ಘನೀಕೃತ ಭ್ರೂಣ ವರ್ಗಾವಣೆ ಎಂದರೇನು?
Author: Dr. Hema Vaithianathan
ತಂದೆ ತಾಯಿಯರಾಗುವುದು ಜೀವನದಲ್ಲಿ ಒಂದು ಅಸಾಧಾರಣ ಅನುಭವವಾಗಿದೆ. ಕೆಲವರಿಗೆ ಸಹಜ ಗರ್ಭಧಾರಣೆ ಸಾಧ್ಯವಾಗುತ್ತದೆ ಆದರೆ ಕೆಲವರಿಗೆ ತಂದೆ ತಾಯಿರಾಗಲು ಐವಿಎಫ್ ರೀತಿಯ ಅಸಿಸ್ಟೆಡ್ ರೀಪ್ರೊಡಕ್ಟಿವ್ ತಂತ್ರಗಳು ಅಗತ್ಯವಾಗಬಹುದು. ತಂದೆ ತಾಯಿಯರಾಗುವ ಕನಸಿನಿಂದ ಐವಿಎಫ್ ಕೈಗೊಳ್ಳುವ ದಂಪತಿಗಳು ಅದರಲ್ಲಿ ಒಳಗೊಂಡಿರುವ ಪ್ರಕ್ರಿಯೆಗಳ ಕುರಿತು ಸ್ಪಷ್ಟ ತಿಳಿವಳಿಕೆ ಹೊಂದಿರಬೇಕಾಗುತ್ತದೆ. ಹೊಸ ಭ್ರೂಣ ವರ್ಗಾವಣೆ ಮತ್ತು ಘನೀಕೃತ ಭ್ರೂಣ ವರ್ಗಾವಣೆ (ಫ್ರೋಜನ್ ಎಂಬ್ರಿಯೊ ಟ್ರಾನ್ಸ್ ಫರ್-ಎಫ್.ಇ.ಟಿ.) ಎಂದರೇನೆಂದು ತಿಳಿಯುವುದು ಅತ್ಯಂತ ಅಗತ್ಯವಾಗಿದ್ದು ಅದು ನಿಮಗೆ ಇಡೀ ಚಿಕಿತ್ಸೆಯ ಪ್ರಯಾಣ ಕೈಗೊಳ್ಳಲು ವಿಶ್ವಾಸ ನೀಡುತ್ತದೆ.
ಐವಿಎಫ್ ಚಿಕಿತ್ಸೆಯಲ್ಲಿ ಅಂಡಾಣುಗಳನ್ನು ಮಹಿಳಾ ಸಂಗಾತಿಯಿಂದ ಪಡೆಯಲಾಗುತ್ತದೆ ಮತ್ತು ಪುರುಷ ಸಂಗಾತಿಯಿಂದ ವೀರ್ಯವನ್ನು ಪಡೆಯಲಾಗುತ್ತದೆ ನಂತರ ಅವುಗಳನ್ನು ಐವಿಎಫ್ ಪ್ರಕ್ರಿಯೆ ಅಥವಾ ಒಂದು ವೀರ್ಯವನ್ನು ನೇರವಾಗಿ ಐಸಿಎಸ್ಐ ಪ್ರಕ್ರಿಯೆ ಮೂಲಕ ಸೇರಿಸಲಾಗುತ್ತದೆ ಅದು ನಂತರ ಎಚ್ಚರದಿಂದ ಭ್ರೂಣ ರೂಪುಗೊಳ್ಳುವಂತೆ ಮಾಡಲಾಗುತ್ತದೆ. ಈ ಭ್ರೂಣ ವರ್ಗಾವಣೆಯನ್ನು ಮಹಿಳೆಯ ಗರ್ಭಕೋಶಕ್ಕೆ ಅಂಡಾಣು ಪಡೆದ 3 ಅಥವಾ 5 ದಿನಗಳಲ್ಲಿ ವರ್ಗಾಯಿಸಲಾಗುತ್ತದೆ ಅಥವಾ ಅದನ್ನು ಘನೀಕೃತಗೊಳಿಸಲಾಗುತ್ತದೆ ಮತ್ತು ಗರ್ಭಕೋಶಕ್ಕೆ ಕೆಲವು ವಾರಗಳು, ತಿಂಗಳು ಅಥವಾ ವರ್ಷಗಳ ನಂತರ ವರ್ಗಾಯಿಸಲಾಗುತ್ತದೆ. ನಾವು ಘನೀಕೃತ ಭ್ರೂಣ ವರ್ಗಾವಣೆಯ ಪ್ರಕ್ರಿಯೆ, ಸಮಯ ಮತ್ತು ಯಶಸ್ಸಿನ ಪ್ರಮಾಣ ಕುರಿತು ತಿಳಿಯೋಣ.
ಯಾರಿಗೆ ಎಫ್.ಇ.ಟಿ ಬೇಕು?
– ಓವರಿಯನ್ ಹೈಪರ್ ಸ್ಟಿಮುಲೇಷನ್ ಸಿಂಡ್ರೋಮ್(ಒ.ಎಚ್.ಎಸ್.ಎಸ್.) ಅಭಿವೃದ್ಧಿ ಹೊಂದುವ ಹೆಚ್ಚಿನ ರಿಸ್ಕ್ ಹೊಂದಿರುವ ಮಹಿಳೆಯರ ವಿಷಯದಲ್ಲಿ ಐವಿಎಫ್ ನಲ್ಲಿ ಹಾರ್ಮೋನು ಪ್ರಚೋದನೆಯಿಂದ ಎಫ್.ಇ.ಟಿ.ಯನ್ನು ಶಿಫಾರಸು ಮಾಡಲಾಗುತ್ತದೆ ಅದರಲ್ಲಿ ಭ್ರೂಣಗಳನ್ನು ಅದೇ ಆವರ್ತದಲ್ಲಿ ವರ್ಗಾಯಿಸಲಾಗುವುದಿಲ್ಲ ಬದಲಿಗೆ ವರ್ಗಾವಣೆಗೆ ಅನುಕೂಲಕರ ಪರಿಸ್ಥಿತಿಗಳಲ್ಲಿ ನಂತರ ವರ್ಗಾವಣೆ ಮಾಡಲು ಘನೀಕರಿಸಲಾಗುತ್ತದೆ.
– 35+ ಆಗಿರುವ ದಂಪತಿಗಳು ಮತ್ತು ಪಿಜಿಟಿಯ(ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್) ಅನುವಂಶಿಕ ಸಮಸ್ಯೆಗಳುಳ್ಳವರಿಗೆ ಘನೀಕೃತ ಭ್ರೂಣ ವರ್ಗಾವಣೆ ಅಗತ್ಯ. ಪಿಜಿಟಿ ವಿಷಯದಲ್ಲಿ ಕೆಲ ಜೀವಕೋಶಗಳನ್ನು ಭ್ರೂಣದಿಂದ ತೆಗೆದುಕೊಂಡು ಕ್ರೋಮೋಸೋಮುಗಳ ಅಸಹಜತೆಗೆ ವಿಶ್ಲೇಷಿಸಲಾಗುತ್ತದೆ ಮತ್ತು ಆರೋಗ್ಯಕರವಾಗಿರುವಾಗಿರುವುದನ್ನು ಭ್ರೂಣ ವರ್ಗಾವಣೆಗೆ ಬಳಸಲಾಗುತ್ತದೆ.
– ಕ್ಯಾನ್ಸರ್ ಪತ್ತೆಯಾದ ಮಹಿಳೆಯರಲ್ಲಿ ಭ್ರೂಣಗಳನ್ನು ಕ್ಯಾನ್ಸರ್ ಚಿಕಿತ್ಸೆಗೆ ಮುನ್ನವೇ ಘನೀಕರಿಸಬಹುದು ಮತ್ತು ನಂತರ ಗರ್ಭಧಾರಣೆ ಪಡೆಯಲು ಭವಿಷ್ಯದಲ್ಲಿ ಬಳಸಬಹುದು.
– ತಂದೆ ತಾಯಿಯರಾಗುವುದನ್ನು ಮುಂದೂಡಲು ಬಯಸುವ ದಂಪತಿಗಳು ಅವರ ಭ್ರೂಣಗಳನ್ನು ಘನೀಕರಿಸಬಹುದು ವಯಸ್ಸಾಗುವುದರಿಂದ ಫಲವಂತಿಕೆ ಕುಸಿಯುವುದರಿಂದ ಅದು ಅವರಿಗೆ ಅವರ ಗರ್ಭಧಾರಣೆಯ ಸಾಮರ್ಥ್ಯ ಸಂರಕ್ಷಿಸಲು ನೆರವಾಗುತ್ತದೆ.
– ಕೆಲ ದಂಪತಿಗಳಲ್ಲಿ ಹೆಚ್ಚು ಭ್ರೂಣಗಳನ್ನು ರೂಪಿಸಿದಾಗ ಹೆಚ್ಚುವರಿ ಭ್ರೂಣಗಳನ್ನು ಘನೀಕರಿಸಬಹುದು ಮತ್ತು ಭವಿಷ್ಯದಲ್ಲಿ ದಂಪತಿಗಳು ಮಕ್ಕಳನ್ನು ಬಯಸಿದಾಗ ಮತ್ತೆ ಗರ್ಭಧಾರಣೆಗೆ ಬಳಸಬಹುದು.
ಎಫ್.ಇ.ಟಿ. ಹೇಗೆ ಕೆಲಸ ಮಾಡುತ್ತದೆ?
ಐವಿಎಫ್ ಪ್ರಕ್ರಿಯೆಯ ಸಂದರ್ಭದಲ್ಲಿ ಪುರುಷ ಸಂಗಾತಿಯಿಂದ ಪಡೆದ ವೀರ್ಯ ಮತ್ತು ಮಹಿಳಾ ಸಂಗಾತಿಯಂದ ಪಡೆದ ಅಂಡಾಣುಗಳನ್ನು ಫರ್ಟಿಲೈಸ್ ಮಾಡಿದ ನಂತರ ಭ್ರೂಣವನ್ನು ಅದೇ ದಿನ ಘನೀಕರಿಸಲಾಗುತ್ತೆ ಅಥವಾ 3 ದಿನದವರೆಗೆ ಬೆಳೆಯಲು ಬಿಡಲಾಗುತ್ತದೆ(ಕ್ಲೀವೇಜ್ ಹಂತ ಎಂದು ಕರೆಯಲಾಗುತ್ತದೆ) ಮತ್ತು 3ನೇ ದಿನದಂದು ಘನೀಕರಿಸಲಾಗುತ್ತದೆ
ಅಥವಾ ಅದನ್ನು 5ನೇ ದಿನದವರೆಗೆ ಬೆಳೆಯಲು ಬಿಡಲಾಗುತ್ತದೆ(ಬ್ಲಾಸ್ಟೊಸಿಸ್ಟ್ ಎಂದು ಕರೆಯಲಾಗುತ್ತದೆ) ಮತ್ತು 5ನೇ ದಿನ ಘನೀಕರಿಸಲಾಗುತ್ತದೆ.
ಎಫ್.ಇ.ಟಿ.ಗೆ 2 ವಿಧಾನಗಳಿವೆ;
1.ನೈಸರ್ಗಿಕ ಆವರ್ತದ ಎಫ್.ಇ.ಟಿ.
2.ಹಾರ್ಮೋನ್ ರೀಪ್ಲೇಸ್ ಮೆಂಟ್ ಥೆರಪಿ(ಎಚ್.ಆರ್.ಟಿ.) ಆವರ್ತ
ನೈಸರ್ಗಿಕ ಆವರ್ತದ ಘನೀಕೃತ ಭ್ರೂಣ ವರ್ಗಾವಣೆ ಪ್ರಕ್ರಿಯೆ:
– ಗರ್ಭಕೋಶದ ಒಳಪದರದ ದಪ್ಪ(ಎಂಡೋಮೆಟ್ರಿಯಂ ಎಂದು ಕರೆಯಲಾಗುತ್ತದೆ) ಯಶಸ್ವಿ ಗರ್ಭಧಾರಣೆಗೆ ಅತ್ಯಂತ ಪ್ರಮುಖ ಮಾನದಂಡಗಳಲ್ಲಿ ಒಂದಾಗಿದೆ.
– ಈ ಪ್ರೊಟೋಕಾಲ್ ನಲ್ಲಿ ಯಾವುದೇ ಹಾರ್ಮೋನುಗಳನ್ನು ಎಂಡೋಮೆಟ್ರಿಯಂ ಬೆಳವಣಿಗೆಗೆ ನೀಡಲಾಗುವುದಿಲ್ಲ. ಮಹಿಳೆಯರ ಅಂಡೋತ್ಪತ್ತಿ ಪ್ರಕ್ರಿಯೆಯನ್ನು ಸ್ಕ್ಯಾನ್, ರಕ್ತ/ಮೂತ್ರ ಪರೀಕ್ಷೆ ಮೂಲಕ ಕಂಡುಕೊಳ್ಳಲಾಗುತ್ತದೆ ಮತ್ತು ಭ್ರೂಣವನ್ನು ಇಂಪ್ಲಾಂಟೇಷನ್ ವಿಂಡೋ(ಗರ್ಭಕೋಶ ಭ್ರೂಣವನ್ನು ಪಡೆಯಲು ಸಿದ್ಧವಾದ ಸಮಯ) ಪ್ರಕಾರ ವರ್ಗಾಯಿಸಲಾಗುತ್ತದೆ. ಭ್ರೂಣ ವರ್ಗಾವಣೆಗೆ ಒಂದು ನಿರ್ದಿಷ್ಟ ದಿನವನ್ನು ನಿಗದಿಪಡಿಸಲಾಗುತ್ತದೆ, ಭ್ರೂಣವನ್ನು ಕರಗಿಸಿ ಅದನ್ನು ಮಹಿಳೆಯ ಗರ್ಭಕೋಶದಲ್ಲಿ ಇರಿಸಲಾಗುತ್ತದೆ.
ಹಾರ್ಮೋನ್ ರೀಪ್ಲೇಸ್ ಮೆಂಟ್ ಥೆರಪಿ ಆವರ್ತ:
ಮಹಿಳೆಯರಲ್ಲಿ ಅಸಹಜ ಆವರ್ತವುಳ್ಳ ಸಂದರ್ಭದಲ್ಲಿ ಈ ಪ್ರೊಟೋಕಾಲ್ ಅನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ನೈಸರ್ಗಿಕ ಆವರ್ತದಂತೆ ಅಲ್ಲದೆ ಇಲ್ಲಿ ಎಸ್ಟ್ರೋಜೆನ್ ಮತ್ತು ಪ್ರೊಜೆಸ್ಟೆರೋನ್ ಔಷಧಗಳನ್ನು ನೀಡುವ ಮೂಲಕ ಎಂಡೋಮೆಟ್ರಿಯಂ ದಪ್ಪವನ್ನು ಸುಧಾರಿಸಲಾಗುತ್ತದೆ. ಪರಿಸ್ಥಿತಿಗಳು ಅನುಕೂಲಕರವಾಗಿರುವಾಗ ಭ್ರೂಣವನ್ನು ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ.
ಘನೀಕೃತ ಭ್ರೂಣ ವರ್ಗಾವಣೆ ಸಮಯ:
1ನೇ ಹಂತ: ಹಾರ್ಮೋನಿನ ಚಿಕಿತ್ಸೆ
ಎಸ್ಟ್ರೋಜೆನ್ ಹಾರ್ಮೋನಿನ ಔಷಧವನ್ನು ನೀಡುವ ಮೂಲಕ ಗರ್ಭಕೋಶದ ಒಳಪದರವನ್ನು ಭ್ರೂಣ ವರ್ಗಾವಣೆಗೆ ದಪ್ಪಗೊಳಿಸಲು ನೀಡಲಾಗುತ್ತದೆ. ಪ್ರೊಜೆಸ್ಟೆರೋನ್ ಬೆಂಬಲ ಕೂಡಾ ಅಗತ್ಯವಾಗಿದ್ದು ಅದು ಗರ್ಭಕೋಶವನ್ನು ಇಂಪ್ಲಾಂಟೇಷನ್ ಪ್ರಕ್ರಿಯೆಗೆ ಸಿದ್ಧಪಡಿಸುತ್ತದೆ(ಗರ್ಭಕೋಶಕ್ಕೆ ಭ್ರೂಣದ ಲಗತ್ತು).
2ನೇ ಹಂತ: ಸ್ಕ್ಯಾನ್ ಗಳ ಮೂಲಕ ಮೇಲ್ವಿಚಾರಣೆ
ಅಲ್ಟ್ರಾಸೌಂಡ್ ಸ್ಕ್ಯಾನ್ ಗಳು/ ರಕ್ತಪರೀಕ್ಷೆಗಳನ್ನು ನಡೆಸಿ ಗರ್ಭಕೋಶವು ಅಳವಡಿಕೆಗೆ ಸಿದ್ಧವಾಗಿದೆಯೇ ಎಂದು ನೋಡಲಾಗುತ್ತದೆ.
3ನೇ ಹಂತ: ಭ್ರೂಣ ವರ್ಗಾವಣೆ
ಭ್ರೂಣವನ್ನು ಕರಗಿಸಲಾಗುತ್ತದೆ ಮತ್ತು ಮತ್ತಷ್ಟು ಬೆಳವಣಿಗೆಗೆ ಮಹಿಳೆಯ ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ.
4ನೇ ಹಂತ: ಗರ್ಭಧಾರಣೆ ಪರೀಕ್ಷೆ
2 ವಾರಗಳ ನಂತರ ಗರ್ಭಧಾರಣೆಯ ದೃಢೀಕರಣದ ಪರೀಕ್ಷೆ ನಡೆಸಬೇಕಾಗುತ್ತದೆ.
ಒಂದು ಭ್ರೂಣ ವರ್ಗಾವಣೆ ಎಂದರೇನು?
ಸಾಮಾನ್ಯವಾಗಿ ಇತ್ತೀಚಿನವರೆಗೂ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಲು 2 ಅಥವಾ 3ಕ್ಕಿಂತ ಹೆಚ್ಚು ಭ್ರೂಣಗಳನ್ನು ಮಹಿಳೆಯ ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತಿತ್ತು. ಆದರೆ ಹಲವು ಗರ್ಭಧಾರಣೆಗಳ ಪ್ರಕ್ರಿಯೆಯ ರಿಸ್ಕ್ ಗರ್ಭಧಾರಣೆಯಲ್ಲಿನ ಮಧುಮೇಹ, ಪ್ರೀಎಕ್ಲಂಪ್ಸಿಯಾ, ಅವಧಿಪೂರ್ವ ಹೆರಿಗೆ ಮತ್ತಿತರೆ ಸಂಕೀರ್ಣತೆಗಳು ತಾಯಿ ಮತ್ತು ಶಿಶು ಎರಡಕ್ಕೂ ಉಂಟಾಗುತ್ತಿತ್ತು. ಹೆಚ್ಚಿನ ಗರ್ಭಧಾರಣೆಯ ರಿಸ್ಕ್ ಕಡಿಮೆ ಮಾಡಲು ಪಿಜಿಟಿ(ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್) ವರ್ಗಾವಣೆಗೆ ಅತ್ಯುತ್ತಮ ಭ್ರೂಣವನ್ನು ಆಯ್ಕೆ ಮಾಡುವುದರಲ್ಲಿ ನೆರವಾಗುತ್ತದೆ. ಈ ವಿಧಾನದಿಂದ ಒಂದು ಆರೋಗ್ಯಗರ ಭ್ರೂಣವನ್ನು ವರ್ಗಾಯಿಸುವ ಮೂಲಕ ಸಂಕೀರ್ಣತೆಗಳನ್ನು ಕಡಿಮೆ ಮಾಡಬಹುದು. ಈ ಪ್ರಕ್ರಿಯೆಯನ್ನು ಆಯ್ಕೆ ಮಾಡಲಾದ ಒಂದು ಭ್ರೂಣ ವರ್ಗಾವಣೆ ಎನ್ನಲಾಗುತ್ತದೆ.
ಒಂದು ಭ್ರೂಣ ವರ್ಗಾವಣೆಯ ಪ್ರಯೋಜನಗಳು:
– 1 ಆರೋಗ್ಯಕರ ಭ್ರೂಣ ಆಯ್ಕೆಗೆ ನೆರವಾಗುತ್ತದೆ
– ಗರ್ಭಪಾತದ ತೊಂದರೆ ಕಡಿಮೆ ಮಾಡುತ್ತದೆ
– ಹಲವು ಜನನಗಳ ತೊಂದರೆ ತಪ್ಪಿಸುತ್ತದೆ
ಹೊಸ ಅಥವಾ ಘನೀಕೃತ ಭ್ರೂಣ ವರ್ಗಾವಣೆ:
ಗರ್ಭಧಾರಣೆಯ ಸಮಯವು ಹೊಸ ಭ್ರೂಣದ ವರ್ಗಾವಣೆಯಲ್ಲಿ ಕಡಿಮೆ ಇರುತ್ತದೆ ಏಕೆಂದರೆ ಅದೇ ಋತುಚಕ್ರದಲ್ಲಿ ಸಂಗ್ರಹಿಸಿದ ಅಂಡಾಣುವನ್ನು 3 ಅಥವಾ 5 ದಿನಗಳ ಒಳಗೆ ಮಹಿಳೆಯ ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ. ಘನೀಕೃತ ಭ್ರೂಣವನ್ನು ಮಹಿಳೆಯ ಗರ್ಭಕೋಶಕ್ಕೆ ನಂತರದ ಋತುಚಕ್ರದ ಪರಿಸ್ಥಿತಿಗಳು ವರ್ಗಾವಣೆಗೆ ಅನುಕೂಲಕರವಾಗಿರುವಾಗ ವರ್ಗಾಯಿಸಲಾಗುತ್ತದೆ.
ಭ್ರೂಣ ವರ್ಗಾವಣೆ ಯಶಸ್ಸಿನ ಪ್ರಮಾಣ
ಘನೀಕೃತ ಭ್ರೂಣ ವರ್ಗಾವಣೆಯು ಹೊಸ ಭ್ರೂಣ ವರ್ಗಾವಣೆಗಿಂತ ಉತ್ತಮ ಯಶಸ್ಸಿನ ಪ್ರಮಾಣಗಳನ್ನು ಹೊಂದಿದೆ. ಆದಾಗ್ಯೂ, ಹಲವು ಅಂಶಗಳು ಭ್ರೂಣ ವರ್ಗಾವಣೆಯ ಯಶಸ್ಸಿನ ಪ್ರಮಾಣಕ್ಕೆ ಪರಿಣಾಮ ಉಂಟು ಮಾಡಬಹುದು.
– ವಯಸ್ಸು
– ಬಂಜೆತನದ ವಿಧ
– ವೀರ್ಯದ ಗುಣಮಟ್ಟ
– ಅಂಡಾಣು ಗುಣಮಟ್ಟ
– ಭ್ರೂಣದ ಗುಣಮಟ್ಟ
– ಗರ್ಭಕೋಶದ ಸ್ವೀಕರಿಸಬಲ್ಲತೆ
– ಜೀವನಶೈಲಿ ಅಂಶಗಳು
ಯಶಸ್ವಿ ಎಫ್.ಇ.ಟಿ.ಗೆ ಸಲಹೆಗಳು:
ಘನೀಕೃತ ಭ್ರೂಣ ವರ್ಗಾವಣೆ ಆವರ್ತಕ್ಕೆ ಮುನ್ನ ದೇಹ ಮತ್ತು ಮನಸ್ಸನ್ನು ಸಿದ್ಧಗೊಳಿಸಿಕೊಳ್ಳಬೇಕಾಗುತ್ತದೆ.
– ಸರಿಯಾದ ಆಹಾರ ಸೇವನೆ:
ಸಮತೋಲನದ ಆಹಾರವು ನಿಮ್ಮ ದೇಹವನ್ನು ಘನೀಕೃತ ಭ್ರೂಣ ವರ್ಗಾವಣೆ ಪ್ರಕ್ರಿಯೆಗೆ ಸಿದ್ಧಪಡಿಸುತ್ತದೆ ಮತ್ತು ಗರಿಷ್ಠ ತೂಕ ಕಾಪಾಡಿಕೊಳ್ಳಲು ನೆರವಾಗುತ್ತದೆ.
– ಜೀವನಶೈಲಿ ಆಯ್ಕೆಗಳು:
ಸರಿಯಾಗಿ ನಿದ್ರೆ ಮಾಡುವುದು, ನಿಯಮಿತ ವ್ಯಾಯಾಮ, ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವುದು ಹಾಗೂ ಉತ್ತಮ ಮಾನಸಿಕ ಸಮತೋಲನವು ಯಶಸ್ವಿ ಐವಿಎಫ್ ಫಲಿತಾಂಶಕ್ಕೆ ನೆರವಾಗುತ್ತದೆ.
– ಔಷಧಗಳು:
ಸರಿಯಾದ ಸಮಯದಲ್ಲಿ ಔಷಧಗಳನ್ನು ಸೇವಿಸುವುದು ಬಹಳ ಮುಖ್ಯ.
ತಂದೆ ತಾಯಿರಾಗಲು ಸಮಗ್ರ ವಿಧಾನ ಅಗತ್ಯ. ಚಿಕಿತ್ಸೆಯ ಪ್ರಕ್ರಿಯೆ ಕುರಿತು ಸ್ಪಷ್ಟತೆ, ಪ್ರಕ್ರಿಯೆಯ ಕುರಿತು ವಿಶ್ವಾಸ ಮತ್ತು ಸಂಗಾತಿಗೆ ಬೆಂಬಲದಿಂದ ನೀವು ಐವಿಎಫ್ ಪ್ರಕ್ರಿಯೆಯನ್ನು ಅಡೆತಡೆಯಿಲ್ಲದಂತೆ ಒಳಗಾಗಬಹುದು.
ಹ್ಯಾಪಿ ಪೇರೆಂಟ್ ಹುಡ್!