CAPA IVM ನೊಂದಿಗೆ PCOS ಮಹಿಳೆಯರಿಗೆ ಚಿಕಿತ್ಸೆ-ಔಷಧ ರಹಿತ IVF ಪ್ರೊಟೊಕಾಲ್ ನಿಂದ ಭಾರತದ ಮೊದಲ ಸಿಎಪಿಎ ಐವಿಎಂ ಶಿಶು ಜನನ
ಶಿವ(35) ಮತ್ತು ಶೈಲಜಾ(33) ವಿವಾಹವಾಗಿ 5 ವರ್ಷಗಳಾಗಿದ್ದು ಪ್ರಾಥಮಿಕ ಬಂಜೆತನ ಪತ್ತೆಯಾಗಿತ್ತು. ಅವರು ಹಲವು ವಿಫಲ OI TI ಆವರ್ತಗಳಿಗೆ ಒಳಗಾಗಿದ್ದರು ಮತ್ತು ಗಂಭೀರ PCOD ಗಾಗಿ ಓಯಸಿಸ್ ಫರ್ಟಿಲಿಸಿಗೆ ಅವರನ್ನು ಶಿಫಾರಸು ಮಾಡಲಾಗಿತ್ತು. ವಾರಂಗಲ್ ನ ಓಯಸಿಸ್ ಫರ್ಟಿಲಿಟಿಯ ಕ್ಲಿನಿಕಲ್ ಹೆಡ್ ಮತ್ತು ಫರ್ಟಿಲಿಟಿ ಸ್ಪೆಷಲಿಸ್ಟ್ Dr.JalagamKavyaRao ಅವರು ಪತಿ ಹಾಗೂ ಪತ್ನಿಯರ ಫಲವಂತಿಕೆಯ ಮೌಲ್ಯಮಾಪನ ನಡೆಸಿದರು. ಪರೀಕ್ಷೆಗಳ ನಂತರ ಶೈಲಜಾ ಅವರಿಗೆ 11.7 AMH ಮತ್ತು ಅನಿಯಮಿತ ಋತುಚಕ್ರ ಕಂಡುಬಂದಿತ್ತು. ಪತಿಗೆ ಸಾಮಾನ್ಯ ವೀರ್ಯಾಣು ಸಂಖ್ಯೆ ಇದ್ದು ವೀರ್ಯದ ಚಲನೆಯಲ್ಲಿ ಕೊಂಚ ಇಳಿಕೆ ಕಂಡಿತ್ತು.
Dr.Kavyaದಂಪತಿಗಳ ಪರೀಕ್ಷೆ ನಡೆಸಿದ ನಂತರ ಪ್ರಾರಂಭದಲ್ಲಿ IUI ಆವರ್ತ ಯೋಜಿಸಿದರು. ಚಿಕಿತ್ಸೆಯ ಸಂದರ್ಭದಲ್ಲಿ ಯಾವುದೇ ಪ್ರಭಾವಿ ಕೋಶಕಗಳು ಕಂಡು ಬರದೇ ಇದ್ದುದರಿಂದ Dr.Kavya ರೋಗಿಗೆ IVF ಚಿಕಿತ್ಸೆ ಪಡೆಯಲು ಸಲಹೆ ನೀಡಿದರು. ಆದರೆ ರೋಗಿಯು ಐವಿಎಫ್ ಸಂಬಂಧಿಸಿದ ಇಂಜೆಕ್ಷನ್ ಗಳು, ಔಷಧಗಳು ಮತ್ತು ದೈಹಿಕ, ಭಾವನಾತ್ಮಕ ಮತ್ತು ಹಣಕಾಸಿನ ಸಂಕಟಗಳ ಕುರಿತು ಆತಂಕ ವ್ಯಕ್ತಪಡಿಸಿದ್ದರಿಂದ Dr.Kavyaರೋಗಿಗೆ CAPA IVM ಸಲಹೆ ನೀಡಿದರು ಇದು ಔಷಧರಹಿತ IVF ಪ್ರಕ್ರಿಯೆಯಾಗಿದ್ದು ಸಾಂಪ್ರದಾಯಿಕ IVF ಗಿಂತ ಭಿನ್ನವಾಗಿದ್ದು ಕೈಗೆಟುಕುವಂತಿದೆ ಕಡಿಮೆ ಇಂಟೆನ್ಸಿವ್ ಆಗಿರುವುದರಿಂದ ದಂಪತಿಗೆ ಭರವಸೆ ಮತ್ತು ವಿಶ್ವಾಸ ಮೂಡಿಸಬಲ್ಲದು.
*ಗೋಪ್ಯತೆ ಕಾಪಾಡಲು ದಂಪತಿಗಳ ಹೆಸರನ್ನು ಬದಲಾಯಿಸಲಾಗಿದೆ.
CAPA IVM ಎಂದರೇನು?
IVM ಭರವಸೆಯ ಫಲಿತಾಂಶಗಳನ್ನು ನೀಡುತ್ತಿದ್ದು ಜನರಿಗೆ ಗರ್ಭಧಾರಣೆಗೆ ನೆರವಾಗುತ್ತಿದೆ. IVM ಹಲವು ವರ್ಷಗಳಿಂದ ಲಭ್ಯವಿದ್ದರೂ ಇತ್ತೀಚಿನ ದಿನಗಳಲ್ಲಿ ಪ್ರಿ-ಮೆಚುರೇಷನ್ ಹಂತವನ್ನು ಸೇರ್ಪಡೆ ಮಾಡಲಾಗಿದ್ದು ಅದು ಹಿಂದೆ ಕಾಣಿಸಿದ್ದಕ್ಕಿಂತ ಉತ್ತಮ ಫಲಿತಾಂಶಗಳನ್ನು ತೋರಿಸಿದೆ.
CAPA IVM ಔಷಧಧರಹಿತ ಐವಿಎಫ್ ಚಿಕಿತ್ಸೆಯಾಗಿದ್ದು ಹೋಲಿಕೆಯಲ್ಲಿ ಸಾಂಪ್ರದಾಯಿಕ IVF ಗಿಂತ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅಲ್ಲದೆ ಬೈಫೇಸಿಕ್ ಇನ್ ವಿಟ್ರೊ ಮೆಚುರೇಷನ್ ಎಂದು ಕರೆಯುವ ಇದು IVM ಪ್ರೊಟೊಕಾಲ್ ನ ಸುಧಾರಿತ ಆವೃತ್ತಿಯಾಗಿದೆ ಮತ್ತು ಭಾರತದಲ್ಲಿ ಓಯಸಿಸ್ ಫರ್ಟಿಲಿಟಿ ಈ ಚಿಕಿತ್ಸೆ ನೀಡುವ ಪರಿಣಿತಿ ಮತ್ತು ಅನುಭವ ಇರುವ ಏಕೈಕ ಸಂಸ್ಥೆಯಾಗಿದೆ.
CAPA IVM ಔಷಧಗಳು, ಹಾರ್ಮೋನಿನ ಇಂಜೆಕ್ಷನ್ ಗಳ ಕುರಿತು ಆತಂಕ ಪಡುವ ಮಹಿಳೆಯರಿಗಾಗಿ ಬಂದಿದೆ ಮತ್ತು ಕಡಿಮೆ ವೆಚ್ಚದ ಮತ್ತು ಕಡಿಮೆ ಇಂಟೆನ್ಸಿವ್ ಚಿಕಿತ್ಸೆಗೆ ಆದ್ಯತೆ ನೀಡುವವರಿಗೆ ನೀಡಲಾಗುತ್ತದೆ.
ಯಾರಿಗೆ CAPA IVM ಅನ್ನು ಶಿಫಾರಸು ಮಾಡಬಹುದು?
· PCOS ಇರುವ ಮಹಿಳೆಯರು
· ವಿಷಮತೆ ಹೊಂದಿರುವ ರೋಗಿಗಳು ಮತ್ತು ತಕ್ಷಣವೇ ಚಿಕಿತ್ಸೆಯ ಅಗತ್ಯವುಳ್ಳವರು(IVF 2 ವಾರಗಳ ಪ್ರಕ್ರಿಯೆ ಮತ್ತು ಆದ್ದರಿಂದ ಸೂಕ್ತವಲ್ಲ)
· ರೆಸಿಸ್ಟೆಂಟ್ ಓವರಿ ಸಿಂಡ್ರೋಮ್
· ಥ್ರಾಂಬೊಫಿಲಿಯಾ ಇರುವ ರೋಗಿಗಳು ಮತ್ತು
· ಊಸೈಟ್ ಮೆಚುರೇಷನ್ ಸಮಸ್ಯೆಗಳು
Dr.Kavya ಪ್ರಾರಂಭದಲ್ಲಿ IUI ಪ್ರೊಟೊಕಾಲ್ ಯೋಜಿಸಿದ್ದರು ಅದಕ್ಕೆ ದಂಪತಿಗಳಿಗೆ ಲೆಟ್ರೊಝೊಲ್+ಎಚ್.ಎಂ.ಜಿ. 75 ಐಯು ನಂತರ 2 ದಿನಗಳ ಕಾಲ 2 ಡೋಸ್ ಗಳ ಗೊನಾಡೊಟ್ರೊಪಿನ್ಸ್(3ನೇ ದಿನ ಮತ್ತು 5ನೇ ದಿನ) ಮತ್ತು ಗೊನಸಡೊಟ್ರೊಪಿನ್ ನೊಂದಿಗೆ ಲೆಟ್ರೊಝೊಲ್ ಅನ್ನು 3ನೇ ದಿನದಿಂದ 7ನೇ ದಿನ ನೀಡಲಾಯಿತು. 9, 11, 13, 16ನೇ ದಿನಗಳಲ್ಲಿ ಕೋಶಕಗಳ ಸ್ಕ್ಯಾನ್ ನಡೆಸಲಾಯಿತು. 4 ಎಚ್.ಎಂ.ಜಿ. 150 ಇಂಜೆಕ್ಷನ್ ಅನ್ನು 18ನೇ ದಿನ ನೀಡಲಾಯಿತು ಆಗಲೂ ಪ್ರಭಾವಿ ಕೋಶಕಗಳು ಕಾಣಲಿಲ್ಲ. ಶೈಲಜಾ ಇಡೀ ಆವರ್ತದಲ್ಲಿ ಡೆಕ್ಸಾಮಿಥಾಸೋನ್(1ಎಂಜಿ) ನಲ್ಲಿದ್ದರು. 21ನೇ ದಿನದಂದು ಈ ಆವರ್ತವನ್ನು ರದ್ದುಪಡಿಸಲಾಯಿತು ಏಕೆಂದರೆ ಶೈಲಜಾ ಅವರು PCODಗೆ ಪ್ರತಿರೋಧ ಒಡ್ಡುತ್ತಿದ್ದರು.
Dr.Kavya, CAPA IVM ನೀಡಲು ನಿರ್ಧರಿಸಿದರು, ಈ ಸುಧಾರಿತ ಔಷಧರಹಿತ ಪ್ರೊಟೊಕಾಲ್ ಶೈಲಜಾ ಅವರಿಗೆ ಕೆಲವೇ ಇಂಜೆಕ್ಷನ್ ಗಳಿಂದ ಗರ್ಭಧಾರಣೆ ಹೊಂದಲು ಸಾಧ್ಯವಾಯಿತು ಮತ್ತು ಯಾವುದೇ ಅಡ್ಡ ಪರಿಣಾಮಗಳಿರಲಿಲ್ಲ. ಅವರ ಮುಟ್ಟಿನ 1, 2 ಮತ್ತು 3ನೇ ದಿನಗಳಂದು ಮೆನೊಪರ್ 150 ನೀಡಲಾಯಿತು ಮತ್ತು 3ನೇ ಡೋಸ್ ನಂತರ ಅಪ್ರಬುದ್ಧ ಅಂಡಾಣುಗಳನ್ನು ಶೈಲಜಾ ಅವರಿಂದ ಪಡೆಯಲಾಯಿತು ಮತ್ತು 2 ಹಂತಗಳ ಮೆಚುರೇಷನ್ ನಡೆಸಲಾಯಿತು.
ಎ. ಅಂಡಾಣುಗಳನ್ನು 24-ಗಂಟೆಗಳ ಪ್ರಿಮೆಚುರೇಷನ್ ಸ್ಟೆಪ್ ನಲ್ಲಿ ಬೆಳೆಸಲಾಯಿತು(ಸಿ-ಟೈಪ್ ನ್ಯಾಟ್ರಿಯುಟೆರಿಕ್ ಪೆಪ್ಟೈಡ್ ಒಳಗೊಂಡ ಮಾಧ್ಯಮ)
ಬಿ. ಈ ಅಂಡಾಣುಗಳನ್ನು 30 ನಿಮಿಷಗಳ ಮೆಚುರೇಷನ್ ಹಂತದಲ್ಲಿ ಮತ್ತೆ ಇನ್ ಕ್ಯುಬೇಟ್ ಮಾಡಲಾಯಿತು(ಫಾಲಿಕಲ್ ಉತ್ತೇಜಿಸುವ ಹಾರ್ಮೋನು ಮತ್ತು ಆಂಫಿರೆಗುಲಿನ್ ಒಳಗೊಂಡ ಮಾಧ್ಯಮ).
ಈ ಪ್ರಿಮೆಚುರೇಷನ್ ಹಂತವು ಅಂಡಾಣುಗಳು ಪ್ರಬುದ್ಧವಾಗುವ ಪ್ರಕ್ರಿಯೆಯನ್ನು ಸುಧಾರಿಸುತ್ತದೆ ಅದರ ನಂತರ ಐಸಿಎಸ್ಐ ನಡೆಸಲಾಗುತ್ತದೆ. 20 ಅಂಡಾಣುಗಳನ್ನು ಪಡೆಯಲಾಯಿತು ಮತ್ತು ಫಲವಂತಿಕೆಯನ್ನು ನಡೆಸಲಾಯಿತು ಅದರಿಂದ 8 ಗ್ರೇಡ್ 1 ಭ್ರೂಣಗಳು 3ನೇ ದಿನದಂದು ದೊರೆತವು. ಗ್ರೇಡ್ 1 ಎಂಬ್ರಿಯೊಗಳನ್ನು 3ನೇ ದಿನದಂದು ಹೆಪ್ಪುಗಟ್ಟಿಸಲಾಯಿತು ಮತ್ತು ಉಳಿದವುಗಳನ್ನು 5ನೇ ದಿನದವರೆಗೆ ಬೆಳೆಸಲಾಯಿತು. ಅನುಕ್ರಮದ ಭ್ರೂಣ ವರ್ಗಾವಣೆಯನ್ನು 2 ದಿನ 3 ಮತ್ತು 1 ದಿನ 5 ಬ್ಲಾಸ್ಟೊಸಿಸ್ಟ್ ಭಾರತದಲ್ಲಿ ಮೊದಲ ಸಿಎಪಿಎ ಐವಿಎಂ ಶಿಶುವಿನ ಜನನಕ್ಕೆ ಕಾರಣವಾಯಿತು. Dr.Kavya ಮತ್ತು ಅವರ ಎಂಬ್ರಿಯಾಲಜಿಸ್ಟರ ತಂಡದ ಸಂಶೋಧನಾ ಪ್ರಯತ್ನ, ಬದ್ಧತೆ ಮತ್ತು
ಅವಿರತ ಪ್ರಯತ್ನ ಇತಿಹಾಸ ಸೃಷ್ಟಿಸಿತು. ಈ ದಂಪತಿ ಹಲವು ವರ್ಷಗಳ ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕವಾಗಿ ಒತ್ತಡದ ವಿಫಲ ಚಿಕಿತ್ಸೆಗಳ ನಂತರ ಇಂಜೆಕ್ಷನ್ ಗಳು, ಸಂಕೀರ್ಣತೆಗಳು ಅಥವಾ ಹೆಚ್ಚಿನ ವೆಚ್ಚಗಳಿಲ್ಲದೆ ಸಕಾರಾತ್ಮಕ ಫಲಿತಾಂಶ ಪಡೆದಿದ್ದಕ್ಕೆ ದಂಪತಿಗೆ ಬಹಳ ಸಂತೋಷವಾಯಿತು.