Blog
Enquire Now
Uncategorized

ಮಹಿಳಾ ಅಂಡಾಣುಗಳ ಗುಣಮಟ್ಟ ಹೆಚ್ಚಿಸುವ 10 ಆಹಾರಗಳು

ಮಹಿಳಾ ಅಂಡಾಣುಗಳ ಗುಣಮಟ್ಟ ಹೆಚ್ಚಿಸುವ 10 ಆಹಾರಗಳು

Author: Dr. Sai Manasa Darla, Consultant, Fertility Specialist &  Laparoscopic Surgeon

ಅಂಡಾಣು ಗುಣಮಟ್ಟವು ಮಹಿಳೆಯರ ಫಲವಂತಿಕೆಯಲ್ಲಿ ಪ್ರಮುಖ ಗುರುತುಗಳಲ್ಲಿ ಒಂದಾಗಿದೆ. ಸ್ಥಿರವಾದ ಋತುಚಕ್ರಗಳು ಮತ್ತು ಫಲವಂತಿಕೆಯ ಪ್ರಕ್ರಿಯೆ ಅಥವಾ ಗರ್ಭಧಾರಣೆಯ ಸಾಮರ್ಥ್ಯವು ಅಂಡಾಣು ಗುಣಮಟ್ಟವನ್ನು ಅಲವಂಬಿಸಿರುತ್ತದೆ.

ಆದರೆ ಮೊದಲಿಗೆ, ಅಂಡಾಣು ಗುಣಮಟ್ಟ ಎಂದರೇನು?

“ಅಂಡಾಣು ಗುಣಮಟ್ಟ” ಎಂದರೆ ಅಂಡಾಣುವು ಅನುವಂಶಿಕವಾಗಿ ಸಹಜವಾಗಿದೆಯೇ ಅಥವಾ ಅಸಹಜವಾಗಿದೆಯೇ ಎನ್ನುವುದನ್ನು ವಿವರಿಸುತ್ತದೆ.

ಉತ್ತಮ ಗುಣಮಟ್ಟದ ಅಂಡಾಣು ಅಥವಾ ಅನುವಂಶಿಕವಾಗಿ ಸಹಜ ಸ್ಥಿತಿಯ ಅಂಡಾಣುವಿನಲ್ಲಿ 23 ಕ್ರೋಮೋಸೋಮುಗಳು(ಯೂಪ್ಲಾಯಿಡ್)ಗಳಿರುತ್ತವೆ. ಅನುವಂಶಿಕವಾಗಿ ಅಸಹಜ ಅಂಡಾಣುವಿನಲ್ಲಿ 23 ಕ್ರೋಮೋಸೋಮುಗಳಿಗಿಂತ ಕಡಿಮೆ ಅಥವಾ ಹೆಚ್ಚಿರುತ್ತವೆ(ಅನ್ಯುಪ್ಲಾಯ್ಡಿ), ಇದರಿಂದ ಅಂಡಾಣುವಿನ ಗುಣಮಟ್ಟ ದುರ್ಬಲವಾಗುತ್ತದೆ ಮತ್ತು ಫಲವಂತಿಕೆಯಲ್ಲಿ ಅನುವಂಶಿಕ ಸಮಸ್ಯೆಗಳುಂಟಾಗುತ್ತವೆ.

ಉತ್ತಮ ಗುಣಮಟ್ಟದ ಅಂಡಾಣುವಿನ ಲಕ್ಷಣಗಳೇನು?

-ಸಮತೋಲನದ ಹಾರ್ಮೋನು ಮಟ್ಟಗಳು

-ನಿಯಮಿತ ಋತುಚಕ್ರಗಳು

-ಋತುಚಕ್ರದ ಸಂದರ್ಭದಲ್ಲಿ ಗರ್ಭಗೊರಳಿನ ದ್ರವದಲ್ಲಿ, ದೇಹದ ತಳಭಾಗದ ಉಷ್ಣತೆಯಲ್ಲಿ ಬದಲಾವಣೆಗಳು

ದುರ್ಬಲ ಅಂಡಾಣು ಗುಣಮಟ್ಟದ ಸಂಕೇತಗಳೇನು?

ದುರ್ಬಲ ಅಂಡಾಣುವಿನ ಗುಣಮಟ್ಟದ ಸಂಕೇತಗಳು ಹೆಚ್ಚಾಗುವ ವಯಸ್ಸಿನೊಂದಿಗೆ ಸಂಪರ್ಕ ಹೊಂದಿರುತ್ತವೆ. ಮಹಿಳೆಯರಿಗೆ ವಯಸ್ಸಾದಂತೆ ಗರ್ಭಕೋಶದ ಹೆಚ್ಚಿನ ಪ್ರಮಾಣದ ಅಂಡಾಣುಗಳು ಅನುವಂಶಿಕ ದೋಷಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ.

-ಗರ್ಭಧಾರಣೆ ಸಂದರ್ಭದಲ್ಲಿ ಕಷ್ಟ ಅಥವಾ ಪುನರಾವರ್ತಿತ ಗರ್ಭಪಾತಗಳು

-ಮುಟ್ಟಾಗದೇ ಇರುವುದು ಅಥವಾ ತಡವಾದ ಋತುಚಕ್ರಗಳು

-ಕಿರಿದಾದ ಅಥವಾ ಬದಲಾದ ಋತುಚಕ್ರಗಳು

-ಅತಿಯಾದ ಋತುಸ್ರಾವ

-ಹಾರ್ಮೋನು ಅಸಮತೋಲನ-ಪ್ರೊಜೆಸ್ಟರಾನ್ ಮತ್ತು ಆಂಟಿ ಮುಲ್ಲೆರಿಯನ್ ಹಾರ್ಮೋನ್ ನ ಕಡಿಮೆ ಮಟ್ಟಗಳು

ಗರ್ಭಕೋಶದಲ್ಲಿ ಅಂಡಾಣುಗಳು ಹೇಗೆ ವೃದ್ಧಿಸುತ್ತವೆ?

ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಉಳಿಯುವ ಸಂಪೂರ್ಣ ಅಂಡಾಣುಗಳೊಂದಿಗೆ ಜನಿಸುತ್ತಾರೆ. ಹೆಣ್ಣು ಪ್ರೌಢಾವಸ್ಥೆಯನ್ನು ತಲುಪುವವರೆಗೆ ಈ ಅಂಡಾಣುಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವುದಿಲ್ಲ ಮತ್ತು ಪರಿಪಕ್ವವಾಗುವುದಿಲ್ಲ. ಆದ್ದರಿಂದ, ಅಂಡಾಶಯದಲ್ಲಿ ಅಂಡಾಣುಗಳನ್ನು ಹೆಚ್ಚಿಸಲು ಸಾಧ್ಯವಿಲ್ಲ. ಆದಾಗ್ಯೂ, ಆರೋಗ್ಯಕರ

ಆಹಾರವು ಅಂಡಾಣುವಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆಯೇ?

ಮಹಿಳೆಯರ ಸಂತಾನೋತ್ಪಾದನೆಯ ಆರೋಗ್ಯದ ವಿಷಯಕ್ಕೆ ಬಂದಾಗ ಪೌಷ್ಟಿಕಾಂಶವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾವು ಸೇವಿಸುವ ಆಹಾರವು ನೇರ ಸಂಪರ್ಕವನ್ನು ಹೊಂದಿಲ್ಲದಿರಬಹುದು ಆದರೆ ಉತ್ತಮ ಸಮತೋಲಿತ ಆಹಾರವು ಹಾರ್ಮೋನ್ ಮಟ್ಟಗಳು ಮತ್ತು ರಕ್ತ ಪರಿಚಲನೆಯನ್ನು ನಿರ್ವಹಿಸುವ ಮೂಲಕ ಮಹಿಳೆಯರಲ್ಲಿ ಅಂಡಾಣು ಗುಣಮಟ್ಟ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಬೆಂಬಲಿಸುತ್ತದೆ.

 

ಅಂಡಾಣುವಿನ ಗುಣಮಟ್ಟ ಸುಧಾರಿಸುವ ಪ್ರಮುಖ 10 ಆಹಾರಗಳು

1. ಬೀನ್ಸ್ ಮತ್ತು ಬೇಳೆಗಳು:

ಪ್ರೊಟೀನ್ ಗಳು ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡಲು, ನಿರ್ಮಿಸಲು ಮತ್ತು ರಿಪೇರಿ ಮಾಡಲು ನೆರವಾಗುತ್ತವೆ. ಬೀನ್ಸ್ ಮತ್ತು ವಿವಿಧ ಬಗೆಯ ಬೇಳೆಗಳು ಪ್ರೊಟೀನ್, ಕಬ್ಬಿಣ, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಮೆಗ್ನೀಷಿಯಂನ ಶ್ರೀಮಂತ ಸಂಗ್ರಹ ಹೊಂದಿವೆ.

2. ಬೀಜಗಳು

ಎಳ್ಳು, ಅಗಸೆ ಬೀಜಗಳು, ಕುಂಬಳಕಾಯಿ ಬೀಜಗಳು ಮತ್ತು ಸೂರ್ಯಕಾಂತಿ ಎಣ್ಣೆಗಳು ಅತಿಸೂಕ್ಷ್ಮ ಪೋಷಕಾಂಶಗಳು ಮತ್ತು ಮಾನೊಸ್ಯಾಚುರೇಟೆಡ್ ಸಂಯೋಜನೆ ಹೊಂದಿರುತ್ತವೆ. ಹಾರ್ಮೋನುಗಳ ಅಸಮತೋಲನ ನಿವಾರಿಸಲು ಸೀಡ್ ಸೈಕ್ಲಿಂಗ್ ಅನ್ನು ಬಳಸಲಾಗುತ್ತದೆ.

3. ಬೀಜಗಳು ಮತ್ತು ಡ್ರೈಫ್ರೂಟ್ಸ್:

ಆಕ್ರೋಡು, ಬಾದಾಮಿಗಳು, ಶೇಂಗಾ, ಗೋಡಂಬಿಗಳು ಮತ್ತು ಒಣದ್ರಾಕ್ಷಿಗಳಂತಹ ಬೀಜಗಳು ಮತ್ತು ಡ್ರೈಫ್ರೂಟ್ಸ್ ಆರೋಗ್ಯಕರ ಕೊಬ್ಬು, ಮಿನರಲ್ ಗಳು, ಉತ್ಕರ್ಷಣನಿರೋಧಕಗಳು ಮತ್ತು ವಿಟಮಿನ್ ಗಳ ಅತ್ಯುತ್ತಮ ಮೂಲವಾಗಿವೆ. ಬ್ರೆಜಿಲ್ ನಟ್ ಗಳಂತಹ ಬೀಜಗಳು ಹೆಚ್ಚು ಸೆಲೆನಿಯಂ ಹೊಂದಿರುತ್ತವೆ. ಸೆಲೆನಿಯಂ ಅಂಡಾಣುಗಳಲ್ಲಿ ಕ್ರೋಮೋಸೋಮುಗಳ ಹಾನಿ ರಿಪೇರಿ ಮಾಡುವಲ್ಲಿ ನೆರವಾಗುತ್ತದೆ. ಡ್ರೈಫ್ರೂಟ್ಸ್ ನಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶಗಳಲ್ಲಿ ಆಕ್ಸಿಡೀಕರಣದ ಒತ್ತಡ ಕಡಿಮೆ ಮಾಡಲು ನೆರವಾಗುತ್ತವೆ.

4. ಅವಕಾಡೊಗಳು:

ಅವಕಾಡೊಗಳು ಪೋಷಕಾಂಶಗಳು ಮತ್ತು ಆರೋಗ್ಯಕರ ಕೊಬ್ಬಿನಂಶಗಳೊಂದಿಗೆ ಸನ್ನದ್ಧವಾಗಿವೆ. ಅವಕಾಡೊಗಳು ಮಾನೊಸ್ಯಾಚುರೇಟೆಡ್ ಕೊಬ್ಬುಗಳ ಮಹತ್ತರ ಮೂಲವಾಗಿದ್ದು ಅದು ಆರೋಗ್ಯಕರ ಸಂತಾನೋತ್ಪಾದನೆಗೆ ಬೆಂಬಲಿಸುತ್ತವೆ ಮತ್ತು ಅಂಡಾಣುಗಳ ಗುಣಮಟ್ಟ ಹೆಚ್ಚಿಸುತ್ತವೆ.

5. ಬೆರ್ರಿಗಳು:

ಸ್ಟ್ರಾಬೆರ್ರಿಗಳು, ರಸ್ಪ್ ಬೆರ್ರಿಗಳು, ಕ್ರಾನ್ ಬೆರ್ರರಿಗಳು ಮತ್ತು ಬ್ಲೂಬೆರ್ರಿಗಳು ಉತ್ಕರ್ಷಣ ನಿರೋಧಕ ಶಕ್ತಿ ಕೇಂದ್ರಗಳಾಗಿವೆ. ಅವು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಫೊಲೇಟ್ ಮೂಲಗಳಿಂದ ಸಮೃದ್ಧವಾಗಿವೆ. ಅವುಗಳಲ್ಲಿರುವ ಈ ಉತ್ಕರ್ಷಣ ನಿರೋಧಕಗಳು ಆಕ್ಸಿಡೀಕರಣದ ಒತ್ತಡದ ಅಂಡಾಣುಗಳಿಂದ ರಕ್ಷಿಸುತ್ತವೆ.

6. ದಾಲ್ಚಿನ್ನಿ:

ಇದು ಮತ್ತೊಂದು ಸೂಪರ್ ಫುಡ್ ಆಗಿದ್ದು ಮುಖ್ಯವಾಗಿ ಪಿಸಿಒಎಸ್ ನಿಂದ ಬಳಲುತ್ತಿರುವ ಮಹಿಳೆಯರಿಗೆ ಉಪಯುಕ್ತವಾಗಿದೆ. ನಿಮ್ಮ ಆಹಾರಕ್ಕೆ ದಾಲ್ಚಿನ್ನಿ ಸೇರಿಸುವುದು ಇನ್ಸುಲಿನ್ ನಿರೋಧಕತೆಯ ವಿರುದ್ಧ ಹೋರಾಡಲು ನೆರವಾಗುತ್ತದೆ ಮತ್ತು ಅಂಡಾಶಯದ ಕಾರ್ಯ ಹೆಚ್ಚಿಸುತ್ತದೆ.

7. ಶುಂಠಿ:

ಶುಂಠಿ ಉರಿಯೂತ ನಿರೋಧಕ ಗುಣವು ಹಾಗೂ ಜೀರ್ಣಶಕ್ತಿ ಮತ್ತು ರಕ್ತದ ಪರಿಚಲನೆ ಹೆಚ್ಚಿಸುವ ಗುಣವು ಋತುಚಕ್ರ ನಿಯಂತ್ರಿಸಲು ಮತ್ತು ಸಂತಾನೋತ್ಪಾದನೆಯ ವ್ಯವಸ್ಥೆಯಲ್ಲಿ ಉರಿಯೂತ ಕಡಿಮೆ ಮಾಡಲು ನೆರವಾಗುತ್ತದೆ.

8. ಹಸಿರು ತರಕಾರಿಗಳು:

ಆರೋಗ್ಯಕರ ಅಂಡಾಣುಗಳನ್ನು ಕಾಪಾಡಿಕೊಳ್ಳಲು ಎ, ಬಿ, ಸಿ ಮತ್ತು ಇ ವಿಟಮಿನ್ ಗಳು, ಕಬ್ಬಿಣ ಮತ್ತು ಕ್ಯಾಲ್ಷಿಯಂ ಕೆಲ ಪ್ರಮುಖ ಪೋಷಕಾಂಶಗಳಾಗಿವೆ. ಹಸಿರು ತರಕಾರಿಗಳಾದ ಪಾಲಕ್, ಕೋಸು ಈ ಅಗತ್ಯ ಪೋಷಕಾಂಶಗಳನ್ನು ಹೊಂದಿವೆ.

9. ದ್ವಿದಳ ಧಾನ್ಯಗಳು:

ದ್ವಿದಳ ಧಾನ್ಯಗಳು ನಾರಿನಂಶದ ಅಪಾರ ಸಂಪತ್ತು ಹೊಂದಿರುತ್ತವೆ. ಫೈಬರ್ ಬಹುಕಾರ್ಯಗಳ ಪೋಷಕಾಂಶವಾಗಿದ್ದು ಅದು ತೀವ್ರವಾದ ರಕ್ತದ ಸಕ್ಕರೆ ಮಟ್ಟ ತಡೆದು  ಆರೋಗ್ಯಕರ ತೂಕ ಕಾಪಾಡಲು ಮತ್ತು ರಕ್ತದ ಸಕ್ಕರೆ ಮಟ್ಟ ಸ್ಥಿರವಾಗಿರಿಸಲು ನೆರವಾಗುತ್ತದೆ. ಇದು ಸಾಮಾನ್ಯ ಆರೋಗ್ಯ ಮತ್ತು ಸಂತಾನೋತ್ಪಾದನೆಯ ಆರೋಗ್ಯ ಸುಧಾರಿಸುವಲ್ಲಿಯೂ ನೆರವಾಗುತ್ತದೆ.

10. ಹೈನು ಉತ್ಪನ್ನಗಳು:

ಹಾಲು ಮತ್ತು ಮೊಸರಿನಂತಹ ಡೈರಿ ಉತ್ಪನ್ನಗಳು ನಿಮ್ಮ ಆಹಾರದಲ್ಲಿ ಕ್ಯಾಲ್ಷಿಯಂ ಮತ್ತು ಪ್ರೊಬಯೋಟಿಕ್ಸ್ ಸೇರ್ಪಡೆ ಮಾಡುವ ಮಹತ್ತರ ವಿಧಾನವಾಗಿವೆ.

Write a Comment