರಿಯೂತ ಕಡಿಮೆ ಮಾಡುತ್ತದೆ.

ಸೀಡ್ ಸೈಕ್ಲಿಂಗ್ ಪ್ರಯೋಜನಗಳು ಏನು?

  1. ಋತುಚಕ್ರಕ್ಕೆ ಸೀಡ್ ಸೈಕ್ಲಿಂಗ್

ಋತುಚಕ್ರಕ್ಕೆ ಸೀಡ್ ಸೈಕ್ಲಿಂಗ್ ಪರಿಣಾಮಕಾರಿ ಮತ್ತು ನೈಸರ್ಗಿಕ ವಿಧಾನವಾಗಿದ್ದು ಅನಿಯಮಿತ ಋತುಚಕ್ರವನ್ನು ಸರಿಪಡಿಸುತ್ತದೆ. ಕೋಶಕಗಳ ಹಂತದಲ್ಲಿ ಅಗಸೆ ಮತ್ತು ಕುಂಬಳಕಾಯಿ ಬೀಜಗಳನ್ನು ಸೇವಿಸಿ. ಅಗಸೆ ಬೀಜಗಳಲ್ಲಿರುವ ಲಿಗ್ನನ್ ಗಳು ಮತ್ತ ಫೈಟೊಎಸ್ಟ್ರೋಜೆನ್ ಗಳು ಎಸ್ಟ್ರೋಜೆನ್ ರೀತಿಯಲ್ಲಿ ವರ್ತಿಸಿ ಎಸ್ಟ್ರೋಜೆನ್ ಮಟ್ಟವನ್ನು ಸಮತೋಲನಗೊಳಿಸುತ್ತವೆ. ಅಗಸೆ ಬೀಜಗಳಿಗೆ ಲ್ಯುಟಿಯಲ್ ಹಂತದಲ್ಲಿ ಪ್ರೊಜೆಸ್ಟರಾನ್ ಉತ್ಪಾದನೆ ಹೆಚ್ಚಿಸುವಲ್ಲಿಯೂ ಅನುಕೂಲಕರ ಪಾತ್ರ ವಹಿಸುತ್ತದೆ. ಕುಂಬಳಕಾಯಿ ಬೀಜಗಳು ಒಮೇಗಾ-3 ಫ್ಯಾಟಿ ಆಮ್ಲಗಳ ಸಮೃದ್ಧ ಮೂಲಗಳಾಗಿವೆ.

ಲ್ಯುಟಿಯಲ್ ಹಂತದಲ್ಲಿ ಒಂದು ಚಮಚ ಸೂರ್ಯಕಾಂತಿ ಬೀಜಗಳು ಮತ್ತು ಎಳ್ಳು ಬೀಜಗಳ್ನು ಸೇರಿಸುವ ಮೂಲಕ ಪ್ರೊಜೆಸ್ಟೆರೋನ್ ಉತ್ಪಾದನೆಗೆ ಬೆಂಬಲಿಸಿ. ಎಳ್ಳಿನಲ್ಲಿರುವ ಲಿಗ್ನನ್ ಗಳು ಪ್ರೊಜೆಸ್ಟೆರೋನ್ ಹಾರ್ಮೋನು ಸಮತೋಲನಕ್ಕೆ ಬೆಂಬಲಿಸುತ್ತದೆ ಎಂದು ತೋರಿದೆ ಮತ್ತು ರಕ್ತದ ಕೊಲೆಸ್ಟರಾಲ್ ಮಟ್ಟ ಹೆಚ್ಚಿಸಿದೆ ಮತ್ತು ಮೆನೋಪಾಸ್ ನಂತರದ ಮಹಿಳೆಯರಲ್ಲಿ ಉತ್ಕರ್ಷಣ ನಿರೋಧಕಗಳನ್ನು ಸುಧಾರಿಸುತ್ತದೆ. ಸೂರ್ಯಕಾಂತಿ ಬೀಜಗಳು ಸಂತಾನೋತ್ಪಾದನೆಯ ವ್ಯವಸ್ಥೆಯಯ ಸೂಕ್ತ ಕಾರ್ಯ ನಿರ್ವಹಣೆಗೆ ಅಗತ್ಯವಾದ ಆರೋಗ್ಯಕರ ಕೊಬ್ಬುಗಳ ಅದ್ಭುತ ಮೂಲವಾಗಿದೆ.

ಋತುಚಕ್ರಕ್ಕೆ ಸೀಡ್ ಸೈಕ್ಲಿಂಗ್ ಎಂದು ಪ್ರಾರಂಭಿಸಬೇಕು?

ಮುಟ್ಟಿಗೆ ಸೀಡ್ ಸೈಕಲ್ ಅನ್ನು ಋತುಚಕ್ರದ ಮೊದಲ ದಿನದಂದು ಪ್ರಾರಂಭಿಸುವುದು ಸೂಕ್ತವಾಗಿದೆ.

  1. ಪಿಸಿಒಎಸ್ ಗೆ ಸೀಡ್ ಸೈಕ್ಲಿಂಗ್

ಪಿಸಿಒಎಸ್ ಗೆ ಸೀಡ್ ಸೈಕ್ಲಿಂಗ್ ಬಳಸುವುದು ಅಂಡಾಶಯದ ಚೀಲಗಳನ್ನು ಕಡಿಮೆ ಮಾಡುವಂತಹ ಹಲವು ಅನುಕೂಲಗಳನ್ನು ನೀಡುತ್ತದೆ. ಕುಂಬಳಕಾಯಿ ಮತ್ತು ಎಳ್ಳಿನಲ್ಲಿರುವ ಸತುವು ಪ್ರೊಜೆಸ್ಟೆರೋನ್ ಹಾರ್ಮೋನು ಮತ್ತು ಎಸ್ಟ್ರೋಜೆನ್ ಮಟ್ಟ ಸುಧಾರಿಸುತ್ತದೆ ಮತ್ತು ಆಂಡ್ರೋಜೆನ್ ಗಳನ್ನು ಕಡಿಮೆ ಮಾಡಿ ಅವುಗಳ ಕಾರ್ಯ ಸುಧಾರಿಸುತ್ತದೆ. ಪಿಸಿಒಎಸ್ ಗೆ ಸೀಡ್ ಸೈಕ್ಲಿಂಗ್ ಬಳಸುವುದು ಥೈರಾಯ್ಡ್ ಕಾರ್ಯವನ್ನೂ ಸುಧಾರಿಸುತ್ತದೆ. ಅಗಸೆ ಮತ್ತು ಸೂರ್ಯಕಾಂತಿ ಬೀಜಗಳಲ್ಲಿರುವ ಒಮೇಗಾ-3 ಫ್ಯಾಟಿ ಆಮ್ಲಗಳು ಇನ್ಸುಲಿನ್ ಪ್ರತಿರೋಧಕತೆ ಕಡಿಮೆ ಮಾಡುತ್ತದೆ ಮತ್ತು ರಕ್ತದ ಕೊಲೆಸ್ಟರಾಲ್ ತಗ್ಗಿಸುತ್ತದೆ.

  1. ಗರ್ಭಧಾರಣೆಗೆ ಸೀಡ್ ಸೈಕ್ಲಿಂಗ್:

ಸಮತೋಲನದ ಹಾರ್ಮೋನುಗಳು, ನಿಯಂತ್ರಿತ ಋತುಚಕ್ರ, ಸುಧಾರಿತ ಅಂಡೋತ್ಪತ್ತಿ ಮತ್ತು ಪ್ರೊಜೆಸ್ಟೆರೋನ್ ಮತ್ತು ಎಸ್ಟ್ರೋಜೆನ್ ಮಟ್ಟ ಹೆಚ್ಚಾಗುವ ಹಲವು ಅನುಕೂಲಗಳು ಸೀಡ್ ಸೈಕ್ಲಿಂಗ್ ನಲ್ಲಿರುವುದರಿಂದ ಸೀಡ್ ಸೈಕ್ಲಿಂಗ್ ಫಲವಂತಿಕೆ ಸುಧಾರಿಸಲೂ ಅನುಕೂಲಕರ ಎಂದು ಹೇಳಬಹುದು.

– ಸೂರ್ಯಕಾಂತಿ ಬೀಜಗಳಲ್ಲಿರುವ ವಿಟಮಿನ್ ಇ ಅಂಡಾಣು ಮತ್ತು ವೀರ್ಯಾಣು ಗುಣಮಟ್ಟ ಹೆಚ್ಚಿಸಿ ಫಲವಂತಿಕೆಯ ಸಾಧ್ಯತೆಗಳನ್ನು ಸುಧಾರಿಸುತ್ತದೆ ಮತ್ತು ಸಕಾರಾತ್ಮಕ ಗರ್ಭಧಾರಣೆಯ ಫಲಿತಾಂಶ ನೀಡುತ್ತದೆ.

– ಬೀಜಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತ ಕಡಿಮೆ ಮಾಡುವ ಮೂಲಕ ಭ್ರೂಣ ಸೇರ್ಪಡಿಕೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ.

ಒಟ್ಟಿನಲ್ಲಿ:

ಅಗತ್ಯ ಫ್ಯಾಟಿ ಆಮ್ಲಗಳು, ಮಿನರಲ್ ಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಂತಾನೋತ್ಪಾದನೆಯ ಸೂಕ್ತ ಕಾರ್ಯ ನಿರ್ವಹಣೆಗೆ ಅಗತ್ಯವಾಗಿದ್ದು ಅವು ನಾಲ್ಕು ಬೀಜಗಳಿಂದ ಸಾಧ್ಯವಾಗುತ್ತದೆ ಅದು ಮಹಿಳೆಯ ಹಾರ್ಮೋನು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಹೀಗಿದ್ದರೂ ಇದು ಹಾರ್ಮೋನು ಅಸಮತೋಲನಕ್ಕೆ ಸಂಪೂರ್ಣ ಚಿಕಿತ್ಸೆ ಅಲ್ಲ ಎಂದು ನೆನಪಿನಲ್ಲಿರಿಸಿಕೊಳ್ಳಬೇಕು, ಸೀಡ್ ಸೈಕ್ಲಿಂಗ್ ಆಯ್ಕೆ ಮಾಡಿಕೊಳ್ಳುವ ಮುನ್ನ ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಿ.

Write a Comment

BOOK A FREE CONSULTATION