Blog
Uncategorized

ಮಹಿಳೆಯರ ಫಲವಂತಿಕೆಯ ಮೇಲೆ ಪೌಷ್ಠಿಕತೆಯ ಪ್ರಭಾವ

ಮಹಿಳೆಯರ ಫಲವಂತಿಕೆಯ ಮೇಲೆ ಪೌಷ್ಠಿಕತೆಯ ಪ್ರಭಾವ

Author: Dr. Aparna Vishwakiran, Senior Consultant & Fertility Specialist

ನಮ್ಮ ಆರೋಗ್ಯವು ನಾವು ಸೇವಿಸುವ ಆಹಾರಗಳು ಮತ್ತು ಅವುಗಳೊಂದಿಗೆ ಸೇರಿದ ಪೌಷ್ಠಿಕತೆಯ ಮೌಲ್ಯದಿಂದ ಪ್ರಭಾವಿತವಾಗುತ್ತದೆ ಎನ್ನುವುದು ಈಗಾಗಲೇ ಗೊತ್ತಿರುವ ಅಂಶವಾಗಿದೆ. ದುರ್ಬಲವಾದ ಆಹಾರದ ಅಭ್ಯಾಸಗಳು ನಮ್ಮ ಒಟ್ಟಾರೆ ಆರೋಗ್ಯ ಮತ್ತು ಬಂಜೆತನದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವ ಅಂಶವನ್ನು ಕಡೆಗಣಿಸಲಾಗುತ್ತದೆ. ಅನಾರೋಗ್ಯಕರ ಆಹಾರ ಸೇವನೆ ಅಭ್ಯಾಸಗಳು ಮತ್ತು ಅಸಮತೋಲನದ ಆಹಾರಗಳು ಪುರುಷ ಹಾಗೂ ಮಹಿಳೆಯರ ಸಂತಾನೋತ್ಪಾದನೆಯ ಕಾರ್ಯಗಳಿಗೆ ಅಡ್ಡಿಯಾಗುತ್ತವೆ. ಬಂಜೆತನ ನಿರ್ವಹಣೆಯಲ್ಲಿ ಪೌಷ್ಠಿಕತೆಯ ಆಹಾರವನ್ನು ನಾವು ಸಾಮಾನ್ಯವಾಗಿ ಕಡಿಮೆ ಅಂದಾಜಿಸುತ್ತೇವೆ. ವೈದ್ಯಕೀಯ ಚಿಕಿತ್ಸೆಯೊಂದಿಗೆ ಜೀವನಶೈಲಿ ಬದಲಾವಣೆಗಳು ಮತ್ತು ತಕ್ಕಷ್ಟು ಪೌಷ್ಠಿಕತೆಯ ಬೆಂಬಲವು ಅಂಡಾಣುಗಳು ಮತ್ತು ವೀರ್ಯದ ಅಭಿವೃದ್ಧಿಯಲ್ಲಿ ಅನುಕೂಲಕರ ಪರಿಣಾಮಗಳನ್ನು ಬೀರುತ್ತವೆ. ಇದು ಪುರುಷರು ಹಾಗೂ ಮಹಿಳೆಯರಲ್ಲಿ ಬಂಜೆತನ ನಿವಾರಿಸುವಲ್ಲಿ ಮತ್ತು ಚಿಕಿತ್ಸೆ ನೀಡುವಲ್ಲಿ ನೆರವಾಗುತ್ತದೆ.

ಮಹಿಳೆಯರಲ್ಲಿನ ಬಂಜೆತನವು ವಿಶ್ವದಾದ್ಯಂತ ಸಂತಾನೋತ್ಪಾದನೆಯ ವಯಸ್ಸಿನ ಮಹಿಳೆಯರಲ್ಲಿ ಇರುವ ವೈದ್ಯಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯಾಗಿದೆ.

ಇದು ಅಂಡಾಣು ಬಿಡುಗಡೆಯ ಅಸಹಜತೆಗಳು, ಅಂಡಾಣು ಮೀಸಲು ಮತ್ತು ಅಂಡಾಣು ಗುಣಮಟ್ಟದ ಕುಸಿತ, ಅನಿಯಮಿತ ಋತುಚಕ್ರ, ಹಾರ್ಮೋನುಗಳ ಅಸಮತೋಲನ, ಸಂತಾನೋತ್ಪಾದನೆಯ ವ್ಯವಸ್ಥೆಯ ಸ್ಥಿತಿ ಮತ್ತು ಇತರೆ ಗಂಭೀರ ರೋಗಗಳ ಉಪಸ್ಥಿತಿಯನ್ನು ಆಧರಿಸಿರುತ್ತದೆ.

ಅಂಡಾಣು ಬಿಡುಗಡೆಯಲ್ಲಿ ಅಸಹಜತೆಗಳು ಮತ್ತು ಅಂಡಾಣು ಗುಣಮಟ್ಟ: ಮಹಿಳಾ ಫಲವಂತಿಕೆಯ ಪ್ರಮುಖ ಜೈವಿಕ ಗುರುತುಗಳಲ್ಲಿ ಮುಖ್ಯವಾದ ಅಂಶಗಳಲ್ಲಿ ಒಂದು ಅಂಡಾಣು ಗುಣಮಟ್ಟ. ಅಂಡಾಣುವು ತತ್ತಿಯ ಗುಣಮಟ್ಟವು ಸಂಭವನೀಯ ಫಲವಂತಿಕೆ ಪಡೆಯುತ್ತದೆ. ಮಹಿಳೆಯ ಗರ್ಭಧಾರಣೆಯ ಮತ್ತು ಭವಿಷ್ಯದ ಫಲವಂತಿಕೆಯ ಸಾಮರ್ಥ್ಯವು ಅಂಡಾಶಯದಲ್ಲಿ ಇರುವ ಅಂಡಾಣುಗಳ ಗುಣಮಟ್ಟ ಆಧರಿಸಿರುತ್ತದೆ.

ನಿಯಮಿತ ಮತ್ತು ಆರೋಗ್ಯಕರ ಋತುಚಕ್ರದಲ್ಲಿ ಅಂಡಾಣು ಬಿಡುಗಡೆಯಾಗುತ್ತದೆ, ಈ ಪ್ರಕ್ರಿಯೆಯನ್ನು ಅಂಡೋತ್ಪತ್ತಿ ಎನ್ನಲಾಗುತ್ತದೆ.

ಅಂಡಾಣುಗಳ ಗುಣಮಟ್ಟದಲ್ಲಿ ಯಾವುದೇ ಕುಸಿತ ಅಥವಾ ಅಂಡೋತ್ಪತ್ತಿಯಲ್ಲಿ ಯಾವುದೇ ಸಮಸ್ಯೆಯಿದ್ದಲ್ಲಿ ಅದು ಅಂಡೋತ್ಪತ್ತಿಯ ಬಂಜೆತನಕ್ಕೆ ಕಾರಣವಾಗುತ್ತದೆ. ಪೌಷ್ಠಿಕತೆಯ ಅಂಶಗಳು ಅಂಡಾಣುವಿನ ಪ್ರಬುದ್ಧತೆ, ಫಲವಂತಿಕೆ ಮತ್ತು ಅಳವಡಿಕೆಯ ನಂತರ ಗುಣಮಟ್ಟದ ಭ್ರೂಣಕ್ಕೆ ಕಾರಣವಾಗುತ್ತವೆ.

ಪಿಸಿಒಎಸ್ ಮತ್ತು ಹಾರ್ಮೋನುಗಳ ಅಸಮತೋಲನ: ಅಂಡಾಶಯಗಳಲ್ಲಿ ಚೀಲಗಳು ರೂಪುಗೊಳ್ಳುವುದರಿಂದ ಉಂಟಾಗುವ ಎಂಡೋಕ್ರೈನ್ ಸಮಸ್ಯೆ, ಹಾರ್ಮೋನುಗಳ ಅಸಮತೋಲನ, ತೂಕ ಹೆಚ್ಚುವುದು, ಉರಿಯೂತ ಮತ್ತು ಅನಿಯಮಿತ ಋತುಚಕ್ರಗಳಿಂದ ಉಂಟಾಗುತ್ತದೆ. ಇದು ಮಹಿಳೆಯರಲ್ಲಿ ಬಂಜೆತನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಸೂಕ್ತವಾದ ಸಮತೋಲನದ ಆಹಾರ ಸೇವನೆ ಪಿಸಿಒಎಸ್ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.

ಜೀವನಶೈಲಿ ಸಂಬಂಧಿತ ಅಂಶಗಳಾದ ದೇಹದ ಅಸಹಜ ತೂಕ, ಪೌಷ್ಠಿಕತೆಯ ಅಸಹಜತೆಗಳು, ಧೂಮಪಾನ, ಬೊಜ್ಜು, ಮದ್ಯಪಾನ ಇತ್ಯಾದಿ ಕೂಡಾ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗಳನ್ನು ಉಂಟು ಮಾಡುತ್ತವೆ.

ಫಲವಂತಿಕೆ ಸುಧಾರಿಸಲು ಆಹಾರಗಳು:

1.ಧಾನ್ಯಗಳು ತಕ್ಕಷ್ಟು ಪೌಷ್ಠಿಕತೆ ನೀಡುತ್ತವೆ ಮತ್ತು ರಕ್ತದ ಸಕ್ಕರೆ ಅಂಶ ಹೆಚ್ಚಿಸದೆ ದೀರ್ಘಕಾಲ ಹೊಟ್ಟೆ ತುಂಬಿಸಿರುತ್ತವೆ. ಗೋಧಿ, ಕಂದು ಅಕ್ಕಿ, ಬಾರ್ಲೀ, ಜೋಳ ಇತ್ಯಾದಿಗಳು ಪ್ರಮುಖವಾಗಿವೆ.

2.ತರಕಾರಿ ಮತ್ತು ಸೊಪ್ಪು ಸೇವನೆ ಮತ್ತು ಮುಖ್ಯವಾಗಿ ಸಸ್ಯಜನ್ಯ ಪ್ರೊಟೀನ್ ಮೂಲಗಳ ಸೇವನೆ ಅಂಡಾಶಯದ ಬಂಜೆತನವನ್ನು ಕಡಿಮೆ ಮಾಡುತ್ತವೆ. ಅಲ್ಲದೆ ದ್ವಿದಳ ಧಾನ್ಯಗಳಲ್ಲಿ ಉತ್ತಮ ಫೊಲಿಕ್ ಆಮ್ಲದ ಅಂಶವಿರುತ್ತದೆ ಅದು ಆರೋಗ್ಯಕರ ಭ್ರೂಣದ ಬೆಳವಣಿಗೆಗೆ ನೆರವಾಗುತ್ತದೆ. ಪ್ರೊಟೀನ್ ಸೇವನೆಯು ಟೆಸ್ಟೆಸ್ಟೆರೋನ್ ಮಟ್ಟ ಕಡಿಮೆ ಮಾಡುವಲ್ಲಿ ಮತ್ತು ಪಿಸಿಒಎಸ್ ಬಾಧಿತ ಮಹಿಳೆಯರಲ್ಲಿ ಹಾರ್ಮೋನು ಮಟ್ಟ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

3.ಸತುವು, ಕಬ್ಬಿಣ, ಫೊಲಿಕ್ ಆಮ್ಲ ಮತ್ತು ಸೆಲೆನಿಯಂನಂತಹ ಸೂಕ್ಷ್ಮ ಪೋಷಕಾಂಶಗಳ ಮೂಲಗಳನ್ನು ಉಳ್ಳ ಆಹಾರ ಸೇವನೆ ಕೋಶಕಗಳ ಆರೋಗ್ಯ ಮತ್ತು ಅಂಡಾಣು ಗುಣಮಟ್ಟ ಕಾಪಾಡಲು ನೆರವಾಗುತ್ತದೆ.

4.ಫೊಲಿಕ್ ಆಮ್ಲ ಹೆಚ್ಚಾಗಿರುವ ಆಹಾರಗಳನ್ನು ಸೇವಿಸಿ ಅಥವಾ ಫೊಲಿಕ್ ಆಮ್ಲದ ಪೂರಕ ಆಹಾರಗಳನ್ನು ಸೇವಿಸಿ. ಫೊಲಿಕ್ ಆಮ್ಲವು ಸುಧಾರಿಸಿದ ಭ್ರೂಣದ ಗುಣಮಟ್ಟದೊಂದಿಗೆ ಸಹಯೋಗ ಹೊಂದಿದ್ದು ಜನ್ಮಜಾತ ದೋಷಗಳನ್ನು ಮತ್ತು ಅಂಡಾಶಯದ ಬಂಜೆತನದ ಅಪಾಯ ಕಡಿಮೆ ಮಾಡುತ್ತದೆ.

5.ಪಿಸಿಒಎಸ್-ಸಂಬಂಧಿತ ಬಜೆತನವನ್ನು ಅಗಸೆ ಬೀಜಗಳು, ಕುಂಬಳ ಬೀಜಗಳು, ಎಳ್ಳು ಮತ್ತು ಸೂರ್ಯಕಾಂತಿ ಬೀಜಗಳನ್ನು ಒಳಗೊಳ್ಳುವ ಮೂಲಕ ನಿರ್ವಹಿಸಬಹುದು. ಈ ಬೀಜಗಳಲ್ಲಿರುವ ಫೈಟೊಎಸ್ಟ್ರೊಜೆನ್ ಗಳು ಹಾರ್ಮೋನು ಮಟ್ಟ ಮತ್ತು ಅಸಹಜ ಋತುಚಕ್ರ ನಿಯಮಿತಗೊಳಿಸಲು ನೆರವಾಗುತ್ತವೆ.

6.ವಿಟಮಿನ್ ಸಿ- ಒಳಗೊಂಡ ಹಣ್ಣುಗಳು ಮತ್ತು ಬೆರ್ರಿಗಳಾದ ರಸ್ಪ್ ಬೆರ್ರರಿಗಳು, ಸ್ಟ್ರಾಬೆರ್ರರಿಗಳು ಮತ್ತು ಬ್ಲೂಬೆರ್ರಿಗಳು ಉತ್ಕರ್ಷಣ ನಿರೋಧಕ ಆಹಾರಗಳು, ಅವುಗಳ ಉತ್ಕರ್ಷಣ ನಿರೋಧಕ ಗುಣಗಳು ಪಿಸಿಒಎಸ್ ಸಂಬಂಧಿತ ಬಂಜೆತನ ನಿವಾರಿಸಲು ನೆರವಾಗುತ್ತವೆ.

7.ಒಮೇಗಾ 3 ಫ್ಯಾಟಿ ಆಮ್ಲಗಳು ಫಲವಂತಿಕೆ ಉಳಿಸಲು ನೆರವಾಗುತ್ತವೆ ಮತ್ತು ಉತ್ತಮ ಗುಣಮಟ್ಟದ ಅಂಡಾಣುಗಳನ್ನು ಉತ್ಪಾದಿಸಲು ನೆರವಾಗುತ್ತವೆ. ಮೀನು, ಮೊಟ್ಟೆಗಳು, ಡ್ರೈಫ್ರೂಟ್ ಗಳು, ಸಸ್ಯಜನ್ಯ ತೈಲಗಳು ಮತ್ತು ಬೀಜಗಳು ಒಮೇಗಾ-3 ಫ್ಯಾಟಿ ಆಮ್ಲಗಳ ಉತ್ತಮ ಮೂಲವಾಗಿವೆ.

8.ಸಂಸ್ಕರಿಸಿದ ಆಹಾರ, ಸಕ್ಕರೆ ಪಾನೀಯ ಮತ್ತು ಮದ್ಯಪಾನದಿಂದ ಮತ್ತು ರಿಫೈನ್ಡ್ ಹಿಟ್ಟಿನ ಉತ್ಪನ್ನಗಳಿಂದ ದೂರವಿರಿ.

9.ಅಲ್ಲದೆ ಕಾರ್ಬೋಹೈಡ್ರೇಟುಗಳು ಮತ್ತು ಕೊಬ್ಬುಗಳು ಹೆಚ್ಚಾದರೆ ಅದು ಅಂಡೋತ್ಪತ್ತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

ಒಟ್ಟಾರೆ ಮಿತವಾದ ಆಹಾರಸೇವನೆಯೇ ಮುಖ್ಯ ಮತ್ತು ಅತಿಯಾಗಿ ತಿನ್ನವೇಡಿ ಅಥವಾ ಕಠಿಣ ಪಥ್ಯ ಮಾಡಬೇಡಿ. ಸಮೃದ್ಧ ಆದರೆ ಸಮತೋಲನದ ಪ್ರೊಟೀನ್ ಗಳು, ಫ್ಯಾಟ್ ಗಳು, ಕಾರ್ಬೊಹೈಡ್ರೇಟ್ ಗಳು, ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ವಿಟಮಿನ್ ಗಳನ್ನು ಒಳಗೊಂಡ ಆಹಾರವು ಮಹಿಳಾ ಸಂತಾನೋತ್ಪಾದನೆಯ ವ್ಯವಸ್ಥೆಯ ಗರಿಷ್ಠ ಕಾರ್ಯಕ್ಷಮತೆಗೆ ಮತ್ತು ಬಂಜೆತನದ ತೊಂದರೆ ಕಡಿಮೆ ಮಾಡಲು ಬಹಳ ಮುಖ್ಯವಾಗಿದೆ.

Write a Comment

BOOK A FREE CONSULTATION